ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಶಂಕರನಾರಾಯಣ:ದಿನಾಂಕ  14.01.2022  ರಂಧು ಫಿರ್ಯಾದಿ ರವೀಂದ್ರ ಪೂಜಾರಿ  ಪ್ರಾಯ 48 ವರ್ಷ ತಂದೆ,ನರಸಿಂಹ  ಪೂಜಾರಿ ವಾಸ,  ಮೂಡಹಿತ್ಲು  ಜಂಗರಬಾಳು  ಹಳ್ಳಿಹೊಳೆ ಗ್ರಾಮ   ಇವರ   ಮಗ ಭರತ್  ಪೂಜಾರಿ ಇವರು  ಕೆಎ.20 ಕ್ಯೂ .289 ನೇ ನಂಬ್ರದ   ಮೋಟಾರ್  ಸೈಕಲ್‌ನಲ್ಲಿ   ಬೈಂದೂರು  ತಾಲೂಕಿನ   ಹಳ್ಳಿಹೊಳೆ ಗ್ರಾಮದ  ಶಾಡಬೇರು  ಎಂಬಲ್ಲಿ ಹೋಗುತ್ತಿರುವಾಗ  ಆರೋಪಿಯು  ಕೆಎ, 20 ಎಎ.4367 ನೇ ನಂಬ್ರದ   ಆಟೋರಿಕ್ಷಾವನ್ನು  ಚಕ್ರಾ ಮೈದಾನ ಕಡೆಯಿಂದ  ಜಂಗರಬಾಳು ಕಡೆಗೆ ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಮೋಟಾರ್ ಸೈಕಲ್‌ಗೆ   ಡಿಕ್ಕಿ   ಹೊಡೆದಿದ್ದು, ಇದರ  ಪರಿಣಾಮ  ಮೋಟಾರ್ ಸೈಕಲ್  ಸವಾರ  ಭರತ್  ಪೂಜಾರಿ   ಹಾಗೂ   ಆಟೋರಿಕ್ಷಾದಲ್ಲಿ  ಪ್ರಯಾಣ ಮಾಡುತ್ತಿದ್ದ  ಪವನ್  ಎಂಬುವರಿಗೆ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 7/2022  ಕಲಂ: 279,337,338.ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕುಂದಾಪುರ: ಮಾನ್ಯ ನ್ಯಾಯಾಲಯದಿಂದ ಖಾಸಗಿ ಪಿರ್ಯಧಿ ನಂ : 279/2021 ರಲ್ಲಿ ಪಿರ್ಯಾಧಿ ಶ್ರೀಮತಿ ಭಾಗೀರಧಿ ಬಾಯಿ @ ಲಕ್ಷ್ಮೀ ಪ್ರಭು  53 ವರ್ಷ ತಂದೆ  ದಿ ವಿನಾಯಕ ಕಾಮತ್ ವಾಸ: ನೇರಳಕಟ್ಟೆ ಕರ್ಕುಂಜೆ ಗ್ರಾಮ  ಕುಂದಾಪುರಇವರು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಸರ್ವೇ ನಂ : 166/1, 166/2,  175/6, & 175/5 ರಲ್ಲಿಯ ತಮ್ಮ ಕುಟುಂಬದ ಸ್ವಾದೀನದಲ್ಲಿರುವ ಜಾಗದಲ್ಲಿ ಬೆಳೆದ ತೆಂಗು ಅಡಿಕೆ ಮುಂತಾದ ಬೆಳೆಯ ಸಂರಕ್ಷಣೆಗಾಗಿ ಮಾನ್ಯ ನ್ಯಾಯಾಲ ಯದಿಂದ ಒ.ಎಸ್. ನಂಬ್ರ: 53/2017 ರಂತೆ ಮದ್ಯಾಂತರ ತಡೆಯಾಜ್ಞೆ ತಂದಿದ್ದು, ದಿ: 22-11-2022 ರಂದು 15-30 ಗಂಟೆ ಸಮಯಕ್ಕೆ ಪಿರ್ಯಾಧಿದಾರರಿಗೆ ಆರೋಪಿತರು 1] ದೇವೇಂದ್ರ ನಾಯಕ್ (62ವ) ತಂದೆ: ನರಸಿಂಹ ನಾಯಕ್ ವಾಸ:ನೇರಳಕಟ್ಟೆ ಕರ್ಕುಂಜೆ ಗ್ರಾಮ ಕುಂದಾಪುರ ತಾಲೂಕು 2] ಶೇಷಗಿರಿ ನಾಯಕ್ (33 ವ) ತಂದೆ: ದೇವೇಂದ್ರ ನಾಯಕ್ ವಾಸ: ನೇರಳಕಟ್ಟೆ ಕರ್ಕುಂಜೆ ಗ್ರಾಮ 3] ಆಶಾ ನಾಯಕ್ (28 ವ) ಗಂಡ: ಶೇಷಗಿರಿ ನಾಯಕ್ ವಾಸ: ನೇರಳಕಟ್ಟೆ ಕರ್ಕುಂಜೆ ಗ್ರಾಮ  ಇವರು ಸಮಾನ ಉದ್ದೇಶದಿಂದ ಬೆದರಿಕೆ ಹಾಕಿ ಬಳಿಕ 18-30 ರಿಂದ 19-00 ಗಂಟೆ  ಸಮಯಕ್ಕೆ ಪಿರ್ಯಾಧಿಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಗ್ರೇನೆಟ್ ಕಂಬವನ್ನು ಒಡೆದು ಅದಕ್ಕೆ ಅಳವಡಿಸಿದ ಗ್ರೀಲ್ಸ್ ಅನ್ನು ತುಂಡರಿಸಿ ಪಿರ್ಯಾಧಿ ದಾರರಿಗೆ ಸುಮಾರು 20,000/- ರೂ ನಷ್ಟ ಉಂಟು ಮಾಡಿರುವುದಾಗಿದೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 4/2022 ಕಲಂ: 427,447,506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ: 15-01-2022 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ  ಪಿರ್ಯಾದಿ ವಿಶ್ವನಾಥ ಶೆಟ್ಟಿ (56)  ತಂದೆ  ಮಂಜಯ್ಯ ಶೆಟ್ಟಿ ವಾಸ:  ವಿಸ್ಮಯ, ಕೀರ್ತನಾ ನಿಲಯ  ಸೌಕೂರು ಗುಲ್ವಾಡಿ ಗ್ರಾಮಕುಂದಾಪುರ ತಮ್ಮ ಹೆಂಡತಿ ಮಕ್ಕಳೋಂದಿಗೆ ಮನೆಯಲ್ಲಿರುವಾಗ  ಒಂದು  ದೊಡ್ಡ ಮರಳು ಲಾರಿ ತಮ್ಮ ಜಾಗದಲ್ಲಿ ಬರುತ್ತಿದ್ದು, ಆ ಸಮಯ ಪಿರ್ಯಾಧಿದಾರರು ತಮ್ಮ ಹೆಂಡತಿ ಮಕ್ಕಳೊಂದಿಗೆ ಸ್ಥಳಕ್ಕೆ ಹೊಗಿ ತಮ್ಮ ಜಾಗದಲ್ಲಿ ಲಾರಿ ಹೋಗಲು ಬಿಡುವುದಿಲ್ಲ ಎಂಬುದಾಗಿ ಹೇಳಿದಾಗ ಆರೋಪಿತರು ಸಮಾನ ಉದ್ದೇಶದಿಂದ ಪಿರ್ಯಾಧಿಯವರ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ  ಕೈನಿಂದ ತಳ್ಳಿ ಕಾಲಿನಿಂದ ತುಳಿದುದಲ್ಲದೇ ಹಾರೆ ಕಾವಿನಿಂದ ಹೊಡೆದಿ ರುತ್ತಾರೆ ಹಾಗೂ ತನಗೆ ಕೂಡ ಹೊಡೆದು  ಪೈಪ್ ಲೈನ್ ಗೆ ಹಾನಿ ಮಾಡಿರುತ್ತಾರೆ ತಮಗಾದ ಹಲ್ಲೆಯ ಬಗ್ಗೆ ಚಿಕಿತ್ಸೆ ಪಡೆವರೇ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 05/2022 ಕಲಂ: 354,324,427, ಜೊತೆಗೆ 34  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾಧಿ ಸಂದೇಶ ಶೆಟ್ಟಿ  (26ವ) ಲಕ್ಷ್ಮಣ ಶೆಟ್ಟಿತಂದೆ  ಲಕ್ಷ್ಮಣ ಶೆಟ್ಟಿ ವಾಸ:  ರಮೀತ ನಿಲಯ ಸೌಕೂರು ಗುಲ್ವಾಡಿ ಗ್ರಾಮ ಇವರು  ದಿನಾಂಕ: 15-01-2022 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ತಮ್ಮ ಮನೆಗೆ ಮರಳು ತಂದು ಲಾರಿ ವಾಪಾಸ್ ಹೋಗುವಾಗ ಆರೋಪಿತರು ಲಾರಿಯನ್ನು ತಡೆದು ಚಕ್ರಕ್ಕೆ ಅಡ್ಡ ಮಲಗಿದ್ದು, ಈ ಬಗ್ಗೆ ತಾನು, ತನ್ನ ಅಣ್ಣ ಸುಕೇಶ  ಶೆಟ್ಟಿ, ತಾಯಿ ಸಂತೋಷ ಕುಮಾರಿ ದೊಡ್ಡಮ್ಮ ರೇಖಾ ಶೆಡ್ತೀ ಸ್ಥಳಕ್ಕೆ ಬಂದು ಲಾರಿ ಬಿಡು ವಂತೆ ಕೇಳಿದಲ್ಲಿ  ಆರೋಪಿತರು  ರಸ್ತೆ ನಿಮ್ಮ ಅಪ್ಪನದಲ್ಲ ಎಂದು ಅವಾಚ್ಯವಾಗಿ ಬೈದು ತನ್ನ ತಾಯಿ  ಹಾಗೂ ದೊಡ್ಡಮ್ಮನಿಗೆ ಕಿವಿಗೆ ಹೊಡೆದು ಮೈಗೆ ಕೈ ಹಾಕಿ ದೂಡಿ ಹಾಗಿರು ತ್ತಾರೆ  ತಡೆಯಲು ಬಂದ ತನಗೂ ತನ್ನ ತಮ್ಮ ನಿಗೂ ಕೈನಿಂದ ತಳ್ಳಿ ತನ್ನ ತಾಯಿ ಹಾಗೂ ದೊಡ್ಡಮ್ಮನಿಗೆ ಕೈನಿಂದ ಹೊಡೆ ದಿದ್ದು, ತಮಗಾದ ಹಲ್ಲೆಯ ಬಗ್ಗೆ ಚಿಕಿತ್ಸೆ ಪಡೆವರೇ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/2022 ಕಲಂ: 341,323,354,504 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  •  ಮಲ್ಪೆ: ಪಿರ್ಯಾದಿದಾರರಾದ ಪ್ರಮೀಳಾ ಮೆಂಡನ್ ( 32),ಗಂಡ :ಸಂಜಯ ಕೋಟ್ಯಾನ್ ,ವಾಸ: ಗುಜ್ಜರಬೆಟ್ಟು ,ಪಡುತೋನ್ಸೆ ಗ್ರಾಮ ಇವರ ನೆರೆಮನೆಯ ನಿವಾಸಿ ಶಶಾಂಕ ಮತ್ತು ಆತನ ಗೆಳೆಯ ಕೌಶಿಕ್ ಪರಿಚಯದವರಾಗಿದ್ದು, ಪಿರ್ಯಾದಿದಾರರ ಮನೆಗೆ ಆಗಾಗ ಬಂದು ಹೋಗುತ್ತಿದ್ದು, ಪಿರ್ಯಾದಿದಾರರೊಂದಿಗೆ ವಿಶ್ವಾಸದ ಮಾತನಾಡಿ ಪಿರ್ಯಾದಿದಾರರೊಂದಿಗೆ ಸಲುಗೆಯಿಂದ ಇದ್ದು, ಪಿರ್ಯಾದಿದಾರರಲ್ಲಿ ನಮಗೆ ತೀವ್ರ ಆರ್ಥಿಕ ಮುಗ್ಗಟ್ಟಿದ್ದು , ಹಣದ ಅವಶ್ಯಕತೆ ಇರುವುದಾಗಿ ವಿಶ್ವಾಸದ ಹಾಗೂ ಕನಿಕರದಿಂದ ಪಿರ್ಯಾದಿದಾರರನ್ನು ನಂಬಿಸಿ ಜನವರಿ ತಿಂಗಳ 2021 ರಲ್ಲಿ ಪಿರ್ಯಾದಿದಾರರ ಗಂಡನ 2 ಪಾವನ್ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಪೆಬ್ರವರಿ 2021 ರಲ್ಲಿ ಒಂದು ಬಾರಿ ಸುಮಾರು 2 ಪಾವನ್ ತೂಕದ ಚೈನ್ ಮತ್ತು ಇನ್ನೊಂದು ಬಾರಿ 3 ಪಾವನ್ ತೂಕದ ಹವಳದ ಸರ ಮತ್ತು ಮಾರ್ಚ್ ತಿಂಗಳಲ್ಲಿ 1 ½ ಪಾವನ್ ತೂಕದ ನೆಕ್ಲೆಸ್ ಮತ್ತು ಜೂನ್ ತಿಂಗಳಲ್ಲಿ 4 ಪಾವನ್ ತೂಕದ ಕರಿಮಣಿ ಸರವನ್ನು ತೆಗೆದುಕೊಂಡು ಹೋಗಿದ್ದು ಪಿರ್ಯಾದಿದಾರರು ಅನೇಕ ಬಾರಿ ವಾಪಾಸ್ಸು ಕೊಡುವಂತೆ ಕೇಳಿದರು ಕೊಡದೇ ಪಿರ್ಯಾದಿದಾರರನ್ನು ನಂಬಿಸಿ ಸುಮಾರು 12 ½ ಪಾವನ್ ತೂಕದ ಚಿನ್ನದ ಆಭರಣಗಳನ್ನು ವಾಪಾಸ್ಸು ನೀಡದೆ ನಂಬಿಸಿ ಮೊಸ ಮಾಡಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2021 ಕಲಂ: 406,420, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ ನಗರ: ಪಿರ್ಯಾದಿ ರಶ್ಮಿತಾ, ಪ್ರಾಯ: 19 ವರ್ಷ, ತಂದೆ: ಉಮೇಶ, ವಾಸ: ಬಂದಲ್ಪಾಡಿ, ದರ್ಖಾಸು ಮನೆ, ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು. ಇವರ ತಂದೆ ಉಮೇಶ, ಪ್ರಾಯ: 50 ವರ್ಷ ರವರು  ದಿನಾಂಕ: 15.12.2022 ರಂದು ಬೆಳಗ್ಗೆ 07:30 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋಗಿದ್ದು ಮದ್ಯಾಹ್ನ ಸುಮಾರು 01:00 ಗಂಟೆ ಸುಮಾರಿಗೆ ಪಿರ್ಯಾದಿದಾರರ ತಂದೆಯೊಂದಿಗೆ ಕೆಲಸ ಮಾಡುತಿದ್ದ ಶೇಖರರವರು ಪಿರ್ಯಾದಿದಾರರಿಗೆ ಕರೆ ಮಾಡಿ  ಉಮೇಶರವರು ಪಳ್ಳಿ ಗ್ರಾಮದ ಬಂಡಶಾಲೆ ವಿಶ್ವರಾಜ ಹೆಗ್ಗೆಡೆ ರವರ ತೋಟದಲ್ಲಿ ಅಡಿಕೆ ಮರದ ಬುಡದಲ್ಲಿ ಸ್ವಚ್ಚತೆ ಕೆಲಸ ಮಾಡುತಿದ್ದಾಗ ಶೌಚಕ್ಕೆಂದು ಹೋದವರು ಸ್ವಲ್ಪ ಸಮಯವಾದರು ವಾಪಾಸು ಕೆಲಸಕ್ಕೆ ಬಾರದೇ ಇದ್ದು ಹುಡುಕಿದಾಗ ತೋಟದ ಬದಿಯಲ್ಲಿರುವ ನೀರಿನ ತೋಡಿನಲ್ಲಿ ತಲೆ ಕೆಳಗಾಗಿ ಬಿದ್ದಂತಹ ಸ್ಥಿತಿಯಲ್ಲಿದ್ದು ಜೊತೆಯಲ್ಲಿದ್ದ ಗಣೇಶ ರವರು ಮೇಲಕ್ಕೆ ಎತ್ತಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ತೋಟಕ್ಕೆ ಬಂದು ತಂದೆ ಉಮೇಶ ರವರ ಮೃತ ದೇಹವನ್ನು ನೋಡಿರುತ್ತಾರೆ. ಪಿರ್ಯಾದಿದಾರರ ತಂದೆ ಉಮೇಶರವರು ಅಸ್ತಮಾ ಖಾಯಿಲೆಯಿಂದ ಬಳಲುತಿದ್ದು ಕೆಲವೊಮ್ಮೆ ಫಿಟ್ಸ್ ಬಂದು ಬೀಳುತಿದ್ದು ಇದೇ ಕಾರಣದಿಂದ ಅಥವಾ ಬೇರೆ ಯಾವುದೋ ಅನಾರೋಗ್ಯದ ಕಾರಣದಿಂದ ಈ ದಿನ ದಿನಾಂಕ: 15.12.2022 ರಂದು ಬೆಳಗ್ಗೆ 11:30 ಗಂಟೆಯಿಂದ 12:45 ಗಂಟೆಯ ಮದ್ಯಾವಧಿಯಲ್ಲಿ  ಶೌಚಕ್ಕೆಂದು ನೀರಿನ ತೋಡಿನ ಬಳಿ ಹೋದವರು ತೋಡಿಗೆ ಬಿದ್ದು ಮೃತಪಟ್ಟಿದ್ದು  ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ನಂ 02/2022 ಕಲಂ 174 CRPCಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 16-01-2022 11:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080