ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 14/08/2022 ರಂದು ಸಂಜೆ ಪಿರ್ಯಾದಿದಾರರಾದ ಯೋಗಿನಿ ನಾಯ್ಕ  (36), ತಂದೆ: ವೆಂಕಟರಮಣ ನಾಯ್ಕ್‌ , ವಾಸ: Flat No 1108 C Block Ektha Hights ಸಂತೆಕಟ್ಟೆ ,ಪುತ್ತೂರು ಗ್ರಾಮ , ಉಡುಪಿ ತಾಲೂಕು ಇವರು KA-20-EV-2887 ನೇ ಸುಜುಕಿ ಎಕ್ಸೆಸ್‌ ದ್ವಿಚಕ್ರ ವಾಹನದಲ್ಲಿ ಸಂತೆಕಟ್ಟೆ ಕಡೆಯಿಂದ ಹೊರಟು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ಬ್ರಹ್ಮಾವರ ಮಹೇಶ ಆಸ್ಪತ್ರೆಯ ಬಳಿ ಇರುವ  U Turn ಬಳಿ  ಮಧುವನ ಕಾಂಪ್ಲೆಕ್ಸ್‌ ಕಡೆಗೆ ಹೋಗಲು ವಾಹನವನ್ನು ನಿಲ್ಲಿಸಿಕೊಂಡಿರುವಾಗ  7:15 ಗಂಟೆಗೆ ಬ್ರಹ್ಮಾವರ ಕಡೆಯಿಂದ ಆರೋಪಿ ಸುರಕ್ಷಿತ್‌ KA-20-EA-6211 ನೇ ಬಜಾಜ್‌ ಡಿಸ್ಕವರಿ ಮೋಟಾರ್ ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬಂದು ಒಮ್ಮೇಲೆ ಸ್ವಾತಿ ಹೋಟೇಲ್‌ ಕಡೆಗೆ ನಿರ್ಲಕ್ಷತನದಿಂದ  ಮೋಟಾರ್‌ ಸೈಕಲ್‌ನ್ನು ತಿರುಗಿಸಿ ಪಿರ್ಯಾದಿದಾರರ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ದ್ವಿಚಕ್ರ ವಾಹನಗಳ ಸಮೇತ ಸವಾರರು ಹಾಗೂ ಸಹಸವಾರ ರಸ್ತಗೆ ಬಿದ್ದಿದ್ದು, ಈ ಅಪಘಾತದಿಂದ  ಪಿರ್ಯಾದಿದಾರರ ತಲೆಯ ಹಿಂಬದಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 137/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸಂತೋಷ್‌ ಕುಮಾರ್‌ ಎ (31 ), ತಂದೆ: ಗಣಪ ಮರಕಾಲ, ವಾಸ: ಅಲ್ತಾರು ಹಂಚಿನಕೆರೆ, ಯಡ್ತಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿ ಸೀತು ಮರಕಾಲ್ತಿ (65) ರವರು ಕಾಣೆಯಾಗಿರುವ ಬಗ್ಗೆ ದಿನಾಂಕ 14/08/2022 ರಂದು ಪಿರ್ಯಾದಿದಾರರು ಠಾಣೆಯಲ್ಲಿ ದೂರು ನೀಡಿದ್ದು,   ದಿನಾಂಕ 15/08/2022 ರಂದು ಮಧ್ಯಾಹ್ನ 2:15 ಗಂಟೆಗೆ ಮನೆಯ ಸಮೀಪ ಇರುವ ಕಲ್ಲುಕೋರೆಯ ಗುಂಡಿಯ ನೀರಿನಲ್ಲಿ ಸೀತು ಮರಕಾಲ್ತಿ ರವರ ಮೃತದೇಹ ದೊರೆತಿರುತ್ತದೆ. ಸೀತು ಮರಕಾಲ್ತಿರವರು ದನ ಸಾಗಾಣಿಕೆ ಹಾಗೂ ಗದ್ದೆಯ ಕೆಲಸವನ್ನು ಮಾಡಿಕೊಂಡಿದ್ದು,  ಅವರು ದಿನಂಪ್ರತಿ ಬೆಳಿಗ್ಗೆ 5:30 ಗಂಟೆಯ ನಂತರ ಗದ್ದೆಗೆ ಹುಲ್ಲು ತರಲು ಪಕ್ಕದ ಗದ್ದೆಗೆ ಹೋಗುತ್ತಿದ್ದು, ಅದೇ ರೀತಿ ಸೀತು ಮರಕಾಲ್ತಿ ರವರು ದಿನಾಂಕ 14/08/2022 ರಂದು ಬೆಳಿಗ್ಗೆ 05:30 ಗಂಟೆಯ ನಂತರ ಗದ್ದೆಗೆ ಹುಲ್ಲು ತರಲು ಹೋದ ಸಮಯ ಅಲ್ಲಯೇ ಪಕ್ಕದಲ್ಲಿದ್ದ ಕಲ್ಲುಕೋರೆಯಲ್ಲಿ ಸಂಗ್ರಹವಾಗಿದ್ದ ಮಳೆಯ ನೀರಿಗೆ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ಯಾವುದೋ ಕಾರಣದಿಂದ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 39/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಭೀಮಲ್ ಲಕ್ಡಾ(33) ,  ತಂದೆ: ಬಿರ್ಸಾ ಲಕ್ಡಾ,  ವಾಸ: ಜ್ಲಿರೆಜಾಮ್ ಕಾಮಾರಿ ಮುಂಡ ಜಿಲ್ಲೆ ಒರಿಸ್ಸಾ ಇವರು ಮಲ್ಪೆಯ ಶಫಿ ಸಾಹೆಬರ ಮೀನುಗಾರಿಕ ಪರ್ಷಿನ್ ಬೋಟ್ IND-KA-02-MM-5166 ಶಿವಗಿರಿ ಬೊಟ್ ನಲ್ಲಿ  ಕಳೆದ ಆಗಷ್ಟ್- 09-2021 ರಿಂದ ಕಲಾಸಿಯಾಗಿ  ಕೆಲಸ ಮಾಡಿಕೊಂಡಿದ್ದು ಹಿಮಗಿರಿ ಪರ್ಷಿನ್ ಬೊಟ್ ನಲ್ಲಿ ಕರ್ಮ ಲಕ್ಡಾ (39) ಇವರು ಕಳೆದ 2 ವರ್ಷಗಳಿಂದ ಕಲಾಸಿಯಾಗಿ ಮೀನುಗಾರಿಕ ಕೆಲಸ ಮಾಡುತ್ತಿದ್ದು ಇವರ ಜೊತೆ ಹಿಮಗಿರಿ ಪರ್ಷಿನ್ ಬೋಟ್ ನಲ್ಲಿ ಪ್ರಕಾಶ ತಾಂಡೆಲಾರಾಗಿ, ಹರೀಶ್ ಡ್ರೈವರ್ ಆಗಿ, ಕಲಾಸಿಯಾಗಿ ಪಿರ್ಯಾದಿದಾರರು, ಅವರ ಅಣ್ಣ ಕರ್ಮ ಲಕ್ಡಾ ಹಾಗೂ ಒರಿಸ್ಸಾದ ರಾಜೇಶ್, ಸುರೇಂದ್ರ, ಸಮೀರ್, ಆಂತ್ರೋನ್ ,ಸೌರಬ್ ,ಇಲಿಯಾಜ್, ಭೀಮಲ್, ಅಲೋಕ್ ಹಾಗೂ ಆಂಧ್ರದ ಇತರ 8 ಜನ ಮೀನುಗಾರರು ಮೀನುಗಾರಿಕ ಕೆಲಸಮಾಡಿಕೊಂಡಿದ್ದು ದಿನಾಂಕ 15/08/2022 ರಂದು ಮೀನುಗಾರಿಕೆ ಬಗ್ಗೆ ಹಿಮಗಿರಿ ಬೋಟ್ ನಲ್ಲಿ ಬೆಳಿಗ್ಗೆ 08:00 ಗಂಟೆಗೆ ಮಲ್ಪೆ ಬಂದರಿನಿಂದ ಹೊರಟು ಅರಬ್ಬೀ ಸಮುದ್ರದಲ್ಲಿ 10 ಮಾರು ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬೋಟಿನ ಡಿಂಗಿಯಲ್ಲಿ ಪಿರ್ಯಾದಿದಾರರ ಅಣ್ಣ ಕರ್ಮ ಲಕ್ಡಾ, ಆಂತ್ರೋನ್ ಹಾಗೂ ಆಂಧ್ರದ 2 ಜನ ಮೀನುಗಾರರು ಡಿಂಗ್ರಿಯಲ್ಲಿ ಕುಳಿತು ಮೀನಿನ ಬಲೆಯನ್ನು ಬಿಡುತ್ತಿದ್ದು ಬೆಳಿಗ್ಗೆ 10 ಗಂಟೆಗೆ ಸಮುದ್ರ ಅಲೆಯ ರಬಸಕ್ಕೆ ಡಿಂಗಿ ಕವುಚಿ ಬಿದ್ದು  ಡಿಂಗಿಯ ಒಂದು ಬದಿ ಕರ್ಮಲಕ್ಡಾ ಇವರ ಬಲ ಬದಿಯ ಕಿವಿ, ತಲೆಗೆ ತಾಗಿ ರಕ್ತ ಗಾಯವಾಗಿ ತಲೆಗೆ ತೀವ್ರ ಒಳ ಜಖಂ ಉಂಟಾಗಿ ಕಿವಿಯಲ್ಲಿ ರಕ್ತ ಬರುತ್ತಿದ್ದು ಪ್ರಜ್ಙಾಹೀನಾ ಸ್ಥಿತಿಯಲ್ಲಿದ್ದ ಕರ್ಮ ಲಕ್ಡಾ ರವರನ್ನು ಚಿಕಿತ್ಸೆಗಾಗಿ ಬೋಟಿನಲ್ಲಿ ಕರೆತರುತ್ತಿರುವಾಗ ಕರ್ಮಲಕ್ಡಾ ರವರು ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 43/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.



     

ಇತ್ತೀಚಿನ ನವೀಕರಣ​ : 16-08-2022 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080