ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 15/03/2023 ರಂದು  ಪಿರ್ಯಾದಿದಾರರಾದ ದಿನೇಶ್‌ಆಚಾರ್ಯ (40), ತಂದೆ: ಲಕ್ಷ್ಮಣ ಆಚಾರ್ಯ, ಚೇನ್‌ಕೊಡ್ಲು, ಕೊಡ್ಲಾಡಿ ಗ್ರಾಮ,ಭಾಂಡ್ಯ ಅಂಚೆ, ಕುಂದಾಪುರ ತಾಲೂಕು ಇವರು ಮಣಿಪಾಲಕ್ಕೆ ಹೋಗಲು  ಅವರ  KA-20-MB-5382 ನೇ ನಂಬ್ರದ ಮಾರುತಿ ಸ್ವಿಪ್ಟ್‌ ಕಾರನ್ನು ಕುಂದಾಪುರ – ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಹೇರೂರು ಗ್ರಾಮದ, ಹ್ಯಾಂಗ್ಯೋ ಐಸ್‌ಕ್ರೀಂ ಕ್ರಾಸ್‌ಬಳಿ ತಲುಪುವಾಗ ಮಧ್ಯಾಹ್ನ 4:00 ಗಂಟೆಯ ಸುಮಯಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಲಪಥದಲ್ಲಿ ಹೋಗುತ್ತಿದ್ದ  NL-01-AE-7896 ನೇ ನಂಬ್ರದ ಭಾರಿ ಗಾತ್ರದ ಗೂಡ್ಸ್‌ ಲಾರಿಯನ್ನು ಆರೋಪಿಯು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೇ  ಮುಂದಕ್ಕೆ ಹೋಗಿ ಪರಾರಿಯಾಗಿರುತ್ತಾನೆ.  ಈ ಅಪಘಾತದ ಪರಿಣಾಮ ಕಾರು ಹೆದ್ದಾರಿಯ ಮಧ್ಯ ಭಾಗದಲ್ಲಿ ಮಗುಚಿ ಬಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ.  ಪಿರ್ಯಾದಿದಾರರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 : ಕಲಂ 279 ಐಪಿಸಿ & 134 (ಎ & ಬಿ), 187 ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಪ್ರವೀಣ್ ಕೊಠಾರಿ(30), ತಂದೆ: ಶಂಕರ್ ಕೋಠಾರಿ, ವಾಸ: ಪದ್ಮಶ್ರೀ ನಿಲಯ  ಜಂಬೂರು ಸೈಬ್ರಕಟ್ಟೆ ಶಿರಿಯಾರ ಗ್ರಾಮ ಬ್ರಹ್ಮಾವರ  ತಾಲೂಕು ಇವರು ದಿನಾಂಕ  15/03/2023 ರಂದು ಬೆಳಿಗ್ಗೆ 08:30 ಗಂಟೆಗೆ ಕೆಲಸಕ್ಕೆಂದು ಸೈಬ್ರಕಟ್ಟೆ ಯಿಂದ ಶಿರೂರು ಮೂರುಕೈ ಕಡೆಗೆ ಹೋಗುತ್ತಿರುವಾಗ ಕಾಜ್ರಳ್ಳಿ ಐದು ಸೆಂಟ್ಸ ತಿರುವಿನ ಬಳಿ ಇರುವಾಗ ಶಿರೂರು ಮೂರುಕೈ ಕಡೆಯಿಂದ KA-20-EC-7021 ನೇ ಹೀರೊ ಸ್ಪ್ಲೆಂಡರ್ ಬೈಕ್ ಚಾಲಕ ಗೋಪಾಲ ನಾಯ್ಕ ತನ್ನ ಮೋಟಾರ್‌ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೆ ಕಾಜ್ರಳ್ಳಿ 5 ಸೆಂಟ್ಸ್‌ಕಡೆಗೆ ಚಲಾಯಿಸಿ ಹಿಂಬದಿಯಿಂದ ಬರುತ್ತಿದ್ದ  KA-20-EH-6123 ನೇ Honda Activa ಸ್ಕೂಟಿ ಸವಾರನು ತನ್ನ ಸ್ಕೂಟಿ ನಿಯಂತ್ರಿಸಲಾಗದೇ ಬೈಕ್ ಗೆ ಢಿಕ್ಕಿ ಹೊಡೆದನು. ಆಗ ಸ್ಕೂಟಿ ಸವಾರನು ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟಿ ಸವಾರನ ಎಡಕಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಕಾರ್ಕಳ: ದಿನಾಂಕ 15/03/2023 ರಂದು ತೇಜಸ್ವಿ, ಪೊಲೀಸ್‌ ಉಪನಿರೀಕ್ಷಕರು,   ಕಾರ್ಕಳ ಗ್ರಾಮಾಂತರ ಪೊಲೀಸ್‌  ಠಾಣೆ ಇವರಿಗೆ ಕಾರ್ಕಳ ತಾಲೂಕು  ಬೋಳ ಗ್ರಾಮದ ಬೋಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬಳಿ ಹಾದು ಹೋಗುವ ಮೇಲಂಗಡಿ ಸಾರ್ವಜನಿಕ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಟ ಆಡುತ್ತಿದ್ದ  ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ  ಆರೋಪಿ ಪ್ರವೀಣ್ (27), ತಂದೆ: ರವಿ ಪೂಜಾರಿ, ವಾಸ: ಬಪ್ಪಗೋಳಿ, ನಿಟ್ಟೆ ದರ್ಖಾಸು ಮನೆ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು  ವಶಕ್ಕೆ  ಪಡೆದು ಆರೋಪಿ  ವಶದಲ್ಲಿ ಮಟ್ಕಾ ಜುಗಾರಿ  ಆಟದಿಂದ  ಸಂಗ್ರಹಿಸಿದ  ನಗದು ರೂಪಾಯಿ 1840/- , ಮಟ್ಕಾ ಬರೆದ ಚೀಟಿ ಮತ್ತು ಹಸಿರು ಬಣ್ಣದ ಬಾಲ್‌ಪೆನ್‌-01 ನ್ನು  ಸ್ವಾಧೀನಪಡಿದಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ 15/03/2023 ರಂದು ಗುರುನಾಥ್‌ ಬಿ ಹಾದಿಮನಿ, ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್‌ ಠಾಣೆ ಇವರು ಕೊಡವೂರು ಗ್ರಾಮದ ಮಲ್ಪೆ ಬಂದರಿನ ಬಾಪುತೋಟ ಬೋಟ್‌  ಕಚ್ಚೆರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ  ದಾಳಿ ನಡೆಸಿದಾಗ ಮಟ್ಕಾಜುಗಾರಿ ಆಟ ಆಡುತ್ತಿದ್ದವರು ಓಡಿ ಹೋಗಿದ್ದು ಅವರಲ್ಲಿ ಮಟ್ಕಾ ಜುಗಾರಿಗೆ   ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದವನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಸಂತೋಷ್‌ ಪೂಜಾರಿ (49), ತಂದೆ:ಹಿರಿಯಣ್ಣ ಪೂಜಾರಿ, ವಾಸ: ಅಲಂಗಾರು ಹೋಳಿಂಜೆ ಪೆರ್ಡೂರು ಪೆರ್ಡೂರು ಗ್ರಾಮ ಎಂದು ತಿಳಿಸಿದ್ದು,  ಮಟ್ಕಾ ಜುಗಾರಿ ಆಟಕ್ಕೆ ಬಳಸಿದ  ಒಟ್ಟು 1650/- ರೂಪಾಯಿ, ಮಟ್ಕಾ ಚೀಟಿ-1 ಹಾಗೂ ಬಾಲ್ ಪೆನ್ನು -1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2023 ಕಲಂ:78 (i)(iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 15/03/2023 ರಂದು ಮಹಾಂತೇಶ  ಉದಯ ನಾಯಕ್‌, ಪೊಲೀಸ್‌ ಉಪನಿರೀಕ್ಷಕರು-1, ಬ್ರಹ್ಮಾವರ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸು ನಿಲ್ದಾಣದ, ಸಾರ್ವಜನಿಕರ ಶೌಚಾಯಲಯದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದುದಾಗಿ ಬಂದ ಮಾಹಿತಿಯಂತೆ  ದಾಳಿ ನಡೆಸಿದಾಗ, ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು, ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪಿಯ ಸಂದೇಶ ಪೂಜಾರಿ (24), ತಂದೆ: ಸತೀಶ, ವಾಸ: ವೀರಮಾರುತಿ ವ್ಯಾಯಾಮ ಶಾಲೆಯ ಬಳಿ, ವಿಷ್ಣುಮೂರ್ತಿ ನಗರ, ಕೆಳಾರ್ಕಳ್‌‌ಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಆರೋಪಿತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂಪಾಯಿ 930/- , ಮಟ್ಕಾ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023 : ಕಲಂ 78 (I) (III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ನಾರಯಣ ಚಂದ್ರ ರಾಯ್ (52), ತಂದೆ: ದಿ. ಜತೀಂದ್ರನಾಥ್ ರಾಯ್, ವಾಸ: ಅರಾಪುರ ಅಂಚೆ, ಜೋಟ್ ಗ್ರಾಮ, ಇಂಗ್ಲೀಷ್ ಬಜಾರ್ ಪಿಎಸ್,ಮಾಲ್ಡಾ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ ಹಾಲಿ ವಾಸ: ಅಲ್ತಾಫ್ ಎಂಬುವರ ಬಾಡಿಗೆ ಮನೆ, ಶಾಲೆ ರಸ್ತೆ, ಕಂಚಿನಡ್ಕ, ಪಡುಬಿದ್ರೆ ಉಡುಪಿ ಜಿಲ್ಲೆ ಇವರು ಮೂಲತಃ ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದು, ಪ್ರಸ್ತುತ ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ವಾಸವಾಗಿದ್ದು, ಯುಪಿಸಿಎಲ್ ಅದಾನಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಆಪಾದಿತ ಶಿವೇಶ್ ಕುಮಾರ್, ತಂದೆ:ಸತೀಶ್ ಜಾನ್ , ವಾಸ:ಸಿ-3,ಶುಭಂಗಾನ್ ಅಪಾರ್ಟ್ ಮೆಂಟ್, ಗುಲ್ ಮೊಹರ್ ಪಾರ್ಕ್ ರಸ್ತೆ,ಲಾಲ್‌ಪುರ್,ರಾಂಚಿ, ಜಾರ್ಖಾಂಡ್ ರಾಜ್ಯ  ಎಂಬಾತ ಜಾರ್ಖಾಂಡ್ ರಾಜ್ಯದ  ನಿವಾಸಿ ಯಾಗಿದ್ದು, ಜಾರ್ಖಾಂಡ್ ನಲ್ಲಿರುವುದಾಗಿದೆ. ಪಿರ್ಯಾದಿದಾರರು ಹಾಗೂ  ಅಪಾದಿತನು ಮಾಜಿ ಸಹೋದ್ಯೋಗಿಗಳಾಗಿರುತ್ತಾರೆ. ಆಪಾದಿತನು ಜಾರ್ಖಾಂಡ್‌ನಲ್ಲಿದ್ದುಕೊಂಡು ಪಿರ್ಯಾದಿದಾರರನ್ನು QNET ಕಂಪೆನಿಯಲ್ಲಿ ವ್ಯವಹಾರದಲ್ಲಿ ತೊಡಗಿಸುವುದಾಗಿ  ಹಾಗೂ ಒಳ್ಳೆಯ ಲಾಭಾಂಶ ನೀಡುವುದಾಗಿ ನಂಬಿಸಿ ದಿನಾಂಕ 18/11/2020 ರಿಂದ  11/12/2020 ರವರೆಗೆ ಪಿರ್ಯಾದಿದಾರರಿಂದ ರೂಪಾಯಿ 5,60,000/- ಹಣವನ್ನು ಪಿರ್ಯಾದಿದಾರರ  ಪಶ್ಚಿಮ ಬಂಗಾಳದ ಅರಾಪುರ ಎಸ್‌.ಬಿ.ಐ ಬ್ಯಾಂಕ್ ಶಾಖೆಯ ಖಾತೆಯಿಂದ  ಬೇರೆ ಬೇರೆ  ದಿನಗಳಲ್ಲಿ ಗೂಗಲ್ ಪೇ  ಮತ್ತು ನೆಪ್ಟ್ ಮುಖಾಂತರ  ಆಪಾದಿತನ ಖಾತೆಗೆ ಜಮಾಮಾಡಿಸಿಕೊಂಡಿರುತ್ತಾನೆ. ಈ ವ್ಯವಹಾರದಲ್ಲಿ ಆಪಾದಿತನು ಪಿರ್ಯಾದಿದಾರರಿಗೆ ಅನುಪಯುಕ್ತ ವಸ್ತುಗಳನ್ನು ಕಳುಹಿಸಿ ಅದರ ಮೊತ್ತವನ್ನು ರೂಪಾಯಿ 5,94,256/- ಎಂಬುದಾಗಿ  ಬಿಲ್‌ನಲ್ಲಿ ನಮೂದಿಸಿ ಅರ್ಜಿದಾರರ ವಿಳಾಸಕ್ಕೆ  ಕಳುಹಿಸಿ ಕೊಟ್ಟಿರುತ್ತಾನೆ.  ವಸ್ತುಗಳನ್ನು ಪಿರ್ಯಾದಿದಾರರು ಸ್ವೀಕರಿಸಿ ವಸ್ತುಗಳು ಅನುಪಯುಕ್ತ ವಸ್ತುವಾಗಿರುವುದರಿಂದ ಆಪಾದಿತನಿಗೆ  ವಾಪಾಸು  ಕಳುಹಿಸಿರುತ್ತಾರೆ. ಈ ಸಂಬಂಧ ವಿಚಾರಿಸಿದಾಗ ಅಪಾದಿತನು  ದಿನಾಂಕ 04/03/2022 ರಂದು ರೂಪಾಯಿ 1,75,199/- ಹಣವನ್ನು  ಪಿರ್ಯಾದಿದಾರರ  ಖಾತೆಗೆ ನೆಪ್ಟ್ ಮುಖಾಂತರ  ಜಮಾ ಮಾಡಿರುತ್ತಾನೆ. ಉಳಿದ ಹಣ ರೂಪಾಯಿ 3,84,801/- ನ್ನು ಆಪಾದಿತನಲ್ಲಿ ಕೇಳಿದಾಗ  ಹಣವನ್ನು ವಾಪಾಸ್ಸು ನೀಡದೇ ವ್ಯವಹಾರದಲ್ಲಿ ತೊಡಗಿಸದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023, ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಆರತಿ (30), ತಂದೆ: ರಾಜು, ವಾಸ: ಮೂಡು ಗಿಳಿಯಾರು, ಗರಡಿಮಕ್ಕಿ, ಕೋಟ ಅಂಚೆ, ಬ್ರಹ್ಮಾವರ ತಾಲೂಕು ಇವರು ದಿನ ಪತ್ರಿಕೆಯ ವರದಿಗಾರಳಾಗಿ ಕೆಲಸ ಮಾಡಿಕೊಂಡಿರುತ್ತಾರೆ.  ಅವರು ದಿನಾಂಕ 15/03/2023 ರಂದು  ಹಂದಾಡಿ ಗ್ರಾಮದ, ಆಕಾಶವಾಣಿ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ತನ್ನ ಸ್ಕೂಟರ್‌ ನ್ನು ನಿಲ್ಲಿಸಿ, ರಿಪೋರ್ಟರ್‌ ಕಿರಣ್‌ರವರ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತುಕೊಂಡಿರುವಾಗ ಮಧ್ಯಾಹ್ನ 4:39 ಗಂಟೆಯ ಸುಮಾರಿಗೆ ಅವರ ಪರಿಚಯದ ಆರೋಪಿ ಶೇಖರ ಹಾವಂಜೆ ಎಂಬುವವರು KA-20-3208 ಆಲ್ಟೋ ಕಾರಿನಲ್ಲಿ ಬಂದು ಫಿರ್ಯಾದಿದಾರರ ಎದುರಿನಲ್ಲಿ ಕಾರನ್ನು ನಿಲ್ಲಿಸಿ ಇಳಿದು ಹತ್ತಿರ ಬಂದು ಪಿರ್ಯಾದಿದಾರರನ್ನು ಉದ್ಧೇಶಿಸಿ  ಅವಾಚ್ಯವಾಗಿ ಬೈದು, ಪಿರ್ಯಾದಿದಾರರಿಗೆ ಹಲ್ಲೆ ಮಾಡಿರುತ್ತಾರೆ. ಪಿರ್ಯಾದಿದಾರರು ಅಲ್ಲೇ ಕೆಳಗೆ ಬಿದ್ದು ನೋವಿನಿಂದ ಕೂಗಿದಾಗ ಅಲ್ಲಿ ಜನರು ಸೇರಿದ್ದು, ಪಿರ್ಯಾದಿದಾರರು ಎದ್ದು ನಿಂತಾಗ ಅವರನ್ನು ಆರೋಪಿಯು ಕೈಯಿಂದ ತಳ್ಳಿ, ಕಾರನ್ನು  ಹತ್ತಿ ಹೋಗುವಾಗ ಜೀವ ಬೆದರಿಕೆ ಹಾಕಿ ಕಾರಿನಲ್ಲಿ ಹೋಗಿರುತ್ತಾರೆ. ಪಿರ್ಯಾದಿದಾರರು ಪತ್ರಿಕೆಯ ವರದಿಗಾರಳಾಗಿದ್ದು, ಅವರು ಕೆಲವೊಮ್ಮೆ ಲೈವ್‌ ವರದಿಯನ್ನು ಮಾಡುತ್ತಿದ್ದು ಇದೇ ಕಾರಣಕ್ಕೆ ದ್ವೇಷದಿಂದ ಆರೋಪಿಯು ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿ, ತುಳಿದು ಅವರ ಮಾನ ಹಾನಿ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023  ಕಲಂ: 323, 354, 354(B), 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ 15/03/2023 ರಂದು ಪುರುಷೋತ್ತಮ ಎ,  ಪೊಲೀಸ್ ಉಪ ನಿರೀಕ್ಷಕರು (ಕಾ.ಸು & ಸಂಚಾರ) ಪಡುಬಿದ್ರಿ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾಪು ತಾಲೂಕು ನಂದಿಕೂರು ಗ್ರಾಮದ ಕೈಗಾರಿಕಾ ಪ್ರದೇಶದ ಶ್ರೀಚಕ್ರ ಕಂಪೆನಿ ಬಳಿಯ ಹರೀಶ ಎಂಬುವವರ ಅಂಗಡಿಯ ಎದುರುಗಡೆ ಇರುವ ಕೆ.ಐ.ಡಿ.ಬಿ.ಗೆ ಸೇರಿದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋಗಿದ್ದು ಹರೀಶ ಪೂಜಾರಿ (48), ತಂದೆ: ದಿ. ಕುಟ್ಟಿ ಪೂಜಾರಿ, ವಾಸ: 5 ಸೆಂಟ್ಸ್‌, ನಂದಿಕೂರು ಇಂಡಸ್ಟ್ರೀಯಲ್‌ಏರಿಯಾ, ನಂದಿಕೂರು ಗ್ರಾಮ, ಕಾಪು ತಾಲೂಕು ಎಂಬಾತನು ಸಾರ್ವಜನಿಕರಿಗೆ ಹೊರಗಡೆಯಿಂದ ಮದ್ಯವನ್ನು ಖರೀದಿಸಿ ತಂದು ತಾನು ಆಮ್ಲೇಟ್‌ ಮತ್ತು ಕಬಾಬ್ ವ್ಯಾಪಾರ ಮಾಡುವಾಗ ಆಮ್ಲೇಟ್, ಕಬಾಬ್ ಸೇವಿಸುವವರಿಗೆ ಮದ್ಯವನ್ನು ಸೇವಿಸಲು ನೀಡುತ್ತಿದ್ದುದಾಗಿ ತಿಳಿಸಿದ್ದು, ಸ್ಥಳದಲ್ಲಿದ್ದ 1] 650 ಮಿ.ಲೀ. ನ ಕಿಂಗ್ ಫಿಶರ್ ಸ್ಟ್ರಾಂಗ್  ಪ್ರಿಂಟ್ ಎಂಬ ಲೇಬಲ್ ಇರುವ ರೂಪಾಯಿ 160/16.2.23 ಎಂದು ನಮೂದಿಸಿದ ಬಿಯರ್ ತುಂಬಿದ ಸೀಲ್ಡ್  ಬಾಟಲಿಗಳು- 5, 2] 90 ಮಿ. ಲೀ ನ ಒರಿಜಿನಲ್ ಚಾಯ್ಸ್ ಎಂದು ಪ್ರಿಂಟ್ ಇರುವ ಖಾಲಿ ಟೆಟ್ರಾ ಪ್ಯಾಕ್ -4, 3] 180  ಮಿ.ಲೀ.ಜೊನ್ ಬುಲ್ ವಿಸ್ಕಿ ಎಂದು ಲೇಬಲ್ ಇರುವ ಖಾಲಿ ಪ್ಲಾಸ್ಟಿಕ್ ಬಾಟಲಿ -1,  4] Deccan plast  ಎಂದು ಹಿಂಬದಿಯಲ್ಲಿ ಅಚ್ಚು ಇರುವ ಪ್ಲಾಸ್ಟಿಕ್  ಕುರ್ಚಿಗಳು -2,  5] ಸಿದ್ದ  ಎಂದು ಪ್ರಿಂಟ್ ಇರುವ ಸಂಪೂರ್ಣ ಉಡುಪುಗಳ ಮಳಿಗೆ ಎಂದು ಪ್ರಿಂಟ್ ಇರುವ ಕೈ ಚೀಲ-1, 6] 660 ರೂಪಾಯಿ ನಗದು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2023 ಕಲಂ: 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ  15/03/2023 ರಂದು ಮಹಾಂತೇಶ  ಉದಯ ನಾಯಕ್‌, ಪೊಲೀಸ್‌ ಉಪನಿರೀಕ್ಷಕರು-1, ಬ್ರಹ್ಮಾವರ ಪೊಲೀಸ್‌ ಠಾಣೆ ಇವರಿಗೆ ಉಪ್ಪೂರು ಗ್ರಾಮದ   ಕೊಳಲಗಿರಿ ವೃತ್ತದ ಬಳಿ ಆರೂರು – ಬೆಳ್ಮಾರು ಕಡೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಶರಾಬು ಸೇವನೆ ಮಾಡುತ್ತಿದ್ದಾರೆ  ಎಂಬುದಾಗಿ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಹೋದಾಗ  ಆರೋಪಿ ಸುಂದರ ಶೆಟ್ಟಿ (53), ತಂದೆ:ಜಗನ್ನಾಥ ಶೆಟ್ಟಿ, ವಾಸ: ಮಾತೃಶ್ರೀ , ದಾಸಬೆಟ್ಟು, ಹಾವಂಜೆ, ಹಾವಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಎಂಬಾತ ಅಕ್ರಮವಾಗಿ ಪ್ಲಾಸ್ಟಿಕ್‌ಲೋಟದಲ್ಲಿ  ಶರಾಬು ಸೇವನೆ ಮಾಡುತ್ತಿದ್ದು,  ಆರೋಪಿ  ಸುಂದರ ಶೆಟ್ಟಿಯನ್ನು ವಿಚಾರಣೆ ನಡೆಸಿ.  ಸ್ಥಳದಲ್ಲಿದ್ದ ಖಾಲಿ ನೀರಿನ ಬಾಟ್ಲಿ-1, ಆತ  ಖಾಲಿ ಮಾಡಿದ 90 ಎಂ. ಎಲ್‌ನ Mysore Lancer Whisky ಟೆಟ್ರಾ ಪ್ಯಾಕ್‌, ಶರಾಬು ತುಂಬಿರುವ  90 ಎಂ. ಎಲ್‌ನ Mysore Lancer Whisky ಟೆಟ್ರಾ ಪ್ಯಾಕ್‌, ಪ್ಲಾಸ್ಟಿಕ್‌ಲೋಟಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023 ಕಲಂ: 15 A EXCISE ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ 15/03/2023 ರಂದು ನಂದಕುಮಾರ.ಎಂ. ಎಂ, ಪೊಲೀಸ್‌ ಉಪನಿರೀಕ್ಷಕರು, ಹೆಬ್ರಿ ಪೊಲೀಸ್‌ ಠಾಣೆ  ಇವರಿಗೆ ನಾಡ್ಪಾಲು ಗ್ರಾಮದ ಸೋಮೇಶ್ವರದ ಕಾಸನಮಕ್ಕಿ ಎಂಬಲ್ಲಿ ರೌಂಡ್ಸ್ ನಲ್ಲಿರುವಾಗ ಕಾಸನಮಕ್ಕಿ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಗಿರಾಕಿಗಳಿಗೆ ಅಕ್ರಮವಾಗಿ ಮದ್ಯವನ್ನು ಸೇವಿಸಲು ಅನುವು ಮಾಡಿಕೊಡುತ್ತಿರುವುದನ್ನು ಪತ್ತೆ ಮಾಡಿ ಪ್ರಶಾಂತ ಪೂಜಾರಿ (44), ತಂದೆ: ಶಿವರಾಮ ಪೂಜಾರಿ, ವಾಸ: ಪ್ರತಿಮಾ ನಿಲಯ ಹಳೇ ಸೊಮೇಶ್ವರ ನಾಡ್ಪಾಲು  ಗ್ರಾಮ ಹೆಬ್ರಿ ತಾಲುಕು ಎಂಬಾತನನ್ನು ಮದ್ಯಾಹ್ನ 3:05 ಗಂಟೆಗೆ ವಶಕ್ಕೆ ಪಡೆದು ಅತನ ವಶವಿದ್ದ ಪ್ಲಾಸ್ಟಿಕ್ ಚೀಲದಲ್ಲಿದ್ದ  336.00 ಮೌಲ್ಯದ ವಿವಿಧ ರೀತಿಯ 1) 90ml ನ ಡಿ.ಕೆ ಡಬಲ್ ಕಿಕ್ ಫೈನ್ ವಿಸ್ಕಿ -08 ಪ್ಯಾಕೇಟ್ ಗಳು ಮತ್ತು 2) 90ml ನ ಬೆಂಗಳೂರು ವಿಸ್ಕಿ - 04 ಪ್ಯಾಕೇಟ್  ಹಾಗೂ 3) 90ml ನ ಮೈಸೂರು ಲ್ಯಾನ್ಸರ್ ವಿಸ್ಕಿ  ಎಂದು ಬರೆದಿರುವ 4 ಖಾಲಿ ಪ್ಯಾಕೇಟ್ , 4) ಖಾಲಿ ಪ್ಲಾಸ್ಟಿಕ್ ಲೋಟ-2,  5) ಪಿಂಕ್ ಬಣ್ಣದ ಪ್ಲಾಸ್ಟಿಕ್ ಚೀಲ -1,  6) ಆರೋಪಿತನು ಗಿರಾಕಿಗಳಿಂದ ಸಂಗ್ರಹಿಸಿದ 120/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 ಕಲಂ: 15(ಎ),32(3)  KE ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-03-2023 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080