ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ: ಆದಿತ್ಯ ಖಾರ್ವಿ ಪ್ರಾಯ : 18 ವರ್ಷ ತಂದೆ: ಉದಯ ಖಾರ್ವಿ ವಾಸ: ನಾಗಜ್ಯೋತಿ ನಿಲಯ, ಹೊಸಪೇಟೆ, ತ್ರಾಸಿ ಅಂಚೆ ಮತ್ತು ಗ್ರಾಮ ಇವರ ತಂದೆ: ಉದಯ ಖಾರ್ವಿ ಪ್ರಾಯ 50 ವರ್ಷ ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಹಲವು ದಿನಗಳಿಂದ ಯಾವುದೋ ಕಾರಣಕ್ಕೆ ಮನನೊಂದು ಮನೆಯಲ್ಲಿ ಒಬ್ಬರೆ ಕುಳಿತು ಆಲೋಚನೆಯಲ್ಲಿರುತ್ತಿದ್ದು, ಮನೆಯವರಲ್ಲಿ  ಸರಿಯಾಗಿ ಮಾತನಾಡದೇ ಇದ್ದು ದಿನಾಂಕ: 15/02/2023 ರಂದು ರಾತ್ರಿ 8 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದವರು 12:00 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಹಾಲ್‌ನ ಪಕ್ಕಾಸಿಗೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಪಿರ್ಯಾದಿದಾರರ ತಂದೆ ಯಾವುದೋ ಕಾರಣಕ್ಕೆ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಗಂಗೊಳ್ಳಿ ಠಾಣಾ ಯು.ಡಿ.ಆರ್‌ನಂಬ್ರ 03/2023 ಕಲಂ:174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಮಣಿಪಾಲ: ಪಿರ್ಯಾದಿ: ಮಹಮ್ಮದ್ ಆಶಿಕ್   ಪ್ರಾಯ: 25 ವರ್ಷ ತಂದೆ: ಹಸನ್ ಶೇಖ್ ವಾಸ: ಉಮ್ಮ್ರ್ ಮಂಜಿಲ್ ಮಣ್ಣೋಳಿಗುಜ್ಜಿ, ಕುಂಜಿಬೆಟ್ಟು ಅಂಚೆ  ಶಿವಳ್ಳಿ ಗ್ರಾಮ  ಇವರು ಹಾಗೂ ಅವರ ಅಣ್ಣ ಅಶ್ಫಕ್ ಪ್ರಾಯ: 30 ವರ್ಷ ಉಡುಪಿ ಉತ್ಸವ ದ ಬ್ಯಾನರ್ ಹಾಕುವ ಟೆಂಡರ್ ವಹಿಸಿಕೊಂಡಿರುತ್ತಾರೆ, ಪಿರ್ಯಾದಿದಾರು ಮತ್ತು ಅವರ ಆಣ್ಣನಾದ ಆಶ್ಪಕ್ ದಿನಾಂಕ: 15.02.2023 ರಂದು ಉಡುಪಿ ಹಬ್ಬ  ಮುಗಿಸಿ ತಮ್ಮ  ಟಾಟಾ ಎಸ್ ಗಾಡಿಯಲ್ಲಿ  ಮನೆಗೆ ಹೋಗುವ ಸಮಯ  ದಿನಾಂಕ: 16.02.2023 ರಂದು ಸಮಯ ಸುಮಾರು 00:50 ಗಂಟೆಗೆ ಲಕ್ಷ್ಮೀಂದ್ರ ನಗರದ 5 ನೇ ಕ್ರಾಸ್ ರಸ್ತೆಯ ಎಡ ಬದಿಯಲ್ಲಿ ಉಡುಪಿ ಹಬ್ಬದ ಬಗ್ಗೆಪಿರ್ಯಾದಿದಾರರು ಹಾಕಿದ ಬ್ಯಾನರ್ ನ್ನು  ಪಿರ್ಯಾದಿದಾರ ಪರಿಚಯದ ಆರೋಪಿಗಳಾದ ದಿನೇಶ್, ಸಂದೇಶ್ ಮತ್ತು  ಗಗನ ಎಂಬುರು ಕಟ್ ಮಾಡುತ್ತಿದ್ದು ಅದಕ್ಕೆ ಪಿರ್ಯಾದಿದಾರರು ಆರೋಪಿಗಳಿಗೆ ನಾವು ಅಳವಡಿಸಿದ ಬ್ಯಾನರ್ ನ್ನು ಯಾಕೆ ತಗೆಯುತ್ತಿರಿ ಎಂದು ಕೇಳಿದಾಗ ಆರೋಪಿ ದಿನೇಶ್ ಪಿರ್ಯಾದಿದಾರರನ್ನು ಉದ್ದೇಶಿಸಿ  ನೀನು ಯಾರು ನಾವು ತೆಗೆದೇ ತೆಗೆಯುತ್ತೇವೆ” ಎಂದು ಹೇಳಿದ್ದು  ಇನ್ನೊಬ್ಬ ಆರೋಪಿ ಸಂದೇಶ ಪಿರ್ಯಾದಿದಾರರಿಗೆ  ಮತ್ತು ಅವರ ಅಣ್ಣನಾದ ಅಶ್ಪಕ್  ರವರಿಗೆ ರಾಡ್ ನಿಂದ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ಬಲ ಕೈಗೆ, ಎಡಭುಜ ಮತ್ತು ತಲೆಗೆ ಗಾಯವಾಗಿದ್ದು, ಅಶ್ಪಕ್ ರವರಿಗೆ ತೆಲೆಗೆ ಗಾಯವಾಗಿದ್ದು ಕುತ್ತಿಗೆಯ ಎಡ ಬದಿ, ಎರಡು ಕೈಗಳಿಗೆ ಮತ್ತು ಎದೆಗೆ ಒಳ ನೋವು ಉಂಟಾಗಿರುತ್ತದೆ, ಮತ್ತೊಬ್ಬ ಆರೋಪಿ ಗಗನ ಪಿರ್ಯಾದಿದಾರರು ಹಾಗೂ ಅಶ್ಪಕ್ ರವರನ್ನು ಉದ್ದೇಶಿಸಿ “ ನೀವು ಈ ಬಾರಿ ಬಚಾವಾಗಿರುತ್ತಿರಿ ಇನ್ನೊಮ್ಮೆ ಸಿಕ್ಕಲ್ಲಿ  ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ“ ಎಂದು ಜೀವ ಬೇದರಿಕೆ  ಹಾಕಿರುವುದಾಗಿದೆ, ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 28/2023 ಕಲಂ: 504, 324, 506 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ: ದಿನೇಶ್  ಪ್ರಾಯ: 44 ವರ್ಷ ತಂದೆ: ದಿ. ರಾಜು ಸೇರಿಗಾರ್ ವಾಸ: ಮಸೀದಿಯ ಹತ್ತಿರ ಡೋರ್ ನಂಬ್ರ 1-4-183 ಬಿ ದೊಡ್ಡಣಗುಡ್ಡೆ ಕುಂಜಿಬೆಟ್ಟು ಅಂಚೆ ಶಿವಳ್ಳಿ ಗ್ರಾಮ ಇವರು ದಿನಾಂಕ: 15.02.2023 ರಂದು ರಾತ್ರಿ ತನ್ನನೊಂದಿಗೆ ಕೆಲಸ ಮಾಡುವ ಸಂದೇಶ ಮತ್ತು ಗಗನ್ ಎಂಬುವರೊಂದಿಗೆ ಶಿವಪಾಡಿ ಶ್ರೀ ಉಮಾಮಹೇಶ್ವರಿ  ದೇವಸ್ಥಾನದಲ್ಲಿ ನಡೆಯುವ ಅತಿರುದ್ರ ಯಾಗ ಕ್ಕೆ ಸಂಬಂದಿಸಿದಂತೆ ಬ್ಯಾನರ್ ಹಾಕುತ್ತಿದ್ದ ಸಮಯ ದಿನಾಂಕ: 16.02.2023 ರಂದು ಸಮಯ ಸುಮಾರು 00:45 ಗಂಟೆಗೆ ಲಕ್ಷ್ಮೀಂದ್ರ  ನಗರದ  5 ನೇ ಕ್ರಾಸ್ ನ ಈಸಿ ಬೈ ಬಳಿ ಇರುವ ರಸ್ತೆಯ ಬದಿಯಲ್ಲಿ ಬ್ಯಾನರ್ ಹಾಕಲು ನಿಂತಿದ್ದ ಸಮಯ ಆರೋಪಿಗಳಾದ ಅಶ್ಪಕ್ ಹಾಗೂ ಆಶೀಕ್ ಟಾಟಾ ಎಸ್ ಗಾಡಿಯಲ್ಲಿ ಸದ್ರಿ  ಸ್ಥಳಕ್ಕೆ  ಬಂದು ನೀವು ಯಾವ ಬ್ಯಾನರ್ ಹಾಕುವುದು ಎಂದು ಕೇಳಿದಾಗ ಪಿರ್ಯಾದಿದಾರರು ದೇವಸ್ಥಾನದ ಬ್ಯಾನರ್ ಎಂದು ಹೇಳಿದ್ದು, ಆರೋಪಿ ಆಶ್ಪಕ್ ಪಿರ್ಯಾದಿದಾರರನ್ನು ಉದ್ದೇಶಿಸಿ “ನಿನ್ನ ಬ್ಯಾನರ್ ಹರಿದು ಹಾಕುತ್ತೇನೆ” ಎಂದು ಹೇಳಿ ಪಿರ್ಯಾದಿದಾರರಿಗೆ ಕೋಲಿನಿಂದ ಎಡ ಕಿವಿಗೆ ಹೊಡೆದಿದ್ದು ಪಿರ್ಯಾದಿದಾರರ ಜೊತೆ ಇದ್ದ ಸಂದೇಶ ಎಂಬುವರಿಗೂ ಕೋಲಿನಿಂದ ಹೊಡೆದಿದ್ದು ಗಗನ ಎಂಬುವರಿಗೆ ಬೆನ್ನಿಗೆ ಹೊಡೆದಿರುತ್ತಾರೆ ನಂತರ ಇನ್ನೊಬ್ಬ ಆರೋಪಿ ಆಶೀಕ್ ಪಿರ್ಯಾದಿದಾರರಿಗೆ ಮತ್ತು ಅವರ ಜೊತೆ ಕೆಲಸ ಮಾಡುವ ಸಂದೇಶ ಹಾಗೂ ಗಗನ ರವರನ್ನು ಉದ್ದೇಶಿಸಿ “ ನೀವು ಈ ಬಾರಿ ಬಚಾವಾಗಿರುತ್ತಿರಿ ಮುಂದಕ್ಕೆ ನಾನು ನಿಮ್ಮ ಮನೆಗೆ ಬಂದು ಕಡಿದು ಹಾಕುತ್ತೇನೆ “ ಎಂದು ಜೀವ ಬೇದರಿಕೆ  ಹಾಕಿರುವುದಾಗಿದೆ, ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ :28/2023 ಕಲಂ: 504, 324, 506 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿ: ಹೆರಿಯಣ್ಣ ಶೆಟ್ಟಿ ಪ್ರಾಯ : 64 ವರ್ಷ  ತಂದೆ : ದಿ. ಗುಂಡು  ಶೆಟ್ಟಿ ವಾಸ : ಮ.ನಂ 3-27 ಸದವಡಿ ತೋಟ ಹೌಸ್, ಪಾಂಗಳ ಗ್ರಾಮ  ಇವರು ದಿನಾಂಕ 15-02-2023 ರಂದು ತನ್ನ ಸ್ಕೂಟಿ ನಂಬ್ರ KA20 EY 8408 ನೇದರಲ್ಲಿ ಮನೆಯಿಂದ ಹೊರಟು ರಾ.ಹೆ 66 ರ ಉಡುಪಿ ಮಂಗಳೂರು ರಸ್ತೆಯ ಮೂಲಕ ಪಾಂಗಾಳ ಜನಾರ್ಧನ ದೇವಸ್ಥಾನದ ಬಳಿ ಇರುವ ಹಾಲಿನ ಡೈರಿಗೆ ಹೋಗುತ್ತಿರುವಾಗ ಸಮಯ ಸುಮಾರು 16:15 ಗಂಟೆಗೆ ಪಾಂಗಳದ ಶಿಲ್ಪ ಇಂಡಸ್ಟ್ರಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ  ಹನುಮಂತ ರವರು ತನ್ನ  KA 19 AD 8041 ನೇ ಟೆಂಪೋ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು, ಸೊಂಟದ ಎಡಭಾಗದಲ್ಲಿ ಗುದ್ದಿದ ಒಳ ನೋವಾಗಿದ್ದು, ಸ್ಕೂಟಿಯ ಹಿಂಭಾಗ ಹಾಗೂ ಎಡಭಾಗ ಜಖಂ ಗೊಂಡಿರುತ್ತದೆ. ಅಲ್ಲಿ ಸೇರಿದವರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರಿಗೆ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ದಾಖಲಿಸಿದಲ್ಲಿ ಪರೀಕ್ಷಿಸಿದ  ವೈದ್ಯರು  ಎಡ ಸೊಂಟದ ಮೂಳೆ ಮುರಿತವಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ತಿಳಿಸಿ  ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ. 24/2023 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ: ಸಂಕೇತ್ ಎಸ್.‌23 ವರ್ಷ, ತಂದೆ: ಸುಭಾಶ್ಚಂದ್ರ ಭಂಡಾರಿ  ವಾಸ: ಸುಭಾಷಿತ 10/28 ಅಂಬಾಗಿಲು ಉಡುಪಿ ಇವರು ದಿನಾಂಕ: 15/02/2023 ರಂದು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಎಂ.ಜಿ.ಎಮ್ ಕಾಲೇಜಿನ ಎದುರುಗಡೆ ಇರುವ ಹೋಟೆಲ್ ನ ಬಳಿ ನಿಂತುಕೊಂಡಿರುವಾಗ ಸಂಜೆ ಸಮಯ ಸುಮಾರು 5.00 ಗಂಟೆಗೆ KA20EE5790 ನೇ ಮೋಟಾರ್‌ಸೈಕಲ್‌ಸವಾರ ಗುರುಪ್ರಸದ್ ಎಂಬಾತನು ತನ್ನ ಮೋಟಾರು ಸೈಕಲ್ ನ್ನು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ರಾ.ಹೆ 169(ಎ) ರಲ್ಲಿ ಸವಾರಿ ಮಾಡಿಕೊಂಡು ಸುಧಾ ಫೂಟ್ ವೇರ್ ಬಳಿ ತಲುಪುವಾಗ ಡಯಾನ ಟ್ಯಾಕೀಸ್‌ಕಡೆಯಿಂದ KA02MK2953ನೇ ಕಾರಿನ ಚಾಲಕ ಸುಧಾಕರ ಶೆಟ್ಟಿ ಎಂಬಾತನು ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಅಂದರೆ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗುರುಪ್ರಸದ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ಸೈಕಲ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗುರುಪ್ರಸದ್ ರವರು ಮೋಟಾರ್‌ಸೈಕಲ್‌ಸಮೇತ ರಸ್ತೆಗೆ ಬಿದ್ದು, ಎಡಗೈ ಮಣಿಕಟ್ಟು ಹಾಗೂ ಬಲಕಾಲಿನ ಮೂಳೆ ಮುರಿತದ ಜಖಂ ಆಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಅಪಘಾತಕ್ಕೆ KA02MK2953ನೇ ಕಾರಿನ ಚಾಲಕನ ಸುಧಾಕರ ಶೆಟ್ಟಿಯವರ  ದುಡುಕುತನ ಮತ್ತುನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2023 ಕಲಂ: 279, 338, ಐ.ಪಿ.ಸಿ & 218 ಜೊತೆಗೆ 177 ಐ.ಎಮ್.ವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ 14/02/2023 ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಟಿ.ಐ. ರವರು  ಸಿಬ್ಬಂದಿ ಯವರೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ನಲ್ಲಿರುವಾಗ ನಿಟ್ಟೆ ಗ್ರಾಮದ ಬೀಟ್ ಸಿಬ್ಬಂದಿ ಸಿಪಿಸಿ 1138, ಗೋವಿಂದಾಚಾರಿ ಇವರು ಬೆಳಿಗ್ಗೆ 11:15 ಗಂಟೆಗೆ ನನ್ನ ಮೊಬೈಲಿಗೆ ಕರೆ ಮಾಡಿ ನಿಟ್ಟೆ ಗ್ರಾಮದ ದೂಪದಕಟ್ಟೆ ಬಳಿ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ನಶೆಯಲ್ಲಿ ರಸ್ತೆ ಬದಿ ತೇಲಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ನಾನು ಬೆಳಿಗ್ಗೆ 11:30 ಗಂಟೆಯ ವೇಳೆಗೆ ನಿಟ್ಟೆ ಗ್ರಾಮದ ದೂಪದಕಟ್ಟೆ ಬಳಿಯ ಬಸ್ಸು ನಿಲ್ದಾಣದ ಬಳಿ ಹೋದಾಗ ನಶೆಯಲ್ಲಿ ತೇಲಾಡುತ್ತಿದ್ದ  ವ್ಯಕ್ತಿಯ ಬಳಿ ಹೋಗಿ ಆತನಲ್ಲಿ ನೀನು ಮಾದಕ ವಸ್ತು/ಗಾಂಜಾ ಸೇವನೆ ಮಾಡಿದ್ದೀಯಾ ಎಂದು ವಿಚಾರಿಸಲಾಗಿ, ಹೌದು ತಾನು ‌ಗಾಂಜಾದಂತ ವಸ್ತುವನ್ನು ಸೇವನೆ  ಮಾಡಿರುವುದಾಗಿ ಒಪ್ಪಿದ್ದು ಆತನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದಾಗಿ ತಿಳಿಸಿದಾಗ ಆತ ಒಪ್ಪಿಕೊಂಡಿದ್ದು, ಆ ಸಮಯದಲ್ಲಿ ಹಾಜರಿದ್ದ ಬೀಟ್ ಸಿಬ್ಬಂದಿ ಗೋವಿಂದಾಚಾರಿ ಮತ್ತು ನನ್ನೊಂದಿಗೆ ಬಂದಿದ್ದ ಸಿಬ್ಬಂದಿಯವರ ಸಹಾಯದಿಂದ ಸದ್ರಿ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಾಯಿಯಿಂದ ಘಾಟು ವಾಸನೆ ಬರುತ್ತಿದ್ದು, ಅಸಂಬದ್ದ ರೀತಿಯಲ್ಲಿ ವರ್ತಿಸುತ್ತಿದ್ದ. ಆತ ಗಾಂಜಾ ಅಥವಾ ಮನೋದ್ರೇಕ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂದು ಸಂಶಯ ಬಂದು ಸಿಬ್ಬಂದಿಯವರೊಂದಿಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ಆತ ಮಾದಕ ವಸ್ತು ಸೇವನೆ ಎಂಬಾತನು (Urine sample tested positive for Marijuana) ಮಾಡಿರುವುದು ದೃಢಪಟ್ಟಿರುವುದಾಗಿ ವೈದ್ಯರ ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 20/2023 ಕಲಂ 27(b) ಎನ್‌.ಡಿ.ಪಿ.ಎಸ್‌. ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 16-02-2023 06:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080