ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕುಂದಾಪುರ: ದಿನಾಂಕ 15/02/2022  ರಂದು  ರಾತ್ರಿ  ಸುಮಾರು 8:00  ಗಂಟೆಗೆ, ಕುಂದಾಪುರ  ತಾಲೂಕಿನ ವಡೇರಹೋಬಳಿ ಗ್ರಾಮದ ವಿನಾಯಕ ಟಾಕಿಸ್‌‌ ಹತ್ತಿರ  ಪಶ್ಚಿಮ ಬದಿಯ NH 66 ಫ್ಲೈ ಓವರ್‌ ರಸ್ತೆಯಲ್ಲಿ, ಆಪಾದಿತ ಸುಹೇಬ್‌‌ ಶೇಖ್‌ ಎಂಬವರು  KA35-C-3939ನೇ ಲಾರಿಯನ್ನು ತೆಕ್ಕಟ್ಟೆ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನತನದಿಂದ ಚಾಲನೆ ಮಾಡಿಕೊಂಡು ಹೋಗಿ, ಯಾವುದೇ  ಇಂಡಿಕೇಟರ್‌ ಹಾಕದೇ NH 66 ರಸ್ತೆಯ ಎಡಬದಿಗೆ  ಒಮ್ಮೇಲೆ  ನಿಲ್ಲಿಸಿದಾಗ  ಅದೇ  ದಿಕ್ಕಿನಲ್ಲಿ  ವಸಂತ ಎಂಬವರು KA20ER-5291ನೇ ಬೈಕನ್ನು ಸವಾರಿ ಮಾಡಿಕೊಂಡು ಹೋಗಿ ಲಾರಿಯ ಹಿಂಬದಿಗೆ  ಡಿಕ್ಕಿ ಹೊಡೆದು, ಅಪಘಾತಕ್ಕೆ ಒಳಗಾಗಿ ವಸಂತರವರ ಎದೆಗೆ, ಹೊಟ್ಟೆಗೆ ಒಳಪೆಟ್ಟು ಹಾಗೂ ಎರಡೂ ಕಾಲಿಗೆ ರಕ್ತಗಾಯವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಬಳಿಕ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ  ಮಂಗಳೂರು ವೆನ್‌‌‌ಲಾಕ್‌ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 25/2022 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಎಂ .ಟಿ. ಲೀಲಾನಂದ ಇವರು ಕಾಪು ತಾಲೂಕು ಆಹಾರ ನಿರೀಕ್ಷಕರಾಗಿದ್ದು, ದಿನಾಂಕ: 15.02.2022 ರಂದು 13:00 ಗಂಟೆಗೆ ಮಾನ್ಯ ಕಾಪು ತಹಶೀಲ್ದಾರರ ನಿರ್ದೇಶನದಂತೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ಸಾಯಿ ಕಾಂಪ್ಲೆಕ್ಸ್‌ ‌‌‌ನಲ್ಲಿರುವ ಆಪಾದಿತ ಹರೀಶ್ ಎಂಬುವರ ಸಮಸ್ತಕ ಎಂಟರ್‌‌ಪ್ರೈಸಸ್‌‌‌ ಅಂಗಡಿಗೆ ಭೇಟಿ ನೀಡಿ ಪರೀಶೀಲಿಸಿದಾಗ, ಅಂಗಡಿಯ ಹೊರಗೆ 12 ಮತ್ತು ಒಳಗೆ 08 ಸೇರಿದಂತೆ ಒಟ್ಟು 20 ಗೃಹೋಪಯೋಗಿ ಸಿಲಿಂಡರ್‌‌ಗಳು ಅಂಗಡಿಯಲ್ಲಿದ್ದು,  ಆಪಾದಿತರು ಸಕ್ಷಮ ಪ್ರಾಧಿಕಾರದಿಂದ ದಾಸ್ತಾನು ಮತ್ತು ವಿತರಣೆ ಮಾಡುವ ಬಗ್ಗೆ ಯಾವುದೇ ಅನುಮತಿ ಪಡೆಯದೇ  LPG ( Regulation of Supply and distribution) Order-2000 ರ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮ ದಾಸ್ತಾನು ಇರಿಸಿರುತ್ತಾರೆ. ನಂತರ ಅಂಗಡಿಯಲ್ಲಿ ದೊರೆತ 20 ಗೃಹೋಪಯೋಗಿ ಸಿಲಿಂಡರ್‌‌ಗಳಲ್ಲಿ 04 ಗ್ಯಾಸ್ ತುಂಬಿದ ಸಿಲಿಂಡರ್ ಮತ್ತು 16 ಖಾಲಿ ಸಿಲಿಂಡರ್‌‌ಗಳಾಗಿದ್ದು, ಅವುಗಳನ್ನು ಮಹಜರು ಮುಖೇನ ಅಮಾನತ್ತುಪಡಿಸಿಕೊಂಡು ಪಡುಬಿದ್ರಿಯ ಸಕಲೇಶ್ವರ  ಗ್ಯಾಸ್ ಏಜೆನ್ಸಿಯ ಗೋಡೌನ್‌‌ ನಲ್ಲಿ ಇರಿಸಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2022 ಕಲಂ: 285, 286 ಐಪಿಸಿ. 3, 7 Essential Commodities Act 1955 ನಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾಪು: ಪಿರ್ಯಾದಿ ಶ್ರೀಮತಿ ರೇವತಿ ದೇವಿದಾಸ್‌ ದಾರರು ಕಳೆದ 11 ತಿಂಗಳಿನಿಂದ ಕಾಪುವಿನ ರಾಷ್ಟ್ರೀಯ ಹೆದ್ದಾರಿ  66 ಬಳಿ ಇರುವ ಕೆ.ಒನ್  ಹೋಟೇಲ್ ನ ಲಾಡ್ಜ್  ಇನ್ ಚಾರ್ಜ್‌ ಆಗಿ ಕೆಲಸ ಮಾಡಿಕೊಂಡಿದ್ದು, ಪ್ರವೀಣ್ ಕೋಟ್ಯಾನ್ ಮತ್ತು  ಪ್ರಕಾಶ್ ಪೂಜಾರಿ ಮತ್ತು ಗ್ಲಾನ್ಡ್  ಡಿಮೆಲ್ಲೋ ಎಂಬವರು ಸದ್ರಿ ಹೋಟೇಲ್ ಮತ್ತು ಲಾಡ್ಜ್ ಪಾಲುದಾರರಾಗಿರುತ್ತಾರೆ ಪಿರ್ಯಾದಿದಾರರು ದಿನಾಂಕ:11/02/2022 ರಿಂದ ಅನಾರೋಗ್ಯದ ಕಾರಣದಿಂದಾಗಿ ಕೆಲಸಕ್ಕೆ ಹೋಗದೇ ಇದ್ದು, ಆ ಸಮಯ ಲಾಡ್ಜ್ ನ ಪಾಲುದಾರರಾದ ಪ್ರಕಾಶ್ ಪೂಜಾರಿ ರವರೆ  ಲಾಡ್ಜ್ ನ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಪಿರ್ಯಾದಿದಾರರು ದಿನಾಂಕ:14/02/2022 ರಂದು ಮರಳಿ ಕೆಲಸಕ್ಕೆ ಹೋಗಿದ್ದು, ದಿನಾಂಕ:15/02/2022ರಂದು ಸಂಜೆ ದಿನಾಂಕ:11/02/2022 ರಿಂದ 15/02/2022 ರವರೆಗಿನ ಲೆಕ್ಕಾಚಾರದ ಎಕ್ಸೆಲ್ ಶೀಟ್ ಪ್ರಿಂಟನ್ನು ಹಾಗೂ ದಿನಾಂಕ:14/02/2022 ಮತ್ತು15/02/2022 ರ ನಗದನ್ನು ಪ್ರವೀಣ್ ಕೋಟ್ಯಾನ್ ರವರಿಗೆ ನೀಡಿರುತ್ತಾರೆ.  ದಿನಾಂಕ:16/02/2022 ರಂದು  ಬೆಳಿಗ್ಗೆ ಸುಮಾರು 11:00  ಗಂಟೆ ಸಮಯಕ್ಕೆ ಪಾಲುದಾರರಾದ ಪ್ರಕಾಶ್ ಪೂಜಾರಿ ರವರು ಲಾಡ್ಜ್ ನ ಲೆಕ್ಕಾಚಾರಗಳನ್ನು  ಪರಿಶೀಲಿಸಿ ಬಳಿಕ  ಲಾಡ್ಜ್ ನ  ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪಿರ್ಯಾದಿದಾರರಿಗೆ  ಹಾಗೂ ಪ್ರಕಾಶ್ ರವರ ನಡುವೆ  ಮಾತುಕತೆಯಾಗಿದ್ದು, ಪ್ರಕಾಶ್ ಪೂಜಾರಿ ರವರು  ಏಕಾಏಕಿ  ಪಿರ್ಯಾದಿದಾರರಿಗೆ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2೦22 ಕಲಂ 323, 354  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ವಿನೋದ ದೊಡಮನಿ (39 ವರ್ಷ) ರವರು  ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 15/02/2022 ರಂದು 20:00 ಗಂಟೆಯಿಂದ ದಿನಾಂಕ: 16/02/2022 ರಂದು ಬೆಳಿಗ್ಗೆ 07:00 ಗಂಟೆಯ  ಮಧ್ಯಾವಧಿಯಲ್ಲಿ  ಪುತ್ತೂರು ಗ್ರಾಮದ ಹನುಮಂತ ನಗರದ ರವಿಕುಮಾರ್‌ ಎಂಬುವರ ಮನೆ ಜಾಗದ ಮರಕ್ಕೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 16-02-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080