ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಸುಹಾಸ್‌ ಶೆಣೈ (36), ತಂದೆ: ಉಮೇಶ್‌ ಶೆಣೈ,‌ ವಾಸ: 8/100(1), ನಯನ್‌ ಸದನದ ಎದುರು, ಮಿಲ್ಕ್‌ ಡೈರಿ ಹಿಂಬದಿ, ಈಶ್ವರ ನಗರ, ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರ ತಂದೆ ಉಮೇಶ್ ಶೆಣೈ (69) ಇವರು ದಿನಾಂಕ 12/04/2023 ರಂದು ತನ್ನ ಬಾಬ್ತು KA-20-EH-9841 ನೇ  ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಈಶ್ವರ ನಗರದಲ್ಲಿರುವ ತಮ್ಮ ಮನೆಯಿಂದ ಮಣಿಪಾಲದ ಕಡೆಗೆ ಬರುವಾಗ ಸಂಜೆ 05:10 ಮಣಿಪಾಲದ  ಅಶ್ಲೇಷ ಹೋಟೇಲ್ ಬಳಿ ಪರ್ಕಳ – ಮಣಿಪಾಲ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ ನ ಹತೋಟಿ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಗಾಯ ಉಂಟಾಗಿದ್ದು, ಅಲ್ಲದೇ ಮುಖ, ಹಾಗೂ ಮೈ ಕೈಗೂ ಗಾಯ ಉಂಟಾಗಿತ್ತದೆ. ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದವರು  ದಿನಾಂಕ 15/04/2023 ರಂದು ರಾತ್ರಿ 9.00 ಗಂಟೆಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2023 ಕಲಂ: 279, 304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ದಿನೇಶ್‌ ಶೆಟ್ಟಿ (50) , ತಂದೆ: ದಿ. ವಿಠಲ ಶೆಟ್ಟಿ,  ವಾಸ: ಕುಡುಬರಕೇರಿ ಮನೆ, ಕುಕ್ಕೆಹಳ್ಳಿ, ಅಂಚೆ ಮತ್ತು ಗ್ರಾಮ  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 16/04/2023 ರಂದು ಬೆಳಿಗ್ಗೆ 8:35 ಗಂಟೆಗೆ  ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದಲ್ಲಿ ಹಾದು ಹೋಗಿರುವ ಹಿರಿಯಡ್ಕ ಕುಕ್ಕೆಹಳ್ಳಿ ರಸ್ತೆಯಲ್ಲಿ KA̲-20-1737 ನೇ ಲಾರಿ ಚಾಲಕ ಜಗದೀಶ ಲಾರಿಯನ್ನು  ನಾಗಬನ ಬಳಿ ರಸ್ತೆಯ ಉಬ್ಬಿನಲ್ಲಿ ಚಲಾಯಿಸಿಕೊಂಡು ಉಬ್ಬಿನಲ್ಲಿ ಸ್ವಲ್ಪ ಮೇಲೆ ಹೋದ  ನಂತರ ಏಕಾಏಕಿ ಲಾರಿಯನ್ನು ಯಾವುದೇ ಸೂಚನೆಯನ್ನು ನೀಡದೆ ನಿರ್ಲಕ್ಷತನದಿಂದ  ಹಿಮ್ಮುಖವಾಗಿ ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಭಾಗಕ್ಕೆ ಬಂದು  ಹಿರಿಯಡ್ಕ ಕಡೆಯಿಂದ ಬರುತ್ತಿದ್ದ KA-20-ED-2499 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದು ಎಡಭಾಗಕ್ಕೆ ಕೊಂಡು ಹೋಗಿದ್ದು  ಪರಿಣಾಮ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಹಾಗೂ ಲಾರಿಯ ಚೆಸ್ಸಿ ಮಧ್ಯೆ ಸಿಲುಕಿ ಆತನ ತಲೆ ಬಿಚ್ಚಿಕೊಂಡು ಮೆದುಳು ಹೊರಬಂದಿದ್ದು ಅದಾಗಲೇ ಮೃಪಟ್ಟಿದ್ದು, ಸಹಸವಾರನಿಗೆ ಕೈಗಳಿಗೆ ರಕ್ತಗಾಯವಾಗಿರುತ್ತದೆ. ನಂತರ ಅಕ್ಕಪಕ್ಕದವರಲ್ಲಿ ವಿಚಾರಿಸಲಾಗಿ ಮೃತಪಟ್ಟವರು ಕುಕ್ಕೆಹಳ್ಳಿಯ ರಾಘವೇಂದ್ರ ನಾಯ್ಕ್ ಹಾಗೂ ಗಾಯಗೊಂಡವರು ಕುಕ್ಕೆಹಳ್ಳಿಯ ಬಚ್ಚ ನಾಯ್ಕ್ ಎಂಬುದಾಗಿ ತಿಳಿಯಿತು ನಂತರ ಮೃತಪಟ್ಟವರನ್ನು ಹಾಗೂ ಗಾಯಾಳುವನ್ನು ಅಂಬುಲೆನ್ಸ್ ನಲ್ಲಿ ಮಣಿಪಾ ಕೆಎಂಸಿ ಅಸ್ಪತ್ರೆಗೆ ಕಳುಹಿಸಲಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023  ಕಲಂ: 279, 338  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಂಕರ ಶಾಮ ಪೂಜಾರಿ (69) , ತಂದೆ: ಶಾಮ ಕೆ ಅಂಚನ್ , ವಾಸ: ಪ್ರೀತಂ ನಿವಾಸ, ಮಟ್ಟು ತೆಂಕು ಕೊಪ್ಲ, ಕಟಪಾಡಿ ಇವರ ಹೆಂಡತಿ ಶ್ರೀಮತಿ ಪೂರ್ಣಿಮಾ ಶಂಕರ್ ಪೂಜಾರಿ (58) ರವರು ಮಾನಸಿಕ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದು ಈ ಬಗ್ಗೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗೂ ದಿನಾಂಕ 06/04/2023 ರಂದು ಶ್ವಾಸಕೋಶದ ಸಮಸ್ಯೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.  ದಿನಾಂಕ 15/04/2023 ರಂದು ಪಿರ್ಯಾದಿದಾರರು ಹಾಗೂ ಅವರ ಮಗ ಮನೆಯಿಂದ ಹೊರಗೆ ಹೋಗಿದ್ದು 13:15 ಗಂಟೆಗೆ ಮನೆಗೆ ವಾಪಾಸು ಬಂದಾಗ ಪಿರ್ಯಾದಿದಾರರ ಹೆಂಡತಿಯನ್ನು ನೆರೆಮನೆಯವರು ಆರೈಕೆ ಮಾಡುತ್ತಿದ್ದು ವಿಚಾರಿಸಲಾಗಿ ಪಿರ್ಯಾದಿದಾರರ ಹೆಂಡತಿ ಪೂರ್ಣಿಮಾ ಶಂಕರ್‌ಪೂಜಾರಿಯವರು ಏಕಾ ಏಕೀ ಅಂಗಳದಲ್ಲಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಅವರ ಮಗ ಒಂದು ವಾಹನದಲ್ಲಿ ಉಡುಪಿ TMA Pai ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಪೂರ್ಣಿಮಾರವರನ್ನು ಮಣಿಪಾಲ ಕೆ.ಎಂ ಸಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 15/04/2023 ರಂದು ರಾತ್ರಿ 11:00 ಗಂಟೆಗೆ ಪೂರ್ಣಿಮಾರವರು ಮೃತಪಟ್ಟಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 10/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸುಜಾತ (37) ಇವರು ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಬಾಹ್ಯ ಮೂಲದ ಮಹಿಳಾ ರಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ 14 ವರ್ಷಗಳಿಂದ ಸಂಸ್ಥೆಯಲ್ಲಿರುವ ದುರ್ಗಿ ಯಾನೆ ಸುನೀತ (41) ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 16/04/2023 ರಂದು ಬಳಿಗ್ಗೆ 07:25 ಗಂಟೆಗೆ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಿ, ರೂಮಿನಲ್ಲಿ ನಿಂತಿದ್ದವರು ಒಮ್ಮೆಲೆ ಕುಸಿದು ಕುಳಿತುಕೊಂಡಿದ್ದು, ಬಾಯಲ್ಲಿ ಸ್ವಲ್ಪ ದ್ರವ ಬಂದಿದ್ದು, ನಿಶಕ್ತರಾದವರನ್ನು ಪಿರ್ಯಾದಿದಾರರು ಉಪಚರಿಸಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ದುರ್ಗಿ ಯಾನೆ ಸುನೀತ ಎಂಬವರು ಬೆಳಿಗ್ಗೆ 07:59 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರೆಸಿಲ್ಲಾ, ಗಂಡ: ಪ್ರವೀಣ್‌, ವಾಸ: ಜೇನಿ ನಿಲಯ ಕುರಾಡಿ ಕೆನರಾ ಬ್ಯಾಂಕ್‌ ಹತ್ತಿರ, ಕುರಾಡಿ ಪೋಸ್ಟ್ ಇವರ ಗಂಡ ಪ್ರವೀಣ್‌ ಕುಮಾರ್ (31) ರವರಿಗೆ 3 ವರ್ಷದಿಂದ  ಲಿವರ್‌ ಸಮಸ್ಯೆ ಕಾಣಿಸಿಕೊಂಡಿದ್ದು ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡು  ಬ್ರಹ್ಮಾವರದಲ್ಲಿ ಚಾಲಕ ಕೆಲಸ ಮಾಡಿಕೊಂಡಿರುತ್ತಾರೆ. ಈ ನಂತರ ಬೆಂಗಳೂರಿಗೆ ಚಾಲಕ ಕೆಲಸದ ಮೇಲೆ ತೆರಳಿದ್ದು, ದಿನಾಂಕ 15/04/2023 ರಂದು ಪಿರ್ಯಾದಿದಾರರು ವಿದೇಶದಿಂದ ಮಂಗಳೂರಿಗೆ ಬಂದಿದ್ದು ಮಂಗಳೂರಿನ ರೂಂ ನಲ್ಲಿದ್ದ ಪಿರ್ಯಾದಿದಾರರ ಗಂಡನೊಂದಿಗೆ ಕಾರಿನಲ್ಲಿ ಬಾರ್ಕೂರಿನ ಮನೆಗೆ ರಾತ್ರಿ 9:50 ಗಂಟೆಗೆ ಬಂದಿದ್ದು ಆ ಸಮಯ ಪ್ರವೀಣ್‌ರವರು ತನಗೆ ವಿಪರೀತ ಆಯಾಸವಾಗಿರುವುದಾಗಿ ತಿಳಿಸಿರುತ್ತಾರೆ. ರಾತ್ರಿ 11:00 ಗಂಟೆಗೆ ಮನೆಯಲ್ಲಿ ಮಲಗಿದ್ದು ದಿನಾಂಕ 16/04/2023 ರಂದು ಬೆಳಿಗ್ಗೆ ಫಿರ್ಯಾದಿದಾರರು ಅವರ ಗಂಡನನ್ನು ಎಬ್ಬಿಸಲು ಹೋದಾಗ ಮೈ ತಣ್ಣಗಾಗಿದ್ದು ತಾಯಿ ಹಾಗೂ ನೆರೆಮನೆಯಲ್ಲಿ ವಿಚಾರಿಸಿದಾಗ ಪ್ರವೀಣ್‌ ಕುಮಾರ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 29/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-04-2023 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080