ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕುಂದಾಪುರ ಗ್ರಾಮಾಂತರ ದಿನಾಂಕ 13-11-2021 ರಂದು ಪಿರ್ಯಾದಿ ಪ್ರತಾಪ ದೇವಾಡಿಗ (31) ತಂದೆ: ರುದ್ರ ದೇವಾಡಿಗ ವಾಸ: ದುರ್ಗಾ ನಿಲಯ ಮೌರಿಕಾರರ ಮನೆ ರಥ ಬೀದಿ ಸೌಕೂರು ಇವರು ಸಂಜೆ ಸಮಯ 19:30 ಗಂಟೆಗೆ ಸೌಕೂರು ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದು ಆ ಸಮಯ ದೇವಸ್ಥಾನದಲ್ಲಿದ್ದ  ಆರೋಪಿತನಾದ ಹರೀಶದೇವಾಡಿಗ ಎಂಬಾತನು  ಪಿರ್ಯಾದಿದಾರನ್ನು ನೋಡಿ ಗುರಾಯಿಸಿ ಗಲಾಟೆ ಮಾಡುವುದಿದ್ದರೆ ಬಾ ಎಂದು ಹೇಳಿದ್ದು ಆಗ ಪಿರ್ಯಾದಿದಾರರು ಏನೂ ತಪ್ಪು  ಮಾಡದೇ ಯಾರಿಗೂ  ಎನೂ ಮಾಡುವುದಿಲ್ಲ  ಎಂದು ಹೇಳಿದ್ದು  ಆ ಸಮಯ  ಹರೀಶನು ಏಕಾಏಕಿ ಪಿರ್ಯಾದಿದಾರ ಮೇಲೆ ಬಂದು ಆತನ ಕೈಯಿಂದ ಕುತ್ತಿಗೆಗೆ ಒತ್ತಿ ಹಿಡಿದು ಪಿರ್ಯಾದಿದಾರರು ತಪ್ಪಿಸಿ ಕೊಂಡಾಗ ಮುಷ್ಥಿಯಿಂದ ಕುತ್ತಿಗೆಯ ಎಡ ಬದಿಗೆ  ಗುದ್ದಿದ್ದು  ಹಾಗೂ ಕಾಲಿನಿಂದ ಎದೆ ಮತ್ತು ಎಡ ಬದಿಯ ಕಿಬೋಟ್ಟೆಗೆ  ತುಳಿದಿರುತ್ತಾರೆ  ಆಗ ಪಿರ್ಯಾದಿದಾರರು ಆಯತಪ್ಪಿ ನೆಲದ ಮೇಲೆ  ಬಿದಿದ್ದು  ಎದ್ದು ಮುಂದಕ್ಕೆ ಹೋಗಲು ಯತ್ನಿಸಿದಾಗ ಮುಂದಕ್ಕೆ ಹೋಗದಂತೆ   ತಡೆದು ನಿಲ್ಲಿಸಿ ಪುನ: ಕೈಯಿಂದ ಹೊಡೆದಿರುತ್ತಾನೆ ಈ ವೇಳೆಗೆ ಗಲಾಟೆಯನ್ನು ನೋಡಿ ದೇವಸ್ಥಾನದಲ್ಲಿ ಇದ್ದವರು ನನ್ನ ಬಳಿ ಬರುವುದನ್ನು ಕಂಡ ಹರೀಶನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ ನಂ 66/2021 ಕಲಂ  323.341. 506. ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರ

  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಮೂಡುಮಕ್ಕಿ ಎಂಬಲ್ಲಿ ಪಿರ್ಯಾದಿದಾರರು ಶ್ರೀಮತಿ ವಸಂತಿ ( 45 ವರ್ಷ), ಇವರು ತನ್ನ ಗಂಡ ಉಮೇಶ್ ಪೂಜಾರಿ (52 ವರ್ಷ) ಹಾಗೂ ಇಬ್ಬರೂ ಮಕ್ಕಳೊಂದಿಗೆ ವಾಸವಾಗಿರುವುದಾಗಿದೆ. ಪಿರ್ಯಾದಿದಾರರ ಗಂಡ ಉಮೇಶ್ ಪೂಜಾರಿ ರವರು ಮಂದಾರ್ತಿ ಹೈಸ್ಕೂಲ್ ಬಳಿ ಇರುವ ಪಂಚಾಯತ್ ಕಟ್ಟಡದ 1ನೇ ಮಹಡಿಯಲ್ಲಿ ಸ್ವರ್ಣ ಆರ್ಟ್ಸ್ ಎಂಬ ಯಕ್ಷಗಾನ ವೇಷ ಭೂಷಣ ತಯಾರಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಸುಮಾರು 2 ವರ್ಷಗಳ ಹಿಂದೆ ಲಿವರ್ ಸಮಸ್ಸೆ ಇದ್ದು ಈ ಬಗ್ಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುತ್ತಾರೆ. ಆಲ್ಲದೇ ಕಳೆದ 6 ತಿಂಗಳಿನಿಂದ ಅವರ  ಎಡಕೈಗೆ ವಿಪರೀತ ಸೆಳೆತದ ಸಮಸ್ಯೆಯಿದ್ದು ಸರಿಯಾಗಿ ರಾತ್ರಿ ನಿದ್ದೆ ಮಾಡುತ್ತಿರಲಿಲ್ಲ ಹಾಗೂ ಬಿ.ಪಿ , ಶುಗರ್ ಖಾಯಿಲೆ ಕೂಡ ಇದ್ದು ಇದೇ ಕಾರಣದಿಂದ ಮನನೊಂದು ಉಮೇಶ್ ಪೂಜಾರಿಯವರು ದಿನಾಂಕ: 15.11.2021 ರಂದು ಬೆಳಿಗ್ಗೆ 06:20 ಗಂಟೆಯಿಂದ ಬೆಳಿಗ್ಗೆ 09:30 ಗಂಟೆಯ ಮಧ್ಯಾವಧಿಯಲ್ಲಿ ತಾನು ಕೆಲಸ ಮಾಡುತ್ತಿರುವ ಸ್ವರ್ಣ ಆರ್ಟ್ಸ್ ಅಂಗಡಿಯ JSW ಶೀಟ್‌ನ ಕಬ್ಬಿಣದ ಆ್ಯಂಗ್ಲರ್‌ಗೆ ನೈಲಾನ್‌ ರೋಪ್‌ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಉಮೇಶ್ ಪೂಜಾರಿ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ  ಯುಡಿಆರ್ ನಂ. 66/2021 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

    ಉಡುಪಿ ನಗರ:  ಉಡುಪಿ  ತಾಲೂಕು  ಕುತ್ಪಾಡಿ  ಗ್ರಾಮದ ಸೀತಾ ಬಾರ್  ಬಳಿಯ  ಮನೆನಂಬ್ರ 11-66ಬಿ,  ' ಲಕ್ಷ್ಮೀ ನರಸಿಂಹ  ಮಂದಿರ'ದಲ್ಲಿ  ವಾಸವಿದ್ದ  ಗೋಪಾಲಕೃಷ್ಣ  ಪ್ರಭು,  ಪ್ರಾಯ:  45 ವರ್ಷ ತಂದೆ: ದಿ||  ಆರ್. ವಾಮನ  ಪ್ರಭು ಇವರ  ಹೆಂಡತಿಯಾದ ಶ್ರೀಮತಿ ಗೀತಾ (ಪ್ರಾಯ 41  ವರ್ಷ)ರವರು  ಕಳೆದ ಎರಡು-ಮೂರು  ವರ್ಷಗಳಿಂದ ಅಧಿಕ  ರಕ್ತದೊತ್ತಡದಿಂದ ಬಳಲುತ್ತಿದ್ದು,  ಈ  ಬಗ್ಗೆ  ಮಾತ್ರೆಯನ್ನು  ಸೇವಿಸುತ್ತಿದ್ದವರು  ದಿನಾಂಕ 15/11/2021ರಂದು  ಮಧ್ಯರಾತ್ರಿ  12:30 ಗಂಟೆ  ಸುಮಾರಿಗೆ ಮನೆಯಲ್ಲಿ ಮಲಗಿದ್ದವರು ತೀವ್ರ ಅಸ್ವಸ್ಥಗೊಂಡವರನ್ನು ಮನೆಯವರು  ಚಿಕಿತ್ಸೆ ಬಗ್ಗೆ  ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ ಕರೆತಂದಾಗ 1:30 ಗಂಟೆ  ಸುಮಾರಿಗೆ  ಪರೀಕ್ಷಿಸಿದ ವೈದ್ಯರು ಶ್ರೀಮತಿ  ಗೀತಾರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ.ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ  ಯುಡಿಆರ್ ನಂ. 47/2021 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 15-11-2021 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080