ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ: ದಿನಾಂಕ 13/04/2021  ರಂದು 15:00 ಗಂಟೆಗೆ ಪಿರ್ಯಾದಿದಾರರಾದ  ತಿಪ್ಪೆ ಸ್ವಾಮಿ (55), ತಂದೆ: ದಿ. ಕರಿಯಪ್ಪ, ವಾಸ:ಮಲ್ಲಾಪುರ, ಗೊಲ್ಲರಹಟ್ಟಿ, ಮಾದೇಹಳ್ಳಿ , ಚಿತ್ರದುರ್ಗ ತಾಲೂಕು ಮತ್ತು ಜಿಲ್ಲೆ ಇವರು ಮಣಿಪಾಲ ಕೆ. ಎಮ್. ಸಿ ಆಸ್ಪತ್ರೆಯ ಕ್ಯಾಂಟೀನ್ ನಿಂದ ಊಟ ಪಾರ್ಸೆಲ್  ತೆಗೆದುಕೊಂಡು  ಮಣಿಪಾಲ ಹಳೆ ಟ್ರೋಮಾ –ಕೆ. ಎಮ್. ಸಿ ಕ್ವಾಟ್ರರ್ಸ್  ಮುಖ್ಯ ಸಾರ್ವಜನಿಕ ಡಾಂಬರ್ ರಸ್ತೆಯ ಬದಿಯಲ್ಲಿ ನಡೆದುಕೊಂಡು  ಹೋಗುತ್ತಿದ್ದು, ಕೆ ಎಮ್ ಸಿ ಆಸ್ಪತ್ರೆಯ ಮಹಿಳೆಯರ ಮತ್ತು ಮಕ್ಕಳ ಮತ್ತು ವಿಭಾಗ ಕಟ್ಟಡದ ಬಳಿ  ತಲುಪುತ್ತಿದ್ದಾಗ  ಹಿಂದಿನಿಂದ  ಹಳೆ ಟ್ರೋಮಾ ಕಡೆಯಿಂದ–ಕೆ. ಎಮ್ ಸಿ ಕ್ವಾಟ್ರರ್ಸ್ ಕಡೆಗೆ KA-20-MC-9386 ನೇ  ಕಾರನ್ನುಅದರ ಚಾಲಕ ಡಾ.ಹಿತೇಶ್ ಶಾ ಇವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ  ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು,  ಅವರ ಬಲಕಾಲಿಗೆ  ಮೂಳೆ ಮುರಿತ  ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ. ಎಮ್. ಸಿ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಈರ (43), ತಂದೆ:ದಿ.ದುರ್ಗಾ ಮರಾಠಿ, ವಾಸ:ಹಳ್ಳಿ ಬೇರು ,ಕೊಲ್ಲೂರು  ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 15/04/2021 ರಂದು ತನ್ನ ಮೋಟಾರು ಸೈಕಲ್ ನಂಬ್ರ KA-20-ED-5174 ನೇದನ್ನು ಬೈಂದೂರಿನಿಂದ ಕೊಲ್ಲೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 11:30 ಗಂಟೆಗೆ ಗೋಳಿಹೊಳೆ ಗ್ರಾಮದ ಅರೆಶಿರೂರು ತಲುಪಿದಾಗ ಎದುರಿನಿಂದ KA-47-M-5844 ನೇದರ ಕಾರು ಚಾಲಕನು ಆತನ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರಿಗೆ ಬಲಕಾಲಿನ ಹಿಮ್ಮಡಿ ,ಬಲ ಕೈ ಮಣಿಗಂಟಿಗೆ ರಕ್ತ ಗಾಯವಾಗಿದ್ದು ಎಡ ಕೈ ತೋರು ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಜಿ ಜಯ ಅಚಾರ್ಯ(61), ತಂದೆ: ದಿ|| ಅನಂತಕೃಷ್ಣ ಅಚಾರ್ಯ, ವಾಸ: ನೋವೆಲ್ಟಿ ಜ್ಯುವೆಲ್ಲರಿ , ರಥಬೀದಿ , ಉಡುಪಿ  ಇವರು ನೋವೆಲ್ಟಿ ಜ್ಯುವೆಲ್ಲರ್ಸ್ ಸಂಸ್ಥೆಯನ್ನು ನಡೆಸಿಕೊಂಡಿದ್ದು ರೆಡಿ ಅಭರಣಗಳಲ್ಲದೆ ಅಭರಣಗಳನ್ನು ಮಾಡಿಸಿಕೊಡುತ್ತಿದ್ದು, ಪಿರ್ಯಾದಿದಾರರಿಗೆ ಪರಿಚಯದ ಮಂಜುನಾಥ ಆಚಾರ್ಯ ಎಂಬವವರು ದಿನಾಂಕ 13/02/2021 ರಂದು  ಚಿನ್ನದ ಕರಿಮಣಿ ತಯಾರಿಸಿ ಕೊಡುವುದಾಗಿ ಪಿರ್ಯಾದಿದಾರರಿಂದ 92.970 ಗ್ರಾಂ  ಚಿನ್ನದ  ಗಟ್ಟಿಯನ್ನು ತೆಗೆದುಕೊಂಡು ಹೋಗಿ ಅಭರಣ ತಯಾರಿಸಿ ಕೊಡುವುದಾಗಿ ನಂಬಿಸಿ ಹೋದವರು ವಾಪಾಸು ಬಂದಿರುವುದಿಲ್ಲ ಚಿನ್ನದ ಮೌಲ್ಯ 4 ಲಕ್ಷ ಆಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021ಕಲಂ:420, 406 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಮೊಹಮ್ಮದ್ ಸಾಬಿತ್‌(24), ತಂದೆ: ಮೊಯ್ದಿನ್‌, ವಾಸ: ರೂಂ ನಂಬ್ರ: 305, ಅಲೆಟಿಕಲ್‌ಅಪಾರ್ಟ್ ಮೆಂಟ್, ಮಂಜುನಾಥ ಕಣ್ಣಿನ ಆಸ್ಪತ್ರೆ ಎದುರು, ಬನ್ನಂಜೆ, ಉಡುಪಿ ಇವರು ಉಡುಪಿ ಗಂಗೋತ್ರಿ ಬಾರ್‌ನ ಎದುರು ಇರುವ ಬಿರಿಯಾನಿ ಹಟ್‌ ನಾನ್‌ ವೆಜ್‌ಹೋಟೆಲ್‌ನಲ್ಲಿ ಕ್ಯಾಶಿಯರ್‌ ಹಾಗೂ ಮೆನೆಜ್ ಮೆಂಟ್ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 15/04/2021 ರಂದು ಬೆಳಿಗ್ಗೆ 11:00 ಗಂಟೆಯಿಂದ ರಾತ್ರಿ 22:00 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಿ  22:20 ಗಂಟೆ ಹೊತ್ತಿಗೆ ಮನೆಗೆ ಹೋಗಲು ಅವರ ಆ್ಯಕ್ಟಿವ್ ಹೊಂಡಾ ವನ್ನು ಸ್ಟಾರ್ಟ್‌ ಮಾಡುವಾಗ ಒಬ್ಬ ವ್ಯಕ್ತಿಯು ಪಿರ್ಯಾದಿದಾರರ ಹಿಂದಿನಿಂದ ಬಂದು ಪಿರ್ಯಾದಿದಾರರನ್ನು ಅಡ್ಡಗಟ್ಟಿ ನಿಲ್ಲಿಸಿ ಬೈಕಿನ ಕೀ ತೆಗೆಯಲು ಪ್ರಯತ್ನಿಸಿದ್ದು ಈ ವೇಳೆ ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಇನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಬಂದು ಮೂವರು ಸೇರಿ ಪಿರ್ಯಾದಿದಾರರನ್ನು ಸುತ್ತುವರಿದು ಅಡ್ಡಗಟ್ಟಿ ಏಕಾಏಕಿಯಾಗಿ ಕೈಯಿಂದ ಪಿರ್ಯಾದಿದಾರರ ಎದೆ ಮತ್ತು ಬಲಭಾಗದ ಕುತ್ತಿಗೆಯ ಬಳಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ಎದೆ ಮತ್ತು ಬಲಬಾಗದ ಕುತ್ತಿಗೆಯ ಬಳಿ ಗುದ್ದಿದ ಒಳಜಖಂ ಉಂಟಾಗಿದ್ದು, ಒಬ್ಬಾತ ಪಿರ್ಯಾದಿದಾರರಿಗೆ ಕಲ್ಲು ಬಿಸಾಕಿದ ಪರಿಣಾಮ ಎಡಕಾಲಿಗೆ ತರಚಿದ ರಕ್ತಗಾಯ ಹಾಗೂ ಬೈಕಿನ ಕೀಯನ್ನು ಎಳೆಯುವಾಗ  ಎಡಕೈಯ ಕಿರು ಬೆರಳಿಗೆ ಚರ್ಮ ಕಿತ್ತು ರಕ್ತಬರುವ ಗಾಯಗಳಾಗಿರುತ್ತವೆ  ನಂತರ ಮೂವರು ವ್ಯಕ್ತಿಗಳು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಈ ವೇಳೆ ಬೊಬ್ಬೆ ಕೇಳಿ ಹೋಟೆಲ್‌ನ ಒಳಗಿನಿಂದ ರಿಜ್ವಾನ್ ಮತ್ತು ನಬೀಲ್‌ ಅಹಮ್ಮದ್‌ರವರು ಬಿಡಿಸಲು ಬಂದಿದ್ದು ಈ ವೇಳೆ ಆರೋಪಿತರು ನಬೀಲ್‌ಅಹಮ್ಮದ್‌ಗೂ ಕೈಯಿಂದ ಹಲ್ಲೆ ಮಾಡಿ ಓಡಿಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 16-04-2021 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080