ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ:

  • ಬ್ರಹ್ಮಾವರ : ಪಿರ್ಯಾದಿ ಚಂದ್ರಶೇಖರ ರವರು ದಿನಾಂಕ: 15.07.2021 ರಂದು ರಾತ್ರಿ 7:30 ಗಂಟೆಯ ಸಮಯಕ್ಕೆ ಊಪ್ಪೂರು ಗ್ರಾಮದ, ಮುಟ್ಟಿಕಲ್ಲು ಶಾಲೆಯ ಬಳಿ, ಕೊಳಲಗಿರಿ – ಕೆ.ಜಿ ರೋಡ್‌ ಮುಖ್ಯ ರಸ್ತೆಯ ಎಡಭಾಗದ ಮಣ್ಣು ರಸ್ತೆಯಲ್ಲಿ  ಅಮ್ಮುಂಜೆಯಲ್ಲಿರುವ ಅವರ ಮನೆ ಕಡೆಗೆ ನಡೆದು ಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಆರೋಪಿಯಾದ ರೋನಿ ಡಿಸೋಜಾ @ ರೋನಾಲ್ಡ್ ಎಂಬವರು ಅವರ ಬಾಬ್ತು  KA19P6797 ನೇ ನಂಬ್ರದ ಕಾರನ್ನು ಹಾವಂಜೆ ಕಡೆಯಿಂದ ಕೆ.ಜಿ ರೋಡ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿಗೆ ತರಚಿದ ಗಾಯ ಹಾಗೂ ಎಡ ಕೈಯ ಮೇಲ್ಭಾಗ ಮೂಳೆ ಮುರಿತದ ಜಖಂ ಉಂಟಾಗಿರುತ್ತದೆ. ಗಾಯಾಳು ಪಿರ್ಯಾದಿದಾರರಾದ ಚಂದ್ರಶೇಖರರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

 ಅಸ್ವಾಭಾವಿಕ ಮರಣ ಪ್ರಕರಣಗಳು:

  • ಹಿರಿಯಡ್ಕ: ಪಿರ್ಯಾದಿ ಪ್ರತೀಕ್ಷಾ (20), ಗಂಡ: ಆರುಣ, ವಾಸ: C/O: ರವಿ ಫೂಜಾರಿ, ವರ್ವಾಡಿ ಕ್ರಾಸ್, 5 ಸೆಂಟ್ಸ್, 82 ಕುದಿ ಗ್ರಾಮ, ಉಡುಪಿ ಇವರ ಗಂಡ 28 ವರ್ಷದ ಅರುಣ ರವರಿಗೆ ವಿಪರೀತ ಕುಡಿತದ ಚಟವಿದ್ದು, ಬುದ್ದಿ ಹೇಳಿದರೂ ಕೇಳುತ್ತಿರಲಿಲ್ಲ. ಅವರಿಗೆ ಮದುವೆಯಾಗಿ ಒಂದು ವರ್ಷವಾಗಿದ್ದು, ಮಕ್ಕಳಾಗಿರುವುದಿಲ್ಲ. ಈ ಬಗ್ಗೆ ಫಿರ್ಯಾದಿದಾರರ ಗಂಡನಿಗೆ ಉಡುಪಿ ಕಾಮತ್ ನರ್ಸಿಂಗ್ ಹೋಮಿನಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಅಲ್ಲಿ 15 ದಿನದ ಮದ್ದು ನೀಡಿದ್ದು, 15 ದಿನ ವೈಧ್ಯರು ಕುಡಿಯಬಾರದೆಂದು ಹೇಳಿದ್ದರು. ಆದರೆ ಆತನು ಸರಿಯಾಗಿ ಮದ್ದನ್ನು ತೆಗೆದುಕೊಳ್ಳದೇ ಹಿಂದಿನಂತೆ ಕುಡಿಯುತ್ತಿದ್ದನು. ಆಸ್ಪತ್ರೆಗೆ ಹೋಗಲು ಕೇಳುತ್ತಿರಲಿಲ್ಲ. ದಿನಾಂಕ:10/07/2021 ರಂದು ಕಾಮತ್ ನರ್ಸಿಂಗ್ ಹೋಮಿಗೆ ಕರೆದುಕೊಂಡು ಹೋಗಿ ಲ್ಯಾಬ್ ನಲ್ಲಿ ಪರೀಕ್ಷಿಸಿದಲ್ಲಿ ವೈಧ್ಯರು ಮಕ್ಕಳಾಗುವ ಸಾಧ್ಯತೆ ಕಮ್ಮಿ ಇರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಾನಸಿಕವಾಗಿ ನೊಂದುಕೊಂಡಿದ್ದು,  ಫಿರ್ಯಾದಿದಾರರೊಂದಿಗೆ ಗಲಾಟೆ ಮಾಡುತ್ತಿದ್ದರು. ಫಿರ್ಯಾದಿದಾರರು ಪ್ರಸ್ತುತ ವಾಸವಿರುವ ಬಾಡಿಗೆ ಮನೆಯಲ್ಲಿ ಕಳೆದ ಒಂದು ತಿಂಗಳಿಂದ ವಾಸವಿರುತ್ತಾರೆ. ಫಿರ್ಯಾದಿದಾರರ ಗಂಡ ಕುಡಿತದ ಚಟ ಕಡಿಮೆ ಮಾಡದೇ ಇದ್ದು, ಆ ಕಾರಣಕ್ಕೆ ಫಿರ್ಯಾದಿದಾರರ ತಂದೆ ತಾಯಿ ಬಂದು ಫಿರ್ಯಾದಿದಾರರನ್ನು ದಿನಾಂಕ: 13/07/2021 ರಂದು ಅವರ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ದಿನ ದಿನಾಂಕ: 16/07/2021 ರಂದು ಬೆಳಿಗ್ಗೆ 10:19 ಗಂಟೆಗೆ ಕುದಿಯ ಫಿರ್ಯಾದಿದಾರರ ಮನೆಯ ಹತ್ತಿರದ ಶಾಂತಿ ಎಂಬವರು ಫೋನ್ ಮಾಡಿ ಅರುಣ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೋಂಡಿರುವುದಾಗಿ ತಿಳಿಸಿದ್ದು, ಕೂಡಲೇ ಫಿರ್ಯಾದಿದಾರರು ಮನೆಯವರೊಂದಿಗೆ ಕುದಿಗೆ ಬಂದು ನೋಡಲಾಗಿ ಫಿರ್ಯಾದಿದಾರರ ಗಂಡ ಅರುಣ ಮನೆ ಚಾವಣಿಗೆ ಅಳವಡಿಸಿದ ಕಬ್ಬಿಣದ ಪಟ್ಟಿಗೆ ಬೈರಸ್ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ದೇಹ ನೇತಾಡುತ್ತಿತ್ತು. ಮೃತ ಅರುಣರವರಿಗೆ ವಿಪರೀತ ಕುಡಿತದ ಚಟವಿದ್ದು, ಅಲ್ಲದೇ ಮಕ್ಕಳಾಗಲಿಲ್ಲ ಎಂಬ ಚಿಂತೆಯಿಂದ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 15/07/2021 ರಂದು ಮದ್ಯಾಹ್ನ 3:00 ಗಂಟೆಯಿಂದ ದಿನಾಂಕ: 16/07/2021 ರಂದು ಬೆಳಿಗ್ಗೆ 10:15 ಗಂಟೆಯ ಮದ್ಯಾವಧಿಯಲ್ಲಿ ತಾನು ಬಾಡಿಗೆಗೆ ಇರುವ ಮನೆಯ ಚಾವಣಿಯ ಕಬ್ಬಿಣದ ಪಟ್ಟಿಗೆ ಬೈರಸನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ . ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 17/2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 16-07-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080