ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ: ದಿನಾಂಕ 16/06/2022 ರಂದು ಪಿರ್ಯಾದಿದಾರರಾದ ಎಂ ವರ್ಷಿಣಿ (25) ತಂದೆ: ಎಂ ರವಿ ಕುಮಾರ  ಹಾಲಿ ವಾಸ: ಪ್ಲಾಟ್‌ನಂ: 403, ಕೀರ್ತಿ ಸಾಗರ ಅಪಾರ್ಟಮೆಂಟ್ ವಿದ್ಯಾರತ್ನ ನಗರ ಮಾಣಿಪಾಲ ಶಿವಳ್ಳಿ ಗ್ರಾಮ ಉಡುಪಿ ಇವರು ಅವರ ಸ್ನೇಹಿತೆ ಹಿಂದುಜಾ ಎಂಬುವರ AP-26 CA-6236 ವೆಸ್ಪ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರಳಾಗಿ ಮಣಿಪಾಲ ಟೈಗರ್ ಸರ್ಕಲ್ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ NH 169(A) ರಲ್ಲಿ ಹೋಗಿತ್ತಿದ್ದಾಗ ಸಮಯ: 00:20 ಗಂಟೆಗೆ ಮಣಿಪಾಲ ಟೆಂಪು ಸ್ಟ್ಯಾಂಡ್ ಬಳಿ ತಲುಪುವಾಗ ಹಿಂದುಜಾ ರವರು ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ ಸೈಕಲನ ಹತೋಟಿ ತಪ್ಪಿ ಬಲಬದಿಯ ಡಿವೈಡರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಹಿಂದುಜಾ ರವರ ತಲೆಗೆ ತೀವ್ರ ಗಾಯ ಉಂಟಾಗಿದ್ದು ಅವರನ್ನು 00:45 ಗಂಟೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಹಿಂದುಜಾ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಅಪಘಾತದಿಂದ ಎಂ ವರ್ಷಿಣಿ ರವರ ಹಲ್ಲು ಮುರಿತವಾಗಿದ್ದು ಬಲ ಕೈಗೆ ಒಳ ನೋವು ಹಾಗೂ ಕಾಲಿಗೆ ತರಚಿದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/2022 ಕಲಂ: 279, 338, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪಕರಣ

 • ಬೈಂದೂರು: ಪಿರ್ಯಾದಿದಾರರಾದ ಈಶ್ವರ್ ದಲಿಚಂದ್ ಪೊರ್ವಾಲ್ (48) ತಂದೆ: ದಲಿಚಂದ್ ಪೊರ್ವಾಲ್ ವಾಸ: 404, ತಾರಾಂಗ ಬಿಲ್ಡಿಂಗ್ , 150 ಪೀಟ್ ರೋಡ್, ಪದ್ಮಾವತಿ ನಗರ ಬೈಂದರ್ ವೆಸ್ಟ್ ,ಥಾಣೆ  ಮಹಾರಾಷ್ಟ್ರ ಇವರು ಮುಂಬೈಯಲ್ಲಿ ವಾಸ ಮಾಡಿಕೊಂಡಿದ್ದು ಸುಮಾರು 10 ವರ್ಷಗಳಿಂದ ಮುಂಬೈಯಲ್ಲಿ ಚಿನ್ನ ಖರೀಧಿಸಿ ಮಂಗಳೂರು ಮತ್ತು ಹೈದರಾಬಾದ್ ಕಡೆಗಳಲ್ಲಿ ಸೇಲ್ಸ್ ಮಾಡುವ ವ್ಯವಹಾರ ಮಾಡಿಕೊಂಡಿರುತ್ತಾರೆ. ಈಶ್ವರ್ ದಲಿಚಂದ್ ಪೊರ್ವಾಲ್ ರವರು ಈ ಹಿಂದೆ ಮುಂಬೈನ ಜವೇರಿ ಬಜಾರ್ ಎಂಬಲ್ಲಿರುವ ಅರಿಹನ್ ಡೈಮಂಡ್ ಆರ್ಟ ಜ್ಯುವೆಲ್ಲರಿ ಹಾಗೂ ಇನ್ನಿತರ ಜ್ಯುವೆಲ್ಲರಿ ಅಂಗಡಿಗಳಿಂದ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಖರೀಧಿಸಿ, ಈಶ್ವರ್ ದಲಿಚಂದ್ ಪೊರ್ವಾಲ್ ರವರು ಸದ್ರಿ ಚಿನ್ನಾಭರಣಗಳನ್ನು ಸ್ಟೀಲ್ ಬಾಕ್ಸಿನಲ್ಲಿರಿಸಿ ಸೂಟ್ ಕೇಸ್ ನಲ್ಲಿ ಭದ್ರಪಡಿಸಿ ಇಟ್ಟುಕೊಂಡಿದ್ದು ದಿನಾಂಕ 14/06/2022 ರಂದು ಮಹಾರಾಷ್ಟ್ರದಿಂದ ಮಂಗಳೂರಿಗೆ ಕೆನರಾ ಪಿಂಟೋ ಬಸ್ ನ್ನು ಬುಕ್ ಮಾಡಿ ದಿನಾಂಕ 15/06/2022 ರಂದು ಮಧ್ಯಾಹ್ನ 3:30 ಗಂಟೆಗೆ ಮೀರಾ ರೋಡಿನ ಶೀತಲ ನಗರದಿಂದ ಮಂಗಳೂರಿಗೆ ಚಿನ್ನಾಭರಣ ಇರುವ ಸೂಟ್ ಕೇಸ್ ನೊಂದಿಗೆ KA-70 1458 ನೇ ಕೆನರಾ ಪಿಂಟೋ ಬಸ್ ನ ಸೀಟ್ ನಂಬ್ರ 27 W ರಲ್ಲಿ ಕುಳಿತುಕೊಂಡು ಚಿನ್ನಾಭರಣ ಇರುವ ಸೂಟ್ ಕೇಸನ್ನು  ಸೀಟಿನ ಅಡಿಭಾಗದಲ್ಲಿ ಇರಿಸಿ ಮಂಗಳೂರು ಕಡೆಗೆ ಪ್ರಯಾಣಿಸುತ್ತಾ ದಿನಾಂಕ 16/06/2022 ರಂದು ಬೆಳಿಗ್ಗೆ 07:15 ಗಂಟೆಗೆ ಶಿರೂರು ಗ್ರಾಮದ ನಿರ್ಗದ್ದೆಯ ಶಿವ ಸಾಗರ ಹೊಟೇಲ್ ಎದುರು ಚಾಲಕನು ಬಸ್ಸನ್ನು ಉಪಹಾರಕ್ಕಾಗಿ  ನಿಲ್ಲಿಸಿದ್ದು ಈಶ್ವರ್ ದಲಿಚಂದ್ ಪೊರ್ವಾಲ್ ರವರು ಹೊಟೇಲ್ ನಲ್ಲಿ  ತಿಂಡಿ ತಿನ್ನುತ್ತಿದ್ದಾಗ ಬಸ್ ನ ಕ್ಲಿನರ್ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಸ್ಸಿನ ಒಳಗೆ ಪ್ರವೇಶಿಸಿ ಬ್ಯಾಗನ್ನು ಪರಿಶೀಲಿಸಿ ಬಸ್ಸಿನಿಂದ ಇಳಿದು ಹೊಟೇಲಿನಿಂದ ಸುಮಾರು ದೂರದಲ್ಲಿ ನಿಲ್ಲಿಸಿದ KA-03 N J-5060 ನೇ  ನಂಬ್ರದ ಬ್ರೀಜಾ ಬಿಳಿ ಬಣ್ಣದ ಕಾರಿನಲ್ಲಿ ಪರಾರಿಯಾಗಿರುವುದಾಗಿ ಪ್ರಯಾಣಿಕರಲ್ಲಿ ತಿಳಿಸಿದಾಗ ಈಶ್ವರ್ ದಲಿಚಂದ್ ಪೊರ್ವಾಲ್ ರವರು ಕೂಡಲೇ ಬಸ್ಸಿನ ಒಳಗೆ ಹೋಗಿ ತಾನು ಕುಳಿತಿದ್ದ ಸೀಟಿನ ಅಡಿಯಲ್ಲಿ ಪರಿಶೀಲಿಸಿದಾಗ ಬ್ಯಾಗ್ ಇಲ್ಲದೇ ಇದ್ದು  ಬಸ್ಸಿನ ಹಿಂಭಾಗಕ್ಕೆ ಹೋಗಿ ನೋಡಿದಾಗ ಸೂಟ್ ಕೇಸ್ ಬೀಗ ಒಡೆದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಅದರೊಳಗಿದ್ದ ಸ್ಟೀಲ್ ಬಾಕ್ಸ್ ತೆರೆದಿದ್ದು ಬಾಕ್ಸ್ ನೊಳಗಿದ್ದ  ಹಲವು ಬಗೆಯ ಡಿಸೈನ್ ಗಳುಳ್ಳ ಮೂಗಿಗೆ ಮತ್ತು ಕಿವಿಗೆ ಹಾಕುವ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾದ ಅನುಷ (35) ಗಂಡ: ಮಹೇಶ್‌ಶೆಟ್ಟಿ ವಾಸ:ಶರಣ್ಯ ಮನೆ  ಕೆರ್ವಾಶೆ ಗ್ರಾಮ  ಕಾರ್ಕಳ ತಾಲೂಕು ಇವರ ಗಂಡ ಮಹೇಶ್ ಶೆಟ್ಟಿ(37) ರವರು ಕೆರ್ವಾಶೆ ಹೇಕುಂಜೆ ಎಂಬಲ್ಲಿ ಶೆಡ್‌ನಲ್ಲಿ ಗೇರು ಬೀಜ ಕಟ್ಟಿಂಗ್‌ ಕೆಲಸವನ್ನು ನಡೆಸುತ್ತಿದ್ದು ಹಾಗೂ ನೀರು ದೋಸೆ ಹೊಟೆಲ್‌ಗಳಿಗೆ ವಿತರಿಸುವ ವ್ಯವಹಾರ ಹೊಂದಿದ್ದು ದಿನಾಂಕ 15/06/2022 ರಂದು 09:00ಗಂಟೆಗೆ ಮನೆಯಿಂದ ನೀರು ದೋಸೆ ತಯಾರಿಸಿ  ಬಜಗೋಳಿ, ಕೆರ್ವಾಶೆಯ ಹೊಟೆಲ್‌ಗೆ ವಿತರಿಸಿ ಎಂದಿನಂತೆ ಮನೆಗೆ ಬಂದವರು ನಂತರ ಬೆಳಿಗ್ಗೆ ಸುಮಾರು 09:45 ಗಂಟೆಗೆ ಗೇರು ಬೀಜ ಕಟ್ಟಿಂಗ್‌ಮಾಡುವ ಬೀಜಪ್ಯಾಕ್ಟರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಛ್‌ ಆಫ್‌ ಬರುತ್ತಿದ್ದು ಇಲ್ಲಿಯ ವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2022 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಅಮಾಸೆಬೈಲು: ಪಿರ್ಯಾದಿದಾರರಾದ ಸಂತೋಷ (36) ತಂದೆ:ರಾಜೀವ ನಾಯ್ಕ್, ವಾಸ:ಗೋಳಿಕಾಡು ಅಮಾಸೆಬೈಲು ಇವರ ತಾಯಿ ರತಿ ನಾಯ್ಕ (58) ಎಂಬುವರಿಗೆ ಕೆಲವು ವರ್ಷಗಳಿಂದ ಕೈ ಕಾಲು ಗಂಟು ನೋವು ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸಂಪೂರ್ಣವಾಗಿ ಗುಣಮುಖವಾಗದೇ ಇದ್ದು ಇದೇ ಕಾರಣದಿಂಧ ಮನನೊಂದು ದಿನಾಂಕ15/06/2022 ರಂದು ರಾತ್ರಿ 23:00 ಗಂಟೆಯಿಂದ ದಿನಾಂಕ 16/06/2022 ರಂದು  ಬೆಳಿಗ್ಗೆ 07:00 ಗಂಟೆಯ ಮಧ್ಯದ ಅವಧಿಯಲ್ಲಿ ಅಮಾಸೆಬೈಲು ಗ್ರಾಮದ ಗೋಳಿಕಾಡು ಎಂಬಲ್ಲಿ ಮನೆಯ ಹತ್ತಿರದ ಕೊಟ್ಟಿಗೆಯಲ್ಲಿ ಪಕ್ಕಾಸಿ ಚೂಡಿದಾರದ ಶಾಲು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 09/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-06-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080