ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ದಿನಾಂಕ 15/02/2021 ರಂದು ಬೆಳಿಗ್ಗೆ 08:15 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಶರತ್ ಪೂಜಾರಿ (33), ತಂದೆ: ಶೇಖರ ಪೂಜಾರಿ, ವಾಸ: ಮಡಿವಾಳ ಬೆಟ್ಟು ಹೌಸ್, ಪಾಂಡ್ಯಾರ್ ತೋಟ, ಪಾದೆಬೆಟ್ಟು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಇವರ ಚಿಕ್ಕಪ್ಪ ಗಂಗಾಧರ ಎಂಬುವವರು ತಮ್ಮ KA-20-EH-3528 ನೇ ನಂಬ್ರದ ಆಕ್ಟಿವಾ ಮ್ಯಾಟ್ರಿಕ್ಸ್ ನಲ್ಲಿ ನಂದಿಕೂರು ರೈಲ್ವೆ ಬ್ರಿಡ್ಜ್ ಬಳಿ ನಿವಾಸಿ ಪ್ರಭಾಕರ ಎಂಬುವವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾಜ್ಯ ಹೆದ್ದಾರಿ-01 ರಲ್ಲಿ ಅಡ್ವೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿರುವಾಗ ಕಾಪು ತಾಲೂಕು ನಂದಿಕೂರು ಗ್ರಾಮದ ಮುದರಂಗಡಿ ಜಂಕ್ಷನ್ ಬಳಿ ತಲುಪುತ್ತಿದ್ದಂತೆ  KA-20-D-6694 ನೇ ನಂಬ್ರದ ಮಿನಿ ಟೆಂಪೋ  ಚಾಲಕ ದೇವರಾಜ್ ತನ್ನ  ಮಿನಿ ಟೆಂಪೋವನ್ನು ಪಡುಬಿದ್ರಿ ಕಡೆಯಿಂದ ಅಡ್ವೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಯ ಎದುರು ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಇಬ್ಬರೂ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದಿಂದ ಸಹ ಸವಾರ ಪ್ರಭಾಕರ ರವರ ಬಲಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಗಂಗಾಧರ ರವರ ಹಣೆಗೆ, ಬಲಕೈ ಬೆರಳಿಗೆ, ಬಲ ಕೆನ್ನೆಗೆ, ಬಲಕೈ ಮಣಿಕಟ್ಟಿಗೆ, ಎಡ ಮೊಣ ಕೈಗೆ, ಎರಡೂ ಕಾಲುಗಳ ಮೊಣ ಗಂಟಿಗೆ ಸಾಧಾರಣ ಸ್ವರೂಪದ ಗಾಯವಾಗಿರುತ್ತದೆ. ನಂತರ ಗಂಗಾಧರ ರವರನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ  ಹಾಗೂ ಪ್ರಭಾಕರ ರವರನ್ನು ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 15/02/2021  ರಂದು ಸಂಜೆ  04:10 ಗಂಟೆಗೆ ಕುಂದಾಪುರ  ತಾಲೂಕಿನ  ಆನಗಳ್ಳಿ  ಗ್ರಾಮದ  ಪೂರ್ವ ಬದಿಯ  ಎನ್‌. ಹೆಚ್‌ 66 ರಸ್ತೆಯಲ್ಲಿ,  ಆಪಾದಿತ ಪ್ರವೀಣ್‌ ‌ಜಿ KA-15-M-3346 Tata Sumoನೇ ಕಾರನ್ನು  ಕುಂದಾಪುರ ಕಡೆಯಿಂದ  ಗಂಗೊಳ್ಳಿ ಕಡೆಗೆ  ಎನ್‌. ಹೆಚ್‌ 66 ರಸ್ತೆಗೆ  ವಿರುದ್ಧ  ದಿಕ್ಕಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು ಗಂಗೊಳ್ಳಿ  ಕಡೆಯಿಂದ  ಉಡುಪಿ ಕಡೆಗೆ ಪಿರ್ಯಾದುದಾರರು ಚಾಲನೆ ಮಾಡಿಕೊಂಡು ಬರುತ್ತಿದ್ದ KA-20-M-7668 Santro ಕಾರಿಗೆ  ಎದುರುಗಡೆಯಿಂದ  ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು  ಹಾಗೂ Tata Sumo ಕಾರಿನಲ್ಲಿ   ಪ್ರಯಾಣಿಸುತ್ತಿದ್ದ ಲೈಬಾ ಎಂಬುವವರಿಗೆ ಗಾಯ ನೋವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಗುಲಾಬಿ (60), ಗಂಡ: ದಿ. ಚಪರ,  ವಾಸ: ಎದುರುಗುಡ್ಡೆ ಅಶ್ವತ ಕಟ್ಟೆ ಅಂಚೆ ತೆಳ್ಳಾರು ದುರ್ಗ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಮಗ ಶೇಖರ್(35) ವಿಪರೀತ ಮಧ್ಯ ಸೇವನೆ ಮಾಡುತ್ತಿದ್ದು, ಅಸ್ತಮಾ ಕಾಯಿಲೆ ಇದ್ದು,  ಅನಾರೋಗ್ಯದ ಕಾರಣ ಒಂದು ವಾರದಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ದಿನಾಂಕ 15/02/2021 ರಂದು ಮಲಗಿದ್ದವರನ್ನು ಮಧ್ಯಾಹ್ನ 14:00  ಗಂಟೆಗೆ ಎಬ್ಬಿಸಿ  ನೋಡಿದಾಗ ಒಮ್ಮೆ ಉಸಿರು ತೆಗೆದು ಚಡಪಡಿಸುತ್ತಿದ್ದವರನ್ನು ನೀರು ಹಾಕಿ ಉಪಚರಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಹೆಂಗಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಬಂಡು ಅಪ್ಪಾಸಾಬ ದಾನ ವಾಡೆ (30), ತಂದೆ: ಅಪ್ಪಾಸಾಬ ದಾನವಾಡೆ, ವಾಸ: ಕೃಷ್ಣ ನಗರ, ಹಿರೇಕೋಡಿ ಗ್ರಾಮ, ಚಿಕ್ಕೊಡಿ ತಾಲೂಕು. ಬೆಳಗಾಂ ಜಿಲ್ಲೆ ಇವರು 9 ವರ್ಷದ ಹಿಂದೆ ಬ್ರಹ್ಮಾವರ ಬೈಕಾಡಿಯ ಜ್ಯೋತಿ (30) ಎಂಬುವವರನ್ನು ಫೋನ್ ಮೂಲಕ ಪ್ರೀತಿಸಿ ತನ್ನ ಊರಾದ ಚಿಕ್ಕೊಡಿಗೆ ಆಕೆಯನ್ನು ಕರೆಯಿಸಿ ಮದುವೆಯಾಗಿ ಸಂಸಾರ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಇದುವರೆಗೂ ತನ್ನ ಹೆಂಡತಿಯ ಮನೆಯನ್ನು ನೋಡಿರುವುದಿಲ್ಲ. ಪಿರ್ಯಾದಿದಾರರು ಪ್ರತಿ ವರ್ಷ ಹೆಂಡತಿಯನ್ನು ಕರೆದುಕೊಂಡು ಮಂದಾರ್ತಿ ಜಾತ್ರೆಗೆ ಬಂದು ಹೋಗುತ್ತಿದ್ದರು ಸಹ ಆಗ ಹೆಂಡತಿಯ ಮನೆಗೆ ಹೋಗಿರುವುದಿಲ್ಲ. ವರ್ಷ ಪ್ರತಿಯಂತೆ ಈ ಬಾರಿಯು ದಿನಾಂಕ 13/02/2021 ರಂದು ಮಂದಾರ್ತಿ ಜಾತ್ರೆಗೆ ಪಿರ್ಯಾದಿದಾರರು ಅವರ ಹೆಂಡತಿ ಜ್ಯೋತಿ ಹಾಗೂ ತನ್ನ ತಮ್ಮ ನರಸಪ್ಪಾ ಅಪ್ಪಾಸಾಬ ದಾನವಾಡೆ ಹಾಗೂ ಆತನ ಹೆಂಡತಿ ಪ್ರಿಯಾಂಕ (24) ರವರ ಜೊತೆ ತನ್ನ ಊರಿನಿಂದ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಜಾತ್ರೆಗೆ ಬಂದಿದ್ದು, ಆ ದಿನ ರಾತ್ರಿ ದೇವಸ್ಥಾನದಲ್ಲಿಯೇ ಉಳಿದುಕೊಂಡು ಮಾರನೇ ದಿನ ದಿನಾಂಕ 14/02/2021 ರಂದು ಮಧ್ಯಾಹ್ನ 12:00 ಗಂಟೆಗೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ದೇವಸ್ಥಾನದ ಹೊರಗಡೆ ಬಂದು ಎಲ್ಲಾರು ನಿಂತುಕೊಂಡಿದ್ದು, ಆಗ ಪಿರ್ಯಾದಿದಾರರ ಹೆಂಡತಿ ಜ್ಯೋತಿ ಹಾಗೂ ಅವರ ತಮ್ಮನ ಹೆಂಡತಿ ಪ್ರಿಯಾಂಕ ರವರು ಜಾತ್ರೆಯಲ್ಲಿ ಸುತ್ತಾಡಿ ಬರುತ್ತೇವೆ ಎಂದು ಪಿರ್ಯಾದಿದಾರರಿಗೂ ಹಾಗೂ ಅವರ ತಮ್ಮನಿಗೂ ಹೇಳಿ ಹೋದವರು ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ.  ಅವರ ಮೊಬೈಲ್ ಫೋನ್ ಸ್ವಿಚ್ಚ್ಆಫ್ ಆಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 16-02-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080