ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ:  ಪಿರ್ಯಾದಿದಾರರಾದ ಸುನಿಲ್ ರೊಬೆನ್ ಡಿ.ಸೋಜ (49), ತಂದೆ: ದಿ. ಜೋನ್ ಡಿ. ಸೋಜ, ವಾಸ: ಡೋರ್  ನಂಬ್ರ: 12-3-100 , ಎಲ್.ಬಿ.ಎಸ್ ರೋಡ್, ಅಜ್ಜರಕಾಡು, ಮೂಡನಿಡಂಬೂರು ಗ್ರಾಮ, ಉಡುಪಿ ಇವರು ದಿನಾಂಕ 16/02/2021 ರಂದು ಬೆಳಿಗ್ಗೆ 07:10 ಗಂಟೆಗೆ ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಎಲ್.ಬಿ.ಎಸ್ ರೋಡ್ ನಲ್ಲಿರುವ ಪಿರ್ಯಾದಿದಾರರ Nethutt Technologies ಎಂಬ ಅಂಗಡಿಗೆ KA-20-MC-6765 ನೇ ಕಾರಿನ ಚಾಲಕ ಖತೀಬ್ ಜುಹೈಫ್ ಎಂಬಾತನು ತನ್ನ ಕಾರಿನಲ್ಲಿ ಸಿಂಡಿಕೇಟ್ ಸರ್ಕಲ್ ನಿಂದ ಬ್ರಹ್ಮಗಿರಿ ಜಂಕ್ಷನ್ ಕಡೆಗೆ ಹೋಗುತ್ತಿರುವಾಗ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ  Nethutt Technologies ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಂಗಡಿ ಮತ್ತು ಅಂಗಡಿ ಒಳಗಿದ್ದ ಕಂಪ್ಯೂಟರ್ ಹಾಗೂ ಇತರ ಉಪಕರಣಗಳು ಸಂಪೂರ್ಣ ಜಖಂಗೊಂಡು  5,00,000/- ರೂಪಾಯಿ ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಧನುಷ್ ಶೆಟ್ಟಿ (21), ತಂದೆ: ಸುಧಾಕರ ಶೆಟ್ಟಿ,  ವಾಸ: ಅಮ್ಮ ಹೌಸ್,ರಾಧನಂದ ಅಪಾರ್ಟ್‌‌ಮೆಂಟ್ ಬಳಿ , ಕುಂಜಿಬೆಟ್ಟು , ಶಿವಳ್ಳಿ  ಉಡುಪಿ ಇವರು ದಿನಾಂಕ 13/02/2021 ರಂದು ರಾತ್ರಿ 11:30 ಗಂಟೆಗೆ ಉಡುಪಿ ಮಂಜುನಾಥ ಕಣ್ಣಿನ ಆಸ್ಪತ್ರೆಯ ಬಳಿ ಇರುವ ಶಕೀನಾ ಬಿಲ್ಡಿಂಗ್‌ನಲ್ಲಿ ಕೆಲಸದ ನಿಮಿತ್ತ ಹೋಗಿದ್ದು ಈ ವೇಳೆ ಪಿರ್ಯಾದಿದಾರರು ತನ್ನ ಅಣ್ಣನ ಹೊಂಡಾ ಅ್ಯಕ್ಟಿವಾ KA-20-X-0129 ದ್ವಿಚಕ್ರ ವಾಹನವನ್ನು ಬಿಲ್ಡಿಂಗ್‌ನ ಪಾರ್ಕಿಂಗ್ ಸ್ಥಳದಲ್ಲಿ ಇಟ್ಟು ಹೋಗಿ ದಿನಾಂಕ 14/02/2021 ರಂದು ಬೆಳಿಗ್ಗೆ 06:00 ಗಂಟೆಗೆ ಹೋಗಿ ನೋಡಿದಾಗ ಇಟ್ಟಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದ

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಮಂಜುನಾಥ ಮೊಗವೀರ (45), ತಂದೆ: ಕೊರಗ ಮೊಗವೀರ, ವಾಸ; ಮಾದಿಮನೆ, ಬಾಳೆಹಿತ್ಲು, ಮೂಡ್ಕೇರಿ, ಬಸ್ರೂರು, ಕುಂದಾಪುರ ತಾಲೂಕು ಇವರ ಅಣ್ಣ ಮಾಲಿಂಗ ಮೊಗವೀರ (55) ರವರು ದಿನಾಂಕ 14/02/2021 ರಂದು ನಾರಾಯಣ ಖಾರ್ವಿ ಎಂಬುವವರ “ಅನ್ನಪೂರ್ಣೇಶ್ವರಿ” ಎಂಬ ಬೋಟ್‌ನಲ್ಲಿ ಮೀನುಗಾರಿಕೆ ಬಗ್ಗೆ ಹೋಗಿದ್ದು ದಿನಾಂಕ 15/02/2021 ರಂದು ರಾತ್ರಿ 9:30 ಗಂಟೆಗೆ ಗಂಗೊಳ್ಳಿ ಬಂದರ್‌ನಿಂದ 35 ಕಿ.ಮೀ ದೂರ ಆಳ ಸಮುದ್ರದಲ್ಲಿ ಬೋಟ್‌ನಲ್ಲಿ ಬಲೆ ಎಳೆಯುತ್ತಿರುವಾಗ ದೊಡ್ಡ ಅಲೆ ಬಂದ ಪರಿಣಾಮ ಮಾಲಿಂಗ ರವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ  ಕೆ ರಾಮನಾಥ (40), ತಂದೆ:  ವೆಂಕಟೇಶ, ವಾಸ: ಲಕ್ಷ್ಮೀನಗರ 3 ನೇ ಕ್ರಾಸ್  ತೆಂಕನಿಡಿಯೂರು  ಗ್ರಾಮ ಇವರು    ದಿನಾಂಕ 15/02/2021 ರಂದು KA-20-C-8707 ನೇ ಹೆಚ್ಎಂಟಿ  ಬಸ್ಸ ನ್ನು  ರಾತ್ರಿ 07:50 ಗಂಟೆಗೆ  ಉಡುಪಿ ಸಿಟಿ ಬಸ್ ನಿಲ್ದಾಣ ದಿಂದ  ಮಲ್ಪೆ ಗೆ  ಪ್ರಯಾಣಿಕರನ್ನು  ತುಂಬಿಸಿಕೊಂಡು ಹೊರಟು ರಾತ್ರಿ 08:05 ಗಂಟೆಗೆ ಮಲ್ಪೆ ಸರ್ಕಲ್ ಬಳಿ  ಬರುವಾಗ ಎದುರಿನಲ್ಲಿ  HR-38-S-0320  ನೇ  ಕಾರು ನಿಂತಿದ್ದು  ಆ ಸಮಯ ಬಸ್ ನಿಂದ ಪ್ರಮಾಣಿಕರು ಇಳಿದ ನಂತರ  ಕಾರಿನ ಬದಿಗೆ  ಹೋಗಲು ಹಾರ್ನ್ ಹೊಡೆದಿದ್ದು ಕಾರಿನವರು ಬದಿಗೆ ಹೋದ ನಂತರ ಬಸ್ಸನ್ನು ವಢಬಾಂಢೇಶ್ವರ ಕಡೆಗೆ ಬರುತ್ತಿರುವಾಗ ರಾತ್ರಿ 08:10 ಗಂಟೆಗೆ ಮಲ್ಪೆ  ಅಂಚೆ ಕಛೇರಿ ಎದುರು ರಸ್ತೆ ಯಲ್ಲಿ ತಲುಪುವಾಗ HR-38-S-0320  ನೇ ಕಾರು ಚಾಲಕನು  ಬಸ್ ನ ಹಿಂದಿನಿಂದ ಓವರಟೇಕ್  ಮಾಡಿ ಬಂದು  ಬಸ್ ಗೆ ಕಾರನ್ನು ಅಡ್ಡ ಇಟ್ಟು ಮುಂದಕ್ಕೆ ಹೋಗದಂತೆ  ತಡೆದು ನಿಲ್ಲಿಸಿ  ಕಾರಿನಲ್ಲಿದ್ದ 3 ಜನ ಗಂಡಸರು ಇಳಿದು  ಮೂವರ ಪೈಕಿ ಓರ್ವ ಗಂಡಸು ಇಂಗ್ಲೀಷ್ ನಲ್ಲಿ ಬೈದಿದ್ದು  ಆ ಸಮಯ  ಸ್ಥಳಿಯರು ಬಂದು  ಆತನನ್ನು ಹೋಗುವಂತೆ ತಿಳಿಸಿದರೂ ತಿಳಿಸಿದರೂ  ತಾನು  ಪೊಲೀಸ್ ಕಮೀಷನರ್  ಎಂದು ಜೋರಾಗಿ ಸಾರ್ವಜನಿಕರ ಎದುರಿನಲ್ಲಿ  ಬೆದರಿಕೆ ಹಾಕಿದ್ದು , ಅಲ್ಲದೆ  ಅದು ಖಾಸಗಿ ಕಾರಾಗಿದ್ದು ಕಾರಿನ ಮುಂಭಾಗದ ಗ್ಲಾಸಿ ನಲ್ಲಿ  ಪೊಲೀಸ್ ಎಂದು ಬರೆದ ಬೋರ್ಡ್ ಹಾಕಿದ್ದು  ಈ ಬಗ್ಗೆ  ಮಾಹಿತಿ ತಿಳಿದ ಮಲ್ಪೆ ಪೊಲೀಸರು ಸ್ಥಳಕ್ಕೆ ಬಂದು ಆತನ ದಾಖಲೆಗಳನ್ನು ಪರಿಶೀಲಿಸಲಾಗಿ ಆತನು ಯಾವುದೇ  ಸರಕಾರಿ ಅಧಿಕಾರಿ ಆಗದೆ  ಸಾರ್ವಜನಿಕ ವ್ಯಕ್ತಿ ಆಗಿದ್ದು, ಸಾರ್ವಜನಿಕರನ್ನು ವಂಚಿಸುವ  ಉದ್ದೇಶದಂತೆ ಪೊಲೀಸ್ ಕಮೀಷನರ್ ಎಂದು ಪಿರ್ಯಾದಿದಾರರಿಗೂ ಹಾಗೂ  ಸಾರ್ವಜನಿಕರಿಗೆ ಬೆದರಿಕೆ ಹಾಕಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ :341, 416, 465, 468 ,471, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.          

ಇತ್ತೀಚಿನ ನವೀಕರಣ​ : 16-02-2021 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080