ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 15/08/2021 ರಂದು ಪಿರ್ಯಾದಿದಾರರಾದ ವೇಣು ಮಾಧವ ಹೆಗ್ಡೆ (41), ತಂದೆ: ದಿ. ಪುಂಡಲೀಕ ಹೆಗ್ಡೆ, ವಾಸ: ಗೌತಮಿ. 8-7-614/3, ನ್ಯೂ ಚಿತ್ರ ಫರ್ನಿಚರ್ ಬಳಿ, ಕಾರ್‌‌ಸ್ಟ್ರೀಟ್ ಕ್ರಾಸ್ ರೋಡ್, ಮಂಗಳೂರು ಇವರು ಸಂಬಂಧಿಯ ನಿಶ್ಚಿತಾರ್ಥದ ಬಗ್ಗೆ KA-19-ML-6494 ನೇ ನಂಬ್ರದ ಹ್ಯುಂಡೈ ವೆನ್ಯೂ ಕಾರಿನಲ್ಲಿ ಉಡುಪಿಗೆ ಹೋಗಿ ವಾಪಾಸ್ಸು ಮಂಗಳೂರಿಗೆ ರಾಷ್ಟೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಬರುತ್ತಿರುವ ಸಮಯ ಸಂಜೆ 18:30 ಗಂಟೆಯ ವೇಳೆಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಲಕ್ಷ್ಮೀ ಜನಾರ್ಧನ ದೇವಸ್ಥಾನದಿಂದ ಮುಂದೆ ಸುಮಾರು 75 ಮೀಟರ್ ತಲುಪಿದಾಗ, ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ KA-20-MD-7379 ನೇ ನಂಬ್ರದ ಸ್ವಿಫ್ಟ್ ಡಿಜೈರ್ ಕಾರನ್ನು ಅದರ ಚಾಲಕ ಅಬ್ದುಲ್ ಸಲೀಂ  ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು, ಅದರ ಮೇಲಿನಿಂದ ಪಕ್ಕದ ಉಡುಪಿ ಮಂಗಳೂರು ರಸ್ತೆಗೆ ಚಲಿಸಿ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದಿರುತ್ತದೆ.  ಅಪಘಾತದಿಂದ ಪಿರ್ಯಾದಿದಾರರ ಎಡಕೈ, ಬಲಕೈಗೆ ತರಚಿದ ಗಾಯ, ಅವರ ಮಗಳು ತನ್ವಿ ಗೆ ಮೂಗಿಗೆ, ಬೆನ್ನಿಗೆ, ಎಡ ಕೈಗೆ ಗಾಯವಾಗಿದ್ದು, ಅವರ ಅತ್ತಿಗೆ ವಿನುತಾ ಹೆಗ್ಡೆ ರವರ ಹಣೆಗೆ ಮತ್ತು ಎಡಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ.  KA-20-MD-7379 ಕಾರಿನಲ್ಲಿನ ಇಬ್ಬರು ಹೆಂಗಸರಿಗೆ ಮೂಳೆ ಮುರಿತದ ಗಾಯ, ಚಾಲಕ ಸೇರಿ ಉಳಿದ ಮೂರು ಜನರಿಗೆ ಸಾಧಾರಣ ಸ್ವರೂಪದ ಗಾಯವಾಗಿರುತ್ತದೆ. ಅಪಘಾತದಿಂದ ಎರಡೂ ಕಾರುಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 16-08-2021 09:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ