ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ರಾಜ್‌ಶೇಖರ್‌ ಮೂರ್ತಿ, (52), ತಹಶೀಲ್ದಾರರು, ಬ್ರಹ್ಮಾವರ ತಾಲೂಕು ಕಛೇರಿ, ಬ್ರಹ್ಮಾವರ ಇವರು  ಬ್ರಹ್ಮಾವರ ತಾಲೂಕು ಕಛೇರಿಯ ತಹಶೀಲ್ದಾರರಾಗಿದ್ದು  ದಿನಾಂಕ 12/03/2022 ರಂದು ಬೆಳಿಗ್ಗೆ 10:00 ಗಂಟೆಯ ಸಮಯದಲ್ಲಿ ಕಛೇರಿಯ ಹಿಂಭಾಗದ ಆವರಣದೊಳಗೆ ಇದ್ದ ಜನರೇಟರ್‌ ನ್ನು ಆನ್‌ ಮಾಡುವ ಬಗ್ಗೆ ಕಛೇರಿಯವರು ಹೋದಾಗ ಸದ್ರಿ ಜನರೇಟರ್‌ಗೆ ಅಳವಡಿಸಿದ್ದ ಸುಮಾರು ರೂಪಾಯಿ. 12,000/- ಮೌಲ್ಯದ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2022 ಕಲಂ 379  ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ರೋಬರ್ಟ (29) ತಂದೆ, ದಿ. ಜೊಸೇಪ್  ವಾಸ,ಜೊಸೇಪರ  ಕಾಲೋನಿ  ಗುಮ್ಮಹೊಲ  ಬೆಳ್ವ ಗ್ರಾಮ  ಹೆಬ್ರಿ ತಾಲೂಕು ಇವರ  ಸಹೋದರ    ಪ್ರದೀಪ್  ರಿಕ್ಷನ್ (27) ತಂದೆ, ದಿ. ಜೊಸೇಪ್  ವಾಸ,ಜೊಸೇಪರ  ಕಾಲೋನಿ  ಗುಮ್ಮಹೊಲ  ಬೆಳ್ವ ಗ್ರಾಮ  ಹೆಬ್ರಿ ತಾಲೂಕು ಈತನು ಆತನಿಗೆ  ಇರುವ ಮಾನಸಿಕ ಕಾಯಿಲೆಯಿಂದ ಮನನೊಂದು ದಿನಾಂಕ 15/03/2022  ರಂದು  ಬೆಳಿಗ್ಗೆ  08:30 ಘಂಟೆಯಿಂದ   13:00  ಘಂಟೆಯ ಮಧ್ಯದ  ಅವಧಿಯಲ್ಲಿ  ಆತನ ವಾಸದ  ಮನೆಯ ಒಳಗಿನ ಹಾಲ್‌ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 05/2022 ಕಲಂ: 174 ಸಿಆರ್‌ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸುರೇಶ ಸಫಲಿಗ, (42) ತಂದೆ: ಸುಂದರ ಸಫಲಿಗ, ವಾಸ: ಚಿತ್ರಬೈಲು, ದರ್ಖಾಸು ಮನೆ, ನಿಂಜೂರು ಗ್ರಾಮ, ಕಾರ್ಕಳ ಇವರ ತಾಯಿ ಅಪ್ಪಿ ಸಫಲಿಗ, (76) ರವರು ಕೃಷಿ ಕೆಲಸ ಮಾಡಿಕೊಂಡಿದ್ದು ದಿನಾಂಕ 14/03/2022 ರಂದು ಸಂಜೆ 4:00 ಗಂಟೆಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ರಾತ್ರಿಯಾದರೂ ವಾಪಾಸು ಬಾರದೇ ಹುಡುಕಾಡಿದಾಗ ಮನೆಯ ಹತ್ತಿರದ  ಖಾಲಿ ಜಾಗದಲ್ಲಿ ಮೃತದೇಹ ಇದ್ದು ಅವರು ಸಂಜೆ 4:00 ಘಂಟೆಯಿಂದ ರಾತ್ರಿ 9:00 ಘಂಟೆಯ ಮದ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅಪ್ಪಿ ಸಫಲಿಗರವರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 09/2022 ಕಲಂ: 174 ಸಿಆರ್‌ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ.ಸುಮಿತ್ರಾ ಉಪಾಧ್ಯ (64) ಗಂಡ: ವಾಸುದೇವ ಉಪಾಧ್ಯ, ವಾಸ: ಸುವರ್ಣ ರಸೆಡೆನ್ಸಿ ಅಪಾರ್ಟ್‌ಮೆಂಟ್‌ ಬಳಿ, ಚಿತ್ರಪಾಡಿ ಗ್ರಾಮ ಬ್ರಹ್ಮಾವರ ಇವರು ದಿನಾಂಕ 15/03/2022 ರಂದು ಮಧ್ಯಾಹ್ನ 12 ಗಂಟೆಗೆ ಸಂಬಂಧಿಕರ ಮನೆಯಲ್ಲಿನ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆಂದು ಹೋದವರು, ಅಲ್ಲಿ ಊಟ ಮುಗಿಸಿಕೊಂಡು ಮಧ್ಯಾಹ್ನ ಸುಮಾರು 2 ಗಂಟೆಗೆ ವಾಪಾಸು ತಮ್ಮ ಮನೆಗೆಂದು ನಡೆದುಕೊಂಡು ಬರುತ್ತಿದ್ದು, ಆಗ ಅವರ ಹಿಂದಿನಿಂದ ರಸ್ತೆಯಲ್ಲಿ ಒಂದು ಬೈಕಿನಲ್ಲಿ ಇಬ್ಬರು ಅಪರಿಚಿತ ಸವಾರರು ಬಂದಿಳಿದಿದ್ದು, ಬಳಿಕ ಶ್ರೀಮತಿ.ಸುಮಿತ್ರಾ ಉಪಾಧ್ಯ ರವರು ಅಲ್ಲಿಂದ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಆ ಬೈಕಿನಲ್ಲಿದ್ದವರ ಪೈಕಿ ಹಿಂಬದಿ ಕುಳಿತವನು ಶ್ರೀಮತಿ.ಸುಮಿತ್ರಾ ಉಪಾಧ್ಯ ರವರನ್ನು ಅವರ ಮನೆಯವರೆಗೂ ಹಿಂಬಾಲಿಸುತ್ತಾ ಬಂದು ಮಧ್ಯಾಹ್ನ ಸುಮಾರು 2:15 ಗಂಟೆಗೆ ಶ್ರೀಮತಿ.ಸುಮಿತ್ರಾ ಉಪಾಧ್ಯ ರವರ ಮನೆಯ ಬಳಿ ಬಂದು ಅವರಲ್ಲಿ ಹಿಂದಿ ಭಾಷೆಯಲ್ಲಿ ಅಕ್ಕಪಕ್ಕದ ಜಾಗದ ಬಗ್ಗೆ ವಿಚಾರಿಸಿದ್ದು, ಆ ಸಮಯ ಆ ವ್ಯಕ್ತಿಯು ಏಕಾಏಕಿ ಶ್ರೀಮತಿ.ಸುಮಿತ್ರಾ ಉಪಾಧ್ಯ  ಇವರ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 1,25,000/- ಮೌಲ್ಯದ ಅಂದಾಜು 40 ಗ್ರಾಮ್ ತೂಕದ 2 ಎಳೆಯ ಮುಷ್ಠಿ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಆತನೊಂದಿಗೆ ಬಂದಿದ್ದ ಇನ್ನೋರ್ವನೊಂದಿಗೆ ಬೈಕಿನಲ್ಲಿ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2022  ಕಲಂ: 392 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.
  • ಕುಂದಾಪುರ: ದಿನಾಂಕ 15/03/2022 ರಂದು 14:00 ಗಂಟೆಗೆ ಫಿರ್ಯಾದಿದಾರರಾಧ ನಿರಂಜನ ಗೌಡ ಬಿ.ಎಸ್‌‌., ಪೊಲೀಸ್ ಉಪ ನಿರೀಕ್ಷಕರು, L&O. ಕುಂದಾಪುರ ಗ್ರಾಮಾಂತರ ಪೊಲೀಸ್ ಇವರು ಹಿಜಾಬ್‌‌‌ ತೀರ್ಪು ಸಂಬಂಧ ಇಲಾಖಾ ವಾಹನ KA-20 G-237 ನೇ ಯದರಲ್ಲಿ ಸಿಬ್ಬಂದಿ ಯವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌‌ ಕರ್ತವ್ಯದಲ್ಲಿರುವಾಗ ಕಾವ್ರಾಡಿ ಗ್ರಾಮದ ಕಂಡ್ಲೂರು ಪೇಟೆಯ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮೊಬೈಲ್‌ ಫೋನ್‌‌‌‌‌ನಲ್ಲಿ ಹಿಜಾಬ್‌ ವಿವಾದ ಸಂಬಂಧ ತೀರ್ಪು ವೀಕ್ಷಿಸುವ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆಸಿ ಏರುದನಿಯಲ್ಲಿ ಮಾತನಾಡುತ್ತ, ಪರಸ್ಪರ ಕೈ ಕೈ ಮಿಲಾಯಿಸುತ್ತ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುವ ರೀತಿಯಲ್ಲಿ ಜಗಳವಾಡುತ್ತಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2022  ಕಲಂ: 160 ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಪಾಂಡುರಂಗ ಶೆಟ್ಟಿ (67) ತಂದೆ,ಶಿವಣ್ಣ ಶೆಟ್ಟಿ ವಾಸ:ಬೆಣಗಲ್  ಬೆಟ್ಟು ಹಿಲಿಯಾಣ ಗ್ರಾಮ ಬ್ರಹ್ಮಾವರ ಇವರು ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಸರ್ವೆ ನಂ. 79-1 ರಲ್ಲಿ  ಸುಮಾರು 1.65 ಎಕ್ರೆ ಜಾಗವನ್ನು 1975 ನೇ ಇಸ್ಸಿಯಿಂದ ಕೃಷಿ ಮಾಡಿಕೊಂಡು ಇರುತ್ತಾರೆ, ಈ  ಜಾಗಕ್ಕೆ ಕಲ್ಲು ಕಂಬ ಹಾಕಿ ತಂತಿ ಬೇಲಿಯನ್ನು ಮಾಡಿರುತ್ತಾರೆ, ಈ ಜಾಗವನ್ನು  ಆರೋಪಿಗಳು  ವಶಪಡಿಸಿಕೊಳ್ಳುವ   ಹುನ್ನಾರ ಮಾಡಿದ್ದು, ಈ ಬಗ್ಗೆ ಪಾಂಡುರಂಗ ಶೆಟ್ಟಿರವರು ಮಾನ್ಯ ಕುಂದಾಪುರದ ಸಿವಿಲ್ ನ್ಯಾಯಾಲಯದಲ್ಲಿ  ಓಎಸ್ ನಂ 118/2022 ರಂತೆ ದಾವೆ ದಾಖಲು ಮಾಡಿರುತ್ತಾರೆ. ಹೀಗಿರುತ್ತಾ ಆರೋಪಿಗಳು ದಿನಾಂಕ  15/03/2022 ರಂದು 12:00 ಘಂಟೆ  ಸುಮಾರಿಗೆ ಸಮಾನ  ಉದ್ದೇಶದಿಂದ ಕೆಎ-20 ಎಮ್‌‌ಸಿ-8110  ಹಾಗೂ  ಕೆಎ-14  ಝಡ್-6221  ನೇ  ನಂಬ್ರದ ಕಾರಿನಲ್ಲಿ ಬಂದು   ಸದ್ರಿ  ತಂತಿ ಬೇಲಿ   ಹಾಕಿದ  ಕ್ರಮ  ಪ್ರವೇಶ  ಮಾಡಿ  ಪಾಂಡುರಂಗ ಶೆಟ್ಟಿ ರವರು ಹಾಕಿದ ತಂತಿ ಬೇಲಿ ಹಾಗೂ ಶಿಲೆ ಕಂಬದ ಬೇಲಿಯನ್ನು ಸಂಪೂರ್ಣ ನಾಶ  ಮಾಡಿರುತ್ತಾರೆ,  ಈ ಬಗ್ಗೆ ಪಾಂಡುರಂಗ ಶೆಟ್ಟಿ ರವರು ಹಾಗೂ ಅವರ  ಹೆಂಡತಿ ಶ್ರೀಮತಿ ರತಿ ಶೆಟ್ಟಿ ಅವರು ಶಿಲೆ ಕಂಬ ಯಾಕೇ ಮುರಿಯುತ್ತಿರಿ ಎಂದು ಕೇಳಿದಾಗ ಆರೋಪಿಗಳು ಅವರ ಕೈಹಿಡಿದು ಎಳೆದು ನೆಲಕ್ಕೆ ದೂಡಿ ಅಲ್ಲದೆ ಶ್ರೀಮತಿ ರತಿ ಶೆಡ್ತಿ ಇವರ ನ್ನು ನೆಲದ  ಮೇಲೆ ದೂಡಿಹಾಕಿ ಕಾಲಿನಿಂದ ಒದ್ದು ಕೈಯಿಂದ ದೂಡಿ ಹಲ್ಲೆ ಮಾಡಿ ಮಾನಹಾನಿ ಮಾಡಿರುತ್ತಾರೆ, ಈ ಸಮಯ ಬೊಬ್ಬೆ ಹಾಕಿದಾಗ ಪಾಂಡುರಂಗ ಶೆಟ್ಟಿ ಇವರ ಮಗ ಹಾಗೂ  ನೆರೆಕೆರೆ ಯವರು ಓಡಿ ಬರುವುದನ್ನು ನೋಡಿದ ಅವರು ಮನೋಜ್ ಇವನಿಗೆ ಕೈಯಿಂದ ಹೊಡೆದು ಈ ಜಾಗ ನಿಮ್ಮ ಅಪ್ಪನದಲ್ಲಾ ಎಂದು ಅವಾಚ್ಯಶಬ್ದದಿಂದ  ಬೈದು  ಕಂಪ್ಲೇಟ್ ಕೊಟ್ಟರೆ,   ನಿಮ್ಮನ್ನುಕೊಂದು  ಬಿಡುತ್ತೇನೆ ಎಂದು  ಜೀವ ಬೆದರಿಕೆ ಹಾಕಿರುತ್ತಾರೆ ಗಾಯಗೊಂಡ ರತಿ ಸೆಟ್ಟಿ ಇವರು  ಚಿಕಿತ್ಸೆಯ  ಬಗ್ಗೆ ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2022 ಕಲಂ: 143, 147,447.504.506.354.427 323 ಜೊತೆಗೆ  149 ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.  

ಇತ್ತೀಚಿನ ನವೀಕರಣ​ : 16-03-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080