ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕಾರ್ಕಳ: ದಿನಾಂಕ 15.04.2021 ರಂದು ಬೆಳಿಗ್ಗೆ  08.30 ಗಂಟೆಗೆ ಶ್ರೀಪತಿ ಭಟ್  ಅವರ ಬಾಬ್ತು ಕೆಎ20-ಇಸಿ-5719 ನೇ ನಂಬ್ರದ ಮೋಟಾರ್‌ ಸೈಕಲ್‌ನಲ್ಲಿ ಆರೂರು ಕ್ಲಿನಿಕ್‌ ಎದರುಗಡೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡಿರುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಜೆ 9845 ನೇ ಮೋಟಾರ್ ಸೈಕಲ್‌ ಸವಾರನು ಅತೀವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಅವರು ಮೋಟಾರ್‌ ಸೈಕಲ್‌ನ ಸಮೇತ ರಸ್ತೆಗೆ ಬಿದ್ದಿದ್ದು  ಬಲ ಕಾಲಿನ ಮೂಳೆ ಮುರಿತ,ಎಡಕೈ ಮತ್ತು ಕೆನ್ನೆಗೆ ತರಚಿದ ರಕ್ತಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ

  • ಬ್ರಹ್ಮಾವರ: : ಪಿರ್ಯಾದಿ ಶಂಕರ ಪೂಜಾರಿ ಇವರು ಸುಮಾರು 2 ವರ್ಷಗಳಿಂದ ಕರ್ಜೆ ಸಿಂಡಿಕೇಟ್ ರೈತರ ಸಂಘ ಕೊಕ್ಕರ್ಣೆ, ಕರ್ಜೆ ಶಾಖೆಯಲ್ಲಿ ಶಾಖಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು, ಸುಮಾರು 10 ದಿನಗಳಿಂದ ತನ್ನ ಕುಟುಂಬದೊಂದಿಗೆ ಹೊಸೂರು ಗ್ರಾಮದ ಕರ್ಜೆಯಲ್ಲಿರುವ ಸಂಜೀವ ಪೂಜಾರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಸ್ವಂತ ಊರಿನಲ್ಲಿ ಹಬ್ಬ ಇದ್ದುದರಿಂದ ಅವರು  ದಿನಾಂಕ: 15.04.2021 ರಂದು ಸಂಜೆ 5:45 ಗಂಟೆಗೆ ಬಾಡಿಗೆ ಮನೆಗೆ ಬೀಗ ಹಾಕಿ ಹೋಗಿದ್ದು, ನಂತರ ದಿನಾಂಕ: 16.04.2021 ರಂದು ಬೆಳಿಗ್ಗೆ 09;45 ಗಂಟೆ ಸುಮಾರಿಗೆ ಪಿರ್ಯಾದಿದಾರರು ಬಾಡಿಗೆಯ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ಜಖಂಗೊಳಿಸಿ, ಬಾಗಿಲನ್ನು ತೆರೆದು ಒಳಗೆ ಹೋಗಿ ಮನೆಯ ಮಲಗುವ ಕೋಣೆಯಲ್ಲಿ ಇಟ್ಟಿದ್ದ ಗೊದ್ರೇಜ್ ಚಿಲಕವನ್ನು ಜಖಂ ಗೊಳಿಸಿ ಗೊದ್ರೇಜ್‌ನಲ್ಲಿ ಇಟ್ಟಿದ್ದ  ನಗದು ರೂ. 16,000/- ಹಣವನ್ನು ಹಾಗೂ ಮಗನಿಗೆ ಉಡುಗೋರೆ ಬಂದ ಸುಮಾರು ½ ಗ್ರಾಂ. ನ 2 ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಕಾಲು ಚೈನು ಮತ್ತು ಸೊಂಟದ ಬೆಳ್ಳಿಯ ಸರಪಳಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ.  ಕಳವಾದ ನಗದು ಹಣ, ಚಿನ್ನ, ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ ಸುಮಾರು ರೂ. 21,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ 454, 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಗೌತಮ್ ಕುಮಾರ್ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ತಾಂಗದಗಡಿ ಬಳಿಯಿರುವ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ತರುಣ ಕಲಾ ವೃಂದಾ ತಾಂಗದಗಡಿ ಶಾಲೆಯ ಉಪಾಧ್ಯಕ್ಷರಾಗಿದ್ದು, ದಿನಾಂಕ 16/04/2021 ರಂದು ಬೆಳಗ್ಗಿನ ಜಾವ 03:00 ಗಂಟೆಗೆ ವ್ಯಾಯಾಮ ಶಾಲೆಯ ಗೇಟ್ ತೆರೆದ ಶಬ್ದ ಕೇಳಿ ಬಂದಿದ್ದು, ಪಿರ್ಯಾದಾರರು ನೋಡಲಾಗಿ ವ್ಯಾಯಾಮ ಶಾಲೆಯ ದೇವಸ್ಥಾನದ ಮುಖ್ಯ ದ್ವಾರದ ಬಾಗಿಲಿನ ಬೀಗವನ್ನು ಯಾರೋ ಒಬ್ಬ ಒಡೆಯತ್ತಿರುವುದು ಕಂಡು ಬಂದಿದ್ದು, ಕೂಡಲೇ ಪಿರ್ಯಾದಾರರು ಅಲ್ಲಿಗೆ ಸ್ನೇಹಿತರೊಂದಿಗೆ ಹೋಗಿದ್ದು, ಆಗ ಇಬ್ಬರು ಕಳ್ಳರು ತಾವು ಬಂದಿದ್ದ KA-19 MK-3701 ಎಂಬ ನೀಲಿಬಣ್ಣದ ಕಾರನ್ನು ಅಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ:380. 457. 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ : ಫಿರ್ಯಾದಿ ವಸಂತ  ಕುಮಾರ್  ಶೆಟ್ಟಿ  ಇವರು   ಕೆಎ.20 ಎಎ.2357 ನೇ ನಂಬ್ರದ   ಟಿಪ್ಪರ  ಮಾಲೀಕರಾಗಿದ್ದು, ಈ ಟಿಪ್ಪರ  ಲಾರಿಯಲ್ಲಿ  ಆರೋಪಿ ಲಿಂಗಪ್ಪ ಯು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ, ದಿನಾಂಕ  17.02.2021  ರಂದು  ಬೆಳಿಗ್ಗೆ  07:00  ಘಂಟೆಗೆ  ಅರೋಪಿಯು  ಫಿರ್ಯಾದುದಾರ ಮನೆಯಾದ  ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ  ಕೊಂಡಳ್ಳಿ  ಎಂಬಲ್ಲಿದ  ಟಿಪ್ಪರ   ಲಾರಿಯನ್ನು  ಚಲಾಯಿಸಿಕೊಂಡು ಜಲ್ಲಿ  ಲೋಡು  ಮಾಡಿಕೊಂಡು ಬರುವುದಾಗಿ   ಹೇಳಿ  ನಗದು ಹಣ 25.000/- ರೂ ತೆಗೆದುಕೊಂಡು  ಹೋದವನು,  ಸದ್ರಿ ಟಿಪ್ಪರ ಲಾರಿಯನ್ನು  ಹುಣ್ಸೆಮಕ್ಕಿ ಪೆಟ್ರೋಲ್  ಬಂಕ್‌‌  ಬಳಿ  ಟಿಪ್ಪರ  ಲಾರಿ  ನಿಲ್ಲಿಸಿ   ಫಿರ್ಯಾದುದಾರರು    ಜಲ್ಲಿ  ಲೋಡ್  ಮಾಡಲು ನೀಡಿದ  25,000/- ರೂ ಹಣವನ್ನು   ಮೋಸದಿಂದ ತಗೆದುಕೊಂಡು ಹೋಗಿರುತ್ತಾನೆ  ಅಲ್ಲದೆ, ಟಿಪ್ಪರ  ಲಾರಿಯಲ್ಲಿ  ಇದ್ದ  ಡಿಸೇಲ್‌ನ್ನು  ಕಳವು ಮಾಡಿಕೊಂಡು  ಹೋಗಿರುತ್ತಾನೆ  ಎಂಬಿತ್ಯಾದಿ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021  ಕಲಂ: 379, 417, 406. 420   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ 

  • ಶಂಕರನಾರಾಯಣ: ದಿನಾಂಕ 15.04.2021 ರಂದು  20;00  ಘಂಟೆಯಿಂದ   ದಿನಾಂಕ  16.04.2021  ರಂದು  6;00   ಘಂಟೆಯ  ಮಧ್ಯದ  ಅವಧಿಯಲ್ಲಿ  ಕುಂದಾಪುರ  ತಾಲೂಕಿನ   ಆಜ್ರಿ ಗ್ರಾಮದ ಬ್ಯಾಗಿಬೇರು  ಎಂಬಲ್ಲಿ   ಚಂದ್ರ  ಪೂಜಾರಿ  ಇವರು ಅವರಿಗೆ ಇರುವ  ವಿಪರೀತ ಶರಾಬು  ಕುಡಿಯುವ  ಚಟದಿಂದ ಹಾಗೂ   ಮನೆಯವರೊಂದಿಗೆ  ಸರಿಯಾದ  ಹೊಂದಾಣಿಕೆ  ಇಲ್ಲದೆ  ಇರುವ   ಕಾರಣ  ಮನನೊಂದು  ಮನೆಯ ಬಳಿಯ ಮಾವಿನ  ಮರಕ್ಕೆ ನೇಣು  ಬಿಗಿದು  ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ರಾಜೇಶ ಬಂಗೇರ  (39) ರವರು ಮುಂಬೈಯಲ್ಲಿ ಫುಟ್ ಬಾಲ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದವರು ಊರಿಗೆ ಬಂದು ಮೂರು ದಿನಗಳ ಹಿಂದೆ ಹೆಂಡತಿ ಮನೆಯಾದ ಶಿರ್ವಾಕ್ಕೆ ಹೋಗಿರುತ್ತಾರೆ. ದಿನಾಂಕ:15/04/2021 ರಂದು ರಾಜೇಶ ಬಂಗೇರವರು ತನ್ನ ಹೆಂಡತಿ ಮಗನೊಂದಿಗೆ ಮಾತನಾಡುತ್ತಿರುವಾಗ ರಾತ್ರಿ 11.15 ಒಮ್ಮಲೇ ಅಸ್ವಸ್ಥರಾಗಿದ್ದರವರನ್ನು ಕೂಡಲೇ ಆದರ್ಶ ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ರಾತ್ರಿ 11.45 ಗಂಟೆಗೆ ಪರೀಕ್ಷಿಸಿದ ವೈದ್ಯರು ಈಗಾಗಲೇ ರಾಜೇಶ ಬಂಗೇರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 16-04-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080