ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ:  ದಿನಾಂಕ 14/04/2023  ರಂದು 10:30 ಗಂಟೆಗೆ ಪಿರ್ಯಾದಿದಾರರಾದ ಉದಯ ಪೂಜಾರಿ (47), ತಂದೆ: ಅಣ್ಣಯ್ಯ ಪೂಜಾರಿ, ವಾಸ: ಅಬ್ಲಿಕಟ್ಟೆ ತೋಟದ ಮನೆ ಬೆಳ್ವೆ ಗ್ರಾಮ ಹೆಬ್ರಿ ತಾಲೂಕು ಇವರ  ತಾಯಿ ಶ್ರೀಮತಿ  ಮಾಡಿ ಪೂಜಾರ್ತಿ (80) ರವರು  ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ  ತೋಟದ ಮನೆ ಅಬ್ಲಿಕಟ್ಟೆ  ಎಂಬಲ್ಲಿ ಸಾರ್ವಜನಿಕ ಮಣ್ಣು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಆರೋಪಿ  KA-20-EC-0889 ನೇ ನಂಬ್ರದ ಮೋಟಾರ್ ಸೈಕಲ್‌‌ನ್ನು  ಬೆಳ್ವೆ ಕಡೆಯಿಂದ ತೋಟದ ಮನೆ ಕಡೆಗೆ  ಅತೀ  ವೇಗ   ಹಾಗೂ  ಅಜಾಗರೂಕತೆಯಿಂದ ಚಲಾಯಿಸಿ  ರಸ್ತೆಯ  ಬದಿಯಲ್ಲಿ  ನಡೆದುಕೊಂಡು  ಹೋಗುತ್ತಿದ್ದ ಶ್ರೀಮತಿ  ಮಾಡಿ ಪೂಜಾರ್ತಿ ಇವರಿಗೆಢಿಕ್ಕಿ ಹೊಡೆದ ಪರಿಣಾಮ  ಅವರು ಮಣ್ಣು ರಸ್ತೆಗೆ  ಬಿದ್ದು ಚಿಕಿತ್ಸೆಯ ಬಗ್ಗೆ ಕೊಟೇಶ್ವರದ  ಡಾ,  ಎನ್.ಆರ್. ಆಚಾರ್ಯ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು, ಅಲ್ಲಿ ಅವರನ್ನು  ಪರೀಕ್ಷಿಸಿದ ವೈಧ್ಯರು  ಚಿಕಿತ್ಸೆ  ನೀಡಿ  ಎಡಗಡೆಯ ಸೋಂಟದ ಮೂಳೆಗೆ  ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಎಂದು ತಿಳಿಸಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಶ್ರೀಧರ (39), ತಂದೆ : ಸಂಜೀವ, ವಾಸ: ಮುಂಡೇಜಾಲು ಮನೆ ಶಿರ್ಲಾಲು ಗ್ರಾಮ ಕಾರ್ಕಳ ತಾಲೂಕು ಇವರು ದಿನಾಂಕ 15/04/2023 ರಂದು ಮಧ್ಯಾಹ್ನ 12:30 ಗಂಟೆಗೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಕೆರ್ವಾಶೆ ನಿವಾಸಿಯಾದ ದೀಕ್ಷಿತ್‌  ರವರು ಪಿರ್ಯಾದಿದಾರರಲ್ಲಿದ್ದಲ್ಲಿಗೆ ಬಂದು ನಾವು ಮೀನು ಹಿಡಿಯಲು ಮದಿಮಲು ಗುಂಡಿಗೆ ಮಂಗಳ ನಗರದ ನಿವಾಸಿಯಾದ ಚಂದ್ರ ದೇವಾಡಿಗ (55) ರವರೊಂದಿಗೆ ಹೋಗಿ ಹೊಳೆಗೆ ಬಲೆ ಹಾಕಿದ್ದು, ಚಂದ್ರ ದೇವಾಡಿಗರು ನೀರಿನಲ್ಲಿ ಈಜುತ್ತಾ ಬಲೆ ಹಾಕಿದಲ್ಲಿಗೆ ಹೋಗಿ ಬರುವುದಾಗಿ ಹೇಳಿ ನೀರಿನಲ್ಲಿ ಈಜುತ್ತಾ ಹೋದವರು ಎಲ್ಲಿಯೂ ಕಾಣುವುದಿಲ್ಲ ಎಂಬುದಾಗಿ ಹೇಳಿದಂತೆ ಪಿರ್ಯಾದಿದಾರರು ಅಲ್ಲಿಗೆ ಹೋಗಿ ನೋಡಿದಾಗ ಎಲ್ಲಿಯೂ ಕಾಣ ಸಿಗದೇ ಇದ್ದು,  ನಂತರ ಮುಳುಗು ತಜ್ಞರನ್ನು ಕರೆಸಿ ನೀರಿನಲ್ಲಿ ಹುಡುಕಿದಾಗ ನೀರಿನ ಗುಂಡಿಯಲ್ಲಿ ಮುಳುಗಿ ಮೃತ ಪಟ್ಟಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2023 ಕಲಂ: 174 ಸಿ.ಆರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಮುತ್ತಿ ಜಗ್ಗರಾವ್‌ (52), ತಂದೆ: ಎಮ್‌ ಅಪ್ಪರಾವ್‌, ವಾಸ: ಆಂದ್ರಪ್ರದೇಶ ಇವರ ಅಣ್ಣನ ಮಗ ಗಾಲ್ ರಾಜ್ (26) ಇವರು  ಕಳೆದ 10 ವರ್ಷಗಳಿಂದ  ಮಲ್ಪೆಯಲ್ಲಿ ಮೀನಗಾರಿಕೆ ಕೆಲಸ ಮಾಡಿಕೊಂಡಿದ್ದು,   3 ವರ್ಷಗಳಿಂದ ಊರಿಗೆ ಹೋಗಿರುವುದಿಲ್ಲ, ಗಾಲ್ ರಾಜ್ ನಿಗೆ  ಶರಾಬು ಕುಡಿಯುವ ಅಭ್ಯಾಸ ವಿದ್ದು, ಕೆಲವು ದಿನಗಳಿಂದ ಮೀನುಗಾರಿಕೆ ಕೆಲಸ ವಿಲ್ಲದ ಕಾರಣ ಮಲ್ಪೆ ಯ ಬಾಡಿಗೆ ರೂಮಿನಲ್ಲಿ ಒಬ್ಬನೆ ಇರುತ್ತಿದ್ದನು. ದಿನಾಂಕ  14/04/2023 ರಂದು 11:50 ಗಂಟೆಗೆ ಪಿರ್ಯಾದಿದಾರರ ಪರಿಚಯದ ಉದಯ ರವರು ಕರೆ ಮಾಡಿ ವಿಷಯ ತಿಳಿಸಿದಂತೆ , ಬಾಪುತೋಟದ ಗಾಲ್ ರಾಜ್ ನ ಬಾಡಿಗೆ ರೂಮಿಗೆ  ಬಂದು ಗಾಲ್  ರಾಜ್  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ನೋಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2022 ,ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 15/04/2023 ರಂದು  ಮಹೇಶ್ ಟಿ.ಎಂ,  ಪೊಲೀಸ್ ಉಪನಿರೀಕ್ಷಕರು(ಕಾ.ಸು-1), ಉಡುಪಿ ನಗರ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ  ಆದಿ ಉಡಪಿ ವಿಲೇಜ್-ಇನ್ ಬಾರ್ ಬಳಿ ಇರುವ ಶ್ರೀ ಸಾಯಿ ಫಿಶ್‌ಲ್ಯಾಂಡ್ ಹೋಟೇಲ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಲುಪಿ ಹೋಟೇಲ್ ನಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದಾಗ ಹೋಟೇಲ್ ನಲ್ಲಿ ಮದ್ಯ ಸೇವಿಸುತ್ತಿದ್ದ ಗ್ರಾಹಕರು ಓಡಿ ಹೋಗಿದ್ದು, ಸ್ಥಳದಲ್ಲಿ ಹಾಜರಿದ್ದ ಹೋಟೇಲ್ ಮಾಲೀಕರಾದ ದಿನೇಶ್‌ ಪೂಜಾರಿ ರವರಲ್ಲಿ ವಿಚಾರಿಸಲಾಗಿ ಮದ್ಯ ಮಾರಾಟಕ್ಕೆ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ ಮೇರೆಗೆ ಒಟ್ಟು ರೂಪಾಯಿ  4,805/- ಮೌಲ್ಯದ 6.660 ಲೀಟರ್‌  ಮದ್ಯ ಹೊಂದಿರುವ 11 ಮದ್ಯದ ಬಾಟಲಿಗಳನ್ನು ಹಾಗೂ ನಗದು ರೂಪಾಯಿ 510/- ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2023, ಕಲಂ:  32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 09/04/2023 ರಂದು ಪುರುಷೋತ್ತಮ ಎ ಪೊಲೀಸ್ ಉಪನಿರೀಕ್ಷಕರು (ಕಾ.ಸು & ಸಂಚಾರ) ಪಡುಬಿದ್ರಿ ಪೊಲೀಸ್‌  ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಕಾಫು ತಾಲೂಕು ಬಡಾ ಗ್ರಾಮದ ಉಚ್ಚಿಲ ಎಂಬಲ್ಲಿ ಮಸಾಬ್ ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ  ಅನುಮಾನಗೊಂಡು ಆತನನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು,ಮಸಾಬ್ ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ  ದಿನಾಂಕ  15/04/2023 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  47/2023,  ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 16-04-2023 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080