ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 13/12/2022 ರಂದು ಪಿರ್ಯಾದಿದಾರರಾದ ದೀಕ್ಷಿತ್‌ (26), ತಂದೆ: ಸುಧಾಕರ್‌ ನಾಯ್ಕ, ವಾಸ: ಮಡಿ, ಆದರ್ಶ ನಗರ, ಪೇತ್ರಿ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮೋಟಾರ್‌ ಸೈಕಲ್‌ ನಲ್ಲಿ ಬ್ರಹ್ಮಾವರ ಮಾರ್ಗದಿಂದ ಹೆಬ್ರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ 12:30 ಗಂಟೆಯ ಸಮಯಕ್ಕೆ ಚೇರ್ಕಾಡಿ ಗ್ರಾಮದ ಮುಂಡ್ಕಿನ್‌ಜೆಡ್ಡು ಗಾಂಧಿ ನಗರ ಎಂಬಲ್ಲಿ ತಲುಪುವಾಗ  ಪೇತ್ರಿ ಕಡೆಯಿಂದ ಆರೋಪಿ KA-20-AA-2945 ನೇ ನಂಬ್ರದ ಬೋಲೆರೋ ಮ್ಯಾಕ್ಸಿ ಟ್ರಕ್‌ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರಿನಲ್ಲಿ ಹೆಬ್ರಿ ಕಡೆಗೆ ವಿನಯ ರವರು ಸವಾರಿ ಮಾಡುತ್ತಿದ್ದ KA-20-ET-3687 ನೇ ನಂಬ್ರದ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಿನಯ್‌(23) ರವರು ತನ್ನ ಮೋಟಾರ್‌ ಸೈಕಲ್‌ಸಮೇತ ರಸ್ತೆಯ ಮೇಲೆ ಬಿದ್ದು, ಅವರ ತಲೆಗೆ ತೀವ್ರ ರಕ್ತ ಗಾಯ, ಬಲ ಕಾಲಿನ ಕೋಲು ಕಾಲು ಮೂಳೆ ಮುರಿತ ಹಾಗೂ ಮೈಕೈಗಳಿಗೆ ಅಲ್ಲಲ್ಲಿ ಗಾಯವಾಗಿರುತ್ತದೆ. ಅಲ್ಲದೇ ಅವರ ಮೋಟಾರ್‌ ಸೈಕಲ್‌ ಸಂಪೂರ್ಣ ಜಖಂ ಗೊಂಡಿರುತ್ತದೆ. ಆರೋಪಿಯು ಅಪಘಾತವೆಸಗಿ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಮುಂದೆ ಹೋಗಿದ್ದು, ಅಲ್ಲಿ ಸೇರಿದ್ದ ಜನರು ವಾಹನವನ್ನು ಬೆನ್ನಟ್ಟಿ ನಿಲ್ಲಿಸಿ ಆರೋಪಿಯನ್ನು ಅಪಘಾತವಾದ ಸ್ಥಳಕ್ಕೆ ಕರೆದುಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 213/2022 ಕಲಂ : 279, 338 ಐಪಿಸಿ & 134(A)(B) ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  14/12/2022 ರಂದು ಬೆಳ್ಳಿಗೆ  05:30 ಗಂಟೆಗೆ  ಆರೋಪಿ ಪ್ರವೀಣ ಪಿರ್ಯಾದಿದಾರರಾದ ನಾಗರಾಜ ಆಚಾರ್ಯ (28), ತಂದೆ:ರಾಘವ ಆಚಾರ್ಯ , ವಾಸ: ನಾಗಪ್ರಸಾದ ಮೂಡಬಗೆ ಗುಬ್ಯಾಡಿ, ಅಂಪಾರು ಗ್ರಾಮ ಕುಂದಾಪುರ  ತಾಲೂಕು ಇವರನ್ನು KA-20-EK-8174 ನೇ ನಂಬ್ರದ ಮೋಟಾರ್ ಸೈಕಲ್‌‌‌‌ನಲ್ಲಿ ಸಹ  ಸವಾರನ್ನಾಗಿ ಕುಳ್ಳಿರಿಸಿಕೊಂಡು ಕುಂದಾಪುರ ತಾಲೂಕಿನ  ಅಂಪಾರು ಗ್ರಾಮದ ನೆಲ್ಲಿಕಟ್ಟೆಯ ಬಲಾಡಿ ಎಂಬಲ್ಲಿ  ಮೋಹನ ವೈದ್ಯ ರವರ ರಬ್ಬರ್ ತೋಟದ ಕ್ರಾಸ್ ಹತ್ತಿರ ಕಂಡ್ಲೂರು  ಕಡೆಗೆ  ಹೋಗುತ್ತಿರುವಾಗ ಆರೋಪಿಯು ಮೋಟಾರ್  ಸೈಕಲ್‌ನ್ನು  ಅತೀ ವೇಗ  ಹಾಗೂ  ಅಜಾರೂಕತೆಯಿಂದ  ಚಲಾಯಿಸಿಕೊಂಡು  ಹೋಗಿದ್ದು, ಈ   ಸಮಯ  ಅಕಸ್ಮಾತ್ ಕಾಡು ಹಂದಿಗಳು  ರೆಸ್ತೆಯ  ಮೇಲೆ   ಓಡಿ ಬಂದಾಗ ಅದನ್ನು ತಪ್ಪಿಸಲು  ಆರೋಪಿಯು  ಒಮ್ಮೆಲೆ ಮೋಟಾರ್  ಸೈಕಲ್‌‌ಗೆ   ಬ್ರೇಕ್ ಹಾಕಿದ ಪರಿಣಾಮ  ಮೋಟಾರ್ ಸೈಕಲ್  ಆತನ ಹತೋಟಿ ತಪ್ಪಿ, ರಸ್ತೆಯ ಮೇಲೆ ಬಿದ್ದ  ಪರಿಣಾಮ ,ಎರಡು  ಜನರು  ರಸ್ತೆಯ  ಮೇಲೆ ಬಿದ್ದಿದ್ದು, ಇದರಿಂದ ಪಿರ್ಯಾದಿದಾರರ ಬಲಕೈಗೆ ಮೂಳೆ ಮುರಿತದ ಹಾಗೂ ಎಡಕೈಗೆ, ಬಲಕಾಲಿನ ಮುಂಗಾಲಿಗೆ,ಹಣೆಗೆ ರಕ್ತಗಾಯವಾಗಿದೆ ಹಾಗೂ  ಆರೋಪಿ   ಮೋಟಾರ್  ಸೈಕಲ್  ಸವಾರನ   ಬಲಕೈ  ಭುಜಕ್ಕೆ  ಗುದ್ದಿದ ಒಳನೋವು  ಉಂಟಾಗಿರುತ್ತದೆ. ಪಿರ್ಯಾದಿದಾರರು ಹಾಗೂ   ಅರೋಪಿಯು  ಚಿಕಿತ್ಸೆಯ ಬಗ್ಗೆ   ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ಹೋಗಿದ್ದು,  ಅಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 136/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಕಾರ್ಕಳ: ದಿನಾಂಕ 14/12/2022 ರಂದು ಪಿರ್ಯಾದಿದಾರರಾದ ಹರಿಶ್ಚಂದ್ರ ಗಡಿಯಾರ್‌ (47), ತಂದೆ: ದಿ. ಅಪ್ಪು ಗಡಿಯಾರ್‌, ವಾಸ: ಮಹಾಲಿಂಗೇಶ್ವರ ದೇವಾಸ್ಥಾನದ ಬಳಿ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರ ಮಾಲೀಕತ್ವದ KA-20-MD-5183 ನೇ ನಂಬ್ರದ ಎರ್ಟಿಗಾ ಮಾರುತಿ ಕಾರು ಹಾಗೂ KA-20-AA-8158 ಸೂಪರ್‌ ಕ್ಯಾರಿ ಮಿನಿ ಗೂಡ್ಸ್‌ ವಾಹನ ಹಾಗೂ ಹರೀಶ್‌ ಶೆಟ್ಟಿರವರ KA-20-MB-8211 ನೇ ನೋಂದಣಿ ಸಂಖ್ಯೆಯ ಮಾರುತಿ ಇಕೋ ಕಾರನ್ನು ಕಾರ್ಕಳ-ಉಡುಪಿ ರಸ್ತೆಯ ಕಾರ್ಕಳ ತಾಲೂಕು ನೀರೆ ಗ್ರಾಮದ ಪಳ್ಳಿ ಕ್ರಾಸ್‌ ಎಂಬಲ್ಲಿ ಪಿರ್ಯಾದಿದಾರರ ಅಂಗಡಿಯ ಬಳಿ ಎಡಬದಿಯಲ್ಲಿ ನಿಲ್ಲಿಸಿದ್ದು ಸಮಯ ಸುಮಾರು ಮದ್ಯಾಹ್ನ 2:30 ಗಂಟೆಗೆ ಉಡುಪಿಯಿಂದ ಕಾರ್ಕಳ ಕಡೆಗೆ KA-20-D-8869 ನೇ ನೋಂದಣಿ ಸಂಖ್ಯೆಯ ಟಿಪ್ಪರ್‌ ವಾಹನವನ್ನು ಅದರ ಚಾಲಕ ಅಂತೋಣಿ ಸಂತೋಷ್‌ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದ 3 ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 3 ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 149/2022 ಕಲಂ:  279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 14/12/2022  ರಂದು  ಮಧ್ಯಾಹ್ನ 02:00 ಗಂಟೆಗೆ, ಕುಂದಾಪುರ ತಾಲೂಕಿನ, ಕರ್ಕುಂಜಿ  ಗ್ರಾಮದ  ತಿರುವಿನ ರಾಜ್ಯ  ಹೆದ್ದಾರಿ 27   ರಸ್ತೆಯಲ್ಲಿ, ಆಪಾದಿತ  ಮನೀಶ್‌ KA-20-MD-6566ನೇ ಮಾರುತಿ ಬ್ರೇಜಾ ಕಾರನ್ನು ನೆಂಪು (ನೇರಳಕಟ್ಟೆ) ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು, ವಂಡ್ಸೆ ಕಡೆಯಿಂದ ನೆಂಪು ಕಡೆಗೆ ಶಶಿಧರ ಎಂಬುವವರು KA-19-EC-2393ನೇ ಬೈಕಿನಲ್ಲಿ ಪಿರ್ಯಾದಿದಾರರಾದ  ಚೇತನ್‌ಶೆಟ್ಟಿ (20), ತಂದೆ: ಜಯ ಕುಮಾರ್‌ ಶೆಟ್ಟಿ, ವಾಸ: ಒಳಗಿನ ಮನೆ, ಹೆರ್ಜಾಡಿ, ಕರ್ಕುಂಜಿ ಗ್ರಾಮ ಕುಂದಾಪುರ ತಾಲೂಕು ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ  ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಹಾಗೂ  ಶಶಿಧರ್‌ ರವರ  ಬಲಕಾಲಿಗೆ ಮೂಳೆ ಮುರಿತವಾದ  ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 133/20220 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಸುಜಾತ ಶೆಡ್ತಿ (50), ತಂದೆ: ದಿ.ವನಜಾಕ್ಷಿ ಶೆಡ್ತಿ, ವಾಸ: ಹೆರಿಬೈಲುಮನೆ ಗ್ರಾಮ, ಮೂಡ್ಲಕಟ್ಟೆ ಅಂಚೆ, ಕಂದಾವರ ಗ್ರಾಮ, ಕುಂದಾಪುರ ತಾಲೂಕು ಇವರ ಕಂದಾವರ ಗ್ರಾಮದ ಹೆರಿಬೈಲುಮನೆ ಎಂಬಲ್ಲಿರುವ ಸರ್ವೆ ನಂಬ್ರ 25/3 C ರಲ್ಲಿರುವ ಪಟ್ಟಾ ಜಾಗಕ್ಕೆ ಆರೋಪಿಗಳಾದ 1) ಹರೀಶ್‌ಶೆಟ್ಟಿ, ತಂದೆ: ಸಂಜೀವ ಶೆಟ್ಟಿ, ವಾಸ: ನಾರ್ಕಳಿಮನೆ, ಕಂದಾವರ ಗ್ರಾಮ, ,2)ಅಶೋಕ ಶೆಟ್ಟಿ, ವಾಸ: ನಾರ್ಕಳಿಮನೆ, ಕಂದಾವರ ಗ್ರಾಮ, 3)ರಾಮಚಂದ್ರ ಶೇರಿಗಾರ್‌,  ತಂದೆ: ದಿ. ನಾರಾಯಣ ಶೇರಿಗಾರ್‌,ವಾಸ: ತೋಟದಮಕ್ಕಿ, ಕಂದಾವರ ಗ್ರಾಮ ಹಾಗೂ ಇತರರು ದಿನಾಂಕ 13/12/2022 ರಂದು 23:30 ಗಂಟೆಯಿಂದ ದಿನಾಂಕ 14/12/2022 ರ ಬೆಳಿಗ್ಗೆ 8:00 ಗಂಟೆಯ ನಡುವಿನ ಅವಧಿಯಲ್ಲಿ ಹೊಸ ರಸ್ತೆಯನ್ನು ನಿರ್ಮಿಸುವ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ ಧರೆಯ ಬೇಲಿಯನ್ನು ನಾಶ ಮಾಡಿರುವುದರಿಂದ ಪಿರ್ಯಾದಿದಾರರಿಗೆ 8,000/- ರೂಪಾಯಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022, ಕಲಂ: 447, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 15-12-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080