ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, 52 ನೇ ಹೇರೂರು ಗ್ರಾಮದ ಹೆರಂಜೆ ಹೊಸಮನೆ ವಾಸಿ ಉದಯ (26)ಇವರಿಗೆ  ಎರಡು-ಮೂರು ವರ್ಷಗಳಿಂದ ಅನಾರೋಗ್ಯ ಕಾಣಿಸಿಕೊಂಡಿದ್ದು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ಕೊಡಿಸುತ್ತಿರುವುದಾಗಿದೆ.  ಉದಯ ರವರಿಗೆ ಕಳೆದ ಎರಡು ಮೂರು ದಿನಗಳಿಂದ ವಿಪರೀತಿ ಜ್ವರ, ಮೈಕೈ ನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು  ಈ ಬಗ್ಗೆ ದಿನಾಂಕ 15/05/2023 ರಂದು ಬೆಳಿಗ್ಗೆ 9:30 ಗಂಟೆಗೆ  ಪಿರ್ಯಾದಿದಾರರಾದ ಮೋಹನದಾಸ ಹೆಗ್ಡೆ(62), ತಂದೆ: ದಿವಂಗತ ಭುಜಂಗ ಶೆಟ್ಟಿ , ವಾಸ:  ಹೆರಂಜೆ, ಹೊಸಮನೆ, 52ನೇ ಹೇರೂರು  ಗ್ರಾಮ ಬ್ರಹ್ಮಾವರ ತಾಲೂಕು  ಇವರ ಹೆಂಡತಿ ಗೀತಾ ಚಿಕಿತ್ಸೆಯ ಬಗ್ಗೆ ಉಡುಪಿಯ ಅಜ್ಜರ ಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಆತನನ್ನು ಪರೀಕ್ಷಿಸಿದ ವೈದ್ಯರು ಆರೋಗ್ಯವು ತೀವ್ರ ಹದಗಟ್ಟಿರುವುದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಉದಯ ರವರನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರದುಕೊಂಡು ಹೋಗಿ ದಾಖಲಿಸಿದ್ದು  ಚಿಕಿತ್ಸೆಯಲ್ಲಿರುತ್ತ  ಚಿಕಿತ್ಸೆಗೆ ಸ್ಪಂದಿಸಿದೇ  ಮಧ್ಯಾಹ್ನ 1:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 38/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಮಣಿಪಾಲ: ದಿನಾಂಕ 14/05/2023 ರಂದು ರಾತ್ರಿ 07:30 ಗಂಟೆಗೆ ಬೆಕಸಿನ್‌ಬಾರ್‌ & ರೆಸ್ಟೋರೆಂಟ್‌ಗೆ ಆರೋಪಿಗಳಾದ ಶಾಹಿಮ್, ರಾಹುಲ್ ಮತ್ತು ಇತರ 6 ಜನ ಹುಡುಗರು ಬಂದಿದ್ದು ಪುಡ್ ಮತ್ತು ಡ್ರಿಂಕ್ಸ್ ಆರ್ಡರ್ ಮಾಡಿ ನಂತರ ಬಿಲ್‌ ಕೊಡುವುದಿಲ್ಲ ಎಂದು ಪಿರ್ಯಾದಿದಾರರಾದ ರಕ್ಷಿತ್‌ ಶೆಟ್ಟಿ (25), ತಂದೆ: ಜಯಂತ್‌ ಶೆಟ್ಟಿ, ವಾಸ: ಬಿಲ್‌ಅಪರೇಟರ್, ಬ್ಯಾಕಸಿನ್‌ಬಾರ್ & ರೆಸ್ಟೋರೆಂಟ್‌, ಮಣಿಪಾಲ,  ಖಾಯಂ ವಿಳಾಸ: ಮಂಕೇರ ಮನೆ, ಆನಗಳ್ಳಿ, ಕುಂದಾಪುರ ಉಡುಪಿ ಜಿಲ್ಲೆ ಇವರು ಮತ್ತು ಅವರ ಸಿಬ್ಬಂದಿಯವರ ಬಳಿ ಗಲಾಟೆ ಮಾಡಿದ್ದು, ಪಿರ್ಯಾದಿದಾರರು ಅವರಲ್ಲಿ ನೀವು ಬಿಲ್‌ನ್ನು ಕೊಡಬೇಕು ಎಂದು ಹೇಳಿದಾಗ ಆಪಾದಿತರೆಲ್ಲರು ಪಿರ್ಯಾದಿದಾರರನ್ನು ಮತ್ತು ಸಿಬ್ಬಂದಿಗಳನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆಪಾದಿತರೆಲ್ಲರೂ ಪಿರ್ಯಾದಿದಾರರು ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಬೆದರಿಸಿ ಕೈಗಳಿಂದ ಪಿರ್ಯಾದಿದಾರರಿಗೆ  ಮತ್ತು ಸಿಬ್ಬಂದಿಗಳಿಗೆ ಹೊಡೆದು, ಕಾಲಿನಿಂದ ತುಳಿದಿರುತ್ತಾರೆ. ಅಲ್ಲದೇ ಹೋಗುವಾಗ  ಬೆದರಿಕೆ ಹಾಕಿ ಹೋಗಿರುತ್ತಾರೆ. ಅಲ್ಲದೇ   ದಿನಾಂಕ 15/05/2023 ರಂದು ಬೆಳಿಗ್ಗೆ 11:25 ಗಂಟೆಗೆ ಪಿರ್ಯಾದಿದಾರರ ಹೋಟೆಲ್‌ನ ಫೋನ್‌ ನಂಬರ್ ಗೆ ಒಂದು ಪೋನ್‌ಕರೆ ಬಂದಿದ್ದು, ಪಿರ್ಯಾದಿದಾರರು ಸ್ವೀಕರಿಸಲಾಗಿ ಅದರಲ್ಲಿ ಆಪಾದಿತ ಶಾಹಿಮ್ ನಾವು ನಿನ್ನೆ ಹೋಟೆಲ್‌ನಲ್ಲಿ ಗಲಾಟೆ ಮಾಡಿದವರು ನಿಮ್ಮ ಹೋಟೆಲ್‌ನವರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2023 ಕಲಂ: 143, 147, 341, 323,  504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-05-2023 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080