ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ರತ್ನಾಕರ (30 ತಂದೆ: ರಾಮ ವಾಸ: ಕರ್ಕಿ ಹಂಟ್ಟಿಯಂಗಡಿ ಗ್ರಾಮ  ಕುಂದಾಫುರ ಇವರು ದಿನಾಂಕ 14/04/2022 ರಂದು ಮಾಬುಕಳಕ್ಕೆ ನಾಗದೇವರ ಪೂಜೆಗೆಂದು ಹೋದವರು ವಾಪಾಸು ಮನೆಗೆ ಬರುವರೇ ತನ್ನ ನಂ KA-20 EB-4104 ನೇ ಮೋಟಾರ್ ಸೈಕಲ್ ನಲ್ಲಿ ತನ್ನ 2 ವರ್ಷದ ಮಗುವನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಕುಂದಾಪುರ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದು, ಸಂಜೆ ಸುಮಾರು 4:30 ಗಂಟೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಜಂಕ್ಷನ್ ಬಳಿ ತಲುಪುವಾಗ ಆರೋಪಿ ಸವಾರನು ತನ್ನ KA-20 X-7388 ನೇ ಸ್ಕೂಟಿಯನ್ನು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಕಾಏಕಿ ರಸ್ತೆಗೆ ನುಗ್ಗಿಸಿ ರತ್ನಾಕರ ರವರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಸವಾರರು ಕೆಳಗೆ ಬಿದ್ದಿರುತ್ತಾರೆ. ಅಪಘಾತದಿಂದ ರತ್ನಾಕರ ಇವರ ಎಡಕೈ ಭುಜದ ಮೂಳೆ ಮುರಿತ, ಬಲಕೈ ತೋಳಿನಲ್ಲಿ ತರಚಿದ ಗಾಯ ಮತ್ತು ಮೂಗಿಗೆ ಗುದ್ದಿದ ನೋವು ಆಗಿದ್ದು ಹಾಗೂ ಅವರೊಂದಿಗೆ ಇದ್ದ ಅವರ ಮಗುವಿಗೆ ಮುಖದ ಎಡಭಾಗಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕೋಟೇಶ್ವರದ ಡಾ. ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ:ಪಿರ್ಯಾದಿದಾರರಾದ ಶ್ರೀಮತಿ ಶಾಲಿನಿ (51) ಗಂಡ : ದಿ, ತೇಜಪಾಲ್  ವಾಸ: ಮಹಾದೇವಿ ನಿವಾಸ ಕಾಬೆಟ್ಟು ,ಕಾರ್ಕಳ ತಾಲೂಕು ಇವರು ದಿನಾಂಕ 15/04/2022 ರಂದು ಬೆಳಗ್ಗೆ ತಮ್ಮ ತಾಯಿ ಅಮ್ಮಣ್ಣಿ, (75) ಮಗಳು ಪ್ರತಿಮಾ ಹಾಗೂ ಮೂವರು ಮಕ್ಕಳೊಂದಿಗೆ ಮಕ್ಕಳ ಅಕ್ಷರ ಅಭ್ಯಾಸ ಮಾಡಿಸುವ ಬಗ್ಗೆ ಮನೆಯಿಂದ ಬೆಳಗ್ಗೆ ಶೃಂಗೇರಿಗೆ KA-18 N-4318 ನೇ ನಂಬ್ರದ ಕಾರಿನಲ್ಲಿ ಕಾರ್ಕಳ-ಶೃಂಗೇರಿ ಮಾರ್ಗವಾಗಿ ಹೊರಟಿದ್ದು, ಕಾರನ್ನು ಪ್ರತಿಮಾಳು ಮಾಳ ಘಾಟಿಯಲ್ಲಿ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾ ಬೆಳಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಎಸ್.ಕೆ. ಬಾರ್ಡರ್ ನಿಂದ ಕೆಳಗೆ ಸುಮಾರು 1 ಕಿ.ಮೀ ಹಿಂದೆ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ತೀರಾ ಎಡಭಾಗಕ್ಕೆ ಚಲಾಯಿಸಿದ ಪರಿಣಾಮ, ಕಾರು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಶ್ರೀಮತಿ ಶಾಲಿನಿಯವರ ತಾಯಿ ಅಮ್ಮಣ್ಣಿಯವರು ಮಾತನಾಡದೇ ಇದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ನಾಗರಾಜ್ (35) ತಂದೆ:  ವಿಠಲ ಶೆಟ್ಟಿ ವಾಸ: ‘’ದೀಪ ನಿಲಯ “” ಮಂಜೊಟ್ಟಿ, ಬೊಮ್ಮರಬೆಟ್ಟು ಗ್ರಾಮ ಉಡುಪಿ ಇವರು ದಿನಾಂಕ 15/04/2022 ರಂದು ತನ್ನ KA-20-EU-1384  ನೇ ದ್ವಿಚಕ್ರ ವಾಹನದಲ್ಲಿ ತನ್ನ ಮೈದುನ ಸುದೀಪ್ ಶೆಟ್ಟಿಯವರನ್ನು ಕುಳ್ಳಿರಿಸಿಕೊಂಡು ಬೆಳ್ಳಾರ್‌ ಪಾಡಿಗೆ ಗೇರುಬೀಜ ಕೊಯ್ಯಲು ಹೋಗಿ ವಾಪಾಸು ಬರುತ್ತಿರುವಾಗ ಹಿರಿಯಡ್ಕ ಗೋ ಆಸ್ಪತ್ರೆಯ ರಸ್ತೆಯಲ್ಲಿ ಹೋಗಿ ತನ್ನ ಬೈಕನ್ನು ಬಜೆ ರಸ್ತೆಗೆ ತಿರುಗಿಸಿಕೊಂಡು ಉಮೇಶ್ ಶೆಟ್ಟಿಯವರ ಮನೆಯ ಬಳಿ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ  10:15 ಗಂಟೆಗೆ ಹಿಂದಿನಿಂದ ಅಂದರೆ ಹಿರಿಯಡ್ಕ ಕಡೆಯಿಂದ  KA-20-Z-3582 ನೇ ಕಾರು ಚಾಲಕ ಬಾಲರಾಜ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಾಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದನು ಪರಿಣಾಮ ನಾಗರಾಜ ರವರು ವಾಹನ ಸಮೇತ ರಸ್ತೆಗೆ ಬಿದ್ದು ಬಲಕೈ, ಎಡಕೈ, ಬಲಕಾಲು ಹಾಗೂ ಎಡಕಣ್ಣಿನ ಬಳಿ ರಕ್ತ ಗಾಯವಾಗಿರುತ್ತದೆ. ಹಾಗೂ ಸುದೀಪ್ ಶೆಟ್ಟಿಯವರಿಗೂ ರಕ್ತಗಾಯವಾಗಿರುತ್ತದೆ.  ನಂತರ ಅಲ್ಲಿ ಸೇರಿದವರು ಅದೇ ಕಾರಿನಲ್ಲಿ ಇವರನ್ನು ಕೆಎಂಸಿ ಅಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ : ಪಿರ್ಯಾದಿದಾರರಾದ ವಿನಾಯಖ ಸುರೇಶ ಮಜಳ್ಕರ್, (28) ತಂದೆ: ಸುರೇಶ ಮಜಳ್ಕರ್‌, ವಾಸ: ಸೀಬರ್ಡ್‌ಕಾಲೋನಿ ಮುಂಬಾಗ, ಕಾರವಾರ ಇವರ ತಮ್ಮ ಮಂಜುನಾಥ ಮಜಳ್ಕರ್‌ರವರು ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ್ನಲ್ಲಿ ಈಜುಗಾರ ತರಬೇತಿಗಾರನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 15/04/2022ರಂದು ಮಧ್ಯಾಹ್ನ 2:15ಗಂಟೆಯಿದ 3:30ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸ್ಪೋಟ್ಸ್‌ ಕ್ಲಬ್‌ನ ಗ್ರೀನ್‌‌ರೂಮ್‌‌ನ ಫ್ಯಾನಿಗೆ ನೈಲಾನ್‌ ಕರ್ಟನ್‌ ‌ಕಟ್ಟಿ ಸುಮಾರು 2 ಅಡಿ ದೂರದಲ್ಲಿ ಇನ್ನೊಂದು ನೇಣನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಉಮಾ ಗಾಣಿಗ (38) ಗಂಡ: ರಾಮಚಂದ್ರ ಗಾಣಿಗ, ವಾಸ: ಆನಂದ ನಿಲಯ, ಕೊಡಪಾಡಿ, ಗುಜ್ಜಾಡಿ ರವರ ಮಗ ರಜತ್ (15) ಹಾಗೂ ಗಂಡನ ಅಣ್ಣ ಕೇಶವರವರ ಮಗ ಸನತ್ ರವರು ದಿನಾಂಕ 12/04/2022 ರಂದು ಬೆಳಿಗ್ಗೆ ಹಾಲು ತರಲು ಸೈಕಲ್ ನಲ್ಲಿ ಕೊಡಪಾಡಿ ಪೇಟೆಗೆ ಹೋಗುತ್ತಿರುವಾಗ  ಬೆಳಿಗ್ಗೆ ಸಮಯ ಸುಮಾರು 9:30 ಗಂಟೆಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೊಡಪಾಡಿ ಭಾಸ್ಕರ ಗಾಣಿಗರವರ ಮನೆಯ ಬಳಿ ತಲುಪುವಾಗ ದೇವೇಂದ್ರ, ದೇವಕಿ, ಅದ್ವಿತ್ ಹಾಗೂ ಅವನಿಯವರು ರಜತ್ ಹಾಗೂ ಸನತ್ ರವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಈ ರಸ್ತೆ ಇದರಲ್ಲಿ ತಿರುಗಾಡಬೇಡಿ ಎಂದು ಹೇಳಿ ಅವನಿಯು ರಜತ್ ನ ಕೆನ್ನೆಗೆ  ಹೊಡೆದು ಅದ್ವಿತ್  ರಜತ್ ನ ಅಂಗಿಯನ್ನು ಎಳೆದು ದೇವೇಂದ್ರ ಹಾಗೂ ದೇವಕಿಯವರು ಕೈಯಿಂದ ಕೆನ್ನೆಗೆ ಹೊಡೆದು ಇನ್ನು ಮುಂದಕ್ಕೆ ಈ ರಸ್ತೆಯಲ್ಲಿ ತಿರುಗಾಡಿದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ. ನಂತರ ರಜತ್ ಹಾಗೂ ಸನತ್ ವಾಪಸ್ ಮನೆಗೆ ಬಂದಿದ್ದು ಆಪಾದಿತರು ರಜತ್ ನಿಗೆ ಹೊಡೆದ ಪರಿಣಾಮ ಆತನ ಕೆನ್ನೆಗೆ, ಕೈಗೆ ನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಮನೆಯವರಲ್ಲಿ ಹಾಗೂ ಕುಟುಂಬಸ್ಥರಲ್ಲಿ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ. ಈ ಘಟನೆಗೆ ಉಮಾ ಗಾಣಿಗ ಇವರಿಗೂ ಆಪಾದಿತರಿಗೂ ಮನೆಯ ದಾರಿಯ ವಿಚಾರದಲ್ಲಿ ತಕರಾರು ಇದ್ದು ಅದೇ ದ್ವೇಷದಿಂದ ಇವರ ಮಗನ ಮೇಲೆ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2022 ಕಲಂ: 341, 323, 504, 506 ಜೊತೆಗೆ 34 ಐಪಿಸಿ & 75 ಜೆ.ಜೆ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 15/04/2022 ರಂದು ಗಣೇಶ ಪೈ ಎ.ಎಸ್.ಐ  ಕೋಟ ಪೊಲೀಸ್‌ಠಾಣೆ ಇವರಿಗೆ ಸಮಯ 13:00 ಗಂಟೆಗೆ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಬೀಟ್‌ ಸಿಬ್ಬಂದಿ ರಾಘವೇಂದ್ರರವರು ಕರೆ ಮಾಡಿ ಹಳ್ಳಾಡಿ ಹರ್ಕಾಡಿ ಗ್ರಾಮದ ತಲ್ಲೂರು ಬಾರ್ ಹಿಂಭಾಗ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಸಾರ್ವಜನಿಕರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ನೀಡಿದಂತೆ ಇವರು ಇಲಾಖಾ ವಾಹನದಲ್ಲಿ ಠಾಣಾ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಸದ್ರಿ ಸ್ಥಳಕ್ಕೆ 14:00 ಗಂಟೆಗೆ ತಲುಪಿ ಬಾರ್ ನ ಪಕ್ಕ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಿದಾಗ ಬಾರನ ಹಿಂಭಾಗ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಗುಂಪು ಸೇರಿ ನೆಲದ ಮೇಲೆ ಹಳೆಯ ಪೇಪರಗಳನ್ನು ಹಾಸಿ ಅದರಲ್ಲಿ ಒಬ್ಬನು ಇಸ್ಪಿಟು ಎಲೆಗಳನ್ನು ಕೈಯಲ್ಲಿ ಹಿಡಿದು ಆಚೆ ಈಚೆ ಹಾಕುತ್ತಾ ಅಂದರ್ ಬಾಹರ್ ಎಂದು ಹೇಳುತ್ತಿದ್ದು ಮತ್ತು ನಿಂತಿದ್ದ ಜನರು ಒಳಗೆ ಹೊರಗೆ ಎಂದು ಹೇಳುತ್ತಾ ಹಣವನ್ನು ಕಟ್ಟುತ್ತಿದ್ದವರನ್ನು ಸಮಯ ಸುಮಾರು 14:45 ಗಂಟೆಗೆ ಖಚಿತಪಡಿಸಿಕೊಂಡು ದಾಳಿ ನಡೆಸಿದ್ದು ಜಗಾರಿ ಆಟ ಆಡುತ್ತಿದ್ದ 1) ದಿವಾಕರ (30) ತಂದೆ:ಮಂಜುನಾಥ ಮೊಗವೀರ ವಾಸ: ದರ್ಶನ ದೃಷ್ಟಿ ಹಳ್ಳಾಡಿ ಹರ್ಕಾಡಿ ಗ್ರಾಮ, ಹಳ್ಳಾಡಿ ಅಂಚೆ ಕುಂದಾಪುರ ತಾಲ್ಲೂಕು, ಉಡುಪಿ, 2) ಶರತ್ (24) ತಂದೆ: ಶಂಕರ ಮೊಗವೀರ ವಾಸ:ನಂದಿಕೇಶ್ವರ ಕೃಪಾ, ಹಳ್ಳಾಡಿ, ಯಡಾಡಿ ಮತ್ಯಾಡಿ ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲ್ಲೂಕು, ಉಡುಪಿ, 3) ಮಧುಕರ (25) ತಂದೆ: ಮಾಸ್ತಿ ವಾಸ: ನರಾಡಿ ಯಡಾಡಿ ಮತ್ಯಾಡಿ ಗ್ರಾಮ, ಕುಂದಾಪುರ ತಾಲ್ಲೂಕು,ಉಡುಪಿ, 4) ಕೇಶವ (47) ತಂದೆ: ರುದ್ರಯ್ಯ ಆಚಾರ್ಯ ವಾಸ: ಅನುಗೃಹ ನಿಲಯ ಹಳ್ಳಾಡಿ ಹರ್ಕಾಡಿ ಗ್ರಾಮ, ಹಳ್ಳಾಡಿ ಅಂಚೆ ಕುಂದಾಪುರ ತಾಲ್ಲೂಕು, ಉಡುಪಿ, 5) ಹರೀಶ (29) ತಂದೆ:ರಾಮ ವಾಸ: ತುಂಬಿ ಮಕ್ಕಿ ಯಡಾಡಿ ಮತ್ಯಾಡಿ ಗ್ರಾಮ, ಕುಂದಾಪುರ ತಾಲ್ಲೂಕು, ಉಡುಪಿ, 6) ಭಾಸ್ಕರ ಮೊಗವೀರ (49) ತಂದೆ: ದಿ: ನಾರಾಯಣ ವಾಸ: ಗುಡ್ಡಿಮನೆ, ಹಳ್ಳಾಡಿ ಹರ್ಕಾಡಿ ಗ್ರಾಮ, ಹಳ್ಳಾಡಿ ಅಂಚೆ ಕುಂದಾಪುರ ತಾಲ್ಲೂಕು, ಉಡುಪಿ ಇವರನ್ನು ಹಿಡಿದು ವಿಚಾರಿಸಿದಲ್ಲಿ ಲಾಭಗಳಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಇಸ್ಪೀಟು ಜುಗಾರಿ ನಡೆಸಿಕೊಂಡಿದ್ದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.  ಹಾಗೂ ಜುಗಾರಿ ಆಟಕ್ಕೆ ಬಳಸಿದ ನಗದು 3,400/, ಹಳೆಯ ಪೇಪರ್-6, ನ್ನು  ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ: 87 K.P ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-04-2022 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080