ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಕಾರ್ಕಳ: ಲತೀಶ್ ಕುಮಾರ್ (55) ರವರಿಗೆ ಕಾರ್ಕಳ ತಾಲೂಕಿನ ಬೋಳ ಗ್ರಾಮದ ,ಬೋಳ ಕೋಡಿ ಎಂಬಲ್ಲಿ ತೆಂಗಿನ ತೋಟದ ಕೃಷಿ ಜಾಗವಿದ್ದು, ದಿನಾಂಕ 15/05/2021 ರಂದು ತೆಂಗಿನ ಮರದ ಬುಡಗಳಿಗೆ ಕೃಷಿ ಬಗ್ಗೆ ಸೊಪ್ಪುಹಾಕಲೆಂದು ಮನೆ ಬಳಿಯ ಗದ್ದೆಗೆ ಸೊಪ್ಪು ಕಡಿಯಲು ಅಪರಾಹ್ನ 14:30 ಗಂಟೆಗೆ ಹೋದವರು ಅಪರಾಹ್ನ 15:30 ರವರೆಗೆ ಬಾರದೇ ಇದ್ದು ಮೃತರು ಮನೆ ಬಳಿಯ ಗದ್ದೆಯ ಹತ್ತಿರ ಇರುವ ಬಾವಿಯ ಪಕ್ಕ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶಂಕರ್ ಕುಮಾರ್ ಮೊಂಡಲ್ (37), ತಂದೆ: ಸ್ವಪನ್ ಕುಮಾರ್ ಮೊಂಡಲ್, ವಾಸ: ಹಸನಾಬಾದ್ ಗ್ರಾಮ, ಬಸಿರಾತ್ ತಾಲೂಕು, ನಾರ್ತ್‌ 24 ಪರಗಣಾಸ್ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ಇವರು Under Water Service Company Ltd. Mumbai ಎಂಬ ಕಂಪನಿಯಲ್ಲಿ ಸೈಟ್ ಎಂಜಿನಿಯರ್ ಆಗಿದ್ದು, ಮಂಗಳೂರಿನ ಕೂಳೂರಿನಲ್ಲಿರುವ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿದೆ. ಈ ಕಂಪನಿಯಲ್ಲಿ ಪವನ್ ಚಾಂದ್ ಕಾಟೋಚ್, ನಸೀಮ್ ಅಹಮ್ಮದ್, ಬೈವಾನುಲ್ ಹಕ್ ಮಂಡಲ್, ವನೀರುಲ್ಲಾ ಮುಲ್ಲಾ, ಕರಿಬುಲ್ ಶೇಖ್, ಮೈನುದ್ದೀನ್ ಶೇಖ್, ಅಶ್ಫಕ್ ಅಲಿ ಕಲ್ಬೆ, ಹಾಗೂ ಸೆಕ್ಯೂರಿಟಿ ಆಫೀಸರ್ ಹೇಮಕಾಂತ್ ಝಾ(50) ಇವರು MRPL ಕಂಪನಿಗೆ ಹೊರದೇಶದಿಂದ ಹಡಗು ಮುಖಾಂತರ ಬರುವ ಕಚ್ಚಾ ತೈಲವನ್ನು NMPT ಯಿಂದ ಸುಮಾರು 20 ಕಿ.ಮೀ ದೂರ ಅರಬ್ಬೀ ಸಮುದ್ರದಲ್ಲಿ ಇರುವ Single Point Moaring ಎಂಬ ಸ್ಥಳಕ್ಕೆ VS Marain Company ಗೆ ಸೇರಿದ Alliance ಎಂಬ ಬೋಟಿನಲ್ಲಿ ದಿನಾಂಕ: 13.05.2021 ರಂದು ಬೆಳಿಗ್ಗೆ 03:45 ಗಂಟೆಗೆ NMPT ಬಂದರಿನಿಂದ ತೆರಳಿ ಅಲ್ಲಿ ಕೆಲಸ ನಿರ್ವಹಿಸಿತ್ತಿದ್ದರು. ಸದ್ರಿ ಕೆಲಸಗಾರರಿಗೆ ಹವಾಮಾನ ವೈಪರೀತ್ಯ ಹಾಗೂ ಚಂಡಮಾರುತದ ಇರುವುದರಿಂದ ವಾಪಾಸ್ಸು ಬರುವಂತೆ ತಿಳಿಸಿದ್ದು ಈ ದಿನ ದಿನಾಂಕ: 15.05.2021 ರಂದು ಬೆಳಿಗ್ಗೆ 08:30 ಗಂಟೆಯ ಬಳಿಕ ಈ ಮೇಲಿನ ಕೆಲಸಗಾರರು ಯಾರೂ ಸಂಪರ್ಕಕ್ಕೆ ಸಿಗದೇ ಇದ್ದು, ಮಧ್ಯಾಹ್ನ ಸುಮಾರು 14:00 ಗಂಟೆಗೆ ಬೋಟೊಂದು ಸಮುದ್ರದ ನೀರಿನಲ್ಲಿ ಮುಳುಗಿ ಪಡುಬಿದ್ರಿಯ ಪಶ್ಚಿಮ ಕರಾವಳಿ ಕಡೆಗೆ ತೇಲಿ ಬರುತ್ತಿರುವುದಾಗಿ ಮಾಹಿತಿ ದೊರಕಿದಂತೆ ಪಿರ್ಯಾದಿದಾರರು ಈ ಬಗ್ಗೆ ಪಡುಬಿದ್ರಿ ಕಡೆಗೆ ಬರುತ್ತಿರುವ ಸಮಯ ಮಧ್ಯಾಹ್ನ 15:00 ಗಂಟೆಗೆ ಕಾಪು ತಾಲೂಕು ಬಡಾ ಎರ್ಮಾಳ್ ಗ್ರಾಮದ ಪಾಮ್ ಗ್ರೂವ್ ರೆಸಾರ್ಟಿನ ಹತ್ತಿರ ಸಮುದ್ರಕಿನಾರೆಯಲ್ಲಿ ಮೃತದೇಹವೊಂದು ತೇಲಿ ಬಂದು ಬಿದ್ದಿರುವುದಾಗಿ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಮೃತ ದೇಹವು ಸೆಕ್ಯೂರಿಟಿ ಆಫೀಸರ್ ಹೇಮಕಾಂತ್ ಝಾ ಅವರದ್ದು ಆಗಿರುವುದಾಗಿ ಗುರುತಿಸಿದ್ದು, ಹೇಮಕಾಂತ್ ಝಾ ಹಾಗೂ ಇತರ 7 ಜನ ಕೆಲಸಗಾರರು ಕೆಲಸ ಮುಗಿಸಿ ಈ ದಿನ ವಾಪಾಸ್ಸು NMPT ಬಂದರು ಕಡೆಗೆ ಬರುತ್ತಿರುವ ಸಮಯ ಸಮುದ್ರದಲ್ಲಿ ಎಲ್ಲಿಯೋ ಚಂಡ ಮಾರುತದ ಗಾಳಿಯ ರಭಸಕ್ಕೆ ಅಥವಾ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್‌‌ ಮಗುಚಿ ಬಿದ್ದು ಅದರಲ್ಲಿದ್ದ ಹೇಮಕಾಂತ್ ಝಾ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2021, ಕಲಂ: 174 ಸಿ.ಆರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶೇಖರ ಪೂಜಾರಿ, ಪ್ರಾಯ: 55 ವರ್ಷ, ತಂದೆ: ದಿ. ಚಂದು ಪೂಜಾರಿ, ವಾಸ: ಕುದಿಮಾರು ಹೌಸ್, ಉಳ್ಳೂರು, ಕೆಮ್ಮುಂಡೇಲು ಅಂಚೆ, ಎಲ್ಲೂರು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ತಮ್ಮ ರಮೇಶ್ ಪೂಜಾರಿ(52) ಎಂಬುವವರು ಕಾಪು ತಾಲೂಕು ಎಲ್ಲೂರು ಗ್ರಾಮದ ಹಿರಿಯಣ್ಣ ಶೆಟ್ಟಿ ಎಂಬುವರ ತೋಟ ನೋಡಿಕೊಂಡು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 15.05.2021 ರಂದು ವಿಪರೀತ ಗಾಳಿ ಮಳೆ ಇದ್ದುದರಿಂದ, ತಾನು ತೋಟಕ್ಕೆ ಹೋಗಿ ಗಾಳಿಗೆ ಉದುರಿ ಬಿದ್ದ ತೆಂಗಿನ ಕಾಯಿಗಳನ್ನು ಹೆಕ್ಕಿ ತರುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ಮಧ್ಯಾಹ್ನ 12:30 ಗಂಟೆಯಿಂದ 14:15 ಗಂಟೆಯ ಮದ್ಯಾವಧಿಯಲ್ಲಿ ತೋಟದಲ್ಲಿ ತೆಂಗಿನ ಕಾಯಿ ಹೆಕ್ಕುವಾಗ ಗಾಳಿ ಮಳೆಗೆ ತುಂಡಾಗಿ ಬಿದ್ದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಮೇಲೆ ಆಕಸ್ಮಿಕವಾಗಿ ಕಾಲು ಇರಿಸಿ, ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 12/2021, ಕಲಂ: 174 ಸಿ.ಆರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 16-05-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ