ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರಜೇತ(23), ತಂದೆ: ಜಯರಾಮ ಶೆಟ್ಟಿ, ವಾಸ: ಮಾತೃಛಾಯಾ ಹೊಂಬಾಡಿ ಮೇಲ್ಮನೆ, ಹೊಂಬಾಡಿ-ಮಂಡಾಡಿ ಗ್ರಾಮ, ಕುಂದಾಪುರ ತಾಲೂಕು ಮತ್ತು ಗೆಳೆಯ ಮಂಜುನಾಥ ಕುಲಾಲ್ ರವರು ದಿನಾಂಕ 14/02/2023 ರಂದು ಬೆಳಗ್ಗಿನ ಜಾವ 00:30 ಗಂಟೆಗೆ ಅವರ ಮೋಟರ್ ಸೈಕಲ್ ನಲ್ಲಿ ಹಾಗೂ ಗೆಳೆಯರಾದ ಸಂಜಿತ್ ಮತ್ತು ಮಂಜುನಾಥ ರವರು KA-20-EJ-6483 ನೇ ಮೋಟಾರ್ ಸೈಕಲ್ ನಲ್ಲಿ ಮಂದಾರ್ತಿ ಜಾತ್ರೆಗೆ ಸೌಡದಿಂದ ಬಿದ್ಕಲಕಟ್ಟೆ-ಸೈಬ್ರಕಟ್ಟೆ  ಮಾರ್ಗವಾಗಿ ಹೋಗುತ್ತಿರುವಾಗ ಎದುರಿನಿಂದ KA-47-J-6163 ನೇ ಮೋಟರ್ ಸೈಕಲ್ ಅನ್ನು  ಅದರ ಸವಾರ ಸತೀಶ್  ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ತಿರುವಿನಲ್ಲಿ ನಿಯಂತ್ರಣ ಸಿಗದೆ ತೀರಾ ಬಲಬದಿಗೆ ಬಂದು ಕ್ರಮದಂತೆ ಹೋಗುತ್ತಿದ್ದ   ಸಂಜಿತ್ ಮತ್ತು ಮಂಜುನಾಥ ರವರ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದು ಸವಾರರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಂಜೀತ್ ತಲೆಗೆ ತೀವ್ರ ತರಹದ ಒಳ  ಜಖಂಗೊಂಡಿರುತ್ತದೆ,  ಮಂಜುನಾಥನಿಗೆ ತಲೆಗೆ ಗುದ್ದಿದ ಗಾಯ, ಎಡಕೈ ಮೂಳೆ ಮುರಿತದ ತೀವ್ರ ತರಹದ ಗಾಯ, ಕಿವಿಯ ಹಿಂಬದಿ ರಕ್ತ ಗಾಯ ಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 15/02/2023 ರಂದು ಪಿರ್ಯಾದಿದಾರರಾದ  ಗಂಗೋಳ್ಳಿ ಮಹಮ್ಮದ್‌ ಸತ್ತಾರ್‌ (53), ತಂದೆ: ಅಬ್ದುಲ್‌ ರೆಹಮನ್‌, ವಾಸ: ಬೃತುಲ್‌ ಫಹಿಮಾ, ಕೋಯನಗರ, ನಾವುಂದ, ಬೈಂದೂರು ತಾಲೂಕು ಇವರು ಕಾರಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ ಮಧ್ಯಾಹ್ನ 1:10 ಗಂಟೆಗೆ ಉಪ್ಪೂರು ಗ್ರಾಮದ, ಉಪ್ಪೂರು ರಿಕ್ಷಾ ನಿಲ್ದಾಣದ ಬಳಿ ತಲುಪುವಾಗ ಅವರ ಮುಂಭಾಗದಲ್ಲಿ ಬ್ರಹ್ಮಾವರ ಕಡೆಗೆ ಅವರ ಸಂಬಂಧಿ ಸಲ್ಮಾನ್‌ ಫಾರಿನ್‌ ರವರು KA-20-ET-1336 ನೇ ಸ್ಕೂಟರ್‌ ಅನ್ನು ಸವಾರಿ ಮಾಡುತ್ತಿದ್ದು, ಅದೇ ಸಮಯ ಸಲ್ಮಾನ್‌ ಫಾರಿನ್‌ ರವರ ಮುಂಭಾಗದಲ್ಲಿ ಬ್ರಹ್ಮಾವರ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ KA‌-20-AB-3691 ನೇ ಟೆಂಪೊವನ್ನು ಚಲಾಯಿಸುತ್ತಿದ್ದ ಆರೋಪಿ ಶರಣ್‌ ಒಮ್ಮೇಲೆ ಟೆಂಪೊವನ್ನು ರಸ್ತೆಯ ಎಡಕ್ಕೆ ತಿರುಗಿಸಿದ ಕಾರಣ ಟೆಂಪೊ ಸಲ್ಮಾನ್‌ ಫಾರಿನ್‌ ರವರ ಸ್ಕೂಟರ್‌ ಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಸಲ್ಮಾನ್‌ ಫಾರಿನ್‌ ರವರು ಸ್ಕೂಟರ್‌ ಸಮೇತ  ರಸ್ತೆಗೆ ಬಿದ್ದು,  ಅವರ ಎಡಕಾಲಿನ ಮೊನಗಂಟಿನ ಭಾಗಕ್ಕೆ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023 : ಕಲಂ 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 15/02/2023  ರಂದು ಸಂಜೆ 4:30 ಗಂಟೆಗೆ, ಕುಂದಾಪುರ  ತಾಲೂಕಿನ,  ಕೊಟೇಶ್ವರ ಗ್ರಾಮದ ಅಂಕದಕಟ್ಟೆ ಮಲ್ಲಣಹಿತ್ಲು ಕ್ರಾಸ್‌ ಬಳಿ, ಪಶ್ಚಿಮ ಬದಿಯ NH 66 ಸರ್ವಿಸ್‌ ರಸ್ತೆಯಲ್ಲಿ, ಆಪಾದಿತ ಕೆ. ಚಂದ್ರಶೇಖರ ಶೆಟ್ಟಿ  KA-20-MC-9874ನೇ ಕಾರನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಹೋಗಿ, ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ರಸ್ತೆಯ ಎಡಬದಿಯಲ್ಲಿ ರೋನಾಲ್ಡ್‌ ಡಿಸೋಜಾ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ  KA-20-ET-8670ನೇ ಸ್ಕೂಟರ್‌‌ಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ರೋನಾಲ್ಡ್‌ ಡಿಸೋಜಾರವರ  ಬಲಕಾಲಿಗೆ ಒಳಜಖಂ ಹಾಗೂ ರಕ್ತಗಾಯವಾಗಿದ್ದು,  ಹಾಗೂ ಮೈ ಕೈಗೆ ತರಚಿದ ಗಾಯವಾಗಿ ಕೊಟೇಶ್ವರ  ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು ಪಡೆದು, ಹೆಚ್ಚಿನ  ಚಿಕಿತ್ಸೆ  ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸಾವಿತ್ರಿ ಬಾಬು ನಾಯ್ಕ್ (35),  ಗಂಡ : ಬಾಬು ನಾಯ್ಕ್, ವಾಸ : ಮಣಿಗಾರ ಮನೆ, ಹೊನ್ನೆಗದ್ದೆ ಹೆಬಳೆ, ಭಟ್ಕಳ ತಾಲ್ಲೂಕು ಉ.ಕ. ಜಿಲ್ಲೆ ಇವರು ತನ್ನ ಅಕ್ಕ  ಹಾಗೂ ಸಹೋದರ ರವರೊಂದಿಗೆ ದಿನಾಂಕ 15/02/2023 ರಂದು KA-01-F-4900 ನೇ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಭಟ್ಕಳದಿಂದ ಬೆಳಗ್ಗೆ 09:00 ಉಡುಪಿಗೆ ಬಂದು ಇಳಿದಿದ್ದು, ಅವರ ಸಹೋದರ ಸಂಬಂಧಿ ಮಾಸ್ತಪ್ಪ ಹೆಚ್. ನಾಯ್ಕ್, ಇವರು ಪ್ರಯಾಣಿಸಿದ ಬಸ್ಸಿನಲ್ಲಿ ಪರ್ಸ್‌ ಕಳೆದುಕೊಂಡಿದ್ದು, ಅವರು ಪ್ರಯಾಣಿಸಿದ ಬಸ್ಸು ಮಂಗಳೂರು ಕಡೆಗೆ ಮುಂದಕ್ಕೆ ಹೊರಟಿದ್ದು, ಕೂಡಲೇ ಸದಾಶಿವ ಪೂಜಾರಿಯವರ KA-20-D-5489 ನೇ ಕಾರನ್ನು ಬಾಡಿಗೆ ಮಾಡಿಕೊಂಡು ಮೂರು ಜನ ಕಾರಿನಲ್ಲಿ ಕುಳಿತುಕೊಂಡು ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ  ಬಸ್ಸನ್ನು ಹಿಂಬಾಲಿಸಿಕೊಂಡು ಬಂದು ಬೆಳಗ್ಗೆ 09:15 ಗಂಟೆಗೆ ಊಳಿಯಾರಗೋಳಿ ಗ್ರಾಮದ ಕೋತ್ತಲಕಟ್ಟೆ ಬಳಿ ತಲುಪುತ್ತಿದ್ದಂತೆ, ಕಾರಿನ ಚಾಲಕ ಬಸ್ಸಿನ ಮುಂದೆ ಬಂದು, ಬಸ್ಸಿನ ಚಾಲಕನಿಗೆ ಕಾರಿನ ಚಾಲಕ ನಿಲ್ಲಿಸುವ ಸೂಚನೆಯನ್ನು ನೀಡಿ ತನ್ನ ಕಾರನ್ನು ರಸ್ತೆಯ ಬದಿಗೆ ನಿಲ್ಲಿಸಿದ್ದು, ಇದನ್ನು ಗಮನಿಸದ ಬಸ್ಸಿನ ಚಾಲಕ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ  ಮಾಸ್ತಪ್ಪ ಹೆಚ್.ನಾಯ್ಕ್ ರವರಿಗೆ ಮುಖಕ್ಕೆ ಬಲವಾದ ಏಟು ಬಿದ್ದು, ಮುಖಕ್ಕೆ ಮೂಗಿಗೆ ಗಾಯವಾಗಿ ಹಲ್ಲುಗಳು ಉದುರಿ ಹೋಗಿದ್ದು ಹಾಗೂ ಕಾರಿನ ಹಿಂಭಾಗ, ಬಸ್ಸಿನ ಮುಂಬದಿಯ ಎಡಭಾಗ ಜಖಂಗೊಂಡಿರುತ್ತದೆ. ಗಾಯಗೊಂಡ ಮಾಸ್ತಪ್ಪ ಹೆಚ್.ನಾಯ್ಕ್ ರವರನ್ನು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ಅಲ್ಲಿನ  ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ನಿರ್ಮಲಾ ಪ್ರಭು, (75) ಎಂಬವರು ಸುಮಾರು 35 ವರ್ಷಗಳಿಂದ ಕಾರ್ಕಳ ತಾಲೂಕು ಕಸಬಾ ಗ್ರಾಮದ ತಾಲೂಕು ಆಫೀಸ್ ಜಂಕ್ಷನ್ ಬಳಿ ಒಬ್ಬರೇ ವಾಸವಾಗಿದ್ದು ,ಅವರು ಸುಮಾರು 15 ದಿನಗಳಿಂದ ಮನೆಯಿಂದ ಹೊರಗೆ ಬಾರದೆ ಇದ್ದುದರಿಂದ ಅವರ ಸಂಬಂದಿವಸಂತ ಫೈ  ಎಂಬವರು ದಿನಾಂಕ 15/02/2023 ರಂದು ಬಂದು ನೋಡಿದಾಗ ಮೃತರು ಮನೆಯ ಬೆಡ್ ರೂಮ್ ನಲ್ಲಿ ಮಂಚದ ಕೆಳಗೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು ಅವರು ವಯೋಸಹಜ ಕಾರಣದಿಂದ ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದು ಅವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ವಸಂತ ಪೈ, (54) ತಂದೆ: ದಿ. ವಿಠ್ಠಲ ಪೈ , ವಾಸ: ಸ್ಥಾನದ ಬಾಕ್ಯಾರು ಮನೆ ಇರ್ವತ್ತೂರು ಗ್ರಾಮ,ಕಾರ್ಕಳ ತಾಲೂಕು ಇವರು ನೀಡದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ  ಶ್ರೀಮತಿ ಜೇನುಕುರುಬರ ನಂದಿನಿ ಪ್ರಾಯ: 36 ವರ್ಷ ಗಂಡ: ಸುಬ್ರಹ್ಮಣ್ಯ  ವಾಸ: C/O ಐಮುಡಿಯಂಡ  ರಮೇಶರವರ ಬಾಬ್ತು ಕಾಫಿ ತೋಟದ ಲೈನ್ ಮನೆ, ಕೋಟೆ ಫಾಲ್ಸ್ ಹಟ್ಟಿ ಹೊಳೆ, ಸೋಮವಾರ ಪೇಟೆ   ಕೊಡಗು ಇವರ  ತಾಯಿಯಾದ ಗೌರಿ (70) ಇವರು ದಿನಾಂಕ  04/12/2022 ರಿಂದ ಮಣಿಪಾಲದ Old Valley ಪ್ಲಾಟ ನಂ 282 ರಲ್ಲಿ ಮನೆ ಕೆಲಸ ಮಾಡಿಕೊಂಡಿರುತ್ತಾರೆ, ಮೃತರು ದಿನಾಂಕ 13.02.2023 ರಂದು ಸಂಜೆ ಸುಮಾರು 04:00 ಗಂಟೆಗೆ ತಾವು ಕೆಲಸ ಮಾಡುವ ಮನೆಯಿಂದ ಹೋಗಿ ದಿನಾಂಕ 14.02.2023 ರಂದು ಬೆಳಿಗ್ಗೆ 08:30 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು ಇದರಿಂದ  ಕೆಲಸದ ಮನೆಯವರು ನೀವು ಇದೇ ರೀತಿ ಮಾಡಿದರೇ ನಿಮ್ಮನ್ನು ವಾಪಾಸ್ಸು ಊರಿಗೆ ಕಳುಹಿಸುವುದಾಗಿ ತಿಳಿಸಿರುತ್ತಾರೆ ಹಾಗೂ ಮೃತರ ನಾಲ್ಕು ಮಕ್ಕಳಲ್ಲಿ ಮೊದಲನೇಯ ಮಗ ಸುರೇಶ ಮತ್ತು ಎರಡನೇಯ ಮಗಳು ರಾಜಮ್ಮ ಹಾಗೂ ಅವರ ಗಂಡ ದೇವು ರವರುಗಳು ಈಗಾಗಲೇ ಮರಣ ಹೊಂದಿದ್ದು ಹಾಗೂ ಮೃತರಿಗೆ ಯಾವುದೇ ಸ್ವಂತ ಮನೆ ಇಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 14.02.2023 ರಂದು ಸುಮಾರು ಮಧ್ಯಾಹ್ನ 03:00 ಗಂಟೆಯ ಸಮಯಕ್ಕೆ ಅವರು ಕೆಲಸ ಮಾಡುವ ಮನೆಯ ಮೇಲಿನ ಟೇರಸ್ ನ ಕಬ್ಬಣದ ಕೊಂಡಿಗೆ ನೈಲನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ನಂತರ ಸೀರೆ ತುಂಡಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 07/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ ಕಾರ್ತಿಕ್ ಶಣೈ  (17) ತಂದೆ: ಕೃಷ್ಣಾನಂದ ಶೆಣೈ ವಾಸ: “ಚಿನ್ಮಯ”, 1-156 ಮೂಡು ಅಳೆವೂರು ಅಲೆವೂರು ಗ್ರಾಮ  ಉಡುಪಿ ತಾಲೂಕು ಇವರ ತಂದೆಯಾದ  ಕೃಷ್ಣಾನಂದ ಶೆಣೈ (50) ಇವರು 1999 ರಿಂದ ಎಮ್‌ಐಟಿ ಸೆಕ್ಯೂರಿಟಿ ವಿಭಾಗದಲ್ಲಿ ಅಟೆಂಡರ್‌ಆಗಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಸಂಜೆ 6 ಗಂಟೆಗೆ ಮನೆಗೆ ಬರುತ್ತಿದರು 8 ತಿಂಗಳ ಹಿಂದೆ ಅವರ ಹೆಂಡತಿ ಮೃತಪಟ್ಟಿದ್ದು, ಆ ಬಳಿಕ ಕೃಷ್ಣಾನಂದ ಶೆಣೈ ರವರು  ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ದಿನಾಂಕ 14/02/2023 ರಂದು ಪಿರ್ಯಾದುದಾರರ ತಂದೆ ಕಲಸಕ್ಕೆ ಹೋದವರು ವಾಪಸು ಬಾರದೆ ಇದ್ದು ಈ ಬಗ್ಗೆ ಸಂಶಯಗೊಂಡು ಅವರು ಕೆಲಸ ಮಾಡುತ್ತಿದ್ದ ಎಮ್‌ಐಟಿಗೆ ತೆರಳಿ ಅಲ್ಲಿನ ಕಟ್ಟಡದ ಎಬಿ -1 ಬ್ಲಾಕ್‌ನ 2 ನೇ ಮಹಡಿ ರೂಂ 42 ರಲ್ಲಿ ನೋಡಲಾಗಿ ಕಾರ್ತಿಕ್ ಶಣೈ  ಇವರ ತಂದೆಯವರು ನೈಲಾನ್‌ಹಗ್ಗದಲ್ಲಿ ಕುತ್ತಿಗೆಗೆ ನೇಣು ಬಿಗಿದು ಫ್ಯಾನಿಗೆ ಕಟ್ಟಿ ಆತ್ಮಹತ್ಯ ಮಾಡಿಕೊಂಡಿದ್ದು, ಅವರ ಹೆಂಡತಿ ತೀರಿಕೊಂಡ ವೇದನೆಯಲ್ಲಿ ಜೀವನದಲ್ಲಿ ಜೀಗುಪ್ಸೆಗೊಂಡ ದಿನಾಂಕ 14/02/2023 ರಂದು ಮದ್ಯಾಹ್ನ ಸುಮಾರು 2:10 ಗಂಟೆಯಿಂದ ರಾತ್ರಿ 10:30 ಗಂಟೆಯ ನಡುವಿನ ಸಮಯ ಆತ್ಮಹತ್ಯೆ ಮಾಡಿಕೊಂಡಿರುದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 06/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾಧ ಶ್ರೀಮತಿ ಶೈಲಾ (35) ಗಂಡ:  ಚಂದ್ರ ಶೇಖರ ವಾಸ: ಬೈದ್ರಕಟ್ಟೆ ಶಂಕ ರ ನಾರಾಯಣ ಗ್ರಾಮ ಕುಂದಾಪುರ ಇವರ ಅಣ್ಣನಾದ ಮುಂಜುನಾಥ @ ಮಂಜು (40) ವರ್ಷ ರವರು ಕೊಲ್ಲೂರು ಗ್ರಾಮ ಪಂಚಾಯತ್ SRLM  ಘಟಕದ ದಿನ ಕೂಲಿ ನೌಕರರಾಗಿದ್ದು ರಾತ್ರಿ ವೇಳೆ ಕೊಲ್ಲೂರು ಗ್ರಾಮದ ಪಂಚಾಯತ್ ಕಟ್ಟಡದಲ್ಲಿ ಉಳಿದುಕೊಳ್ಳುತ್ತಿದ್ದು  ದಿನಾಂಕ 14/02/2023 ರಂದು ರಾತ್ರಿ 11-00 ಗಂಟೆಗೆ ಸದ್ರಿ ಕಟ್ಟಡದಲ್ಲಿ  ಮಲಗಿಕೊಂಡಿದ್ದ ವೇಳೆ  ಎದೆ ನೋವು  ಕಾಣಿಸಿಕೊಂಡು ಉಸಿರಾಡಲು ಆಗದೇ ಅಸ್ವಸ್ಥರಾದವರನ್ನು ಅವರ ಜೊತೆಯಲ್ಲಿದ್ದ ಉದಯ್ ಮತ್ತು ಇತರರು ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಗೆ ಕುಂದಾಪುರ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ದಿನಾಂಕ 15/02/2023 ರಂದು ಬೆಳಗಿನ ಜಾವ 00:25 ಗಂಟೆಗೆ   ಬಂದಾಗ  ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆ ತರುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ದೃಢೀಕರಿಸಿರುತ್ತಾರೆ. ಮೃತ ಮರಣದ  ಸರಿಯಾದ ಕಾರಣ ತಿಳಿಯಲು ವೈದ್ಯಕೀಯ ಶವಪರೀಕ್ಷೆ ಜರುಗಿಸಬೇಕಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 04/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಮಟ್ಕಾ ಜುಗಾರಿ ಪ್ರಕರಣ

  • ಶಿರ್ವಾ: ದಿನಾಂಕ 15/02/2023 ರಂದು ಶಿರ್ವ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ   ಮಟ್ಕಾ  ಜುಗಾರಿ ಆಟದ  ಬಗ್ಗೆ ಹಣ  ಸಂಗ್ರಹ ಮಾಡುತ್ತಿರುವುದಾಗಿ ಅನಿಲ್ ಕುಮಾರ್ ಪೊಲೀಸ್‌ ಉಪನಿರೀಕ್ಷಕರು, ಶಿರ್ವಾ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ  ದಾಳಿ ನಡೆಸಿ  ಮಟ್ಕಾ ಜುಗಾರಿ ಆಟದ   ಬಗ್ಗೆ  ಸಂಗ್ರಹ ಮಾಡುತ್ತಿದ್ದ ರಮೇಶ ಪೂಜಾರಿ (47), ತಂದೆ: ಕೊರಗ, ವಾಸ: ಮನೆ ನಂಬ್ರ 4-171,ತಿರ್ಲಪಲ್ಕೆ,ಪಡುಬೆಳ್ಳೆ, ಬೆಳ್ಳೆ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂಬಾತನಿಂದ ನಗದು ಹಣ 850/- , ಮಟ್ಕಾ ಚೀಟಿ -1, ಬಾಲ್‌ಪೆನ್‌‌-1  ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 09/2023 ಕಲಂ: 78(3) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಕುಂದಾಫುರ: ಪಿರ್ಯಾದಿದಾರರಾಧ ಶೇಖರ ಪೂಜಾರಿ (56) ತಂದೆ: ದಿ.ಭದ್ರ ಪೂಜಾರಿ ವಾಸ: ಪಣ್ತರ ಮನೆ ಹತ್ತಿರ ಆನಗಳ್ಳಿ ರಸ್ತೆ ಬಸ್ರೂರು ಅಂಚೆ ಮತ್ತು ಗ್ರಾಮ, ಕುಂದಾಪುರ ಇವರು ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದು,ಅವರಲ್ಲಿ ಎರಡನೇ ಮಗನಾದ ಸುಜನ್ (29) ಎಂಬವನು ಡಿಪ್ಲೋಮಾ ವಿದ್ಯಾಭ್ಯಾಸ ಮುಗಿಸಿ ಶೇಖರ ಪೂಜಾರಿ ರವರು ಆನಗಳ್ಳಿಯಲ್ಲಿ ನಡೆಸಿಕೊಂಡಿರುವ ಹೋಳಿಗೆ ತಯಾರಿಕಾ ಘಟಕದಲ್ಲಿ ಶೇಖರ ಪೂಜಾರಿ ರವರೊಂದಿಗೆ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 14/02/2023 ರಂದು ಬೆಳಿಗ್ಗೆ 08:00 ಗಂಟೆಗೆ ಸುಜನ್ ಇವರೊಂದಿಗೆ ಕೆಲಸಕ್ಕೆ ಹೋಗಿ ನಂತರ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು ಹೋದವನು ಇದುವರೆಗೂ ಹೋಳಿಗೆ ತಯಾರಿಕಾ ಘಟಕಕ್ಕೂ ಬಾರದೇ,ಮನೆಗೂ ಬಾರದೇ ಇದ್ದು ಆತನ ಮೊಬೈಲ್ ನಂಬರಿಗೆ ಕರೆ ಮಾಡಿದಲ್ಲಿ ಕರೆಯನ್ನು ಸ್ವೀಕರಿಸದೇ ಇದ್ದು ರಾತ್ರಿ ಆತನ ಮೊಬೈಲ್ ಗೆ ಕರೆ ಮಾಡಿದಲ್ಲಿ ಸ್ವಿಚ್ ಆಗಿರುತ್ತದೆ.ನಂತರ ಆತನ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಆತನ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಇದುವರೆಗೂ ಪತ್ತೆಯಾಗಿರುವುದಿಲ್ಲ.ಕಾಣೆಯಾದ ಸುಜನ್ ಮನೆಗೂ ಬಾರದೇ,ಸಂಬಂಧಿಕರ ಮನೆಗೂ ಹೋಗದೇ ಹಾಗೂ ಪೋನ್ ಕರೆಗೂ ಸಿಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2023 ಕಲಂ:ಮನುಷ್ಯಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಆನುಷಾ (25), ತಂದೆ: ಗಣಪತಿ ಶೇರೆಗಾರ್, ವಾಸ: ಕೆರೆಮನೆ ನೇರಂಬಳ್ಳಿ ಹಂಗಳೂರು ಗ್ರಾಮ ಇವರು ದಿನಾಂಕ 14/02/2023 ರಂದು ಅವರ ತಂದೆಯವರ  ಜಾಗದ ಸರ್ವೇ ಮಾಡಿದ್ದು ಸರ್ವೇ ಮುಗಿದ ಬಳಿಕ   ಪಿರ್ಯಾದಿದಾರರ ಮನೆಯವರು ಜಾಗದಲ್ಲಿ  ನಿಂತು ಮಾತನಾಡುತ್ತಿರುವಾಗ,  ಮದ್ಯಾಹ್ನ  13:00  ಗಂಟೆ ಸಮಯಕ್ಕೆ ಆರೋಪಿತರಾದ  ಅರುಣ್ ಶೇರೆಗಾರ್ ಹಾಗೂ ಅವರ ಸ್ನೇಹಿತರಾದ ಗುರುರಾಜ, ವಾದಿರಾಜ, ನಾಗರಾಜ ರವರು ಅಲ್ಲಿಗೆ ಬಂದು  ಅವರ ಪೈಕಿ ಅರುಣರವರು ಪಿರ್ಯಾದಿದಾರರರಿಗೆ  ಹಾಗೂ  ಅವರ ಮನೆಯವರಿಗೆ  ಅವಾಚ್ಯವಾಗಿ  ಬೈದು  ಜಾಗದ ಅಳತೆ ಮಾಡಿಸುತ್ತಿರಾ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು  ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಅರುಣ ಪಿರ್ಯಾದಿದಾರರಿಗೆ  ದೂಡಿದ ಪರಿಣಾಮ ಪಿರ್ಯಾದಿದಾರರು ಕೆಳಗೆ ಬಿದ್ದು ಮೈ ಕೈಗೆ ನೋವಾಗಿರುತ್ತದೆ. ಈ ಘಟನೆ  ನೋಡಿದ ಪಿರ್ಯಾದಿದಾರರ ಸಂಬಂಧಿ ರಾಘವೇಂದ್ರ ತಡೆಯಲು ಬಂದಾಗ ಆರೋಪಿತರೆಲ್ಲರೂ   ರಾಘವೇಂದ್ರನನ್ನು ಹಿಡಿದುಕೊಂಡು ಉರುಳಾಡಿಕೊಂಡಿರುತ್ತಾರೆ. ಗಲಾಟೆಯನ್ನು ಪಿರ್ಯಾದಿದಾರರು ಹಾಗೂ ಅವರ ತಂದೆಯವರು ತಪ್ಪಿಸಿರುತ್ತಾರೆ. ನಂತರ ಆರೋಪಿತರು  ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023 ಕಲಂ: 504, 506, 323, 354 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  


     

     

ಇತ್ತೀಚಿನ ನವೀಕರಣ​ : 16-02-2023 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080