ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾಧ ಶ್ರೀಮತಿ ಸೌಮ್ಯ ಎಸ್ ಶೆಟ್ಟಿ (35) ಗಂಡ:ಸಂದೀಪ್ ಶೆಟ್ಟಿ ವಾಸ: ಶ್ರೀದೇವಿಕೃಪಾ ಉಳಿಯ ಅಲಂಗಾರು ಮಾರ್ಪಾಡಿ ಗ್ರಾಮ ಮೂದಬಿದ್ರೆ ಅಂಚೆ ತಾಲೂಕು ಇವರು ದಿನಾಂಕ 14/12/2022 ರಂದು ರಾತ್ರಿ ಕಾರ್ಕಳದ ಬಜಗೊಳಿಯಲ್ಲಿ ಕಾರ್ಯಕ್ರಮ ಮುಗಿಸಿ ತನ್ನ ಚಿಕ್ಕಪ್ಪ ವಿಜಯ ಬಿ ಶೆಟ್ಟಿ (57) ರವರು ಚಲಾಯಿಸುತ್ತಿರುವ KA-19 AA-0763 ನೇ ನಂಬ್ರದ ಆಟೋ ರಿಕ್ಷಾದಲ್ಲಿ ತನ್ನ ಮಗ ಆದಿತ್ಯ ಎಸ್‌ಶೆಟ್ಟಿ ಹಾಗೂ ಚಾಲಕ ವಿಜಯ ಬಿ ಶೆಟ್ಟಿಯವರ ಮಗಳಾದ ದೀಪಾ ವಿ ರವರೊಂದಿಗೆ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಪ್ರಯಾಣಿಸುತ್ತಾ ಸಮಯ ಸುಮಾರು ರಾತ್ರಿ 09:00 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ರಾಕ್‌ ಸೈಡ್‌ ಬಾರ್‌ ಎದುರುಗಡೆ ತಲುಪುವಾಗ KA-20 EQ-0260 ನೇ ನಂಬ್ರದ ಮೋಟಾರ್‌ಸೈಕಲ್‌ನ್ನು ಸವಾರನು ಕಾರ್ಕಳದ ಪುಲ್ಕೇರಿ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ರಾಕ್‌ಸೈಡ್‌ ಜಂಕ್ಷನ್‌ನಿಂದ ಕಜೆ ಕಡೆಗೆ ಹೋಗುವ ರಸ್ತೆಗೆ ತಿರುಗಿಸಿದ್ದು ಚಾಲಕ ವಿಜಯ ಬಿ ಶೆಟ್ಟಿರವರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮಲೇ ಬ್ರೇಕ್‌ಹಾಕಿದ ಕಾರಣ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದು ಆಟೋ ರಿಕ್ಷಾವು ಮುಗುಚಿ ಬಿದ್ದಿದ್ದು ಪರಿಣಾಮ ವಿಜಯ ಬಿ ಶೆಟ್ಟಿಯವರು ತಲೆ ಮೂಗು ಎದೆ ಹಾಗೂ ಕೈಗೆ ತೀವೃವಾದ ಗಾಯಗೊಂಡಿದ್ದು ಗಾಯಗೊಂಡ ವಿಜಯ ಬಿ ಶೆಟ್ಟಿಯವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದು, ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರನಿಗೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 150/2022 ಕಲಂ: 279,337,338,304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 14/12/2022 ರಂದು ಪಾಂಡುರಂಗ ನಾಯ್ಕ್ ಎಂಬವರು KA-47 X-6612 ನೇ ಮೋಟಾರು ಸೈಕಲಿನಲ್ಲಿ ಸೋಮಯ್ಯ ನಾಯ್ಕ್ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ತೂದಳ್ಳಿ ಕಡೆಯಿಂದ ಶಿರೂರು ಕಡೆಗೆ ತಾರು ರಸ್ತೆಯಲ್ಲಿ ಬರುತ್ತಿದ್ದಾಗ ಸಾಯಂಕಾಲ 07:00 ಗಂಟೆಗೆ ಯಡ್ತರೆ ಗ್ರಾಮದ ಆಲಂದೂರು ಶಾಲೆಯ ಬಳಿ ತಲುಪುವಾಗ ಮೋಟಾರು ಸೈಕಲ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಬಿದ್ದು ಮೋಟಾರು ಸೈಕಲ್ ಸಹ ಸವಾರ ಸೋಮಯ್ಯ ನಾಯ್ಕ ರವರ ಎರಡೂ ಕೈ ಗಳ ಮೂಳೆ ಮುರಿತ ಉಂಟಾಗಿದ್ದು ಮತ್ತು ಕಾಲಿಗೆ ತರಚಿದ ಗಾಯ ಉಂಟಾಗಿರುತ್ತದೆ. ಮೋಟಾರು ಸೈಕಲ್ ಸವಾರ ಪಾಂಡುರಂಗ ನಾಯ್ಕ್ ರವರಿಗೆ ಸಣ್ಣ ಪುಟ್ಟ ತರಚಿದ ಗಾಯ ಉಂಟಾಗಿರುತ್ತದೆ. ಪಿರ್ಯಾದುದಾರರು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 244/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ಶಕುಂತಳ (54) ಗಂಡ: ದಿ: ಶ್ರೀಧರ್ ಪೂಜಾರಿ ವಾಸ: ನೆಲ್ಲಿಗುಡ್ಡೆ ಕುಕ್ಕುಂದೂರು ಗ್ರಾಮ ಕಾರ್ಕಳ ಇವರ ಮಗ ಸುನಿಲ್ ಕುಮಾರ್ (34) ಎಂಬವರು ಈತನು ಬೆಂಗಳೂರಿನಲ್ಲಿ ವೈದ್ಯರ ಕ್ಲೀನಿಕ್‌ನಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 13/12/2022 ರಂದು ಬೆಳಿಗ್ಗೆ ಬೆಂಗಳೂರಿನಿಂದ ಮನೆಗೆ ಬಂದಿದ್ದು, ಸದ್ರಿಯವರು ಯಾವುದೋ ಕಾರಣದಿಂದ ಮನನೊಂದು ದಿನಾಂಕ 14/12/2022 ರಂದು ರಾತ್ರಿ 8:30 ಗಂಟೆಯಿಂದ ದಿನಾಂಕ 15/12/2022 ರಂದು ಬೆಳಿಗ್ಗೆ 07:30 ಗಂಟೆಯ ಮಧ್ಯೆ ಕುಕ್ಕುಂದೂರು ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಇವರ ಮನೆಯ ಕೋಣೆಯ ಒಳಗೆ ಮರದ ಪಕ್ಕಾಸಿಗೆ ಬಟ್ಟೆಯ ಶಾಲಿನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 54/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ನಿತಿನ್‌ ಖಾರ್ವಿ (24) ತಂದೆ: ನೀಲಕಂಠ ಖಾರ್ವಿ, ವಾಸ: ವಾತ್ಸಲ್ಯ, ಮಲ್ಯರಬೆಟ್ಟು, ಗಂಗೊಳ್ಳಿ ಗ್ರಾಮ ಕುಂದಾಪುರ ರವರು ಸಿವಿಲ್‌ಕಟ್ರೇಂಕ್ಟರ್‌ಕೆಲಸ ಮಾಡಿಕೊಂಡಿದ್ದು ದಿನಾಂಕ 15/12/2022 ರಂದು ಗಂಗೊಳ್ಳಿ ಗ್ರಾಮದ ಇಂದೂಧರ ದೇವಸ್ಥಾನದ ಬಳಿ ದೇವಸ್ಥಾನದ ಹಿಂಬದಿಯಲ್ಲಿ ರಸ್ತೆ ಕಾಮಗಾರಿ ಕೆಲಸವನ್ನು ಜೆ,ಸಿ,ಬಿಯಿಂದ ಮಾಡಿಸುತ್ತೀರುವಾಗ ಸಮಯ ಸುಮಾರು 11:30 ಗಂಟೆಗೆ ಆಪಾದಿತ ದೇವೇಂದ್ರ ಸಿಪಾಯಿ ಎಂಬವರು ಬಂದು ಕೆಲಸ ನಿಲ್ಲಿಸುವಂತೆ ಬೆದರಿಸಿ ನಿತಿನ್‌ ರವರನ್ನು ಉದ್ದೇಶಿಸಿ ನಿನಗೆ ಕೆಲಸ ಕೊಟ್ಟಿದ್ದು ಯಾರು ಇದು ನನಗೆ ಸೇರಿದ ಊರು ಎಂದು ಹೇಳಿ ಇವರ ಅಂಗಿಯ ಕಾಲರ್‌ನ್ನು ಹಿಡಿದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ, ಬೆನ್ನಿಗೆ ಹೊಡೆದು, ಅಲ್ಲಿಯೇ ರಸ್ತೆಯಲ್ಲಿರುವ ಕಲ್ಲ್ ನ್ನು ತೆಗೆದುಕೊಂಡು ಬೆನ್ನಿಗೆ ಹೊಡೆದಿದ್ದು ಆ ಸಮಯ ನಿತಿನ್‌ ರವರು ಬೊಬ್ಬೆ ಹಾಕಿದಾಗ ಅಲ್ಲಿಯೇ ಇದ್ದ ಗುತ್ತಿಗೆದಾರ ಸಂದೀಪ ಖಾರ್ವಿ ಓಡಿ ಬಂದು ನಿತಿನ್‌ ರವರನ್ನು ಬಿಡಿಸಿದ್ದು, ಆ ಸಮಯ ಸಾರ್ವಜನಿಕರು ಸ್ಥಳದಲ್ಲಿ ಸೇರುವುದನ್ನು ನೋಡಿ ಆಪಾದಿತನು ಕೈಯಲ್ಲಿದ್ದ ಕಲ್ಲನ್ನು ಅಲ್ಲಿಯೇ ಬಿಸಾಡಿ ಇನ್ನು ಮುಂದಕ್ಕೆ ತನ್ನ ಊರಿನಲ್ಲಿ ಕೆಲಸ ವಹಿಸಿಕೊಂಡರೆ ಇವರನ್ನು ಹಾಗೂ ಅವರ ಮನೆಯವರನ್ನು ಬಿಡುವುದಿಲ್ಲ ಹಾಗೂ ಜೆ,ಸಿ,ಬಿಯನ್ನು ಮೈಮೇಲೆ ಹರಿಸಿ ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಆಪಾದಿತನಿಗೆ ನಿತಿನ್‌ ರವರ ಮೇಲಿನ ಹಳೆ ಧ್ವೇಷದಿಂದಾಗಿ ಈ ಹಲ್ಲೆ ನಡೆಸಿರುವುದಾಗಿದೆ. ನಿತಿನ್‌ ರವರಿಗೆ ಈ ಹಲ್ಲೆಯಿಂದ ಉಂಟಾದ ನೋವಿನ ಬಗ್ಗೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಚಿಕಿತ್ಸೆ ಪಡೆದುಕೊಂಡಿರುವುದಾಗಿದೆ, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 341, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ಶಾಂತಾ ನಾಯ್ಕ (58) ಗಂಡ: ಕೃಷ್ಣ ನಾಯ್ಕ ವಾಸ: ಪಂಚದುರ್ಗ, ಶ್ರೀ ಪದ್ಮ ಪಂಪ್ ಗೋಡೌನ್ ಬಳಿ ಇಂದ್ರಾಣಿ ದೇವಸ್ಥಾನ ರಸ್ತೆ, ಇಂದ್ರಾಳಿ, ಶಿವಳ್ಳಿ ಗ್ರಾಮ, ಉಡುಪಿ ಇವರು ದಿನಾಂಕ 15/12/2022 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ದುರ್ಗಾನಗರದಲ್ಲಿರುವ ಅವರ ಹಳೆಯ ಮನೆಯಲ್ಲಿದ್ದ ಸಾಮಾನುಗಳನ್ನು ತರಲು ಹೋಗಿದ್ದು, ಮನೆಯಲ್ಲಿ ಶಾಂತಾ ನಾಯ್ಕ ರವರ ಗಂಡನಾದ ಕೃಷ್ಣ ನಾಯ್ಕ್ ಒಬ್ಬರೇ ಇದ್ದರು, ಶಾಂತಾ ನಾಯ್ಕ ರವರು 11:00 ಗಂಟೆಯ ಸುಮಾರಿಗೆ ವಾಪಾಸು ಮನೆಗೆ ಬಂದಾಗ ಮನೆಯ ಬಳಿ ಜನ ಸೇರಿದ್ದು, ಅತ್ತಿಗೆ ಜಯಂತಿ ಕೂಡ ಅಲ್ಲಿಯೇ ಇದ್ದು ಅವರ ಬಳಿ ಏನಾಯಿತು ಎಂದು ಕೇಳಿದಾಗ ನಮ್ಮ ಮನೆಯ ನಾಯಿ ಜೋರಾಗಿ ಬೊಗಳುತ್ತಿದ್ದು, ಏನಾಯಿತೆಂದು ನೋಡಲು ನಿಮ್ಮ ಮನೆಗೆ ಬಂದೆ, ಮನೆಯ ಒಳಗಿನಿಂದ ಬೊಬ್ಬೆ ಹೊಡೆಯುತ್ತಿರುವ ಶಬ್ದ ಕೇಳುತ್ತಿದೆ ಎಂದು ಹೇಳಿದರು. ಪಿರ್ಯಾದಿದಾರರು ಕೂಡಲೇ ಮನೆಯ ಬಾಗಿಲು ತೆರೆಯಲು ಹೋದಾಗ ಒಳಗಿನಿಂದ ಚಿಲಕ ಹಾಕಿದ್ದು, ಕಿಟಕಿಯ ಮುಖಾಂತರ ನೋಡಿದಾಗ ಆರೋಪಿ ಅರ್ಜುನ ಶಾಂತಾ ರವರ ಗಂಡನಿಗೆ ಯಾವುದೋ ವಸ್ತುವಿನಿಂದ ಹೊಡೆಯುತ್ತಿರುವುದು ಕಾಣಿಸಿತು. ನಂತರ ಮನೆಯ ಬಳಿ ಸೇರಿದ್ದ ಜನರು ಬಾಗಿಲನ್ನು ಬಲಾತ್ಕಾರವಾಗಿ ದೂಡಿ ಒಳಗೆ ಹೋಗಿ ನೋಡಿದಾಗ ಆರೋಪಿ ಅರ್ಜುನ ಕಬ್ಬಿಣದ ಒಂದು ವಸ್ತುವಿನಿಂದ ಶಾಂತಾ ಇವರ ಗಂಡನ ತಲೆಗೆ, ಬೆನ್ನಿಗೆ, ಮೈ ಕೈಗೆ ಎಲ್ಲೆಂದರಲ್ಲಿ ಹೊಡೆಯುತ್ತಿದ್ದು, ಗಂಡನ ಮೈಮೇಲೆ ಗಾಯವಾಗಿ ರಕ್ತ ಮನೆಯ ಒಳಗಡೆ ನೆಲದಲ್ಲಿ ಚೆಲ್ಲಾಡಿತ್ತು. ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಜನ ಕೃಷ್ಣ ನಾಯ್ಕ್ ರನ್ನು ಆರೋಪಿಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದು ಬಳಿಕ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಶಾಂತಾ ನಾಯ್ಕ ರವರ ಗಂಡ ಪರಿಶಿಷ್ಟ ಪಂಗಡದ ನಾಯ್ಕ್ ಜಾತಿಗೆ ಸೇರಿದ ವ್ಯಕ್ತಿಯೆಂದು ಗೊತ್ತಿದ್ದೂ ಸಹಾ ಆರೋಪಿ ಅರ್ಜುನ ಹೊಸದಾಗಿ ಮನೆ ಕಟ್ಟಿಸಿರುವ ವಿಷಯಕ್ಕೋ ಅಥವಾ ಬೇರೆ ಯಾವುದೋ ವಿಷಯಕ್ಕೋ ಕೊಲೆ ಮಾಡುವ ಉದ್ದೇಶದಿಂದ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಕಬ್ಬಿಣದ ಒಂದು ವಸ್ತುವಿನಿಂದ ಗಂಭೀರ ಸ್ವರೂಪದ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 215/2022 ಕಲಂ: 448, 326, 307 ಐಪಿಸಿ ಮತ್ತು 3(2)(V) POA (SC/ST)Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 15-12-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080