ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸಲಾಹುದ್ದೀನ್ (30), ತಂದೆ: ಗುಡ್ಮೆ ಉಸ್ಮಾನ್, ವಾಸ: ಮನೆ ನಂಬ್ರ 6-55/4 ಕಂಬಳತೋಟ ಉಡುಪಿ ಇವರ ತಂದೆ  ಗುಡ್ಮೆ ಉಸ್ಮಾನ್ ಎಂಬುವವರು ದಿನಾಂಕ 15/02/2022 ರಂದು ಅಬ್ದುಲ್ ಕಲಾಂ ರವರ KA-20-Q-2261 ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರರಾಗಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉದ್ಯಾವರ ಗ್ರಾಮದ ಟೊಯೋಟೋ ಶೋ ರೂಮ್ ಹತ್ತಿರ ಹೋಗುತ್ತಿದ್ದಾಗ ಉಡುಪಿ ಕಡೆಯಿಂದ KA-20-Z-8103 ನೇ ಕಾರಿನ ಚಾಲಕ ತನ್ನ ಕಾರನ್ನು  ಅತೀ ವೇಗ  ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು 14:15 ಗಂಟೆಗೆ ಮೋಟಾರ್ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಅಬ್ದುಲ್ ಕಲಾಂ ಮತ್ತು ಸಹ ಸವಾರ ಗುಡ್ಮೆ ಉಸ್ಮಾನ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತೀವ್ರ ಸ್ವರೂಪದ ಗಾಯವಾಗಿದ್ದವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶ್ರೀಮತಿ ಸುದರ್ಶಿನಿ ಮಹೇಶ್(31), ಗಂಡ: ಮಹೇಶ್, ವಾಸ: ಶ್ರೀ ಸಿದ್ದಿ ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿ  ಇವರು ದಿನಾಂಕ 15/02/2022 ರಂದು ಪಾಂಗಾಳ ಗ್ರಾಮದ ಆದಿ ಆಲಡೆ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಆಯನೋತ್ಸವ ಜಾತ್ರಾ  ಕಾರ್ಯಕ್ರಮಕ್ಕೆ ಗಂಡ ಮಹೇಶರೊಂದಿಗೆ ಆದಿ ಆಲಡೆ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಸಮೀಪ ರಸ್ತೆಯ ಎಡ ಬದಿಯ ಮಣ್ಣು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ 3:00 ಗಂಟೆ ಸಮಯಕ್ಕೆ ಓರ್ವ ನೇವಿ ಬ್ಲ್ಯೂ ಬಣ್ಣದ ಮಾರುತಿ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ನಡೆದುಕೊಂಡು  ಹೋಗುತ್ತಿರುವ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಎಡಕ್ಕೆ ಬಿದ್ದಿದ್ದು  ಕಾರಿನ ಚಾಲಕ ತನ್ನ ಕಾರನ್ನು ಹಿಂದಕ್ಕೆ ತೆಗೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು ಆಗ ಕಾರಿನ ಎಡ ಬಾಗದ ಎರಡು ಚಕ್ರಗಳು ಪಿರ್ಯಾದಿದಾರರ ಅಂಗಾಲಿನ ಮೇಲೆ ಹತ್ತಿ ಗಾಯವಾಗಿದ್ದು ಅಲ್ಲದೇ  ಪಿರ್ಯಾದಿದಾರರ ಬಲ ಗಾಲಿನ ಚಿಪ್ಪಿಗೆ  ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರ ಗಂಡ ಪಿರ್ಯಾದಿದರರನ್ನು ಉಡುಪಿ ಟಿ. ಎಮ್. ಐ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 279, 338 ಐಪಿಸಿ,  ಕಲಂ: 134 (ಎ) (ಬಿ) ಐ ಎಮ್ ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಬೇಬಿ ಪೂಜಾರ್ತಿ (57), ಗಂಡ:ದಿ. ಗೋಪಾಲ ಪೂಜಾರಿ, ವಾಸ: ಜನತಾ ಕಾಲೋನಿ, 3ನೇ ಅಡ್ಡರಸ್ತೆ,ಕರಂಬಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಆರೋಪಿ ಗೋಪಾಲ ಶೆಟ್ಟಿಗಾರ ಎಂಬುವವರಿಂದ ಪಿರ್ಯಾದಿದಾರರ  ಶಿವಳ್ಳಿ ಗ್ರಾಮದ ಸರ್ವೆ ನಂ 199/0 ರ 3 ಸೆಂಟ್ಸ್  ಮತ್ತು ಅದರಲ್ಲಿರುವ ಡೀರ್ ನಂಬರ್ 1-112 ರ ಮನೆಯ ದಸ್ತಾವೇಜುವಿನ ಜೆರಾಕ್ಸ್ ಪ್ರತಿಗಳನ್ನು ನೀಡಿ ರೂಪಾಯಿ 2,00,000/- ವನ್ನು ಸಾಲ ಪಡೆದುಕೊಂಡಿರುತ್ತಾರೆ. ಈ ಸಮಯ ಆರೋಪಿಯು ಪಿರ್ಯಾದಿದಾರರಿಂದ 2 ಬಾರಿ ಸ್ಟ್ಯಾಂಪ್ ಪೇಪರ್ ಮತ್ತು  10 ಖಾಲಿ ಕಾಗದಗಳಿಗೆ ಸಹಿಯನ್ನು ಪಡೆದುಕೊಂಡಿರುತ್ತಾರೆ, ಆ ಬಳಿಕ ಪಿರ್ಯಾದಿದಾರರು  2,00,000/- ರೂ ವನ್ನು ಆರೋಪಿಗೆ ಪಾವಸಿದ್ದು  ಹಣವು ಬಡ್ಡಿಗೆ ಸಮವಾಗಿದೆ ಎಂದು ಹೇಳಿ ಪುನಃ ಒಂದು ಸ್ಟ್ಯಾಂಪ್ ಪೇಪರ ಮತ್ತು 4-5 ಖಾಲಿ ಪೇಪರಗೆ ಸಹಿ ಪಡೆದು ಸಾಲ ಚುಕ್ತಾ ಮಾಡಲು 4,00,000/- ರೂಪಾಯಿ ನೀಡಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ. ದಿನಾಂಕ 15/06/2021 ರಂದು ಆರೋಪಿಯು ಪಿರ್ಯಾದಿದಾರರಿಗೆ ಲಾಯರ್ ನೋಟೀಸ್ ಕಳುಹಿಸಿದ್ದು ಅದರಲ್ಲಿ ಪಿರ್ಯಾದಿದಾರರು ಶಿವಳ್ಳಿ ಗ್ರಾಮದ ಸದರಿ ಸ್ಥಿರಾಸ್ಥಿಯನ್ನು ರೂಪಾಯಿ 3,00,000/- ಕ್ಕೆ ಮಾರಾಟ ಮಾಡುವ ಬಗ್ಗೆ ಕರಾರೂ ಮಾಡಿಕೊಂಡಿದ್ದು ಮತ್ತು ಆ ಬಳಿಕ ಬಂದು ವಿಸ್ತರಣಾ ಕರಾರು ಮಾಡಿಕೊಂಡಿದ್ದು ಮುಂಗಡವಾಗಿ 1,50,000/- ರೂಪಾಯಿ ಆರೋಪಿಯಿಂದ ಪಿರ್ಯಾದಿದಾರರು ಪಡೆದುಕೊಂಡಿರುವಂತೆ  ಹಾಗೂ ಮುಂಗಡವಾಗಿ ಪಡೆದ 1,50,000/- ರೂಪಾಯಿಯನ್ನು 2,50,000/- ರೂಪಾಯಿ ದಂಡದ ರೂಪದಲ್ಲಿ ಸೇರಿಸಿ ಒಟ್ಟು 4,00,000/- ವನ್ನು ಹಿಂದುರುಗಿಸಬೇಕಾಗಿ ಮತ್ತು ಅಲ್ಲಿಯವರೆಗೆ ಸ್ಥಿರಾಸ್ಥಿಯಲ್ಲಿರುವ ಮನೆಗೆ ತಿಂಗಳಿಗೆ ರೂಪಾಯಿ 3,000/- ದಂತೆ ವಾಡಿಗೆ ಪಾವತಿಸಬೇಕು ಮತ್ತು ಸ್ಥಿರಾಸ್ಥಿಯನ್ನು ಆರೋಪಿಯ ಹೆಸರಿಗೆ ನೋಂದಾವಣೆ ಮಾಡಿಕೊಡಬೇಕು ಎಂದು ಇರುತ್ತದೆ. ಆರೋಪಿಯು ಮೋಸ ವಂಚನೆ ಮತ್ತು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸಾಲ ಕೊಡುವ ಸಮಯದಲ್ಲಿ ಸಹಿ ಪಡೆದುಕೊಂಡು ಸ್ಟಾಂಪ್ ಪೇಪರ್ ಮತ್ತು ಖಾಲಿ ಪೇಪರ್ ಗಳಿಗೆ ಸುಳ್ಳು ಕರಾರನ್ನು ಸೃಷ್ಠಿಸಿ ವಂಚನೆ ಹಾಗೂ ಸಂಬಿಕೆ ದ್ರೋಹ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಯಲದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022  ಕಲಂ: 406, 418, 420, 464, 474 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 12/12/2021 ರಂದು ಬೆಳಿಗ್ಗೆ 05:30 ಗಂಟೆಗೆ ಪಿರ್ಯಾದಿದಾರರಾದ ರಾಧಿಕಾ (48), ಗಂಡ:ಗಣಪತಿ ನಾಯ್ಕ್, ವಾಸ: H No 585-C, ಹೆರ್ಗಾ ಗ್ರಾಮ,ಪರ್ಕಳ ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು ಹೆರ್ಗಾ ಗ್ರಾಮ ಮಾಣಿಬೆಟ್ಟು ಎಂಬಲ್ಲಿರುವ ಸ್ಥಿರಾಸ್ಥಿ ಸರ್ವೆ ನಂ: 128/3 ಜಾಗದಲ್ಲಿ ರಸ್ತೆಯಲ್ಲಿ ಅಡ್ಡವಾಗಿ ಬಿದ್ದಿರುವ ಕಟ್ಟಿಗೆಯನ್ನು ಸರಿಪಡಿಸಿತ್ತಿರುವಾಗ ಆರೊಪಿಗಳಾದ 1) ಸಂಜೀವ ನಾಯ್ಕ್(48), 2) ಮಂಜುನಾಥ್ ನಾಯ್ಕ್, 3) ಗಣೇಶ್ ನಾಯ್ಕ್, 4)ರಾಘವೇಂದ್ರ ನಾಯ್ಕ್, 5)ಲಕ್ಷ್ಮೀ ನಾಯ್ಕ, 6) ಪೂರ್ಣಿಮ ನಾಯ್ಕ್, 7) ನಾಗರಾಜ ಇವರು ಏರುದ್ವನಿಯಲ್ಲಿ ಇದು ನಮ್ಮ ಜಾಗ ನಮ್ಮ ಜಾಗದಲ್ಲಿ ನಿಮಗೇನು ಕೆಲಸ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಆ ಸಮಯ ಪಿರ್ಯಾದಿದಾರರ ಮಗ ರಾಜೇಶ ಎಂಬುವವರು ಆಕ್ಷೇಪಿಸಿದಾಗ  ಆರೋಪಿಗಳಾದ 8) ರತ್ನ ನಾಯ್ಕ್, 9) ಯಶೋಧ ನಾಯ್ಕ್, 10)ಸಂಜೀವ ನಾಯ್ಕ (50) ಇವರು ಇವರ ಆರೋಪಿಗಳೊಂದಿಗೆ ಒಟ್ಟು ಸೇರಿ ಪಿರ್ಯಾದಿದಾರರು ಮತ್ತು ಅವರ ಮಗನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಿದಾರರ ಮಗನಿಗೆ ಹಲ್ಲೆ ಮಾಡಿರುತ್ತಾರೆ, ಅಲ್ಲದೆ 1,2,3,4ನೇ ಆರೋಪಿಗಳು ಪಿರ್ಯಾದಿದಾರರನ್ನು ನೆಲಕ್ಕೆ ಉರುಳಿಸಿ ಕಾಳಿನಿಂದ ತುಳೀದು ಕುತ್ತಿಗೆಯನ್ನು ಒತ್ತಿ ಹಿಡಿದು ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರ ಕುಟುಂಬದ ಜಾಗದ ಬಗ್ಗೆ ಪಾಲು ವ್ಯಾಜ್ಯವೂ ಉಡುಪಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದು ವ್ಯಾಜ್ಯವನ್ನು ಹಿಂಪಡಿಯುವಂತೆ ಆರೋಪಿತರೆಲ್ಲರು ಪಿರ್ಯಾದಿದಾರರಿಗೆ ಒತ್ತಡ ಹಾಕಲು ಪ್ರೆಯತ್ನಿಸುತ್ತಿದ್ದು ಅದೇ ದ್ವೇಶದಿಂದ ಈ ಕೃತ್ಯ ಎಸಗಿರುವುದಾಗಿ ನೀಡದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022  ಕಲಂ: 354, 324, 504, 506, 120(B), 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಉದಯ ನಾಯಕ್ (50), ತಂದೆ: ಆನಂದ ನಾಯಕ್ , ಸುವಿಧಾ ಹೋಮ್ಸ್ ಅಪಾರ್ಟ್ ಮೆಂಟ್, ಪೆರ್ವಾಜೆ ರಸ್ತೆ, ಕಸಬಾ, ಕಾರ್ಕಳ ಕಾರ್ಕಳ ತಾಲೂಕು ಇವರು ದಿನಾಂಕ 30/01/2022 ರಿಂದ ಕಾರ್ಕಳ ಕಸಬಾದ ಪೆರ್ವಾಜೆ ರಸ್ತೆಯಲ್ಲಿರುವ ಸುವಿಧಾ ಹೋಮ್ಸ್ ಅಪಾರ್ಟ್ ಮೆಂಟ್ ಓನರ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದು , ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾಗಿದ್ದ ಅಪಾದಿತ ಮಹೇಶ ಎಸ್ ಆಚಾರ್ಯ  ತನ್ನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾದ ಬಳಿಕ  ದಿನಾಂಕ 13/01/2022 ರಂದು  ವಾಸವಿದ್ದ ಫ್ಲಾಟ್ ನಂಬ್ರ 212 ಕ್ಕೆ ಬೀಗ ಹಾಕಿ  ಕಾಣೆಯಾಗಿದ್ದು, ಕೋಶಾಧಿಕಾರಿಯಾದ ಜೀತನ್  ಯಾದವ್ ಎಂಬುವವರು ದಿನಾಂಕ 02/10/2021 ರಂದು ಮೃತಪಟ್ಟಿದ್ದು ಕಾರ್ಯದರ್ಶಿಯಾದ ಗಣೇಶ ಡಾಂಗೆ ಎಂಬುವವರು ರಾಜೀನಾಮೆ ನೀಡಿದ್ದರಿಂದ  ತುರ್ತು ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು , ನೂತನ ಪದಾಧಿಕಾರಿಗಳು ಬ್ಯಾಂಕ್ ಹಾಗೂ ಇತರ ವ್ಯವಹಾರಗಳ ಬಗ್ಗೆ  ಪರಿಶೀಲಿಸಿದಾಗ ದಿನಾಂಕ 13/01/2022 ರಂದು ಸೊಸೈಟಿಯ ಕರ್ನಾಟಕ ಬ್ಯಾಂಕ್ ಕಾರ್ಕಳ ಶಾಖೆಯ ಉಳಿತಾಯ ಖಾತೆಯ 5 ಚೆಕ್‌ಗಳಿಂದ ಮೋಸದಿಂದ  ಹಣವನ್ನು ನಗದೀಕರಿಸಿ ತನ್ನ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿ, ಕಮಿಟಿಗೆ ಸಂಬಂಧಪಟ್ಟ ಚೆಕ್ ಬುಕ್ , ಪಾಸ್ ಬುಕ್, ನಿರ್ಣಯ ಪುಸ್ತಕ, ಮೊಹರು, ದಾಖಲೆ ಪುಸ್ತಕಗಳು, ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧಕರ ವರದಿ ಇತ್ಯಾದಿ  ದಾಖಲೆಗಳನ್ನು ಹಿಂತಿರುಗಿಸದೇ  ನಂಬಿಕೆ ದ್ರೋಹವನ್ನುಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 406, 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 16-02-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080