ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ: ಪಿರ್ಯಾದಿ ಪ್ರಭಾಕರ ನಾಯಕ್ ಇವರ ಚಿಕ್ಕಪ್ಪನ ಮಗಳ ಗಂಡನಾದ ನಾರಾಯಣ ನಾಯಕ್ (ಪ್ರಾಯ: 45 ವರ್ಷ) ಎಂಬವರು ಚಾಂತಾರು ಗ್ರಾಮದ, ಬ್ರಹ್ಮಾವರದಲ್ಲಿರುವ ವಿಲ್ಸಿಲ್ಮಾ ಕಾಂಪೌಂಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸವಾಗಿರುವುದಾಗಿದೆ.  ನಾರಾಯಣ ನಾಯಕ್ ರವರು ಮಾನಸಿಕ ರೋಗಿಯಾಗಿದ್ದು, ಅವರಿಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಂಪೂರ್ಣ ಗುಣಮುಖರಾಗಿರುವುದಿಲ್ಲ. ಅಲ್ಲದೇ ಮದ್ಯಪಾನ ಮಾಡುವ ಅಭ್ಯಾಸಹೊಂದಿರುತ್ತಾರೆ. ದಿನಾಂಕ: 14.06.2021 ರಂದು ಮಧ್ಯಾಹ್ನ 3:00 ಗಂಟೆಗೆ ಮನೆಯಿಂದ ನಾರಾಯಣ ನಾಯಕ್‌ ರವರು ಕಾಣೆಯಾಗಿರುತ್ತಾರೆ.  ಈ ಬಗ್ಗೆ ದಿನಾಂಕ: 15.06.2021 ರಂದು ಅವರ ಹೆಂಡತಿ ಪುಷ್ಪಾಲತಾ ನಾಯಕ್ ರವರು ಠಾಣೆಗೆ ದೂರು ನೀಡಿರುವುದಾಗಿದೆ.ದಿನಾಂಕ: 16.06.2021 ರಂದು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ ಕುಮ್ರಗೋಡು ಗ್ರಾಮದ ಮಾಬುಕಳ ಸೇತುವೆಯ ಬಳಿ, ರಾಹೆ 66 ರ ಎಡಬದಿಯ ಹೊಳೆಯಲ್ಲಿ  ನಾರಾಯಣ ನಾಯಕ್ ರವರ ಮೃತದೇಹ ಪತ್ತೆಯಾಗಿರುತ್ತದೆ.  ನಾರಾಯಣ ನಾಯಕ್ ರವರು ಅವರಿಗಿದ್ದ ಮಾನಸಿಕ ಖಾಯಿಲೆ ಹಾಗೂ ಕುಡಿತದ ಕಾರಣದಿಂದ ಮನೆಬಿಟ್ಟು ಹೋಗಿ ಮಾಬುಕಳ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-06-2021 05:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ