ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 16/03/2023 ರಂದು ಬೆಳಿಗ್ಗೆ  ಜಾವ ಸುಮಾರು 5:15 ಗಂಟೆಗೆ, ಕುಂದಾಪುರ  ತಾಲೂಕಿನ, ಕುಂದಾಪುರ ಕಸಬಾ ಗ್ರಾಮದ  ಹಳೇ ಆದರ್ಶ  ಆಸ್ಪತ್ರೆಯ ಬಳಿ  ಪಶ್ಚಿಮ ಬದಿಯ  NH 66 ರಸ್ತೆಯಲ್ಲಿ, ಆಪಾದಿತ ಈರಪ್ಪ ಆರ್‌ ಹಡಗಲಿ ಎಂಬವರು, KA25-AA-0611ನೇ  ಲಾರಿಯನ್ನು, ಉಡುಪಿ  ಕಡೆಯಿಂದ ಬೈಂದೂರು ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ  ಭಾಸ್ಕರ್‌ ಎನ್‌ ನಾಯ್ಕ  ರವರು KSRTC ಸಂಸ್ಥೆಯ KA19-F-3457ನೇ ನೊಂದಣಿ ನಂಬ್ರದ ಬಸ್‌ ನ್ನು ಇಂಡಿಕೇಟರ್‌ ಹಾಕಿ ಪಶ್ಚಿಮ ಬದಿಯ  NH 66 ರಸ್ತೆಯಿಂದ  ಪೂರ್ವ  ಬದಿಯ NH 66 ರಸ್ತೆಗೆ ಯೂ ಟರ್ನ್‌ ತೆಗೆದುಕೊಳ್ಳುತ್ತಿರುವ  ಸಮಯ, ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂ ಗೊಂಡಿದ್ದು, ಹಾಗೂ ಪಿರ್ಯಾದಿ ಭಾಸ್ಕರ್‌ ಎನ್‌ ನಾಯ್ಕ್‌ ಇವರ ಮೈಕೈಗೆ ಒಳನೋವಾಗಿ ಕುಂದಾಪುರ  ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023   ಕಲಂ 279, 337 ಐಪಿಸಿಯಂತೆ   ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ: 15/03/2023 ರಂದು ಫಿರ್ಯಾದಿ ಉಮೇಶ  ಬಿ ಶೆಟ್ಟಿ ರವರು ಅವರ ಮೋಟಾರು ಸೈಕಲ್ ನಲ್ಲಿ ಬ್ರಹ್ಮಾವರದಿಂದ ಬಾರ್ಕೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಟಪಾಡಿ ಗ್ರಾಮದ ನಂದನಕುದ್ರು ಹೋಗುವ ಕ್ರಾಸ್ ಬಳಿ ಮಧ್ಯಾಹ್ನ 1.30 ಗಂಟೆಗೆ ತಲುಪುವಾಗ ಅವರ ಎದುರಿನಿಂದ ಅಂದರೆ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ಮೊಹಮ್ಮದ್ ರಫೀಕ್ ಎಂಬವರು ಅವರ ಬಾಬ್ತು ಕೆಎ 20 ಎಎ 9342 ನೇ ಗೂಡ್ಸ್ ಟೆಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತಿರುವಿನಲ್ಲಿ ಒಮ್ಮೆಲೆ ಎಡಗಡೆಯಿಂದ ಬಲಗಡೆಗೆ ಚಲಾಯಿಸಿದಾಗ ಗೂಡ್ಸ್ ವಾಹನದ ಹಿಂಭಾಗ ಫಿರ್ಯಾದಿದಾರರ ಎದುರಿನಲ್ಲಿ ಬಾರ್ಕೂರು ಕಡೆಗೆ ಶಿವರಾಜ್ ಶೆಟ್ಟಿ ಎಂಬವರು ಸವಾರಿ ಮಾಡುತ್ತಿದ್ದ ಕೆಎ 20 ಎಝಡ್ 6411 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಶಿವರಾಜ್ ಶೆಟ್ಟಿರವರು ಮೋಟಾರು ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಅವರ ಬಲಕಾಲು ಮೂಳೆ ಮುರಿತ ಗಾಯವಾಗಿದ್ದು ಹಾಗೂ ಬಲಕೈ ಪೆಟ್ಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 : ಕಲಂ 279,  338 ಐಪಿಸಿಯಂತೆ   ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಪ್ರಕಾಶ್ ಪೂಜಾರಿ ಇವರು ದಿನಾಂಕ 08/03/2023 ರಂದು ಸಮಯ ಸುಮಾರು ಸಂಜೆ 4:00 ಗಂಟೆಗೆ ಒಂದು ವ್ಯಾನಿನಲ್ಲಿ ಕೊರಿಯರ್ ಡೆಲಿವರಿ ಬಗ್ಗೆ ಅಂಬಲಪಾಡಿಗೆ ಬಂದಿದ್ದು, ವ್ಯಾನನ್ನು ಅಂಬಲಪಾಡಿ ರಾಧಾ ಮೆಡಿಕಲ್ಸ್ ಬಳಿ ನಿಲ್ಲಿಸಿ ಗಣೇಶ್ ಆಟೋ ಮೊಬೈಲ್ಸ್ ಗೆ ಕೊರಿಯರ್ ಡೆಲಿವರಿ ಮಾಡಿ ವಾಪಾಸ್ಸು ವ್ಯಾನಿನ ಬಳಿ ಬರಲು ನಡೆದುಕೊಂಡು ಬರುತ್ತಿರುವಾಗ ಕಿನ್ನಿಮುಲ್ಕಿ ಸ್ವಾಗದ ಗೋಪುರ ಕಡೆಯಿಂದ ಅಂಬಲಪಾಡಿ ಕಡೆಗೆ KA29V2552 ನೇ ಮೋಟಾರು ಸೈಕಲ್ ಸವಾರ ಸಿದ್ದಲಿಂಗೇಶ್ವರ ಕೆಶಪ್ಪ ಎಂಬಾತನು ಮದ್ಯಪಾನ ಸೇವಿಸಿ ತನ್ನ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರಾ ಎಡಬದಿಗೆ ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ತಲೆಗೆ ಮತ್ತು ಎಡಭುಜಕ್ಕೆ ಗುದ್ದಿದ ನೋವುಂಟಾಗಿದ್ದು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ 279, 337  ಐ.ಪಿ.ಸಿ ಮತ್ತು ಕಲಂ 185 ಐಎಮ್‌ವಿ ಆಕ್ಟ್ ನಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ: 15.03.2023 ರಂದು ಫಿರ್ಯಾದಿ ಸನ್ನಿ ದಾರರ ತಾಯಿ ಪುಷ್ಪ, ಪ್ರಾಯ 54 ವರ್ಷ ರವರು ಮಧ್ಯಾಹ್ನ ಪೌರಕಾರ್ಮಿಕ ಕೆಲಸವನ್ನು ಮುಗಿಸಿ ಸಮಾರಂಭಕ್ಕೆ ಹೋಗುವುದಾಗಿ ಹೇಳಿ ಹೋದವರು, ಆರೋಪಿ ಅಮಿತ್ ಕುಮಾರ್‌ ರವರ ಹಿರೋ ಹೊಂಡ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬ್ರ: ಕೆಎ 20 ಎಕ್ಸ್ 9906 ನೇದರಲ್ಲಿ ಪುಷ್ಪ ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ರಾ.ಹೆ 66 ರಲ್ಲಿ ಬರುವಾಗ ಸಂಜೆ ಸಮಯ 5.30 ಗಂಟೆಗೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಹೆರಾಯಿಬೆಟ್ಟು ಕ್ರಾಸ್ ನಿಂದ ಸ್ವಲ್ಪ ಮುಂದೆ ಆರೋಪಿಯು ತನ್ನ ಬಾಬ್ತು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪುಷ್ಪರವರು ಆಯಾ ತಪ್ಪಿ ಥಾರು ರಸ್ತೆಯ ಮೇಲೆ ಬಿದ್ದು, ಬಲ ಮೊಣ ಕೈಗೆ, ತಲೆ ಹಿಂಭಾಗಕ್ಕೆ ಗಾಯ, ಮೂಗಿನಲ್ಲಿ ರಕ್ತ ಬರುತ್ತಿದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಾಸಿರುವುದಾಗಿದೆ.  ಪುಷ್ಪರವರ ತಲೆಗೆ ತೀವ್ರ ಪೆಟ್ಟಾಗಿರುವುದರಿಂದ ಪುಷ್ಪ ರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 16.03.2023 ರಂದು ಮಧ್ಯಾಹ್ನ 12.15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 : ಕಲಂ 279,  304(A) ಐಪಿಸಿಯಂತೆ   ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಶ್ರೀ ನಿಂಗಪ್ಪ ಇವರು ದಿನಾಂಕ 15/03/2023 ರಂದು ಸಮಯ ಸುಮಾರು 08.00 ಗಂಟೆಗೆ  ಅಂಬಲಪಾಡಿ ಗ್ರಾಮದ ಆದಿ ಉಡುಪಿ ಇನ್ಕಮ್ ಟ್ಯಾಕ್ಸ್ ಕಛೇರಿ ಎದುರು ರಾ.ಹೆ 169A ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ತನ್ನ ಬಾಬ್ತು KA22B7518 ನೇ 407 ಟೆಂಪೋವನ್ನು ಚಲಾಯಿಸಿಕೊಂಡು ಬರುತ್ತಿರುವಾಗ KA20EC2906 ನೇ ಮೋಟಾರು ಸೈಕಲ್ ಸವಾರ ತನ್ನ ಬಾಬ್ತು ಮೋಟಾರ್ ಸೈಕಲ್ ನ್ನು ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಟೆಂಪೋದ ಬಲಬದಿಯ ಹಿಂದಿನ ಟಯರ್ ನ ಮೇಲ್ಭಾಗದ ಬಂಪರ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು  ತಲೆಯ ಗಂಭೀರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಚಿಕಿತ್ಸೆಗಾಗಿ ಆತನ್ನು ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2023 ಕಲಂ 279, 338 ಐಪಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಫಿರ್ಯಾದಿ ಕುಷ್ಠ  ನಾಯ್ಕ   ಇವರು   ಆರೋಪಿ ಸುರೇಶ  ಶೆಟ್ಟಿ ಉಳ್ಳೂರು  74ಗ್ರಾಮ   ಕುಂದಾಪುರ ತಾಲೂಕು  ಇವರ  ಬಳಿ  10,000/- ರೂ ಸಾಲ ಪಡೆದುಕೊಂಡಿದ್ದು, ಪಡೆದುಕೊಂಡ ಸಾಲದ ಹಣದಲ್ಲಿ  2000/- ರೂ ಹಣ ನೀಡಲು  ಬಾಕಿ ಇರುತ್ತದೆ, ಇದೇ  ವಿಷಯದಲ್ಲಿ ಆರೋಪಿಯು  ದಿನಾಂಕ 15.-03.2023 ರಂದು ಆತನ ಸುಮಾರು 17;30 ಘಂಟೆಗೆ  ಫಿರ್ಯಾಧುದಾರರ  ಮನೆಯ  ಒಳಗಡೆ  ಅಕ್ರಮ ಪ್ರವೇಶ ಮಾಡಿ ಫಿರ್ಯಾದು ದಾರರಲ್ಲಿ  ನೀವು ಹಣ ಕೊಡಲು ಬಾಕಿ  ಇದೆ  ಆದರಿಂದ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು  ಹೋಗುತ್ತೇನೆ ಎಂದು ಹೇಳಿ  ಗ್ಯಾಸ  ಸಿಲಿಂಡರ್   ತೆಗೆದುಕೊಂಡುಹೋಗುವಾಗ ಫಿರ್ಯಾದುದಾರರು  ಆರೋಪಿ ಯಲ್ಲಿ ಗ್ಯಾಸ್ ಸಿಲಿಂಡರ್  ತೆಗೆದುಕೊಂಡು ಹೋಗುವುದು ಬೇಡ ಹಣ ಕೊಡುತ್ತೇನೆ,  ಎಂದು ಹೇಳಿದಾಗ   ಆರೋಪಿಯು   ಕೈಯಿಂದ ಹಲ್ಲೆ ಮಾಡಿ   ಕಾಲನ್ನು  ಹಿಡಿದು  ನೆಲದ  ಮೇಲೆ   ಎಳೆದಾಡಿ ಹಲ್ಲೆ ಮಾಡಿರುತ್ತಾನೆ, ಇದರ ಪರಿಣಾಮ  ಫಿರ್ಯಾಧುದಾರರ  ಕುತ್ತಿಗೆಗೆ  ಹಾಗೂ   ಎಡಕೈಗೆ   ಗಾಯವಾಗಿರುತ್ತದೆ  ಚಿಕಿತ್ಸೆಯ  ಬಗ್ಗೆ ಕುಂದಾಪುರ   ಸರಕಾರಿ   ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ:,  448, 323 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ದಿನಾಂಕ 16.03.2023 ರಂದು ಲಕ್ಷ್ಮಣ, ಪೊಲೀಸ್‌ ಉಪನಿರೀಕ್ಷಕರು, (ತನಿಖೆ), ಅಜೆಕಾರು ಪೊಲೀಸ್‌ ಠಾಣೆ ಇವರು ಖಚಿತ ಮಾಹಿತಿಯ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಬೆ. 11-00 ಗಂಟೆಗೆ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಕೆರ್ವಾಶೆ ಪೇಟೆಯಲ್ಲಿನ ವೈನ್‌ ಶಾಪ್‌ ಬಳಿ ಮಟ್ಕಾ ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿತ ಹರೀಶ ಮೂಲ್ಯ ಎಂಬಾತನಿಂದ, ಆತನ ಸ್ವಂತ ಲಾಭಕ್ಕೋಸ್ಕರ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂ. 1955/-, ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್‌ ಪೆನ್‌-1 ನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ 78(i)(iii) KP Act. ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ:16.03.2023 ರಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರದ 11 ನೇ ಅಡ್ಡರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಕಾನೂನು ಬಾಹಿರವಾಗಿ ಹೊಂದಿದ್ದ ಬಬ್ಲು ಕುಮಾರ್  ಎಂಬಾತನನ್ನು  ಖಚಿತ ಮಾಹಿತಿಯ ಮೇರೆಗೆ ಎಸ್.ಹೆಚ್ ಬಜಂತ್ರಿ ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ಪತ್ರಾಂಕಿತ ಅಧಿಕಾರಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿ, ಆರೋಪಿಯನ್ನು 10:00 ಗಂಟೆಗೆ ದಸ್ತಗಿರಿಗೊಳಿಸಿ, ಆರೋಪಿಯಿಂದ 1 ಕೆ.ಜಿ. 102 ಗ್ರಾಂ ತೂಕದ ಗಾಂಜಾ, ಕೆ.ಎ.-14-ವಿ-5230 ನೇ ಕಪ್ಪು ಬಣ್ಣದ ಬಜಾಜ್ ಪಲ್ಸರ್‌ ಮೋಟಾರ್ ಸೈಕಲ್ 1, ಮೊಬೈಲ್‌ ಪೋನ್- 1 ನ್ನು ವಶಪಡಿಸಿ ಕೊಂಡಿರುವುದಾಗಿರುತ್ತದೆ. ಸ್ವಾಧೀನಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ.30,000/-ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ ರೂ. 10,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ 1 ಮೊಬೈಲ್ ಪೋನ್‌ಗಳ ಅಂದಾಜು ಮೌಲ್ಯ ರೂ. 3000/-, ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 43,000/- ಆಗಿರುತ್ತದೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ : 8(C), 20(b)(ii) (B) ಎನ್.ಡಿ.ಪಿ. ಎಸ್. ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 15/03/2023 ರಂದು ರವಿ ಬಿ.ಕೆ, ಪಿಎಸ್‌.ಐ, ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ 22:15 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಜಂಕ್ಷನ್‌ ಹತ್ತಿರ ಗಂಗೊತ್ರಿ ಬಾರ್‌ ಹಿಂಬದಿ ಸ್ಟೇಲ್ಲಾ ಮಾರೀಸ್‌ ಕಾಂಪ್ಲೆಕ್ಸ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್ ಬಾಹರ್‌ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು, ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ 23:30 ಗಂಟೆಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು, 23:45 ಗಂಟೆಗೆ ದಾಳಿ ನಡೆಸಿ, ಅಂದರ್‌-ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ  ಆರೋಪಿತ 1. ಕಿರಣ ಪ್ರಾಯ 35 ವರ್ಷ ತಂದೆ: ಸುಧಾಕರ ವಾಸ: ರಾಮ ನಿಲಯ, ವಿನೋಭಾ ನಗರ, ಕಾಡಬೆಟ್ಟು,.  2. ರಮೇಶ್ ಪ್ರಾಯ 34 ವರ್ಷ ತಂದೆ: ಗಣಪತಿ ಆಚಾರ್ಯ ವಾಸ: ಮೂಡಬೆಟ್ಟು, ತೊಂಬಟ್ಟು, ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು, 3. ಪ್ರಕಾಶ್ ಶೆಟ್ಟಿ ಪ್ರಾಯ 41 ವರ್ಷ ತಂದೆ: ರಾಮಣ್ಣ ಶೆಟ್ಟಿ ವಾಸ: ಬೈಕಾಡಿ ತೋಟದ ಮನೆ, ಬ್ರಹ್ಮಾವರ, ಉಡುಪಿ ಜಿಲ್ಲೆ. 4. ಮಹಮ್ಮದ್ ಇಮ್ರಾನ್ ಪ್ರಾಯ 40 ವರ್ಷ ತಂದೆ: ದಿ. ಶಬ್ಬೀರ್ ಹುಸೇನ್ ವಾಸ: ಸಿಟಿ ಗೇಟ್, ಮಿಷನ್ ಕಂಪೌಂಡ್, 76 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು. 5. ಸುನೀಲ್ ಪೂಜಾರಿ ಪ್ರಾಯ 36 ವರ್ಷ ತಂದೆ: ಕೃಷ್ಣಮೂರ್ತಿ ವಾಸ: ಜೇನುಗೂಡು ಹೌಸ್, ಅಚ್ಚಡ ಕ್ರಾಸ್, ಮೂಡುಬೆಟ್ಟು ಗ್ರಾಮ, ಕಟಪಾಡಿ ಅಂಚೆ, ಕಾಪು ತಾಲೂಕು, ಇವರನ್ನು ಹಾಗೂ ಆಟಕ್ಕೆ ಬಳಸಿದ ನಗದು ರೂ. 5,600/-,  ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52 ನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಉಡುಪಿ ನಗರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ: 87 ಕರ್ನಾಟಕ ಪೊಲೀಸ್‌ ಕಾಯಿದೆಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಫಿರ್ಯಾದಿ ಶೇಖರ್‌ ಹಾವಂಜೆ ಇವರು ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದು, ಅವರು  ದಿನಾಂಕ 15.03.2023 ರಂದು ಕೆಲಸದ ನಿಮಿತ್ತ    ಹಂದಾಡಿ ಗ್ರಾಮದ ಬ್ರಹ್ಮಾವರ ಆಕಾಶವಾಣಿಯ ಕಾಳಿಕಾಂಬಾ ದೇವಸ್ಥಾನದ ಸ್ವಾಗತ ಗೋಪುರದ ಬಳಿಯಲ್ಲಿರುವಾಗ ಸಮಯ ಸುಮಾರು ಸಂಜೆ 4:40 ಗಂಟೆಗೆ ಅವರ ಹಿಂದಿನಿಂದ 1 ನೇ ಆರೋಪಿತೆಯಾದ ಆರತಿ ಗಿಳಿಯಾರ್ ಎಂಬುವವರು ಬಂದು ತನ್ನ  ಕೈಯಲ್ಲಿದ್ದ ಹೆಲ್ಮಟ್ ನಿಂದ ಫಿರ್ಯಾದಿದಾರರ ಕುತ್ತಿಗೆಗೆ, ಎದೆಗೆ ಮತ್ತು ತಲೆಗೆ ಹೊಡೆದು ನೀನು ಪತ್ರಕರ್ತ ಅಮ್ಮ ರವಿ ಮತ್ತು ಕಿರಣ್ ಪೂಜಾರಿಯವರ ಪತ್ರಿಕೆಗೆ ತೊಂದರೆ ಮಾಡುತ್ತೀಯಾ,  ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೈಯುತ್ತಾ, ಫಿರ್ಯಾದಿದಾರರ  ಕಾರಿನ ಗ್ಲಾಸ್ ಗೆ ಮತ್ತು ಬಲಬದಿಯ ಡೋರ್ ಗೆ ತನ್ನ ಹೆಲ್ಮೆಟ್ ನಿಂದ ಬಲವಾಗಿ ಹೊಡೆದಿರುತ್ತಾಳೆ. ನಂತ್ರ 1ನೇ ಆರೋಪಿತೆಯು ಹಲ್ಲೆ ನಡೆಸುವಾಗ  2 ನೇ ಆರೋಪಿ ಅಮ್ಮ ರವಿ  ಮತ್ತು 3 ನೇ ಆರೋಪಿಯಾದ ಕಿರಣ್ ಪೂಜಾರಿ ಎಂಬುವವರು ಪ್ರಚೋದನೆ ನೀಡಿ ಕಳುಹಿಸಿರುವುದಾಗಿ ಬೈದು,  ನಿನ್ನನ್ನು ಮುಂದೆ ಜೀವಂತವಾಗಿ ಬದುಕಲು ಬಿಡುವುದಿಲ್ಲ, ಕೊಲೆ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದು, ಮಾತ್ರವಲ್ಲದೇ ಫಿರ್ಯಾದಿದಾರರು ಕಾರಿನ ಒಳಗೆ ಕುಳಿತಾಗ ಅವರನ್ನು ಕಾರಿನ ಬಾಗಿಲು ತೆಗೆದು ಎಳೆದು ತಲೆಗೆ ಮತ್ತೆ ಪುನಃ ಹಲ್ಲೆ ಮಾಡಿರುತ್ತಾಳೆ.  ಫಿರ್ಯಾದಿದಾರರ ಸಾಮಾಜಿಕ ಹೋರಾಟದ ವಿರುದ್ದ 2 ನೇ ಮತ್ತು 3 ನೇ ಆರೋಪಿಗಳು  ಅಸಮಾಧಾನ ಹೊಂದಿದ್ದು, ಫಿರ್ಯಾದಿದಾರರನ್ನು ಮತ್ತು ಅವರ ಸಂಘಟನೆಯನ್ನು ತೇಜೋವಧೆ ಮಾಡುವ ಉದ್ದೇಶದಿಂದಲೇ 2 ಮತ್ತು 3 ನೇ ಆರೋಪಿಗಳು ದಲಿತ ಮಹಿಳೆಯಾದ 1ನೇ ಆರೋಪಿತೆಯನ್ನು ಫಿರ್ಯಾದಿದಾರರ ವಿರುದ್ದ ಹಾಗೂ ಅವರ ಸಂಘಟನೆಯ ವಿರುದ್ದ ಎತ್ತಿಕಟ್ಟಿ ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ ಮತ್ತು ವಾಟ್ಸ್ಯಾಪ್ ಗಳಲ್ಲಿ  ಅವಹೇಳನ ಮತ್ತು ಸುಳ್ಳು ಅಪ ಪ್ರಚಾರಗಳನ್ನು ಮಾಡಿ ವೀಡಿಯೋಗಳನ್ನು  ಹರಿದು ಬಿಟ್ಟಿದ್ದು, ಅಲ್ಲದೇ ದಲಿತನಾದ ಫಿರ್ಯಾದಿದಾರನ್ನು ಉದ್ದೇಶ ಪೂರ್ವಕವಾಗಿ ಸಮಾಜದಲ್ಲಿ ಕೆಟ್ಟ ವ್ಯಕ್ತಿ ಎಂಬುದಾಗಿ ಬಿಂಬಿಸಲು ಹಾಗೂ ಫಿರ್ಯಾದಿದಾರರ ಸ್ವಜಾತಿಯವಳಾದ 1 ನೇ ಆರೋಪಿತೆಯನ್ನು ಮುಂದೆ ಬಿಟ್ಟು, ಕೊಲೆಗೆ ಸಂಚು ರೂಪಿಸುತ್ತಿರುವ  2 ಹಾಗೂ 3 ನೇ ಆರೋಪಿತರ ವಿರುದ್ದ, ದಲಿತ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಹಾಗೂ ಹಲ್ಲೆ ನಡೆಸಿದ 1 ನೇ ಅರೋಪಿತೆಯ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳುಲು ನೀಡಿರುವ ಫಿರ್ಯಾದು ಆಗಿರುತ್ತದೆ.   ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 : ಕಲಂ 324,504,506,307, 109, 120(b)  r/w 34 IPC and  3 (2) (va) sc. St amendment Act 2015 ನಂತೆ  ಪ್ರಕರಣ ದಾಖಲಾಗಿರುತ್ತದೆ.

                                           

ಕಳವು ಪ್ರಕರಣ

  • ಶಂಕರನಾರಾಯಣ: ಫಿರ್ಯಾದಿ ಅನಂತ ಮೂರ್ತಿ  ಇವರು  ಕೃಷಿ ಕೆಲಸ ಮಾಡಿಕೊಂಡಿದ್ದು ಅಡಿಕೆ ತೋಟ  ಇರುತ್ತದೆ, ಸದ್ರಿ ಅಡಿಕೆ  ತೋಟದಲ್ಲಿ  ಬೆಳೆದ   ಅಡಿಕೆಯನ್ನು ಅವರ  ವಾಸದ  ಮನೆಯಾದ   ಬೈಂದೂರು ತಾಲೂಕಿನ  ಹಳ್ಳಿಹೊಳೆ ಗ್ರಾಮದ   ಮಾವಿನ  ಮನೆ  ಎಂಬಲ್ಲಿ ಇರುವ   ಅಡಿಕೆ  ಗೋಡೌನಲ್ಲಿ ಇಟ್ಟಿದ್ದು ,ಸದ್ರಿ  ಗೋಡೌನಿನಲ್ಲಿ ಇಟ್ಟಿದ ಸಿಪ್ಪೆ  ಹಾಗೂ  ಸಿಪ್ಪೆ ಸುಲಿದ ಸುಮಾರು   75,000/- ರೂ   ಮೌಲ್ಯದ   1 ½ ಕ್ವಿಂಟಾಲ್ ಅಡಿಕೆಯನ್ನು   ಯಾರೋ  ಕಳ್ಳರು ಕಳವು ಮಾಡಿಕೊಂಡು   ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023  ಕಲಂ:   454, 457, 380  ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಬಿಹಾರ ರಾಜ್ಯ ಮೂಲದವರಾದ ಫಿರ್ಯಾದಿ ರಾಜ್‌ ಕುಮಾರ್‌ ಇವರು ತನ್ನ ಹೆಂಡತಿ ಮಕ್ಕಳೊಂದಿಗೆ ಪ್ರಸ್ತುತ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ಹೆಬ್ಬಾರು ಬೆಟ್ಟು ಎಂಬಲ್ಲಿ ಸಕಲೇಶಪುರದ ಎನ್‌.ಆರ್‌ ವಿವೇಕ್‌ ಎಂಬವರಿಗೆ ಸಂಬಂಧಿಸಿದ ಕೃಷಿ ಫಾರ್ಮ್‌ ನ ಬಿಡಾರದಲ್ಲಿ ವಾಸಮಾಡಿಕೊಂಡಿದ್ದು, ಸದ್ರಿ ಫಾರ್ಮ್‌ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ., ಅವರ ಎರಡು ವರ್ಷದ ಮಗಳಾದ ಖುಷಿ ಎಂಬವಳಿಗೆ ದಿನಾಂಕ 15.03.2023 ರಂದು ಜ್ವರ ಹಾಗೂ ಹೊಟ್ಟೆ ವೋವು ಕಾಣಿಸಿಕೊಂಡಿದ್ದು, ಈ ಬಗ್ಗೆ ಪೇತ್ರಿಯ ಪ್ರಾಥಮಿಕ ಆಸ್ಪತ್ರೆಯ ವೈಧ್ಯರ ಬಳಿ ಹೋದಾಗ ವೈಧ್ಯರು ಸಿರಪ್‌ ನೀಡಿದ್ದು, ಅಲ್ಲದೇ ಅವಳಿಗೆ 10 ದಿನಗಳ ಹಿಂದೆ ಹುಷಾರಿಲ್ಲದೇ ಇದ್ದಾಗ ನೀಡಿದ ಉಳಿದ ½ ಮಾತ್ರೆ ತೆಗೆದುಕೊಳ್ಳುವಂತೆ ಸೂಚಿಸಿರುತ್ತಾರೆ. ನಂತ್ರ ಬಿಡಾರಕ್ಕೆ ಬಂದು ಅವಳಿಗೆ 1 ವಾರದ ಹಿಂದೆ ಮನೆಯಲ್ಲಿ ತಂದಿಟ್ಟಿದ್ದ ಹಾಲನ್ನು ಬಿಸಿ ಮಾಡಿ ಆರಿಸಿ ಸ್ವಲ್ಪ ನೀಡಿ, ಬಳಿಕ 5 ಎಮ್‌ಎಲ್‌ ಸಿರಪನ್ನು ನೀಡಿ, ನಂತ್ರ ½  ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ಹಾಲನ್ನು ಹಾಕಿ ಕುಡಿಸಿ  ಮಲಗಿಸಿದ್ದು, ಬಳಿಕ ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಖುಷಿಯು ತೀರಾ ಅಸ್ವಸ್ಥಗೊಂಡಿದ್ದು, ಅವಳನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈಧ್ಯರು ಖುಷಿ ಈಗಾಗಲೆ  ಮೃತ ಪಟ್ಟಿರುವುದಾಗಿ ಸಂಜೆ 7:30 ಗಂಟೆಗೆ ತಿಳಿಸಿರುತ್ತಾರೆ. ಈ  ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್‌  20/2023 ಕಲಂ 174 (3) & (iv) ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ: ಫಿರ್ಯಾದಿ ಪ್ರಶಾಂತ  ನಾಯ್ಕ  ಇವರ  ಸಹೋದರ  ಮೃತ  ಚಂದ್ರ  ಶೇಖರ ನಾಯ್ಕ ಪ್ರಾಯ 41  ವರ್ಷ  ಈತನು   ಮರದ  ಕಟ್ಟಿಂಗ್  ಮಾಡುವ  ಕೆಲಸ ಮಾಡಿಕೊಂಡಿದ್ದು, ಆತನು ಯಾರೊಂದಿಗೂ  ಸೇರದೇ  ವಿಪರೀತವಾಗಿ  ಶರಾಬು  ಸೇವನೆ  ಮಾಡಿಕೊಂಡಿದ್ದನು,  ಅದರಂತೆ ದಿನಾಂಕ  08.03.2023 ರಂದು  ಕೆಲಸ  ಮುಗಿಸಿ ಮನೆಗೆ  ಬಂದ  ಮೃತ ಚಂದ್ರ  ಶೇಖರ  ನಾಯ್ಕ ಈತನು ರಾತ್ರಿ ಆತನ   ವಾಸದ  ಮನೆಯಾದ  ಕುಂದಾಪುರ  ತಾಲೂಕಿನ  76 ಹಾಲಾಡಿ ಗ್ರಾಮದ  ತಟ್ಟುವಟ್ಟು  ಎಂಬಲ್ಲಿ  ಮನೆಯ ಒಳಗಡೆ  ಮಲಗಿದವನು ಜೀವನದಲ್ಲಿ  ಜಿಗುಪ್ಸೆಗೊಂಡು   ದಿನಾಂಕ  08/03/2023  ರಂದು 21;00   ಘಂಟೆಯಿಂದ  ದಿನಾಂಕ 09.03.2023 ರಂದು    ಬೆಳ್ಳಗಿನ ಜಾವ  ಸುಮಾರು  4:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ವಿಷ  ಪದಾರ್ಥ ಸೇವಿಸಿ ಜೋರಾಗಿ ಕೂಗಿಕೊಂಡಿದ್ದು, ಈ  ಸಮಯ ಆತನನ್ನು ಉಡುಪಿ  ಜಿಲ್ಲಾ  ಸರಕಾರಿ   ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ಅಲ್ಲಿ ಪ್ರಥಮ  ಚಿಕಿತ್ಸೆ  ಕೊಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ   ಕರೆದು ಕೊಂಡು ಹೋಗಿದ್ದು, ಅಲ್ಲಿ  ಚಿಕಿತ್ಸೆಯಲ್ಲಿ  ಇದ್ದ ಚಂದ್ರಶೇಖರ ನಾಯ್ಕ ದಿನಾಂಕ 16.03.2023  ರಂದು ಬೆಳ್ಳಗಿನ  ಜಾವ  ಸುಮಾರು  1;39  ಘಂಟೆಗೆ  ಚಿಕಿತ್ಸೆ ಫಲಕಾರಿಯಾಗದೇ   ಮೃತಪಟ್ಟಿರುತ್ತಾನೆ.  ಈ  ಬಗ್ಗೆ ಶಂಕರನಾರಾಯಣ ಠಾಣೆ ಯುಡಿಆರ್‌  05/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 16-03-2023 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080