ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾಧ ಉಮೇಶ ಸುವರ್ಣ (53) ತಂದೆ: ಸೂರಪ್ಪ ಪೂಜಾರಿ ವಾಸ: ಸುವರ್ಣ ದೀಪ  ಸಾಯಿ ಬಾಬಾ ಮಾರ್ಗ ಕೊಡವೂರು ಇವರು ದಿನಾಂಕ 09/03/2021 ರಂದು ತನ್ನ KA-20-K-6095 ನೇ  ಮೋಟಾರು ಸೈಕಲ್ ನಲ್ಲಿ ಮಲ್ಪೆ ಬಂದರಿನ ಬಳಿ ಬೋಟ್ ಮೆಕಾನಿಕ್ ಶೆಟ್ ನಿಂದ ಸ್ಪೇರ್ ಪಾಟ್ಸ್ ಅಂಗಡಿ   ಮಲ್ಪೆಗೆ ಹೋಗುತ್ತಿರುವಾಗ ಮಧ್ಯಾಹ್ನ 2:30 ಗಂಟೆಗೆ ಟೈಗರ್ ವಾಸು ಕ್ಯಾಂಟಿನ ಬಳಿ ಧಕ್ಕೆಯ ತಿರುವಿನ ಬಳಿ ತಲುಪುವಾಗ ಮಲ್ಪೆ ಬೀಚ್ ಕಡೆಯಿಂದ ವಿರುದ್ದ ದಿಕ್ಕಿನಲ್ಲಿ KA-12–A-7278 ನೇ ನೀರು ಲಾರಿ ಚಾಲಕನು  ಲಾರಿಯನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ದಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೆ ಧಕ್ಕೆಯ ಕಡೆಗೆ ಒಮ್ಮಲೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲ್  ಗೆ ಢಿಕ್ಕಿ ಹೊಡೆದು ಕಚ್ಚಾ ರಸ್ತೆಗೆ ಬಿದ್ದು  ಅವರ ಎಡಎದೆಯ ಪಕ್ಕೆಲುಬು ಮೂಳೆ ಮುರಿತ ವಾಗಿದ್ದು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ದಿನಾಂಕ 11/03/2021 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಲಾರಿಯ ಮಾಲಕರು ಆಸ್ಪತ್ರೆಯ ಖರ್ಚನ್ನು ನೀಡುವುದಾಗಿ ತಿಳಿಸಿದ್ದು ಈವರೆಗೂ ಹಣ ನೀಡದ ಕಾರಣ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: 279, 338 ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕುಂದಾಫುರ: ಪಿರ್ಯಾದಿದಾರರಾದ ವೆಂಕಟೇಶ (31) ತಂದೆ: ಚಂದಮರಮ್ ವಾಸ: C/O ನಾಗ ಪುತ್ರನ್, ಬರೆಕಟ್ಟು ರಸ್ತೆ, ಕುಂದೇಶ್ವರ ದೇವಸ್ಥಾನ ಹಿಂಭಾಗ, ವಡೇರಹೋಬಳಿ ಗ್ರಾಮ, ಕುಂದಾಪುರ ಇವರು ವಡೇರಹೋಬಳಿ ಗ್ರಾಮದ ಬರೆಕಟ್ಟು ರಸ್ತೆಯ ನಾಗ ಪುತ್ರನ್ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಸದ್ರಿಯವರಿಗೆ laxmi civil Engeneering Pvt Ltd ಕಂಪೆನಿಯವರು ದೈನಂದಿನ ಕೆಲಸ ನಿರ್ವಹಿಸಲು KA-53-ET-3396 ಹೀರೋ ಡಿಲಕ್ಸ್ ಬೈಕನ್ನು ನೀಡಿರುವುದಾಗಿದೆ. ವೆಂಕಟೇಶ ರವರು ದಿನಾಂಕ 15/03/2021 ರಂದು 22:00 ಗಂಟೆಗೆ KA-53-ET-3396 ಹೀರೋ ಡಿಲಕ್ಸ್ ಬೈಕನ್ನು ನಾಗ ಪುತ್ರನ್ ರವರ ಮನೆ ಮುಂದೆ ನಿಲ್ಲಿಸಿದ್ದು, ದಿನಾಂಕ 16/03/2021 ರಂದು ಬೆಳಗ್ಗೆ 08:00 ಗಂಟೆಗೆ ನೋಡಲಾಗಿ  ವೆಂಕಟೇಶ ರವರು ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇಲ್ಲದೇ ಇದ್ದು ಸದ್ರಿ ಬೈಕನ್ನು ಯಾರೋ ಕಳ್ಳರು ದಿನಾಂಕ 15/03/2021 ರಂದು 22:00 ಗಂಟೆಯಿಂದ ದಿನಾಂಕ 16/03/2021 ರಂದು 08:00 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕಿನ ಮೌಲ್ಯ 25898/- ರೂಪಾಯಿಗಳಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾಧ ರಾಜು(38), ತಂದೆ: ದಿ. ಚಂದು, ವಾಸ: ರಾಜೀವನಗರ, 52 ನೇ ಹೇರೂರು ಗ್ರಾಮ ಬ್ರಹ್ಮಾವರ ಇವರ ಮನೆಯ ಪೂರ್ವಕ್ಕೆ ಇರುವ ಕುಟುಂಬದವರ ಶ್ರೀ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ರಾಜು ರವರು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ದೀಪಹಚ್ಚಿ ರಾತ್ರಿ ಸಮಯ ಬಾಗಿಲಿಗೆ ಬೀಗ ಹಾಕುತ್ತಿದ್ದು, ಎಂದಿನಂತೆ ದಿನಾಂಕ 15/03/2021 ರಂದು ಸಂಜೆ 7:00 ಗಂಟೆಗೆ ದೈವಸ್ಥಾನದಲ್ಲಿ ದೀಪ ಹಚ್ಚಿ  ಬಾಗಿಲು ಹಾಕಿ ಬೀಗ ಹಾಕಿ ಹೋಗಿ, ಮರು ದಿನ ದಿನಾಂಕ 16/03/2021 ರಂದು ಬೆಳಿಗ್ಗೆ 8:00 ಗಂಟೆಗೆ ದೀಪ ಹಚ್ಚಲು ದೈವಸ್ಥಾನಕ್ಕೆ ಹೋಗಿದ್ದಾಗ ಯಾರೋ ಕಳ್ಳರು ದೈವಸ್ಥಾನದ ಬಾಗಿಲಿನ ಬೀಗವನ್ನು ಆಯುಧದಿಂದ ಮೀಟಿ ಮುರಿದು ಒಳಪ್ರವೇಶಿಸಿ ವಿಗ್ರಹದ ಬಳಿ ಇರುವ ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾಣಿಕೆ ಹುಂಡಿಯಲ್ಲಿ ಸುಮಾರು ರೂಪಾಯಿ 4,000/- ಇರಬಹುದುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 454, 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ದಿನಾಂಕ 15/03/2021 ರಂದು ಪಿರ್ಯಾದಿದಾರರಾದ ಉದಯ ಮೂಲ್ಯ (44) ತಂದೆ : ದಿ. ಅಣ್ಣು ಮೂಲ್ಯ ವಾಸ : ಪಂಜಿಮಾರು ದರ್ಖಾಸ್ ಹೌಸ್ ಪಡುಬೆಳ್ಳೆ ಅಂಚೆ ಶಿರ್ವಾ ಇವರು ತನ್ನ  ತಮ್ಮ ಸಂತೋಷ ಮತ್ತು ಅಕ್ಕನ ಮಗ ಸುಮಂತರವರೊಂದಿಗೆ ಉದ್ಯಾವರ ಗ್ರಾಮದ ಗೋವಿಂದ ನಗರದ ಪಿತ್ರೋಡಿಯ ಪಾಪನಾಶಿನಿ ಹೊಳೆಯ ಸಮೀಪ ಕಪ್ಪೆ ಚಿಪ್ಪು ತೆಗೆಯುವ ಎಂದು ಹೋಗಿದ್ದು, ಉದಯ ಮೂಲ್ಯ ರವರು ದಂಡೆಯ ಮೇಲೆ ನಿಂತಿದ್ದು, ಉದಯ ಮೂಲ್ಯ ಇವರ ತಮ್ಮ ಸಂತೋಷ ಮತ್ತು ಅಕ್ಕನ ಮಗ ಸುಮಂತನು ಮಧ್ಯಾಹ್ನ 2:30 ಗಂಟೆಯ ಸಮಯಕ್ಕೆ ಹೊಳೆಗೆ ಇಳಿದು ಕಪ್ಪೆಚಿಪ್ಪು ತೆಗೆಯುವಾಗ ಆಕಸ್ಮಿಕವಾಗಿ ನೀರು ಹೆಚ್ಚಾಗಿ ಇಬ್ಬರು ಮುಳುಗುವ ಸ್ಥಿತಿಯಲ್ಲಿದ್ದು, ಸಂತೋಷನು ಈಜಾಡಿಕೊಂಡು ದಡಕ್ಕೆ ಬಂದಿದ್ದು ಸಮಂತನು ನೀರಿನ ರಭಸಕ್ಕೆ ಹೊಳೆಯಲ್ಲಿ ಮುಳುಗಿ  ಹೋಗಿ ಕಣ್ಮರೆಯಾಗಿದ್ದು, ನಾವೆಲ್ಲರೂ ಸೇರಿ  ಹುಡುಕಾಡಿದ್ದರು ಆತನ ಪತ್ತೆಯಾಗಿರುವುದಿಲ್ಲ. ದಿನಾಂಕ 16/03/2021 ರಂದು ಬೆಳಗ್ಗೆ 07:30 ಗಂಟೆಗೆ ಹೊಳೆಯ ನೀರಿನಲ್ಲಿ ಉದಯ ಮೂಲ್ಯ ಇವರು ಊರಿನವರೊಂದಿಗೆ ಸೇರಿ ಹೊಳೆಯಲ್ಲಿ ಹುಡುಕಾಡುವಾಗ ಸುಮಂತನ ಮೃತದೇಹ ಹೊಳೆಯಲ್ಲಿ ಸಿಕ್ಕಿದ್ದು, ಆತನ ತುಟಿಗೆ ಮೀನುಗಳು ತಿಂದಿರುವುದಾಗಿದೆ. ದಿನಾಂಕ 15/03/2021 ರಂದು ಮಧ್ಯಾಹ್ನ 2:30 ಗಂಟೆಗೆ ಉದ್ಯಾವರ ಪಾಪನಾಶಿನಿ ಎಂಬ ಹೊಳೆಯಲ್ಲಿ ಗೋವಿಂದ ನಗರ ಎಂಬಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೊದವನು ನೀರಿನ ರಭಸಕ್ಕೆ ಆಕಸ್ಮಿಕವಾಗಿ ಹೊಳೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ರಾಜೇಂದ್ರ ಪ್ರಭು (52) ತಂದೆ: ಬಾಬಣ್ಣ ಪ್ರಭು ವಾಸ : ಕುಂಜಾರ್ಗ, ಇನ್ನಂಜೆ ಇವರ ಸಂಬಂಧಿ ದೇವೆಂದ್ರ ಎನ್. ಪ್ರಭು (72) ಎಂಬವರು ಸುಮಾರು 15 ದಿನಗಳ ಹಿಂದೆ ರಾಜೇಂದ್ರ ಪ್ರಭು ರವರ ಮನೆಗೆ ಮುಂಬೈಯಿಂದ ಬಂದು, ರಾಜೇಂದ್ರ ಪ್ರಭು ರವರ ಮನೆಯಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ 15/03/2021 ರಂದು 00.10 ಗಂಟೆಗೆ ರಾತ್ರಿ ಮನೆಯಲ್ಲಿ ಮಲಗಿದವರಿಗೆ ಎದೆನೋವು ಬಂದು ಅವರನ್ನು ರಾಜೇಂದ್ರ ಪ್ರಭು ರವರು ಕೂಡಲೇ ಒಂದು ವಾಹನದಲ್ಲಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ ಅಲ್ಲಿನ ವೈದ್ಯರು 01.10 ಗಂಟೆಗೆ ದೇವೆಂದ್ರ ಪ್ರಭುರವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು. ದಿನಾಂಕ 16/03/2021 ರಂದು ಅವರ ಹೆಂಡತಿ ಮಕ್ಕಳು ಬಾಂಬೆಯಿಂದ ಬಂದು ಮೃತ ಶರೀರವನ್ನು ನೋಡಿರುತ್ತಾರೆ. ದೇವೆಂದ್ರ ಪ್ರಭು ರವರು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಅಥವಾ ಬೇರೆ ಯಾವುದೇ ಕಾಯಿಲೆಯಿಂದ ಮೃತ ಪಟ್ಟಿರುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-03-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080