ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಅಮಾಸೆಬೈಲು: ದಿನಾಂಕ 15/07/2021  ರಂದು ಪಿರ್ಯಾದಿದಾರರಾ ಹೆಚ್ ಎಸ್ ಸುರೇಶ(44), ಆಹಾರ ನಿರೀಕ್ಷಕರು, ಕುಂದಾಫುರ ತಾಲೂಕು ಇವರಿಗೆ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಮಂಡಗದ್ದೆ ಎಂಬಲ್ಲಿ MATIZ  ಕಾರಿನಲ್ಲಿ ಕಾನೂನು  ಬಾಹಿರವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅಮಾಸೆಬೈಲು ಠಾಣೆ ಪೊಲೀಸ್ ಉಪನಿರೀಕ್ಷಕರಾದ  ಸುಬ್ಬಣ್ಣ ಬಿ ಹಾಗೂ ಸಿಬ್ಬಂದಿಯವರೊಂದಿಗೆ ಹೊಸಂಗಡಿ ಗ್ರಾಮದ ಮಂಡಗದ್ದೆ ಎಂಬಲ್ಲಿಗೆ ಹೊದಾಗ MATIZ ಕಾರಿನಲ್ಲಿ ಒಬ್ಬ ವ್ಯಕ್ತಿಯು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳ ಮೂಟೆಯನ್ನು ತುಂಬಿಸುತ್ತಿದ್ದು. ಪರೀಶಿಲಿಸಿದಾಗ  ಅದು KA-20-M-5720 ನೇ ನಂಬ್ರದ MATIZ ಕಾರು ಆಗಿದ್ದು ಇದರ ಹಿಂಬದಿಯ ಸೀಟನ್ನು ಕಳಚಿ  ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಎನನ್ನೋ  ಕಟ್ಟಿ ತುಂಬಿಸಿರುವುದು ಕಂಡು ಬಂದಿದ್ದು, ಆತನ ಹೆಸರು ಖಲೀಫ್  ಇಮ್ತಿಯಾಜ್ (49), ತಂದೆ: ಖಲೀಫ್ ಅಬ್ದುಲ್ ಗಪೂರ್, ವಾಸ:ಮಾವಿನಕಟ್ಟೆ ಗುಲ್ವಾಡಿ ಗ್ರಾಮ ಕುಂದಾಫುರ ತಾಲೂಕು ಎಂದು ತಿಳಿಸಿದ್ದು. ಆತನು ಜನರಿಗೆ ಸರಕಾರದಿಂದ  ಉಚಿತವಾಗಿ ದೊರೆಯುವ ಅನ್ನಬಾಗ್ಯದ ಅಕ್ಕಿಯನ್ನು ಹೊಸಂಗಡಿ ಪರಿಸರದ ಮನೆಗಳಿಗೆ ಹೋಗಿ ಖರೀದಿಸಿ  ಹೆಚ್ಚಿನ ಬೆಲೆಗೆ ಅಂಗಡಿಗೆ ಮಾರಾಟ ಮಾಡುವುದಾಗಿ ತಿಳಿಸಿರುತ್ತಾನೆ. ಕಾರನ್ನು ಪರೀಶಿಲಿಸಲಾಗಿ  ಪ್ರತಿ ಚೀಲವು 50 ಕೆ ಜಿ ತೂಕವಿದ್ದು ಒಟ್ಟು 300 ಕೆ ಜಿ ಇರುತ್ತದೆ. ಎಲ್ಲಾ ಚೀಲಗಳ ಒಟ್ಟು ಮೌಲ್ಯ 7,200/- ರೂಪಾಯಿ ಆಗಿರುತ್ತದೆ. KA-20-M- 5720 ನೇ ನಂಬ್ರದ MATIZ ಕಾರಿನ ಮೌಲ್ಯ 1,00,000 /-  ರೂಪಾಯಿ ಆಗಿರುತ್ತದೆ. ಅಲ್ಲದೆ ಕಾರಿನಲ್ಲಿ ತೂಕ ಮಾಡುವ ಯಂತ್ರ ಕೂಡಾ ಇದ್ದು ಅದರ ಮೌಲ್ಯ 6,000/- ರೂಪಾಯಿ ಆರುತ್ತದೆ. ಆರೋಪಿತನು ಜನರಿಗೆ ಉಚಿತವಾಗಿ ದೊರೆಯುವ ಅನ್ನಬಾಗ್ಯದ ಅಕ್ಕಿಯನ್ನು ಕಾನುನು ಬಾಹಿರವಾಗಿ ಸಂಗ್ರಹಿಸಿ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 3, 6, 7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಆರೂರು ಗ್ರಾಮದ, ಬಂಗ್ಲೆಗುಡ್ಡೆ ಎಂಬಲ್ಲಿ ಪೊಡವಿ ಅನುಗ್ರಹ, ಮನೆ ನಂ 2-29 (ಬಿ) ರಲ್ಲಿ ಪಿರ್ಯಾದಿದಾರರಾದ ಕುಶಲ (72) , ತಂದೆ: ಕುಯಂತ್ರ, ವಾಸ: ಪೊಡವಿ ಅನುಗ್ರಹ, ಮನೆ ನಂ 2-29 (ಬಿ), ಬಂಗ್ಲೆ ಗುಡ್ಡೆ, ಆರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಸಂಸಾರದೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 11/05/2021 ರಂದು ಪಿರ್ಯಾದಿದಾರರ ಮನೆಯ ಸಮೀಪದಲ್ಲಿ ಪಂಚಾಯತ್‌ನವರು ಕೆ.ಇ.ಬಿ ಲೈನ್‌ಗೆ ತಾಗುವ ಮರಗಿಡಗಳನ್ನು ಕಡಿದು, ರಸ್ತೆಗೆ ಬಿದ್ದ ಮರದ ಕೊಂಬುಗಳನ್ನು ಪಿರ್ಯಾದಿದಾರರ ಜಾಗದಲ್ಲಿ ಹಾಕಿರುತ್ತಾರೆ.  ಆ ಮರದ ಕೊಂಬುಗಳನ್ನು ಆರೋಪಿ ಅಶೋಕರವರು ಮೆಷಿನ್ ನಿಂದ ತುಂಡು ಮಾಡುತ್ತಿದ್ದರು, ಆ ಸಮಯ ಮಧ್ಯಾಹ್ನ 4:00 ಗಂಟೆ ಸುಮಾರಿಗೆ ಪಿರ್ಯಾದಿದಾರರು  ಅಲ್ಲಿಗೆ ಹೋಗಿ ಆರೋಪಿಯ ಹತ್ತಿರ ಯಾಕೆ ನೀವು ಕಡಿದ ಮರದ ಗೆಲ್ಲುಗಳನ್ನು ನಮ್ಮ ಜಾಗದಲ್ಲಿ ಹಾಕುತ್ತಿದ್ದೀರಿ ಎಂದು ಕೇಳಿದ್ದು, ಆಗ ಆರೋಪಿಯು ಪಿರ್ಯಾದಿದಾರರನ್ನು ಏಕಾಏಕಿ ಎರಡು ಸಲ ದೂಡಿ, ನನ್ನ ಕೈಯಲ್ಲಿ ಏನಿದೆ ನೋಡು, ಎಂದು ಹೇಳಿ ಆರೋಪಿಯು ಕೈಯಲ್ಲಿದ್ದ ಮರಕಟ್  ಮಾಡುವ ಮೆಷಿನ್‌ ಹಿಡಿದುಕೊಂಡು ಬಂದು ಪಿರ್ಯಾದಿದಾರರನ್ನು ಪುನಃ ದೂಡಿದ್ದು,  ಪರಿಣಾಮ ಕಡಿದು ಹಾಕಿದ್ದ ಮರದ ತುಂಡಿನ ಮೇಲೆ  ಪಿರ್ಯಾದಿದಾರರು ಬಿದ್ದು ಅವರ ಕಣ್ಣಿನ ಎಡಭಾಗಕ್ಕೆ ಮರದ ತುಂಡು ತಾಗಿ ಓಳ ನೋವು ಆಗಿದ್ದು, ಅಲ್ಲದೇ ಬಲಕಾಲಿನ ಮಂಡಿಯ ಬಳಿ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021 ಕಲಂ: 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 16-07-2021 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080