ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಗಂಗೊಳ್ಳಿ : ದಿನಾಂಕ 15/03/2021 ರಂದು ಪಿರ್ಯಾದಿದಾರರಾದ ವಿಠಲ ದೇವಾಡಿಗ (43), ತಂದೆ: ನಾಗ ದೇವಾಡಿಗ, ವಾಸ: ಸಂಕಜ್ಜಿಮನೆ, ತೊಂಡೆಮಕ್ಕಿ, ಬೈಂದೂರು ಗ್ರಾಮ, ಬೈಂದೂರು ತಾಲೂಕು ಇವರ ಬಾವ ಬಸವ ದೇವಾಡಿಗ ಎಂಬುವವರು KA-20-EN-8382 ನೇ TVS ವಿಕ್ಟರ್‌ ಮೋಟಾರ್‌ಸೈಕಲನ್ನು ಸವಾರಿ ಮಾಡಿಕೊಂಡು ಕುಂದಾಪುರದ ನೇರಂಬಳ್ಳಿಯಿಂದ ಬೈಂದೂರಿಗೆ ಎನ್‌.ಹೆಚ್‌ ರಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ 11:30  ಗಂಟೆಗೆ ಮೋಟಾರ್‌ಸೈಕಲ್ ಮೋವಾಡಿ ಕ್ರಾಸ್‌ನಿಂದ ಸ್ವಲ್ಪ ಮುಂದೆ ತಲುಪುವಾಗ ಬೈಂದೂರು ಕಡೆಯಿಂದ ಕುಂದಾಪುರದ ಕಡೆಗೆ KA-20-MA-8939ನೇ ಕಾರನ್ನು ಅದರ ಚಾಲಕ ಸಚಿನ್‌ ಕುಮಾರ ಆರ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದ ಡಿವೈಡರ್‌ಗೆ ಢಿಕ್ಕಿ ಹೊಡೆದು ಕಾರು ಡಿವೈಡರ್‌ ಮೇಲೆ ಹತ್ತಿ ರಸ್ತೆಗೆ ಉರುಳಿಕೊಂಡು ಬಂದು ಬಸವ ದೇವಾಡಿಗ ರವರ ಮೋಟಾರ್‌ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಬಸವ ದೇವಾಡಿಗ ರವರು ತೀವೃ ತರದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 15/03/2021 ರಂದು ರಾತ್ರಿ 09:30 ಗಂಟೆಗೆ ಪಿರ್ಯಾದಿದಾರರಾದ ಶೇಖರ ಆಚಾರ್ಯ (42), ತಂದೆ: ಗೋವಿಂದ ಆಚಾರ್ಯ, ವಾಸ: ಮನೆ ನಂಬ್ರ 5-130, ಮಾಯಾಗುಂಡಿ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರು  ಪುತ್ತೂರು ಗ್ರಾಮದ ನಿಟ್ಟೂರು ಉಡುಪಿ ತಡ್ಕಾ ಹೋಟೆಲ್‌ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಕರಾವಳಿ ಜಂಕ್ಷನ್‌ಕಡೆಯಿಂದ ಸಂತೆಕಟ್ಟೆ ಕಡೆಗೆ ಟ್ಯಾಂಕರ್‌ ನಂಬ್ರ TN-04-AL-2795 ನ್ನು ಅದರ ಚಾಲಕ ಚೆನ್ನಯ್ಯ ಎಂಬುವವರು  ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಬಲಕಾಲು ಪಾದಕ್ಕೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  


ಇತರ ಪ್ರಕರಣ

 • ಕುಂದಾಪುರ: ಕುಂದಾಪುರದ  ಗೋಲ್ಡ್ ಜ್ಯುವೆಲ್ಲರಿಯ ಸಂಸ್ಥೆಯ ಮಾಲಕ  ಮತ್ತು  ನೌಕರರಾದ  ಆಪಾದಿತರಾದ 1.ಕಂಡ್ಲೂರಿನ ಮೊಹಮ್ಮದ್ ಇಫ್ತಿಕಾರ್ ಜುಮ್ಮಿ, 2.ಭಟ್ಕಳದ ಮೊಮಿನ್ ಯೂಸೂಫ್ ಆಲಿ, 3.ಮೊಳಹಳ್ಳಿ ಗಣೇಶ್ ಶೆಟ್ಟಿ, 4.ಭಟ್ಕಳದ ಖತೀಬ್ ಅಬ್ದುಲ್ ರೆಹಮಾನ್, 5.ಬಿ.ಎಮ್ಜಾಫರ್, 6.ಫರಾಜ್, 7.ಆಸೀಫ್, ಕೆ, 8.ನಜೀರ್ ಅಹಮ್ಮದ್, 9.ಮೊಹಮ್ಮದ್ ಮುಶ್ರಫ್, 10.ಮೊಹಮ್ಮದ್ ಆಸೀಫ್, 11.ಮೊಹಮ್ಮದ್ ನೂರೈಸ್, 12. ಎಸ್ಜೀನತ್,13.ಬೆಟ್ಟೆ ಬಾಷಾ,14.ಬೆಟ್ಟೆ ಅಕ್ಬರ್ 15.ಬಶೀರ್ ಅಹ್ಮದ್,16.ಕೆ ಮುನೀರ್, 7.ಅರ್ಫಾದ್ ಮೊಹಮ್ಮದ್, 18. ಮೊಹಮ್ಮದ್ ಪಾಮೀಝಾ, 19. ಸರ್ದಾರ್ ನವೀದ್ ಅಕ್ತರ್, 20.ನೌಶಾದ್,  21.ಮೊಹಮ್ಮದ್ ಫಾರೀಸ್,  22. ಬಿ. ಭಾನು, 23. ನಸೀಮಾ , 24.ವಾಹೀದಾ ಇವರು  ನಗದು  ಮತ್ತು  ಚಿನ್ನಾಭರಣದ ಸ್ಕೀಮ್  ಮೂಲಕ 1 ಲಕ್ಷ ರೂಪಾಯಿ  ಚಿನ್ನಾಭರಣ ಹೂಡಿಕೆ ಮಾಡಿದರೆ  ತಿಂಗಳಿಗೆ  ಚಿನ್ನದ  ಮಾರುಕಟ್ಟೆ  ದರದ  ಮೇಲೆ ರೂಪಾಯಿ 2000/- ಯಿಂದ 2500/- ರಂತೆ  ಹಾಗೂ ನಗದು  1 ಲಕ್ಷ ನಗದು  ಹೂಡಿಕೆ ಮಾಡಿದರೆ ತಿಂಗಳಿಗೆ ರೂಪಾಯಿ 2000/- ರಿಂದ 3000/- ನಂತೆ ಲಾಭಾಂಶವನ್ನು ನೀಡುವುದಾಗಿ ಸಂಸ್ಥೆಯವರು ಪಿರ್ಯಾದಿದಾರರಾದ  ಇರ್ಷಾದ್  ಗುಲ್ಜಾರ್ (54), ತಂದೆ: ದಿವಂಗತ  ಅಬ್ದುಲ್  ಹಮೀದ್,     ವಾಸ:  ದತ್ತಾತ್ರೇಯ  ಪ್ಲ್ಯಾಟ್  ನಂಬ್ರ 401 ಎ ಕಸಬಾ  ಗ್ರಾಮ  ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರನ್ನು ಒಳಸಂಚು ಮಾಡಿ ನಂಬಿಸಿದ್ದು ಅದರಂತೆ ಪಿರ್ಯಾದಿದಾರರು ನಗದು ಹಣ ರೂಪಾಯಿ 6,00,000/- ಹಾಗೂ 31 ಗ್ರಾಂ ಚಿನ್ನ ಒಟ್ಟು ರೂಪಾಯಿ 7,24,000/- ಹಣವನ್ನು ಸ್ಕೀಮ್ ಮೂಲಕ  ಹೂಡಿಕೆ ಮಾಡಿಕೊಂಡು ಲಾಭಾಂಶ ಮತ್ತು ಹೂಡಿಕೆ ಮಾಡಿದ ಹಣ ಮತ್ತು ಚಿನ್ನಾಭರಣವನ್ನು ವಾಪಾಸ್ಸು  ನೀಡದೇ  ವಂಚಿಸಿ ಮೋಸ  ಮಾಡಿದ್ದು  ಅಲ್ಲದೇ ಇತರ  ಗ್ರಾಹಕರಿಗೂ  ಇದೇ  ರೀತಿ ನಂಬಿಸಿ  ಒಟ್ಟು 1,419.188 ಗ್ರಾಂ ಚಿನ್ನಾಭರಣ ( ಮೌಲ್ಯ 5676,000/- ರೂಪಾಯಿ) ನಗದು ರೂಪಾಯಿ 35,88,000/- ಒಟ್ಟು ಮೊತ್ತ ರೂಪಾಯಿ 92,64,000/- ಹೂಡಿಕೆ ಮಾಡಿಕೊಂಡಿದ್ದು ಅವರಿಗೂ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ಮೋಸ  ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 406, 420, 120(b) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
   

ಇತ್ತೀಚಿನ ನವೀಕರಣ​ : 16-03-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080