ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 15/05/2022 ರಂದು ಪಿರ್ಯಾದಿದಾರರಾದ ಶ್ಯಾಮಲ ವಿ (48), ಗಂಡ:ವಿಶ್ವನಾಥ, ವಾಸ:ಶ್ರೀ ಶಮಂತ್ ಪೆಮುಳ್ಳುಜೆಡ್ಡು ಕುಮ್ರಗೋಡು ಗ್ರಾಮ ಬ್ರಹ್ಮಾವರ ತಾಲೂಕು ಹಾಗೂ ಅವರ ಗಂಡ ವಿಶ್ವನಾಥ ರವರು ಬೆಳಿಗ್ಗೆ ಸಾಲಿಗ್ರಾಮಕ್ಕೆ ಹೋಗಲು ಕುಮ್ರಗೋಡು ಗ್ರಾಮದ ಕುಮ್ರಗೋಡು ಬಸ್ಸು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮಣ್ಣು ರಸ್ತೆಯಲ್ಲಿ ನಿಂತಿರುವಾಗ ಬ್ರಹ್ಮಾವರ ಕಡೆಯಿಂದ ಬಂದ  KA-20-A-5027 ನೇ ಆಟೋ ರಿಕ್ಷಾವನ್ನು ಕೈ ಅಡ್ಡ ಹಾಕಿ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ರಿಕ್ಷಾವನ್ನು ಮಣ್ಣು ರಸ್ತೆಯಲ್ಲಿ  ತಂದು ನಿಲ್ಲಿಸಿದ್ದು, ಆಗ ಪಿರ್ಯಾದಿದಾರರು ಹಾಗೂ ಅವರ ಗಂಡ ರಿಕ್ಷಾವನ್ನು ಹತ್ತಿದಾಗ ಸದರಿ ರಿಕ್ಷಾವನ್ನು ಅದರ ಚಾಲಕ ಒಮ್ಮೇಲೆ ದುಡುಕಿನಿಂದ ಹಾಗೂ ನಿರ್ಲಕ್ಷತನಿಂದ ರಸ್ತೆಯ ಬಲಬದಿಗೆ ರಾಷ್ಟ್ರೀಯ ಹೆದ್ದಾರಿಗೆ  ಚಲಾಯಿಸಿದ್ದು, ಆಗ ಬ್ರಹ್ಮಾವರ ಕಡೆಯಿಂದ ಸಾಲಿಗ್ರಾಮ ಕಡೆಗೆ ಮನೋಜ್ ಪೂಜಾರಿ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EI-563  ನೇ ಮೊಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಹಾಗೂ ಆಟೋ ರಿಕ್ಷಾ ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿರುತ್ತದೆ. ಪಿರ್ಯಾದಿದಾರರು ರಿಕ್ಷಾದ ಅಡಿಗೆ ಬಿದ್ದಿರುತ್ತಾರೆ. ಈ ಅಪಘಾತದಿಮದ ಪಿರ್ಯಾದಿದಾರರ ಹಿಮ್ಮಡಿಯ ಪಾದದ ಬಳಿ ಮೂಳೆಮುರಿತದ ಒಳಜಖಂ ಆಗಿರುತ್ತದೆ ಪಿರ್ಯಾದಿದಾರರ ಗಂಡನಿಗೆ ತರಚಿದ ಗಾಯವಾಗಿರುತ್ತದೆ. ಮೋಟಾರ್ ಸೈಕಲ್ ಸವಾರನಿಗೆ  ತಲೆಯ ಎದುರುಭಾಗ ಹಾಗೂ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಹಾಗೂ ಆರೋಪಿ ಆಟೋ ರಿಕ್ಷಾ ಚಾಲಕ ರವರ ಬಲಕಾಲು ಹಾಗೂ ಬಲಗೈಯ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಅಫಘಾತದಲ್ಲಿ ಗಾಯಗೊಂಡ ಮನೋಜ ಪೂಜಾರಿ ಹಾಗೂ ರಿಕ್ಷಾ ಚಾಲಕ ಅರುಣ್ ಶ್ಯಾನುಬೋಗ್ ರವರನ್ನು  ಚಿಕಿತ್ಸೆಯ ಬಗ್ಗೆ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು , ಪಿರ್ಯಾದಿದಾರರು ಹಾಗೂ ಅವರ ಗಂಡ ವಿಶ್ವನಾಥ  ರವರು ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ  85/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಶ್ರೀ ಮತಿ ವಸಂತಿ (58), ಗಂಡ: ದಿ. ಓಬಯ್ಯ ಗೌಡ, ವಾಸ: 5 ಸೆಂಟ್ಸ್ ಮುಟ್ಲುಪಾಡಿ ಶಾಲೆಯ ಬಳಿ ಮುಟ್ಲುಪಾಡಿ ಅಂಡಾರು ಗ್ರಾಮ ಹೆಬ್ರಿ ತಾಲೂಕು ಉಡುಪಿ ಇವರ ಮಗಳು ಸುಜಾತ (29) ರವರು ಹೆಬ್ರಿ ತಾಲೂಕು ಅಂಡಾರು ಗ್ರಾಮದ 5 ಸೆಂಟ್ಸ್ ಮುಟ್ಲುಪಾಡಿ ಶಾಲೆಯ ಬಳಿ ತನ್ನ ತಾಯಿಯೊಂದಿಗೆ ವಾಸವಾಗಿದ್ದು,  ಸುಜಾತ ರವರುಮಾನಸಿಕಳಂತೆ ಒಬ್ಬಳೇ ಮಾತನಾಡುತ್ತಾ ಕೊರಗುತ್ತಿದ್ದು ಈ ಬಗ್ಗೆ  ಹೆಬ್ರಿಯ ಮಾನಸಿಕ ಆಸ್ವತ್ರೆಯಿಂದ ಚಿಕಿತ್ಸೆ ಕೊಡಿಸಿ ಮದ್ದನ್ನು ಕೊಡುತ್ತಿದ್ದು, ಪಿರ್ಯಾದಿದಾರರು ದಿನಾಂಕ 15/05/2022  ರಂದು ಸಂಜೆ 4:00 ಗಂಟೆಗೆ ಸುಜಾತಳಲ್ಲಿ ಅಂಗಡಿ ಹೋಗುತ್ತೇನೆಂದು ಹೇಳಿ ಹೋದವರು ಸಂಜೆ 4:30 ಗಂಟೆಗೆ ಮನೆಗೆ ಬಂದು ಸುಜಾತಳನ್ನುಎಷ್ಠೇ ಕರೆದು ಸುಜಾತಳು ಬಾಗಿಲು ತೆರೆಯದ ಕಾರಣ ಏಣಿಯನ್ನು ಹಾಕಿ ಮನೆಯ ಹಂಚನ್ನು ತೆಗೆದು ನೋಡಿದಾಗ ಸುಜಾತಳು ಮನೆಯ ಕೋಣೆಯಲ್ಲಿನ ಮರದ ಪಕ್ಕಾಸಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರದೀಪ ನಾಯ್ಕ (30). ತಂದೆ:ಸೋಮ ನಾಯ್ಕ. ವಾಸ:3-133 ಹೆರಂಜೆ ಕ್ರಾಸ್  52 ನೇ ಹೇರೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಸೋಮ ನಾಯ್ಕ (55) ಎಂಬುವವರು ದಿನಾಂಕ 15/05/2022 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ 1:30 ಗಂಟೆಗೆ ಕುಂಜಾಲಿನಲ್ಲಿ ಇದ್ದಿದ್ದು , ಚಾಂತಾರು ರೈಲು ಹಳಿ ಬಳಿ  ಇರುವ ತಮ್ಮ ದೈವದ ಮನೆಗೆ ಹೋಗಲು ರೈಲ್ವೇ ಟ್ರಾಕ್ ನ್ನು ದಾಟುವಾಗ ಸಂಜೆ 4:10 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮತ್ಸ್ಯಗಂಧ  ಎಕ್ಸಪ್ರೇಸ್ ರೈಲು ಡಿಕ್ಕಿಯಾಗಿ ಕೆಲವು ದೂರ ಎಸೆಯಲ್ಪಟ್ಟು ತೀವೃ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 ಇತರ ಪ್ರಕರಣ

  • ಬೈಂದೂರು: ದಿನಾಂಕ 14/05/2022 ರಂದು ಮಧ್ಯಾಹ್ನ 3:00 ಗಂಟೆಗೆ ಆರೋಪಿತರಾದ  ನಿತ್ಯಾನಂದ ಶೇಟ್, ವೇಣುಗೋಪಾಲ ರೆಡ್ಡಿ ಮತ್ತು  ಪ್ರಕಾಶ್ ಶೇಟ್  ಇವರು ಪಿರ್ಯಾದಿದಾರರಾದ ಗಿರೀಶ್ ಶೇಟ್ (41), ತಂದೆ:ಪಿ ರಾಮಚಂದ್ರ ಶೇಟ್, ವಾಸ:ಶ್ರೀ ದೇವಿ ಕೃಪಾ, ಕಾಸನಾಡಿ ,ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರ ವಿರುದ್ದ  ಪೋಸ್ಟರ್ ಗಳನ್ನು ಉಪ್ಪುಂದ ಗ್ರಾಮದ ಉಪ್ಪುಂದ  ಅಂಡರ್ ಪಾಸ್ ನಲ್ಲಿ  ಹಚ್ಚುತ್ತಿರುವ ವಿಷಯ ತಿಳಿದ  ಪಿರ್ಯಾದಿದಾರರು ಆರೋಪಿತರಲ್ಲಿ  ಯಾಕೆ ನನ್ನ ವಿರುದ್ದ  ಪೋಸ್ಟರ್ ಗಳನ್ನು  ಹಚ್ಚುತ್ತಿದ್ದೀರಿ ಎಂದು ಕೇಳಲು ಹೋದಾಗ    ಆರೋಪಿತರು  ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ದೂಡಿ ಹಾಕಿ ಪಿರ್ಯಾದಿದಾರರನ್ನು ಹಾಗೂ  ಅವರ ಕುಟುಂಬವನ್ನು ನಾಶ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2022 ಕಲಂ: 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬ್ರಹ್ಮಾವರ: ಪಿರ್ಯಾದಿದಾರರಾದ ಸಂದೇಶ್‌  (23), ತಂದೆ: ಕುಶಲ, ವಾಸ: ಪೊಡವಿ ಅನುಗೃಹ ಬಂಗ್ಲೆಗುಡ್ಡೆ ಆರೂರು ಅಂಚೆ ಮತ್ತು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 14/05/2022 ರಂದು ಕೆಂಜೂರು ಗ್ರಾಮದ ಪಾದೇಮಠ ವಿರೇಶ್ವರ ದೇವಸ್ಥಾನದ ಗೆಂಡೋತ್ಸವಕ್ಕೆ ಹೋಗಿ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದಾಗ ರಾತ್ರಿ 11:30 ಗಂಟೆಗೆ ಆರೋಪಿ ಹರ್ಷ ಪಿರ್ಯಾದಿದಾರರ ಜೊತೆಯಲ್ಲಿದ್ದ ಕೃಷ್ಣ ರವರನ್ನು ದುರುಗುಟ್ಟಿ ನೋಡಿ ತಾಗಿಕೊಂಡು ಹೋಗಿದ್ದು, ಆ ಸಮಯ ಕೃಷ್ಣ ರವರು ಆರೋಪಿ ಬಳಿ ಯಾಕೆ ತಾಗಿಕೊಂಡು ಹೋಗುತ್ತೀಯಾ ಹಬ್ಬಕ್ಕೆ ಬಂದಿದ್ದಲ್ಲವಾ ಎಂದು ಹೇಳಿದಾಗ ಆರೋಪಿ ಹಾಗೂ ಆತನ ಜೊತೆಯಲ್ಲಿದ್ದ  ಇತರ ಆರೋಪಿಗಳಾದ ಚರಣ್, ಸುಕೇಶ್, ಬಾಲಕೃಷ್ಣ ಹಾಗೂ ಇತರ 6 ಜನರು ಸೇರಿ ಕೃಷ್ಣನ ಮೇಲೆ ಹಲ್ಲೆ ಮಾಡಲು ಮುಂದಾದಗ, ಪಿರ್ಯಾದಿದಾರರು ಮುಂದೆ ಹೋಗಿ ಆರೋಪಿ ಹರ್ಷನ ಬಳಿ ಯಾಕೆ ದುರುಗುಟ್ಟಿ ನೋಡುತ್ತೀರಾ ಎಂದು ಕೇಳಿದಾಗ ಹರ್ಷನು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳು ಪಿರ್ಯಾದಿದಾರರಿಗೆ ಕೈಯಿಂದ ಮುಖಕ್ಕೆ ಬಲವಾಗಿ ಹೊಡೆದಿರುತ್ತಾರೆ, ನಂತರ ನೆಲಕ್ಕೆ ದೂಡಿ ಹಾಕಿ ಎಲ್ಲಾ ಆರೋಪಿಗಳು  ಸೇರಿ ಕಾಲಿನಿಂದ ತುಳಿದಿರುತ್ತಾರೆ. ಆ ಸಮಯ ಗಲಾಟೆ ಬಿಡಿಸುತ್ತಿದ್ದ ಅವರ ಅಣ್ಣ ಸುಕೇಶ ಹಾಗೂ ಕೃಷ್ಣರವರಿಗೂ ಆರೋಪಿಗಳು ಸೇರಿ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಿಂದ ಪಿರ್ಯಾದಿದಾರರ ಮೈಕೈಗೆ ಒಳನೋವು ಹಾಗೂ ಎಡಕಣ್ಣಿಗೆ ಒಳನೋವು ಉಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಕೃಷ್ಣ ಹಾಗೂ ಆರೋಪಿ ಹರ್ಷ ರವರಿಗೂ ಈ ಹಿಂದೆ ಹಲವಾರು ವಿಚಾರಗಳಲ್ಲಿ ಗಲಾಟೆಯಾಗಿ ತಮ್ಮೊಳಗೆ ರಾಜಿ ಮಾಡಿಕೊಂಡಿದ್ದು ಈ ವೈಷಮ್ಯದಿಂದಲೇ ಕೃಷ್ಣ ರವರಿಗೆ ಹಲ್ಲೆ ಮಾಡಲು ಮುಂದಾದಗ ಪಿರ್ಯಾದಿದಾರರು ತಡೆಯಲು ಹೋಗಿದ್ದಕ್ಕೆ ಅವರ ಮೇಲೆ  ಹಲ್ಲೆ ಮಾಡಿ ನಿಂದನೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2022 ಕಲಂ: 143, 147, 323, 504, 506 ಜೊತೆಗೆ 149 ಐಪಿಸಿ & 3(1)(r), 3(1)(s), 3(2)(v-a ) prevention of atrocity act 1989 ರಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 16-05-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080