ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ: 13/08/2021 ರಂದು ಮಧ್ಯಾಹ್ನ 2:00 ಗಂಟೆಗೆ ಪಿರ್ಯಾದಿ ರಮೇಶ್ ಸಾಲ್ಯಾನ್ ಇವರ  ಬಾಬ್ತು ಕೆ,ಎ12-ಝಡ್-0930 ನೇ ನಂಬ್ರದ ಸ್ಕಾರ್ಪಿಯೋ ಕಾರನ್ನು ಅವರ ಮಗ ಮಿಶಾಲ್ ಚಲಾಯಿಸಿಕೊಂಡು  ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು ಮಧ್ಯಾಹ್ನ 2:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ  ಲೆಮಿನಾ ಕ್ರಾಸ್ ಬಳಿ ತಲುಪುವಾಗ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ರಸ್ತೆ ಬದಿಯಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನವು ಪಲ್ಟಿಯಾಯಿತು.ಈ ಅಪಘಾತದಿಂದ  ಯಾರಿಗೂ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಹಿರಿಯಡ್ಕ : ಪಿರ್ಯಾದಿ ಶ್ರೀಮತಿ ರೋಸ್ ಬೇಲ್ ಜೋನ್ ಇವರು  ತನ್ನ ಮಗ ನಿತಿನ್ ಜೋನ್, ಮೊಮ್ಮಗ ಜ್ಯುಹೆಲ್ ಜೋನ್ ರವರೊಂದಿಗೆ  ವಾಸ ಮಾಡಿಕೊಂಡಿದ್ದು, ದಿನಾಂಕ: 10-08-2021 ರಂದು ಪಿರ್ಯಾಧಿದಾರರ ಮಗ ತನ್ನ ಸ್ವಂತ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿರುತ್ತಾರೆ. ಮನೆಯಲ್ಲಿ ಪಿರ್ಯಾಧಿ ಹಾಗೂ ಅವರ ಮೊಮ್ಮಗ ಮಾತ್ರ ಇದ್ದುದರಿಂದ ರಾತ್ರಿ ಸಮಯ ಉಳಕೊಳ್ಳಲು ಅಲ್ಲಿಯೇ ಸಮೀಪದಲ್ಲಿದ್ದ ಪಿರ್ಯಾಧಿದಾರರ ತಮ್ಮ ಜೆನಿಸನ್ ಕೋಟ್ಯಾನ್ ರವರ ಮನೆಗೆ ಹೋಗುತ್ತಿದ್ದರು. ದಿನಾಂಕ: 14-08-2021 ರಂದು ಕೂಡ ರಾತ್ರಿ 9:30 ಗಂಟೆಗೆ ಮನೆಗೆ ಬೀಗ ಹಾಕಿ ಪಿರ್ಯಾಧಿದಾರರ ತಮ್ಮನ ಮನೆಗೆ ಮಲಗಲು ಹೋಗಿದ್ದು, ಪಿರ್ಯಾದಿದಾರರ ಸೊಸೆಯ ಬಾಬ್ತು ಹೋಂಡ ಕಂಪೆನಿಯ ಆ್ಯಕ್ಟಿವಾ ಸ್ಕೂಟಿ ಕೆಎ-20-ಇಎನ್-0736 ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿರುತ್ತಾರೆ. ದಿನಾಂಕ: 15-08-2021 ರಂದು ಬೆಳಿಗ್ಗೆ ಸುಮಾರು 06:45 ಗಂಟೆಗೆ ಪಿರ್ಯಾದಿದಾರರು ವಾಪಾಸು ಮನೆಗೆ ಬಂದು ನೋಡಿದಾಗ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕೆಎ-20-ಇಎನ್-0736  ನೇ ಆ್ಯಕ್ಟಿವಾ ಸ್ಕೂಟಿ ಇದ್ದಿರುವುದಿಲ್ಲ. ಅಕ್ಕಪಕ್ಕದಲ್ಲಿ ಹುಡುಕಾಡಿದ್ದು, ಅವರ ಸಂಬಂಧಿಕರಲ್ಲಿ ನೆರೆಕರೆಯವರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ದಿನಾಂಕ: 14-08-2021 ರ ರಾತ್ರಿ 9:30 ಗಂಟೆಯಿಂದ ದಿ:15-08-2021 ರ ಬೆಳಿಗ್ಗೆ 06:45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಎದುರು ನಿಲ್ಲಿಸಿದ್ದ ಕೆಎ-20-ಇಎನ್-0736 ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಬೈಂದೂರು: ದಿನಾಂಕ 15/08/2021 ರಂದು 16:30 ಗಂಟೆಗೆ ಪವನ ನಾಯಕ, ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಕೆರ್ಗಾಲು ಗ್ರಾಮದ ನಾಯ್ಕನ ಕಟ್ಟೆ ಬಸವೇಶ್ವರ ಸಮಾಜ ಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದಾಗಿ  ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು  ಗುಪ್ತವಾಗಿ ಮಾಹಿತಿ ಕಲೆಹಾಕಿದಾಗ ಓರ್ವ ವ್ಯಕ್ತಿ ಕೈಯಲ್ಲಿರುವ ಇಸ್ಪೀಟ್ ಎಲೆಗಳನ್ನು ಒಂದೊಂದಾಗಿ ಪ್ಲಾಸ್ಟಿಕ್ ಚೀಲದ ಮೇಲೆ ಎರಡು ಭಾಗಗಳಾಗಿ ಹಾಕುತ್ತಿರುವಾಗ ಉಳಿದವರು 100 ರೂಪಾಯಿ ಅಂದರ್ 200 ರೂಪಾಯಿ ಬಾಹರ್ ಎಂದು ಹೇಳುತ್ತಾ ಹಣವನ್ನು ಪಣವಾಗಟ್ಟು ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು 17:05 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಸುತ್ತುವರಿದು 1] ಸಂಜೀವ ಗಾಣಿಗ ಪ್ರಾಯ 46 ವರ್ಷ, ತಂದೆ; ಮಹಾಬಲ ಗಾಣಿಗ , ವಾಸ; ನುಜಾಡಿ ಗುಡ್ಡೆಮನೆ, 11ನೇ ಉಳ್ಳೂರು ಗ್ರಾಮ ಬೈಂದೂರು ತಾಲೂಕು 2] ರಾಜು ಪ್ರಾಯ; 52 ವರ್ಷ ತಂದೆ;ಗಣಪ ಪೂಜಾರಿ, ವಾಸ; ಹೊಸ್ಕೋಟೆ, ಕೆರ್ಗಾಲು ಗ್ರಾಮ,ಬೈಂದೂರು ತಾಲೂಕು 3] ರಾಮಚಂದ್ರ ಪ್ರಾಯ; 50 ವರ್ಷ ತಂದೆ; ಮಂಜುನಾಥ ವಾಸ; ನಾಯ್ಕನಕಟ್ಟೆ, ಕೆರ್ಗಾಲು ಗ್ರಾಮ , ಬೈಂದೂರು ತಾಲೂಕು 4] ರಾಜೇಂದ್ರ ಪ್ರಾಯ; 38 ವರ್ಷ ತಂದೆ; ಶ್ರೀನಿವಾಸ ವಾಸ; ನುಜಾಡಿ ,11ನೇ ಉಳ್ಳೂರು ಗ್ರಾಮ ಬೈಂದೂರು ತಾಲೂಕು 5] ರಮೇಶ ಪ್ರಾಯ; 41 ವರ್ಷ ತಂದೆ; ಶಂಕರ, ವಾಸ; ನಂದನವನ, ಕೆರ್ಗಾಲು ಗ್ರಾಮ, ಬೈಂದೂರು ತಾಲೂಕು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಸದ್ರಿಯವರುಗಳು ಸ್ವಂತ ಲಾಭಕ್ಕಾಗಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು ಸ್ಥಳದಲ್ಲಿದ್ದ 52 ಇಸ್ಲೀಟ್ ಎಲೆಗಳು, ಹಳೆ ಪ್ಲಾಸ್ಟಿಕ್ ಚೀಲ ಮತ್ತು ಜೂಜಾಟಕ್ಕೆ ಉಪಯೋಗಿಸಿದ ನಗದು ರೂ 4500 ನ್ನು 17:15 ಗಂಟೆಯಿಂದ 18:30 ಗಂಟೆ ವರೆಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ನಂತರ ಮಾನ್ಯ 2 ನೇ ಎಸಿಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಕುಂದಾಪುರದ ಅನುಮತಿ ಪಡೆದು  ಪ್ರಕರಣದ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2021 ಕಲಂ: 87 ಕರ್ನಾಟಕ ಪೊಲೀಸ್  ಕಾಯ್ದೆ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಹೆಗ್ಗುಂಜೆ  ಗ್ರಾಮದ, ಮಂದಾರ್ತಿ ಹೈಸ್ಕೂಲ್ ಬಳಿ ನಿವಾಸಿ ರಾಜೇಂದ್ರ ಆಚಾರ್ (45) ಇವರು ಈ ಹಿಂದೆ ಮರದ ಕೆಲಸ ಮಾಡಿಕೊಂಡಿದ್ದು,  ಒಂಟಿಯಾಗಿ ವಾಸವಿದ್ದವರು ನಂತರ ಮನೆಗೆ ಕೂಡಾ ಹೋಗದೇ ರಸ್ತೆಬದಿಯಲ್ಲಿ ಮಲಗುತ್ತಿದ್ದವರು ದಿನಾಂಕ 15-08-2021 ರಂದು ರಾತ್ರಿ 9-00 ಗಂಟೆಗೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಓಲಗ ಮಂಟಪದಲ್ಲಿ ಮಲಗಿದ್ದವರು ದಿನಾಂಕ 16-08-2021 ರ ಬೆಳಿಗ್ಗೆ 07-30 ಗಂಟೆಯ ವೇಳೆಗೆ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  48/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿ ನಾಗರಾಜ ಇವರು ದಿನಾಂಕ 16-08-2021 ರಂದು ಬೆಳಿಗ್ಗೆ ಮಲ್ಪೆ ಯಿಂದ ಬಂದರು ಕಡೆಗೆ ನಡೆದುಕೊಂಡು  ಹೋಗುತ್ತಿರುವಾಗ  ಓರ್ವ ಅಪರಿಚಿತ ಗಂಡಸು ಪ್ರಾಯ ಸುಮಾರು 30-35 ವರ್ಷ  ರಸ್ತೆಯಲ್ಲಿ ಆ ಕಡೆ ಈ ಕಡೆ ಓಡಾಡುತ್ತಿದ್ದು  ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ ಉಡುಪಿ  ಕಡೆಯಿಂದ  ಮಲ್ಪೆ ಬಂದರು ಕಡೆಗೆ  ಬರುತ್ತಿದ್ದ  KL 07 M 7675  ಲಾರಿಯ  ಅಡಿಗೆ ಓಡಿ ಹೋಗಿದ್ದು  ಆತನು  ಲಾರಿಯ ಹಿಂಬದಿಯ  ಎಡಬದಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದಾಗಿದೆ . ಮೃತ ಅಪರಿಚಿತ ವ್ಯಕ್ತಿಯು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು  ಆ ವ್ಯಕ್ತಿಯೆ  ಚಲಿಸುತ್ತಿದ್ದ ಲಾರಿಯ ಅಡಿಗೆ ಓಡಿ ಹೋಗಿ  ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  39/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-08-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080