ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ: ದಿನಾಂಕ 15/01/2022 ರಂದು ರಾತ್ರಿ 19:55 ಗಂಟೆಗೆ ಪಿರ್ಯಾದಿದಾರರಾದ ಮಧುರಾಜ್ ಶೆಟ್ಟಿ , ಪ್ರಾಯ: 40 ವರ್ಷ, ತಂದೆ: ಅಪ್ಪು ಶೆಟ್ಟಿ ವಾಸ: ಶ್ರೀದೇವಿ ಪ್ರಸಾದ್, ಮಹಾಲಸಾ ಅಪಾರ್ಟ್ ಮೆಂಟ್, ಜೋಡುರಸ್ತೆ, ಕುಕ್ಕುಂದೂರು ಗ್ರಾಮ ಕಾರ್ಕಳ ಇವರ ಚಿಕ್ಕಪ್ಪ ಕರಿಯ ಶೆಟ್ಟಿ, ಪ್ರಾಯ 69 ವರ್ಷ, ಎಂಬುವವರು ಜೋಡುರಸ್ತೆ ಕಡೆಯಿಂದ ಹಿರ್ಗಾನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ದುರ್ಗಾ ಆರ್ಟ್ಸ್ ಬಳಿ ಅಪಾದಿತ ಮಾರುತಿ ಓಮಿನಿ KA-19-MB-7510 ನ್ನು ಅದರ ಚಾಲಕ ಅನಿಲ್ ಎಂಬಾತನು ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಾದಾಚಾರಿ ಕರಿಯ ಶೆಟ್ಟಿ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕರಿಯ ಶೆಟ್ಟಿರವರ ತಲೆಯ ಹಿಂಬದಿ ಮತ್ತು ಸೊಂಟಕ್ಕೆ ತೀವ್ರ ತರಹದ ಒಳಜಖಂ ಆದವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 16/01/2022 ರಂದು ಬೆಳಗ್ಗಿನ ಜಾವ 02:00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 15/01/2022 ರಂದು 18;30 ಗಂಟೆಗೆ ಪಿರ್ಯಾದಿದಾರರಾದ ಎ. ಸತೀಶ ಕಾಮತ್ ಪ್ರಾಯ 62 ವರ್ಷ ತಂದೆ, ಮಂಜುನಾಥ ಕಾಮತ್ ವಾಸ. ಆರ್ಡಿ ಅಂಚೆ ಅಲ್ಬಾಡಿ ಗ್ರಾಮ ಹೆಬ್ರಿ ತಾಲೂಕು ಇವರ ಸಹೋದರ ದಯಾನಂದ ಕಾಮತ್ ಪ್ರಾಯ 55 ವರ್ಷ ಇವರು ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಆರ್ಡಿ ಎಂಬಲ್ಲಿ ಅವರ ಮನೆಯ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆರ್ಡಿ ಕಡೆಯಿಂದ KA-20-ET-1229 ನೇ ನಂಬ್ರದ ಮೋಟಾರ್ ಸೈಕಲ್‌‌ನ್ನು ಆರೋಪಿಯು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ದಯಾನಂದ ಕಾಮತ್ ಇವರ ಎಡಕಾಲಿನ ಮೂಳೆ ಮುರಿತದ ಗಾಯವಾಗಿದೆ . ಈ ಬಗ್ಗೆ ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೊಟೇಶ್ವರ ಡಾ, ಎನ್,ಆರ್, ಆಚಾರ್ಯ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022 ಕಲಂ: 279, 338 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ಸುಬೃಮಣ್ಯ (50), ತಂದೆ; ಅಣ್ಣಪ್ಪಕುಲಾಲ್‌, ವಾಸ; ಹುಲ್ಕಲ್‌ಕೆರೆ ಹತ್ತಿರ ಮೊಳಹಳ್ಳಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ತಂಗಿಯ ಗಂಡ ಹೆರಿಯಣ್ಣ ಕುಲಾಲ್‌ ಪ್ರಾಯ 50 ವರ್ಷ ಎಂಬುವವರು ಫಿರ್ಯಾದಿದಾರರ ಪಕ್ಕದ ಮನೆಯಲ್ಲಿ ವಾಸವಾಗಿದ್ದು, ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋ ದಲ್ಲಿ ಸುಮಾರು 20 ವರ್ಷದಿಂದ ಚಾಲಕ/ ನಿರ್ವಾಹಕ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 16/01/2022 ರಂದು ಬೆಳಿಗ್ಗೆ 6:00 ಗಂಟೆಗೆ ಹೆರಿಯಣ್ಣ ಕುಲಾಲ್‌ರವರು ಎಂದಿನಂತೆ ಕುಂದಾಪುರಕ್ಕೆ ಕೆಲಸಕ್ಕೆಂದು ಹೋಗಲು ಮನೆಯಿಂದ ಸ್ವಲ್ಪ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದಿದ್ದು ಪಿರ್ಯಾದಿದಾರರು ಅವರನ್ನು ಎತ್ತಿ ಉಪಚರಿಸಿ ನೋಡಲಾಗಿ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು,ನೋಡಲಾಗಿ ಹೆರಿಯಣ್ಣ ಕುಲಾಲ್‌ ರವರು ಮೃತ ಪಟ್ಟಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 03 /2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಮಮತಾ (34), ಗಂಡ: ಸತೀಶ ಶೆಟ್ಟಿ, ವಾಸ; ಶಿವದುರ್ಗಾ ನಿವಾಸ, ಮಾವಿನಕಟ್ಟೆಮನೆ, ಕೆರೆಬೆಟ್ಟು ಗ್ರಾಮ, ಹೆಬ್ರಿ ತಾಲೂಕು ಇವರ ಮಗ ಅನ್ವಿತ್ ಶೆಟ್ಟಿ (14) ಹೆಬ್ರಿಯ ಎಸ್.ಆರ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು. ಶಾಲೆಯಲ್ಲಿ ಕಲಿಯುವ ವಿಚಾರದಲ್ಲಿ ಹಿಂದೆ ಬಿದ್ದಿದ್ದು. ಸರಿಯಾಗಿ ಕಲಿಯುವಂತೆ ಪಿರ್ಯಾದಿದಾರರು ಅತನಿಗೆ ಬುದ್ದಿ ಮಾತನ್ನು ಹೇಳುತ್ತಿದ್ದು. ಈ ವಿಚಾರದಲ್ಲಿ ಅನ್ವಿತ್ ಶೆಟ್ಟಿ ಮನನೊಂದು ದಿನಾಂಕ 16/01/2022 ರಂದು ಬೆಳಿಗ್ಗೆ 10:20 ಗಂಟೆಯಿಂದ 10:30 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಕೋಣೆಯಲ್ಲಿರುವ ಬಾತ್ ರೂಮ್ ಹೋಗಿ ಒಳಗಿನಿಂದ ಬಾಗಿಲಿಗೆ ಚಿಲಕವನ್ನು ಹಾಕಿ ಬಟ್ಟೆಯನ್ನು ಒಣಗಿಸುವ ಸ್ಟೀಲ್ ರಾಡ್ ಗೆ ಬಾತ್ ಟವೆಲ್ ನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022U/s 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಪಿ.ವಿ ಬಿನೋಯ್ (52), ತಂದೆ: ದಿ: ವರ್ಗಿಸ್ ,ವಾಸ: ಪಾರ್ರಡೀಲ್ ಬೀಸಿನಪಾರೆ ಕಾನ್ಕಿ ಜಡ್ಕಲ್ ಗ್ರಾಮ ಬೈಂದೂರು ತಾಲೂಕು ಇವರ ತಮ್ಮ ಪಿವಿ ಬಿಜು (50) ರವರು ತನ್ನ ತಾಯಿ ಕುಂಜ್ಞಾಮ್ಮರೊಂದಿಗೆ ಜಡ್ಕಲ್ ಗ್ರಾಮದಲ್ಲಿ ವಾಸವಾಗಿದ್ದು ವಿಪರೀತ ಮಧ್ಯ ಕುಡಿಯುವ ಅಭ್ಯಾಸದವರಾಗಿದ್ದು ಅದೇ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 15/01/2022 ರಂದು ರಾತ್ರಿ 10:00 ಗಂಟೆಯಿಂದ 11:00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸ ಮನೆಯ ಮಲಗುವ ಕೋಣೆಯಲ್ಲಿ ಮೈಸೂರು ಲ್ಯಾನ್ಸರ್ ಕ್ವಾಟರ್ ಬಟಲ್ ನಲ್ಲಿ ಎಕಾಲ್ಯಕ್ಸ್ ಎಂಬ ವಿಷ ಪದಾರ್ಥವನ್ನು ಬೇರೆಸಿ ಸೇವಿಸಿ ಅಸ್ವಸ್ಥರಾದವರನ್ನು ಪಿರ್ಯಾದಿದಾರರು ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆತರುವ ದಾರಿಯಲ್ಲಿ ದಿನಾಂಕ 16/01/2022 ರಂದು 02:00 ಗಂಟೆಗೆ ಮೃತ ಪಟ್ಟಿರುವುದಾಗಿ ದೃಢೀರಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಿ ಕೋಠಾರಿ (52), ಗಂಡ: ನಾರಾಯಣ ಕೋಠಾರಿ,ವಾಸ:ಕೆಳಕೋಟೇಕೇರ, ಯಖಜಿತ್‌ ಗ್ರಾಮ, ಬೈಂದೂರು ತಾಲೂಕು ಇವರ ತಾಯಿಯ ಪಟ್ಟಾ ಜಾಗದ ಸರ್ವೆ ನಂ 2282,228/4ಕ್ಕೆ ತಾಗಿಕೊಂಡು ಸರಕಾರಿ ಜಾಗವಿದ್ದು ಸರಕಾರಿ ಜಾಗದ ದಾರಿಯಲ್ಲಿ ದಿನಾಂಕ 16/01/2022 ರಂದು 08:35 ಗಂಟೆಗೆ ಆಪಾದಿತರಾದ ಸಂತೋಷ ಗೌಡ, ಸಂಗೀತಾ, ಗೀತಾ ಹಾಗೂ ಗುಲಾಬಿ ರವರು ಸೇರಿ ಅಂಗಡಿಕೋಣೆ ಕಟ್ಟುತ್ತಿರುವಾಗ ಪಿರ್ಯಾದಿದಾರರು ನೆಡೆದಾಡುವ ದಾರಿಯಲ್ಲಿ ಕಟ್ಟಡ ಕಟ್ಟಬೇಡಿ ಎಂದು ಆಕ್ಷೇಪಿಸಿದ್ದಕ್ಕೆ ಆಪಾದಿತ ಸಂತೋಷ ಗೌಡನು ಪಿರ್ಯಾದಿದಾರರ ಕೈಯನ್ನು ಹಿಡಿದ ಎಳೆದು ದೂಡಿ ಹಾಕಿದಾಗ ನೆಲಕ್ಕೆ ಬಿದ್ದಾಗ ಗೀತಾ ಹಾಗೂ ಗುಲಾಬಿಯು ಕೈಯಿಂದ ಗುದ್ದಿದ್ದು, ಸಂಗೀತಾಳು ಕೈಯಿಂದ ಎದೆಗೆ ಹೊಡೆದಿದ್ದು ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು ನಾರಾಯಣ ಕೋಠಾರಿ ಮತ್ತು ಹತ್ತಿರದವರಾದ ರಾಜೇಂದ್ರ ಕೋಠಾರಿ, ವನಿತಾ ಓಡಿ ಬಂದಾಗ ಸಂತೋಷ ಗೌಡನು ನಾರಾಯಣ ಕೋಠರಿಯವರನ್ನು ಮರಕ್ಕೆ ಕಟ್ಟಿ ಹಾಕಿದ್ದು ಸಂಗೀತಾ, ಗೀತಾ, ಗುಲಾಬಿ ಕೈಯಿಂದ ಗುದ್ದಿರುತ್ತಾರೆ. ಅವರೆಲ್ಲರೂ ಸೇರಿ ಕಟ್ಟಡ ಕಟ್ಟಲು ತಡೆಯಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿರುತ್ತಾರೆ, ಈ ಗಲಾಟೆಯ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಗಂಡ ಚಿಕಿತ್ಸೆ ಬಗ್ಗೆ ಬೈಂದೂರು ಸಮುದಾಯ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ: 323,324,354,342,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 16-01-2022 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080