ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಸಂದೇಶ ನಾಯ್ಕ(33),ತಂದೆ: ಶಿವ ನಾಯ್ಕ, ವಾಸ: ಹಾಡಿಮನೆ ಕಾಡುಹೊಳೆ ಮುನಿಯಾಲು ವರಂಗ ಗ್ರಾಮ ಹೆಬ್ರಿ ತಾಲೂಕು ಇವರು ಸಂದೇಶ ನಾಯ್ಕ (33),  ತಂದೆ: ಶಿವ ನಾಯ್ಕ, ವಾಸ: ಹಾಡಿಮನೆ ಕಾಡುಹೊಳೆ ಮುನಿಯಾಲು ವರಂಗ ಗ್ರಾಮ ಹೆಬ್ರಿ ತಾಲೂಕು ಇವರು ದಿನಾಂಕ 15/01/2023 ರಂದು ಅವರ KA-20-AA-9429 ನೇ ಕಾರಿನಲ್ಲಿ ಶೇಖರ, ನಂದ್ಯಪ್ಪ, ಸುಶೀಲ ಮತ್ತು ವಿನುತಾ ರವರನ್ನು ಕುಳ್ಳಿರಿಸಿಕೊಂಡು ಅನಂತಪುರದಿಂದ ಕೈಕಂಬ ಮಾರ್ಗವಾಗಿ ಮುದ್ರಾಡಿ ಕಡೆಗೆ ಬರುತ್ತಿರುವಾಗ ಅವರು  14:00 ಗಂಟೆಗೆ ಹೆಬ್ರಿ ಗ್ರಾಮದ ಸಾಂತೋಳ್ಳಿ ಕ್ರಾಸ್‌ ಬಳಿ ತಲುಪುವಾಗ ಅವರ ಎದುರುಗಡೆಯಿಂದ ಮುದ್ರಾಡಿ ಕಡೆಯಿಂದ ಕೈಕಂಬ ಕಡೆಗೆ AP-28-DF-4452 ನೇ ಕಾರನ್ನು ಅದರ ಚಾಲಕ ಪ್ರಣಯ ನಟರಾಜ್‌ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುತ್ತದೆ. ಪರಿಣಾಮ ಕಾರಿನಲ್ಲಿದ್ದ ಸುಶೀಲ ರವರಿಗೆ ಎಡಕೈ ಮೊಣಗಂಟಿನ ಬಳಿ ಮತ್ತು ಬೆನ್ನಿಗೆ ತೀವ್ರ ಸ್ವರೂಪದ ಗುದ್ದಿದ ನೋವಾಗಿದ್ದು ಎಡಕಾಲಿನ ಬಳಿ ತರಚಿದ ಗಾಯವಾಗಿರುತ್ತದೆ. ಕಾರಿನಲ್ಲಿದ್ದ ಇತರರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಗಂಗೊಳ್ಳಿ: ದಿನಾಂಕ 15/01/2023 ರಂದು ಪಿರ್ಯಾದಿದಾರರಾದ  ನಿರಂಜನ್‌ ಮೊಗವೀರ (26), ತಂದೆ: ನಾಗರಾಜ ಚಂದನ್‌, ವಾಸ: ಬಂಟ್ವಾಡಿ, ಬಗ್ವಾಡಿ ಮನೆ, ಸೇನಾಪುರ ಗ್ರಾಮ, ಕುಂದಾಪುರ ತಾಲೂಕು ಇವರು KA-20-ET-9142 ನೇ ಬೈಕಿನಲ್ಲಿ ರಾಘವೇಂದ್ರ ದೇವಾಡಿಗ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ 17:20 ಗಂಟೆಗೆ ಹೊಸಾಡು ಗ್ರಾಮದ ಆರಾಟೆ ಸೇತುವೆಯ ಮೇಲೆ ರಾಷ್ಟ್ರೀಯ ಹೆದ್ದಾರಿ-66 ರಸ್ತೆಯಲ್ಲಿ ಬೈಕನ್ನು ಚಲಾಯಿಕೊಂಡು ಬರುತ್ತಿರುವಾಗ ಅದೇ ದಿಕ್ಕಿನಿಂದ  ಕುಂದಾಪುರ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಪ್ರವೀಣ KA-20-EJ-0869 ನೇ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 2 ಬೈಕ್‌ ಸಮೇತ ಸವಾರರು ಹಾಗೂ ಸಹಸವಾರನು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಹಾಗೂ ರಾಘವೇಂದ್ರ ರವರಿಗೆ ಕೈ,ಕಾಲುಗಳಿಗೆ ರಕ್ತ ಗಾಯವಾಗಿರುತ್ತದೆ ಹಾಗೂ ಆಪಾದಿತ ಪ್ರವೀಣನಿಗೆ ತೀವೃ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾಪು: ಪಿರ್ಯಾದಿದಾರರಾದ ದಿನೇಶ ಡಿ. ಕೋಟ್ಯಾನ್ (54), ತಂದೆ : ದಿ. ದೇಜು ಮೇಸ್ತ್ರಿ ವಾಸ : ನಿತ್ಯಾನಂದ ಹೌಸ್ ಸ್ಟೇಟ್‌ಬ್ಯಾಂಕ್ ಹತ್ತಿರ ಪಡು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ಹಾಗೂ ಬಾಲಕೃಷ್ಣ ಕೋಟ್ಯಾನ್ (62)  ರವರು ದಿನಾಂಕ 15/01/2023 ರಂದು  ಮೂಳೂರು  ಗ್ರಾಮದ ನಾರಾಯಣ ಗುರು ಮಂದಿರ ಬಳಿ ನಡೆದುಕೊಂಡು ಬಂದಿದ್ದು,  ಸಂಜೆ 6.30 ಗಂಟೆಗೆ ಅಲ್ಲಿಂದ ಬಾಲಕೃಷ್ಣ ರವರು ಪಿರ್ಯಾದಿದಾರರಲ್ಲಿ ನಾನು ಮನೆಗೆ ಹೋಗುತ್ತೇನೆ, ನೀನು  ಇಲ್ಲಿಂದಲೇ ಕಾಪುವಿಗೆ ಹೋಗಿ ಎಂದು ತಿಳಿಸಿ, ನಾರಾಯಣ ಗುರು ಮಂದಿರದ ಎದುರಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಉಡುಪಿ ರಸ್ತೆಯನ್ನು ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಇಫಾಮ್ ಅಹಮ್ಮದ್ ತನ್ನ KA-20-MB-5513 ನೇ ಕಾರನ್ನು ಅತೀ ವೇಗ ಮತ್ತು ತೀವೃ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಬಾಲಕೃಷ್ಣ ಕೋಟ್ಯಾನ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕೃಷ್ಣ ಕೋಟ್ಯಾನ್ ರವರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಕೂಡಲೇ ಅವರನ್ನು ಉಪಚರಿಸಲಾಗಿ ಅವರ ತಲೆಗೆ ತೀವೃ ರಕ್ತಗಾಯವಾಗಿದ್ದು, ಬಲಕೈ ಹಾಗೂ ಬಲ ಕಾಲು ಜಖಂ ಗೊಂಡಿದ್ದು, ಸ್ಥಳಕ್ಕೆ  ಬಂದ ಸಾರ್ವಜನಿಕರ ಸಹಾಯದಿಂದ ಅಂಬುಲೇನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಶಕಿಲ (26), ಗಂಡ: ರವೀಂದ್ರ ಕುಲಾಲ, ವಾಸ: ಚಟ್ಟಾರಿಕಲ್‌, ಗಣಪತಿ ದೇವಸ್ಥಾನದ ಹತ್ತಿರ, ಹೆಸ್ಕತ್ತೂರು ಗ್ರಾಮ, ಕುಂದಾಪುರ ತಾಲೂಕು ಇವರ ಮಗು ಹುಟ್ಟಿ 1 ½ ತಿಂಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟ ನಂತರ ಅದೇ ಚಿಂತೆಯಲ್ಲಿ ಪಿರ್ಯಾದಿದಾರರ ಗಂಡ ರವೀಂದ್ರ ಕುಲಾಲ (33) ರವರು ವಿಪರೀತ ಕುಡಿಯುವ ಚಟ ಹೊಂದಿದ್ದು. ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/01/2023 ರಂದು ಮದ್ಯಾಹ್ನ ಮನೆಯಲ್ಲಿ ಗಲಾಟೆ ಮಾಡಿ ಮನೆಯವರೆಲ್ಲರನ್ನು  ಮನೆಯಿಂದ ಹೊರಗಡೆ ಕಳುಹಿಸಿ ಮದ್ಯಾಹ್ನ 3:00 ಗಂಟೆಯಿಂದ 3:30 ಗಂಟೆಯ ನಡುವೆ ಮನೆಯ ಮಾಡಿನ ಜಂತಿಗೆ ಚೂಡಿದಾರ ಶಾಲ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 16-01-2023 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080