ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ನಿತೇಶ (27), ತಂದೆ:  ಸದಾಶಿವ  ಪೂಜಾರಿ, ವಾಸ: ಮಾತೃಶ್ರಿ ನಿಲಯ 1 ನೇ ಕ್ರಾಸ್ ಗರ್ಡೆ ಲಕ್ಷ್ಮಿ ನಗರ ಪುತ್ತೂರು ಗ್ರಾಮ ಕೋಡವೂರು ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ  ಬಾವ ಶ್ರೀನಾಥ ರವರು  ದಿನಾಂಕ 15/06/2022 ರಂದು  KA-20-ET-5221 ನೇ ಮೋಟಾರ್ ಸೈಕಲ್ ನಲ್ಲಿ  ಮಲ್ಪೆ ಕಡೆಯಿಂದ ಆರ್ಶಿವಾದ ಜಂಕ್ಷನ್ ಕಡೆಗೆ ಬರುತ್ತಿರುವಾಗ 15:45 ಗಂಟೆಗೆ ಸುಬ್ರಮಣ್ಯ ನಗರ ಜಂಕ್ಷನ್  ತಲುಪುವಾಗ ಸಂತೆಕಟ್ಟೆ ಒಳರಸ್ತೆಯಿಂದ KA-29-EK-1714 ನೇ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ನ್ನು   ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಶ್ರೀನಾಥ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ ಶ್ರಿನಾಥ ರವರು ಮೋಟಾರ್ ಸೈಕಲ್ ಸಮೇತ ಡಾಮಾರು  ರಸ್ತೆಗೆ  ಬಿದ್ದು ಶ್ರೀನಾಥ ರವರ ತಲೆಗೆ ಗಂಭಿರ ಗಾಯವಾಗಿರುತ್ತದೆ  ಮಾತನಾಡುತ್ತಿರಲಿಲ್ಲ. ಡಿಕ್ಕಿ ಹೊಡೆದ KA-29-EK-1714  ನೇ ಮೋಟಾರ್ ಸೈಕಲ್ ಸವಾರ ನು ಅಪಘಾತದ ನಂತರ ಮೋಟಾರ ಸೈಕಲ್ ಸಮೇತ ಪರಾರಿಯಾಗಿರುತ್ತಾನೆ. ಶ್ರೀನಾಥ ರವರುವ  ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 338 ಐಪಿಸಿ ಮತ್ತು  134 (ಎ) & ( ಬಿ) ಐಎಂವಿ  ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಮಟ್ಕಾ ಜುಗಾರಿ ಪ್ರಕರಣ

 • ಪಡುಬಿದ್ರಿ:  ದಿನಾಂಕ 15/06/2022 ರಂದು  ಪ್ರಕಾಶ್ ಸಾಲ್ಯಾನ್, ಪೊಲೀಸ್‌ ಉಪನಿರೀಕ್ಷಕರು(ತನಿಖೆ), ಪಡುಬಿದ್ರಿ ಪೊಲೀಸ್‌ ಠಾಣೆ ಇವರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ಅಪೋಲೋ ಮೆಡಿಕಲ್‌‌ನ ಹಿಂಭಾಗದ ಓಣಿಯಲ್ಲಿ  ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ಅಬ್ದುಲ್ ರಜಾಕ್ (37),  ತಂದೆ: ಅಬ್ದುಲ್ ಖಾದರ್, ವಾಸ: ವಿನೋಬ ನಗರ, ಪಳ್ಳಿಗುಡ್ಡೆ, ಕೋಟೆ ಗ್ರಾಮ, ಕಟಪಾಡಿ, ಕಾಪು ತಾಲೂಕು ಉಡುಪಿ ಜಿಲ್ಲೆ  ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಪಾದಿತನು 2 ನೇ ಆಪಾದಿತ ಕಿರಣ್ ಕಟಪಾಡಿ ಎಂಬಾತನ ಸೂಚನೆಯಂತೆ  ಜನರನ್ನು ಸೇರಿಸಿ ಚೀಟಿ ಬರೆದು ಕೊಡುತ್ತಿದ್ದು, 1 ನೇ ಆರೋಪಿತನು ಸಂಗ್ರಹಿಸಿದ ಹಣವನ್ನು 2 ನೇ ಆರೋಪಿತನಿಗೆ ನೀಡುತ್ತಿದ್ದು, 2 ನೇ ಆರೋಪಿತನು ಡ್ರಾ ನಡೆಸಿ ಬಹುಮಾನ ವಿಜೇತರಿಗೆ ಒಂದನೇ ಆರೋಪಿತ ಅಬ್ದುಲ್ ರಜಾಕ್ ಮುಖಾಂತರ ಹಣವನ್ನು  ನೀಡುವುದಾಗಿದೆ, ನಂತರ ಅಬ್ದುಲ್ ರಜಾಕ್‌‌ನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,830/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022, ಕಲಂ :78 (I) (III) ಕೆಪಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಗಂಗೊಳ್ಳಿ:  ಪಿರ್ಯಾದಿದಾರರಾದ ಉಮಾ ಖಾರ್ವಿ (60), ಗಂಡ:  ಚಂದ್ರಶೇಖರ, ವಾಸ: ಮಂತಿದುರ್ಗಿ ಹೌಸ್, ದೊಡ್ಡಹಿತ್ಲು, ಬಂದರ್ ರಸ್ತೆ ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರ ಪಕ್ಕದ  ಮನೆಯ ಶೋಭಾ ಹಾಗೂ ದೇವದಾಸ  ಎಂಬುವವರು ಪಿರ್ಯಾದಿದಾರರ ಮಗಳು ರೇಖಾ ಖಾರ್ವಿಯವರ ಬಳಿ ಸಾಲ ನೀಡುವಂತೆ ಕೋರಿಕೊಂಡಂತೆ ಸಂಬಂಧಿಕರ ಬಳಿ ಕೈಸಾಲ ಮಾಡಿ ಹಣವನ್ನು ನೀಡಿದ್ದು  ಸಾಲದ ಹಣವನ್ನು ಮರುಪಾವತಿಸುವಂತೆ  ಕೇಳಲು ದಿನಾಂಕ 13/06/2022 ರಂದು ರಾತ್ರಿ 20:30 ಗಂಟೆಗೆ ಪಿರ್ಯಾದಿದಾರರ ಮಗಳು ರೇಖಾ ಖಾರ್ವಿಯವರು ದೊಡ್ಡಹಿತ್ಲುವಿನಲ್ಲಿರುವ ತನ್ನ ಮನೆಯ ಪಕ್ಕದಲ್ಲಿರುವ  ಆರೋಪಿತರ ಮನೆಯ ಬಳಿ  ಹೋಗಿ 2 ನೇ ಆರೋಪಿ ಶ್ರೀಮತಿ ಶೋಭಾ ಖಾರ್ವಿ ಯವರನ್ನು ಹೊರಗೆ ಕರೆದು ಸಾಲವನ್ನು ವಾಪಾಸ್ ನೀಡುವಂತೆ ಕೇಳಿದಾಗ 1 ನೇ ಆರೋಪಿ ದೇವದಾಸ ಖಾರ್ವಿ ಮನೆಯಿಂದ ಹೊರಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು  ರೇಖಾರವರ ಕೂದಲನ್ನು ಹಿಡಿದು ಎಳೆದಿದ್ದು, ಅದೇ ಸಮಯದಲ್ಲಿ 2 ನೇ ಆರೋಪಿಯು ರೇಖಾ ಖಾರ್ವಿಯವರನ್ನು ನೆಲಕ್ಕೆ ಒತ್ತಿ ಹಿಡಿದು ಕಾಲಿನಿಂದ ತುಳಿದಿದ್ದು ಆರೋಪಿತ 3.ಸಂತೋಷ ಖಾರ್ವಿ, 4.ಶ್ರೀಮತಿ ಆಶಾ ಖಾರ್ವಿ, 5.ಕಮಲ ಖಾರ್ವಿ ಇವರು ಅಲ್ಲಿಗೆ ಬಂದು ರೇಖಾರವರ ಬಟ್ಟೆ ಎಳೆದು ಹಲ್ಲೆ ಮಾಡಿರುತ್ತಾರೆ. ಆ ಸಮಯದಲ್ಲಿ ರೇಖಾ ಖಾರ್ವಿಯವರು ಗಟ್ಟಿಯಾಗಿ ಕೂಗಿಕೊಂಡಾಗ ಪಿರ್ಯಾದಿದಾರರ ಅಳಿಯ ಲಕ್ಷ್ಮಣ, ಮಗ ಅಜಿತ್, ಹಾಗೂ ಮೊಮ್ಮಗ ವಿಷ್ಣು ಗಲಾಟೆ ತಪ್ಪಿಸಲು ಹೋದಾಗ 1 ಮತ್ತು 3 ನೇ ಆರೋಪಿತರು ಅಜಿತ್ ನಿಗೆ ಹಲ್ಲೆ ಮಾಡಿದ್ದು ಅದೇ ಸಮಯ ಆರೋಪಿ 1 ನೇಯವರನ್ನು ದೂಡಿದ್ದು ಆರೋಪಿಯು ನೆಲಕ್ಕೆ ಬಿದ್ದು ಆತನ ಹಲ್ಲು ಮುರಿದು ಹೋಗಿರುತ್ತದೆ. ಅಕ್ಕಪಕ್ಕದವರು ಸೇರಿ ಜಗಳ ಬಿಡಿಸಿದ್ದು ಆಗ ಆರೋಪಿತರು ಬಿಟ್ಟು ಮನೆಯ ಒಳಗೆ ಹೋಗಿರುತ್ತಾರೆ. ಪಿರ್ಯಾದಿದಾರರು ಮಗಳು ರೇಖಾ ಖಾರ್ವಿಯವರನ್ನು ದಿನಾಂಕ 14/05/2022 ರಂದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 143, 323, 354, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಮಣಿಪಾಲ: ದಿನಾಂಕ 13/06/2022 ರಂದು ಮಂಜುನಾಥ̤.ಎಂ, ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರಿಗೆ ಮಣಿಪಾಲ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ರಾಯಲ್‌ಎಂಬೆಸಿ ರೂಮ್‌ನಂ: 2902 ರಲ್ಲಿ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುವ ಬಗ್ಗೆ  ಮಾಹಿತಿ ಬಂದ ಮೇರೆಗೆ  ಪ್ಲಾಟ್‌ಗೆ ಹೋಗಿ ಪ್ಲಾಟ್‌ನಲ್ಲಿದ್ದ ಪೂರ್ಣ ಸೋಮೇಶ್ವರ್ (23), ತಂದೆ: ದಯಾನಂದ ಸೊಮೇಶ್ವರ್‌, ವಾಸ:  #1045/A, H.I.G , O.Y.H.S 3rd ಕ್ರಾಸ್‌, ಟಿಕೆ ಲೆಔಟ್‌ , 4th Stage , ಮೈಸೂರು ಎಂಬಾತನನ್ನು ವಿಚಾರಣೆ ಮಾಡಿದಾಗ ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿದ್ದು, ಆತನನ್ನು ದಿನಾಂಕ 14/06/2022 ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು , ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರು ಈ ದಿನ ದಿನಾಂಕ 15/06/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 87/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 24/05/2022 ರಂದು ಸದಾಶಿವ ಆರ್‌ ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು, ಕುಂದಾಪುರ ಕಸಬಾ ಗ್ರಾಮದ ಹೊಸ ಬಸ್ಸು ನಿಲ್ದಾಣದ ಬಳಿ ಓರ್ವ ವ್ಯಕ್ತಿಯು  ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿ̧ದ್ದು ಸ್ಫಳಕ್ಕೆ ಹೋದಾಗ ಅಲ್ಲಿ ಓರ್ವ  ವ್ಯಕ್ತಿಯು  ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ & ಹೆಡ್,   ಫೊರೆನ್ಸಿಕ್ ಮೆಡಿಸಿನ್ ವಿಭಾಗ,  ಕೆ.ಎಂ.ಸಿ. ಮಣಿಪಾಲರವರ  ಮುಂದೆ ಹಾಜರುಪಡಿಸಿದ್ದು,  ಅವನನ್ನು  ಪರೀಕ್ಷಿಸಿದ ವೈದ್ಯರು  ಗಾಂಜಾ ಸೇವಿಸಿರುವ ಬಗ್ಗೆ  ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ:27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-06-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080