ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕುಂದಾಪುರ: ದಿನಾಂಕ 15/06/2021 ರಂದು  ಮಧ್ಯಾಹ್ನ 12:10   ಗಂಟೆಗೆ,  ಕುಂದಾಪುರ ತಾಲೂಕು, ಕಸಬಾ   ಗ್ರಾಮದ ಸಂತೆ ಮಾರ್ಕೆಟ್ ಬಳಿ  NH66 ರಸ್ತೆಯಲ್ಲಿ ಆಪಾದಿತ ವಿಜಿತ್‌ ಬಂಗೇರ KA-21-N-2295ನೇ ಕಾರನ್ನು ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಅದೇ  ದಿಕ್ಕಿನಲ್ಲಿ ಬಾಲಕೃಷ್ಣ ಕೊಠಾರಿ ಎಂಬುವವರು KA-20-AA-6276ನೇ ಅಟೋರಿಕ್ಷಾದಲ್ಲಿ ಪಿರ್ಯಾದಿದಾರರಾದ ಅಚ್ಚುತ ಶೆಟ್ಟಿ (55), ತಂದೆ:  ಮಹಾಬಲ ಶೆಟ್ಟಿ, ವಾಸ:  ಚಿಗುರು, ತುಂಬಿನಕೆರೆ, ಭಟ್ರಕೊಂಬೆ, ಅಲ್ವಾಡಿ ಗ್ರಾಮ,  ಆರ್ಡಿ ಅಂಚೆ, ಹೆಬ್ರಿ ತಾಲೂಕು ಇವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಬಂದು ಪೂರ್ವ ಬದಿಯ NH66 ರಸ್ತೆಯಿಂದ  ಓವರ್‌ ಡಿವೈಡರ್‌ ಮುಖೇನ ಪಶ್ಚಿಮ ಬದಿಯ NH66 ರಸ್ತೆಗೆ ಇಂಡಿಕೇಟರ್‌ ಹಾಗೂ ಕೈ ಸನ್ನೆ ಮಾಡಿ ತಿರುಗಿಸುತ್ತಿರುವಾಗ ಅಟೋರಿಕ್ಷಾಕ್ಕೆ  ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಅಚ್ಚುತ ಶೆಟ್ಟಿಯವರ  ಬಲಕೆನ್ನೆಗೆ ಒಳಜಖಂ ಗಾಯ ಹಾಗೂ ತಲೆಗೆ  ಗೀರಿದ ರಕ್ತಗಾಯವಾಗಿ  ಕುಂದಾಪುರ  ಆದರ್ಶ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021 ಕಲಂ: 279, 337    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 15/06/2021 ರಂದು ಮಧ್ಯಾಹ್ನ 12:45 ಗಂಟೆಗೆ ಕಾರ್ಕಳ ತಾಲೂಕು ಈದು ಗ್ರಾಮದ ಅಲಿಮಾರುಗುಡ್ಡೆ  ಬಳಿ ಪಿರ್ಯಾದಿದಾರರಾದ ಶಿವರಾಮ್ ಹೆಗ್ಡೆ (54), ತಂದೆ:  ದಿ ಸೂರ್ಯಣ್ಣ ಹೆಗ್ಡೆ, ವಾಸ: ಹಳೆನೀರು ಹೌಸ್ ಈದು ಗ್ರಾಮ, ಮತ್ತು  ಅಂಚೆ  ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರು ತನ್ನ KA-20-B-1591 ನೇ ನಂಬ್ರದ ಆಟೋ ರಿಕ್ಷಾವನ್ನು ಬಜಗೋಳಿ –ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು  ಹೋಗುತ್ತಿರುವಾಗ ಗುಮ್ಮೆತ್ತು ಕಡೆಯಿಂದ KA-21-J-2378 ನೇ ಬೈಕ್ ಸವಾರನು ತನ್ನ ಬೈಕ್ ನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಜಂಕ್ಷನ್ ನಿಂದ ರಸ್ತೆಗೆ ಚಲಾಯಿಸಿ ಪಿರ್ಯಾದಿದಾರರ ರಿಕ್ಷಾದ ಎಡಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸಂಜೀವ ಶೆಟ್ಟಿರವರ ಎಡಕಾಲಿಗೆ, ಎಡಕೈಗೆ, ಅಲ್ಲಲ್ಲಿ ತರಚಿದ ಗಾಯ ಹಾಗೂ ಶ್ರೀಮತಿ ಸುಶೀಲಾರವರಿಗೆ ಸೊಂಟ ಹಾಗೂ ತಲೆಗೆ ಗುದ್ದಿದ್ದ ನೋವು ಮತ್ತು ಪಿರ್ಯಾದಿದಾರರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ  ಹೊಸ್ಮಾರ್ ವಿಜಯಾ ಕ್ಲಿನಿಕ್ ಕರೆದುಕೊಂಡು ಹೋಗಿರುವುದಾಗಿದೆ. ಈ ಅಪಘಾತದಿಂದ  ಎರಡು ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72 /2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಪುಷ್ಪಲತಾ ನಾಯಕ್ (40), ಗಂಡ: ನಾರಾಯಣ ನಾಯಕ್, ವಾಸ: ವಿಲ್ಸ್ಮಿಮಾ ಕಾಂಪೌಂಡ್, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಗಂಡ ನಾರಾಯಣ ನಾಯಕ್ (45) ಹಾಗೂ ಮಕ್ಕಳೊಂದಿಗೆ ವಾಸವಾಗಿರುವುದಾಗಿದೆ.  ಅವರ ಗಂಡ ನಾರಾಯಣ ನಾಯಕ್ (45) ರವರು ಮಾನಸಿಕ ರೋಗಿಯಾಗಿದ್ದು, ಅವರಿಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಂಪೂರ್ಣ ಗುಣಮುಖರಾಗಿರುವುದಿಲ್ಲ. ಅವರು ಬ್ರಹ್ಮಾವರ ಆಸುಪಾಸಿನ ಹೊಟೇಲ್ ಹಾಗೂ ಹಣ್ಣಿನ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದು, ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುತ್ತಿದ್ದರು, ಹೀಗಿರುತ್ತಾ ದಿನಾಂಕ 14/06/2021 ರಂದು ಮಧ್ಯಾಹ್ನ 3:00 ಗಂಟೆಗೆ ಮನೆಯಿಂದ ಹೋಗಿದ್ದ ನಾರಾಯಣ ನಾಯಕ್‌ರವರು ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ.  ಅವರ ಪತ್ತೆಯ ಬಗ್ಗೆ ಎಲ್ಲಾ ಕಡೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದಲ್ಲಿ  ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾಧ ವಿನಯ ಕುಮಾರ್ ಆಹಾರ ನಿರೀಕ್ಷಕರು, ಬೈಂದೂರು ತಾಲೂಕು ಇವರಿಗೆ ದಿನಾಂಕ 15/06/2021 ರಂದು ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಬೋಳಂಬಳ್ಳಿ ಎಂಬಲ್ಲಿನ ವಾಸಿ ಪ್ರಥ್ವೀರಾಜ್ ಜೈನ್ ರವರಿಗೆ ಸಂಬಂಧಿಸಿದ ಪ್ರಥ್ವಿ ಗೇರು ಬೀಜ ಕಾರ್ಖಾನೆ ಗೋದಾಮಿನಲ್ಲಿ  ಆಪಾದಿತ ಅಯೂಬ್ (32), ತಂದೆ: ಇಸ್ಮಾಯಿಲ್, ವಾಸ: ಅಗಸ್ತೇಶ್ವರ ಕಾಲೋನಿ ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಎಂಬಾತನು ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ 17:00 ಗಂಟೆಗೆ ದಾಳಿ ನಡೆಸಿ ಪ್ರಥ್ವಿರಾಜ್ ಜೈನ್ ರವರಿಗೆ ಸಂಬಂಧಿಸಿದ ಪ್ರಥ್ವಿ ಗೇರು ಬೀಜ ಕಾರ್ಖಾನೆಯ ಗೋದಾಮಿನಲ್ಲಿದ್ದ 4,02,000/- ರೂಪಾಯಿ ಮೌಲ್ಯದ 335 ಚೀಲ (16750 ಕೆಜಿ) ಯಷ್ಟು ಅಕ್ಕಿಯನ್ನು ಮತ್ತು ಇಲೆಕ್ಟ್ರಾನಿಕ್ ತೂಕದ ಯಂತ್ರ, ಚೀಲ ಹೊಲಿಯುವ ಯಂತ್ರ ಹಾಗೂ 10 ಗೋಣಿ ಚೀಲಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2020 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 08/06/2021 ರಂದು 12:00 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ  ಪಾಂಡುರವರು ಹಗಲು ಠಾಣಾ ಪ್ರಭಾರ ಕರ್ತವ್ಯದಲ್ಲಿರುವಾಗ ಠಾಣಾ ಸಿ.ನಂ.398/ಪಿಟಿಎನ್‌‌/ಮ.ಠಾಣೆ/2021ಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಬಗ್ಗೆ ಠಾಣೆಗೆ ಕರೆಸಿದ ಜ್ಯೋತಿಶ್‌‌ನಾಥ್‌‌(26), ತಂದೆ:ಅತುಲ್‌ ಚಂದ್ರನಾಥ್‌‌, ವಾಸ: ಆಶ್ರಯ ಫ್ಲಾಟ್‌, ಪರ್ಕಳ ಬಸ್ಸು ನಿಲ್ದಾಣದ ಬಳಿ,ಹೆರ್ಗಾ ಗ್ರಾಮ, ಉಡುಪಿ ಇವರನ್ನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ವಿಚಾರಿಸುತ್ತಿದ್ದಾಗ ಆತನು ಅಮಲಿನಲ್ಲಿರುವುದು ಕಂಡು ಬಂದಿದ್ದು ಆತನನ್ನು ವಿಚಾರಿಸಿದಾಗ ಆತನು ಮಾತನಾಡಲು ತೊದಲುತ್ತಿದ್ದು, ಆತನ ಬಾಯಿಯಿಂದ ಗಾಂಜಾದಂತಹ ಘಾಟು ವಾಸನೆ ಬರುತಿದ್ದು ಆತನು ಮಾದಕ ವಸ್ತು ಸೇವನೆ ಮಾಡಿದ ಅನುಮಾನದ ಮೇರೆಗೆ ಆತನನ್ನು  ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನನ್ನು ಪ್ರೊಫೆಸರ್ ಅಂಡ್ ದಿ ಹೆಡ್ ಕೆ .ಎಂ. ಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಧೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ: 27(ಬಿ) ಎನ್ಡಿಪಿಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-06-2021 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ