ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸುದೀಪ್ (25), ತಂದೆ: ಲೋಕೇಶ್ ವಾಸ: ಪವಿ ನಿಲಯ, ಕೋಟತಟ್ಟು , ಪಡುಕೆರೆ  ಕೋಟತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು  ದಿನಾಂಕ 13/11/2022 ರಂದು ರಾತ್ರಿ 1 ಗಂಟೆಯ ಸುಮಾರಿಗೆ ತನ್ನ ಬೈಕಿನಲ್ಲಿ ಕೋಟಕ್ಕೆ ಬಂದು ವಾಪಾಸು ಕೋಟತಟ್ಟ ಪಡುಕೆರೆ ಕಡೆಗೆ ಹೊರಟು ದಿನೇಶ್ ಗಾಣಿಗರವರ ಮನೆಯಿಂದ ಸ್ವಲ್ಪ ಮುಂದೆ 01:30 ಗಂಟೆಗೆ ತಲುಪುವಾಗ ಅವರ  ಎದುರಿನಲ್ಲಿ ಕೋಟದಿಂದ ಪಡುಕೆರೆ ಕಡೆಗೆ ಪರಿಚಯದ ಕಾರ್ತಿಕ್ KA-13-EP-5479 ನೇ  ಬೈಕಿನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ನಿರ್ಲಕ್ಷತನದಿಂದ  ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬೈಕ್ ಸಮೇತ ರಸ್ತೆಗೆ ಬಿದ್ದರು. ಕೂಡಲೇ ಉಪಚರಿಸಿ ನೋಡಲಾಗಿ ಬೈಕ್ ಸವಾರನಿಗೆ ತರಚಿದ ಗಾಯವಾಗಿದ್ದು  ಹಿಂಬದಿ ಸವಾರ ಪರಿಚಯದ ಕಾಸನಗುಂದು ಶ್ರೀಶಾ ಎಂಬುವವನಾಗಿದ್ದು ಆತನ ತಲೆಗೆ  ತೀವೃ ತರಹದ ಗಾಯವಾಗಿರುವುದಲ್ಲದೇ  ಭುಜಕ್ಕೆ ತರಚಿದ ಗಾಯವಾಗಿರುತ್ತದೆ  ಆತನು ಮಾತನಾಡುತ್ತಿರಲಿಲ್ಲ. ನಂತರ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡುಹೋದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 197/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾಪು: ಪಿರ್ಯಾದಿದಾರರಾದ ಅಬ್ದುಲ್ ವಾಸಿ (27), ತಂದೆ: ಮೊಹಮ್ಮದ್ ಫಾರೂಕ್ ರಜಬ್, ವಾಸ: 1-106 (3) ಶಾಹೇನ್ ಮಂಜಿಲ್, ಹಳೆ ಬಿಕೋ ಬಳಿ ಉಳಿಯಾರಗೋಳಿ ಗ್ರಾಮ ಕಾಪು ತಾಲೂಕು ಇವರ ತಂದೆ ಮಹಮ್ಮದ್ ಫಾರೂಕ್ ರಜಬ್ (55) ರವರು ಸ್ವಂತ ಮೀನಿನ ಲಾರಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ 14/11/2022 ರಂದು ತನ್ನ ಸ್ಕೂಟರ್‌ ನಂಬ್ರ KA-20-EJ-6747 ನೇದನ್ನು ಸವಾರಿ ಮಾಡಿಕೊಂಡು ಮಲ್ಲಾರು ಗ್ರಾಮದ ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್‌‌ನ ಬಳಿ ರಾಹೆ 66ರ ಉಡುಪಿ ಮಂಗಳೂರು ಏಕಮುಖ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಮಧ್ಯಾಹ್ನ 1:20 ಗಂಟೆಗೆ  ಅದೇ ರಸ್ತೆಯಲ್ಲಿ KA-36-P-2680 ನೇ ಹುಂಡೈ ಕ್ರೆಟಾ ಕಾರಿನ ಚಾಲಕ ನಬಿ ರಸೂಲ್ ತನ್ನ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ತಂದೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆಯವರು ರಸ್ತೆಗೆ ಬಿದ್ದು ಅವರ ಕಿವಿ ಮೂಗು ಬಾಯಿಯಿಂದ ತೀವ್ರ ರಕ್ತ ಸ್ರಾವ ಆಗಿ ಪ್ರಜ್ಞೆ ತಪ್ಪಿ ಬಿದ್ದವರನ್ನು ಸಾರ್ವಜನಿಕರು 108  ಅಂಬ್ಯುಲೆನ್ಸ್‌ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ತಂದೆಯವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಲ್ಲದೇ ಈ ಅಪಘಾತದಿಂದ ಎರಡೂ ವಾಹನಗಳು ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 125/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಬ್ರಹ್ಮಾವರ: ದಿನಾಂಕ 13/11/2022 ರಂದು ಪಿರ್ಯಾದಿದಾರರಾದ ಕಾರ್ತೀಕ್‌  (26), ತಂದೆ:  ಶೇಖರ ಸುವರ್ಣ್‌, ವಾಸ: ಜನನಿ ನಿಲಯ, ಎಸ್.ಬಿ ರಸ್ತೆ. ಬಾರ್ಕೂರು, ಹೊಸಾಳ ಗ್ರಾಮ, ಬ್ರಹ್ಮಾವರ ತಾಲೂಕು ಇವರು KA-20-EL-5316 ನೇ ಮೋಟಾರ ಸೈಕಲ್‌ನಲ್ಲಿ ಮನೆಯಿಂದ ಹೊರಟು ಬಾರ್ಕೂರು ಮಂದಾರ್ತಿ ಮುಖ್ಯ ರಸ್ತೆಯಲ್ಲಿ ಮಂದಾರ್ತಿ ಕಡೆಗೆ ಸವಾರಿ ಮಾಡಿಕೊಂಡು  ಹೋಗುತ್ತಾ ಮಧ್ಯಾಹ್ನ 1:00 ಗಂಟೆಗೆ ಹೇರಾಡಿ ಗ್ರಾಮದ  ಬಾರ್ಕೂರು ರೈಲ್ವೆ ಬ್ರೀಡ್ಜ್‌ ನಿಂದ ಸ್ವಲ್ಪ ಮುಂದೆ ರಶ್ಮೀ ಬಾರ್‌ & ರೆಸ್ಟೋರೆಂಟ್‌ ಎದುರು  ತಲುಪುವಾಗ, ಅವರ ಎದುರಿನಿಂದ ಮಂದಾರ್ತಿ  ಕಡೆಯಿಂದ  ಬಾರ್ಕೂರು ಕಡೆಗೆ ಆರೋಪಿ ಮೊಹಮದ್‌ ಶಿಫಾನ್‌ ರವರು ಅವರ KA-20-M-8314 ನೇ ಮಾರುತಿ ಓಮ್ನಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲ ಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ  ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು  ಬಳಿಕ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ  ರಸ್ತೆಯ ಬಲ ಬದಿಗೆ ಹೋಗಿ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಮೋಟಾರ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ  ಬಲ ಕಾಲಿನ  ಪಾದದ ಭಾಗಕ್ಕೆ  ಹಾಗೂ ಹೆಬ್ಬೆರಳಿಗೆ  ಮೂಳೆ ಮುರಿತದ ರಕ್ತ ಗಾಯವುಂಟಾಗಿರುತ್ತದೆ. ಹಾಗೂ ಅಪಘಾತವೇಸಗಿದ ಓಮ್ನಿ ಕಾರಿನ ಆರೋಪಿಯ ಪಕ್ಕದ ಶೀಟಿನಲ್ಲಿ ಕುಳ್ಳಿತ್ದಿದ್ದ ಅಮಾನ್ ರವರ ಎಡ ಕೈಗೆ  ಒಳ ಜಖಂ ಉಂಟಾಗಿರುತ್ತದೆ. ಆರೋಪಿಗೆ  ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 191/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಕೃಷ್ಣ ಸಾಮಗ (70), ತಂದೆ: ದಿ. ಸುಬ್ಬಣ್ಣ,  ಸಾಮಗ, ವಾಸ: ನಂದಲೀಲಾ, ಮನೆ ನಂಬ್ರ 7-2-64ಬಿ, ವಾದಿರಾಜ ಮಾರ್ಗ 3ನೇ ಅಡ್ಡರಸ್ತೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರೊಂದಿಗೆ ವಾಸವಿದ್ದ  ಪಿರ್ಯಾದಿದಾರರ ಕಿರಿಯ ಮಗ ರಾಜಗೋಪಾಲ ಸಾಮಗ ಯು (41) ರವರು ಬ್ಯಾಂಕ್‌  ಲೀಗಲ್‌ ಆಫೀಸರ್‌ ಆಗಿದ್ದವರು, ದಿನಾಂಕ 14/11/2022 ರಂದು 15:45 ಗಂಟೆಯ ಸುಮಾರಿಗೆ ಮನೆಯ ಮಹಡಿಯಲ್ಲಿರುವ ಮಲಗುವ ಕೋಣೆಯಲ್ಲಿ ಅಗ್ನಿ ಅನಾಹುತಕ್ಕೀಡಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿರುವುದಾಗಿದೆ. ಈ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 44/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಬೈಂದೂರು: ಪಿರ್ಯಾದಿದಾರರಾದ ಸುಲೋಚನ (40), ಗಂಡ : ಸುಕ್ರಯ್ಯ ಮೊಗವೀರ, ವಾಸ : ಪುಟ್ಟಿಹಿತ್ಲು,, ಕರಾವಳಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರ ತಮ್ಮ ಗುರುರಾಜ(30) ಇವರು ಪಿರ್ಯಾದಿದಾರರೊಂದಿಗೆ  ವಾಸ ಮಾಡಿಕೊಂಡಿದ್ದು  ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 13/11/2022 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಮಲ್ಪೆಯಿಂದ ಬೆಳಿಗ್ಗೆ ಮನೆಗೆ ಬಂದಿರುತ್ತಾರೆ.  ದಿನಾಂಕ 13/11/2022 ರಂದು ರಾತ್ರಿ 10:30 ಗಂಟೆಗೆ ಸಂಬಂಧಿ ಚಂದುರವರು ಪಿರ್ಯಾದಿದಾರರಿಗೆ ಫೋನ್ ಮಾಡಿ ಗುರುರಾಜನು ಸೀತಕ್ಕನ ಮನೆಯಲ್ಲಿ ಇದ್ದಾನೆ ಆತನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಕ್ಕೆ ಪಿರ್ಯಾದಿದಾರರು ರಾಘವೇಂದ್ರನ ಜೊತೆಯಲ್ಲಿ ಹೋಗುವಾಗ ಗುರುರಾಜ ಸೀತಕ್ಕನ ಮನೆಗೆ ಹೋಗುವ ದಾರಿಯಲ್ಲಿ ಸಿಕ್ಕಿದ್ದು ಪಿರ್ಯಾದಿದಾರರು ಗುರುರಾಜನಿಗೆ ಮನೆಗೆ ಬರುವಂತೆ ಹೇಳಿದಾಗ ಗುರುರಾಜನು ಮನೆಗೆ ಬರುವುದಿಲ್ಲವಾಗಿ ಹೇಳಿ ವಾಪಾಸ್ ಸಂಬಂಧಿಯಾದ ಪದ್ದುರವರ ಮನೆಗೆ ಹೋಗಿದ್ದು, ನಂತರ ಗುರುರಾಜ ಹಾಗೂ ಸಂದೇಶ ಇವರೊಳಗೆ ಪದ್ದಕ್ಕ ಎಂಬುವವರ ಮನೆಯಲ್ಲಿ ಜಗಳ ಆಗುತ್ತಿರುವುದಾಗಿ ಸಂಬಂಧಿ ಚಂದುರವರು ಫೋನ್ ಮಾಡಿ ಪಿರ್ಯಾದಿದಾರರಿಗೆ ತಿಳಿಸಿದ್ದು ದಿನಾಂಕ 14/11/2022 ರಂದು ಮಧ್ಯರಾತ್ರಿ 12:25 ಗಂಟೆಯ ಬಳಿಕ ಪಿರ್ಯಾದಿದಾರರು ಮನೆಯ ಬಾಗಿಲು ತೆರೆದಾಗ ತಮ್ಮ ಗುರುರಾಜನು ಪಿರ್ಯಾದಿದಾರರ ಮನೆಯ ಬಾವಿಯ ಬಳಿ ಬಿದ್ದುಕೊಂಡಿದ್ದನ್ನು ನೋಡಿ ಪಿರ್ಯಾದಿದಾರರು ನೆರೆಕೆರೆಯ ರಾಘವೇಂದ್ರ ಮತ್ತು ಇತರರ  ಸಹಾಯದಿಂದ ಮನೆಯ ಒಳಗೆ ಕರೆದುಕೊಂಡು ಬಂದು ಉಪಚರಿಸಿದ್ದು ಈ ವಿಚಾರ ತೀರ್ಥಹಳ್ಳಿಯಲ್ಲಿರುವ ಅಣ್ಣ ಶಿವರಾಮನಿಗೆ ತಿಳಿದು, ತಮ್ಮ ಗುರುರಾಜ ಈ ಹಿಂದೆ ಕೂಡ ವಿಪರೀತ ಕುಡಿದು ಬಿದ್ದಿದ್ದು ಏನೂ ಆಗಲ್ಲ ಬೆಳಿಗ್ಗೆ ನೋಡುವ ಎಂದು ಪಿರ್ಯಾದಿದಾರರಿಗೆ  ತಿಳಿಸಿರುತ್ತಾರೆ. ಗುರುರಾಜನು  ಉಸಿರಾಡುತ್ತಿದ್ದುದರಿಂದ ಪಿರ್ಯಾದಿದಾರರು  ಬೆಳಿಗ್ಗೆ ಚಿಕಿತ್ಸೆ ನೀಡಲು ಶಿರೂರಿನ ಖಾಸಗಿ ವೈದ್ಯರನ್ನು ಕರೆತಂದು ಪರಿಶೀಲಿಸುತ್ತಿರುವ ಸಮಯ ವೈದ್ಯರು ಗುರುರಾಜನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದರೂ ಕೂಡ ಪಿರ್ಯಾದಿದಾರರಿಗೆ ತಮ್ಮನಾದ  ಗುರುರಾಜನ ಮರಣದಲ್ಲಿ ಸಂಶಯವಿರುತ್ತದೆ  ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 58/2022 ಕಲಂ: 174 (ಸಿ) ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಗಂಡಸು ಕಾಣೆ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಶಾರದ (50), ತಂದೆ: ಸೂರ್ಯ, ಭವಾನಿ ಶಂಕರ ಭಜನಾ ಮಂದಿರದ ಹತ್ತಿರ ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿ ತಾಲೂಕು ಇವರು ತನ್ನ ಅಕ್ಕನ ಮಗಳಾದ ತುಳಸಿ, ಮಗ ಸುಕೇಶ, ಮತ್ತು ಸುಜಿತ್  (26) ರವರೊಂದಿಗೆ ವಾಸಮಾಡಿಕೊಂಡಿದ್ದು, ಉಡುಪಿಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಅಕ್ಕನ ಮಗ ಸುಜಿತ್ (26) ರವರು ದಿನಾಂಕ 29/04/2022 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೈದರಾಬಾದ್‌ನಲ್ಲಿರುವ ಕರೀಮ್ ನಗರಕ್ಕೆ ಹೋಗಿದ್ದು ಕೆಲಸಕ್ಕೆ ಹೋದ 4 ತಿಂಗಳವರೆಗೆ ಪಿರ್ಯಾದಿದಾರರಿಗೆ ಮೊಬೈಲ್ ಕರೆ ಮಾಡಿ ಮಾತಾನಾಡುತ್ತಿದ್ದು ಕೆಲಸಕ್ಕೆ ಹೋದ ನಂತರ ಮನೆಗೆ ಬಂದಿರುವುದಿಲ್ಲ. ಇತ್ತೀಚೆಗೆ 2 ತಿಂಗಳಿನಿಂದ ಪಿರ್ಯಾದಿದಾರರಿಗಾಗಲಿ ಅವರ ಮನೆಯವರಿಗಾಗಲಿ ಯಾವುದೇ ಪೋನ್‌ ಕರೆ ಮಾಡಿರುವುದಿಲ್ಲ. ಆತನಿಗೆ ಕರೆ ಮಾಡಿದ್ದಲ್ಲಿ ಆತ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2022  ಕಲಂ : ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಬೈಂದೂರು: ದಿನಾಂಕ 14/11/2022 ರಂದು ಸಂತೋಷ ಎ ಕಾಯ್ಕಿಣಿ, ಪೊಲೀಸ್‌ ವೃತ್ತ ನಿರೀಕ್ಷಕರು, ಬೈಂದೂರು ಇವರು ಇವರಿಗೆ ಬೆಳಿಗ್ಗೆಪಡುವರಿ ಗ್ರಾಮದ ಒತ್ತಿನೆಣೆ ಬಳಿ ರಿಡ್ಜ್‌ ಕಾರು ನಂಬ್ರ KA-30-M-8382 ನೇದರಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವುದಾಗಿ ಬಂದ ವರ್ತಮಾನ ಮೇರೆಗೆ ಸಿಬ್ಬಂದಿಯವರೊಂದಿಗೆ ಬೈಂದೂರು ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆ  ರಾಘವೇಂದ್ರ  ಮಠದ ಸಮೀಪ ಸೆಳ್ಳೆಕುಳ್ಳಿ ಕಡೆಗೆ ಹೋಗುವ ಮಣ್ಣು ರಸ್ತೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ವಾಹನವನ್ನು ನಿಲ್ಲಿಸಿ ನೋಡಲಾಗಿ ಬಿಳಿ ಬಣ್ಣದ ಮಾರುತಿ ರಿಡ್ಜ್‌ ಕಾರು ಬಂದು ನಿಂತಿದ್ದು, ಅದರಲ್ಲಿ 5 ಜನರಿದ್ದು, ಬೇರೆಯವರ ಬರುವಿಕೆಗಾಗಿ ಕಾಯುತ್ತಿರುವುದನ್ನು ಕಂಡು ದಾಳಿ ಮಾಡಿದಾಗ ಕಾರಿನಲ್ಲಿ ಇದ್ದವರು ಪರಾರಿಯಾಗಲು ಪ್ರಯತ್ನಿಸಿ, ಕಾರನ್ನು ಚಲಾಯಿಸಿದಾಗ ಕಾರು ಅಲ್ಲೇ ಇದ್ದ ಕಲ್ಲಿನಿಂದ ಕಟ್ಟಿದ ಪಾಗಾರಕ್ಕೆ ಗುದ್ದಿದ್ದು ಆ ಸಮಯ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗುವಾಗ ಒಬ್ಬಾತನು ಕೈಯಲ್ಲಿದ್ದ ಬ್ಯಾಗ್‌ನ್ನು ಬಿಸಾಡಿ ಓಡಿ ಹೋಗಿದ್ದು ಕಾರಿನಲ್ಲಿದ್ದ ಉಳಿದ ಮೂವರನ್ನು ವಶಕ್ಕೆ ಪಡೆದು ಹೆಸರು ವಿಳಾಸ ವಿಚಾರಿಸಲಾಗಿ 1) ಮುಸ್ತಾಪ ಸಲೀಂ ಸಾಬ್‌ ಮುಸ್ತಾಫ್‌(28) ,ತಂದೆ: ದಿ. ಸಲೀಂ ಸಾಬ್‌, ವಾಸ: ಗುಳ್ಮೆ ಬಿಲಾಲ್‌ಖಂಡಾ ಭಟ್ಕಳ ತಾಲೂಕು ಉ.ಕ ಜಿಲ್ಲೆ, 2) ಸಮೀರ್‌ಸಾಬ್‌(22) , ತಂದೆ: ಮುನೀರ್‌ಸಾಬ್‌, ವಾಸ: ಅಬೂಜರ್‌ ಕಾಲೋನಿ ಮಸೀದಿ ಹತ್ತಿರ ಬಿಲಾಲ್‌ಖಂಡಾ ಭಟ್ಕಳ ತಾಲೂಕು ಉ.ಕ ಜಿಲ್ಲೆ, 3) ಮೊಹಮ್ಮದ್‌ ಫೈಝಲ್‌(22), ತಂದೆ: ಮೊಹಮ್ಮದ್ ಹನೀಫ್‌ , ವಾಸ: ಜನತಾ ಕಾಲೋನಿ ಮೂಡುಗೋಪಾಡಿ ಗೋಪಾಡಿ ಗ್ರಾಮ ಕುಂದಾಪುರ ಎಂಬುದಾಗಿದ್ದು, ಓಡಿ ಹೋದವರ ಹೆಸರು  ವಿಚಾರಿಸಲಾಗಿ ಅಲ್ಫಾಜ್‌ ಹಾಗೂ  ಸುಹೈಲ್‌ ಎಂಬುವುದಾಗಿ ತಿಳಿಯಿತು. ವಶಕ್ಕೆ ಪಡೆದ ಆಪಾದಿತರಿಂದ MDMA ಮಾದಕ ವಸ್ತು ಇರುವ ಕವರ್‌ 2ನ್ನು ಹಾಗೂ ಸೊತ್ತನ್ನು ಮಾರಾಟ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್‌ ಕವರ್‌ 21, Realme Mobile Phone-1, iPhone-1, Vivo Mobile -1 ಹಾಗೂ KA-30-M-8382 ರಿಡ್ಜ್‌ಕಾರನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಶೀಲಿಸಿದಲ್ಲಿ ಕಾರಿನ ಒಳಭಾಗದಲ್ಲಿ Vivo Mobile -1 ಇದ್ದು, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿದ 6 ಇಂಚು  ಉದ್ದದ ಮರದ ಹಿಡಿ ಇರುವ 20 ಇಂಚು ಉದ್ದದ ಕಬ್ಬಿಣದ ತಲ್ವಾರ್‌ ಇದ್ದು, ಇವುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು , ಸ್ಥಳದಲ್ಲಿ ಓಡಿ ಹೋದ ಆಪಾದಿತರು ಬಿಸಾಡಿ ಹೋದ ಬ್ಯಾಗ್‌ಅನ್ನು ಪರಿಶೀಲಿಸಿದಲ್ಲಿ ಕಂದು ಬಣ್ಣದ ಸ್ಲಿಂಗ್‌ ಬ್ಯಾಗ್‌ ಆಗಿದ್ದು ಅದರಲ್ಲಿ MDMA ಮಾದಕ ವಸ್ತು ಇರುವ  ಕವರ್‌ ಇದ್ದು ಅದರಲ್ಲಿ iPhone-12 Pro ಮೊಬೈಲ್ ಹಾಗೂ ವೆಯಿಂಗ್‌ ಮಿಷನ್‌ ಇದ್ದು ಇವುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು,  ಸ್ವಾಧೀನ ಪಡಿಸಿಕೊಂಡ MDMA ಮಾದಕ ವಸ್ತು ಹರಳುಗಳು ಇರುವ 3 ಪ್ಯಾಕೇಟ್‌ನ್ನು ತೂಕ ಮಾಡಿದ್ದು ಒಟ್ಟು 35.78 ಗ್ರಾಂ ಆಗಿದ್ದು ಇದರ ಮೌಲ್ಯ 70,000/- ಆಗಿರುತ್ತದೆ. ಸ್ವಾಧೀನ ಪಡಿಸಿಕೊಂಡ  ಸೊತ್ತುಗಳ ಒಟ್ಟು ಮೌಲ್ಯ 3,71000/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 224/2022 ಕಲಂ: 8(ಸಿ), 20(ಬಿ), 21(ಸಿ), 22(ಸಿ) ಎನ್‌ಡಿಪಿಎಸ್‌ಕಾಯ್ದೆ & ಕಲಂ: 4,25(1ಬಿ)ಬಿ ಭಾರತೀಯ ಶಸ್ತ್ರಾಸ್ತ್ರ ಅಧಿನಿಯಮ ರಂತೆ ಪ್ರಕರಣ ದಾಖಲಾಗಿರುತ್ತದೆ .


   
   

ಇತ್ತೀಚಿನ ನವೀಕರಣ​ : 15-11-2022 10:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080