ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು:  ಪಿರ್ಯಾದಿದಾರರಾದ ಪ್ರಶಾಂತ ಶೆಟ್ಟಿ (38) ತಂದೆ : ದಿ. ಕೃಷ್ಣ ಶೆಟ್ಟಿ ವಾಸ : ಕಲ್ಲಟ್ಟಿ ಹೌಸ್, ಮಂಡೇಡಿ, ಇನ್ನಂಜೆ ಗ್ರಾಮ ಮತ್ತು ಅಂಚೆ ಕಾಪು ತಾಲ್ಲೂಕು ಉಡುಪಿ ಇವರ ಅಣ್ಣ, ಮನೆ ಕಟ್ಟುತ್ತಿದ್ದು ಸದ್ರಿ ಕೆಲಸಕ್ಕೆಂದು 13 ಜನ ಪಶ್ಚಿಮ ಬಂಗಾಳದವರಿದ್ದು ಅವರಿಗೆ ವಾಸ್ತವ್ಯವಿರಲು ಎಸ್.ಬಿ.ಐ. ಬ್ಯಾಂಕ್‌ನ ಹಿಂದೆ ಶೆಡ್ ನಿರ್ಮಿಸಿರುವುದಾಗಿದೆ. ಕೆಲಸಕ್ಕಿದ್ದ ಚಬ್ಬಿಲಾಲ್ ಬರಮನ್ ಹಾಗೂ ಅವರ ಚಿಕ್ಕಪ್ಪನ ಮಗ ಬಿಜೊಯಿ ಬರಮನ್ (26) ರವರೊಂದಿಗೆ ಸುಮಾರು 07 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು,  ಬಿಜೊಯಿ ಬರಮನ್ ನಿಗೆ ಸುಮಾರು 6 ವರ್ಷಗಳಿಂದ ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿದ್ದು, ಕಳೆದ 3 ದಿನಗಳಿಂದ ವಿಪರೀತ ಮದ್ಯಪಾನ ಸರಿಯಾಗಿ ಕೆಲಸಕ್ಕೆ ಬಾರದೇ ಶೆಡ್‌ಲ್ಲಿರುತ್ತಿದ್ದ, ದಿನಾಂಕ 14/10/2022 ರಂದು ಮಧ್ಯಾಹ್ನ 2:00 ಗಂಟೆಗೆ ಚಬ್ಬಿಲಾಲ್ ಬರಮನ್ ರವರು ಶೆಡ್‌ಗೆ ಬಂದು ಊಟ ಮಾಡಿಕೊಂಡು ಬಿಜೊಯಿ ಬರಮನ್ ನನ್ನು ಮಾತಾಡಿಸಿಕೊಂಡು ಪುನಃ ಕೆಲಸಕ್ಕೆ ಹೋಗಿದ್ದು, ಬಳಿಕ ಸಂಜೆ 5.00 ಗಂಟೆಗೆ ಶೆಡ್‌ಗೆ ಬಂದು ಎಷ್ಟು ಬಾಗಿಲು ಬಡಿದರೂ ಬಿಜೊಯಿ ಬರಮನ್ ಬಾಗಿಲು ತೆಗೆಯದಿದ್ದು, ನಂತರ ಶೆಡ್‌ನ ಕಿಟಕಿಯಲ್ಲಿ ನೋಡಲಾಗಿ ಬಿಜೊಯಿ ಬರಮನ್ ನು ಶೆಡ್‌ನ ಫ್ಯಾನ್‌ಗೆ ಬೆಡ್‌ ಶಿಟನ್ನು ಕಟ್ಟಿಕೊಂಡು ನೇಣು ಹಾಕಿಕೊಂಡು ನೇತಾಡುತ್ತಿದ್ದು, ಕೂಡಲೇ ಶೆಡ್‌‌ನ ಮೇಲಿನ ಶೀಟ್‌ನ್ನು ತೆಗೆದು ಇತರೆ ಸ್ನೇಹಿತರ ಸಹಾಯದಿಂದ ಕೆಳಗೆ ಇಳಿಸಿ ಅಂಬುಲೇನ್ಸ್ ವಾಹನದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ಇಲ್ಲಿನ ವೈದ್ಯರು ಈಗಾಗಲೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಎಂದು ಚಬ್ಬಿಲಾಲ್ ಬರಮನ್ ರವರು ಪ್ರಶಾಂತ ಶೆಟ್ಟಿ ರವರಿಗೆ ಹೇಳಿರುತ್ತಾರೆ. ಮೃತ ಬಿಜೊಯಿ ಬರಮನ್ ನಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 14/10/2022 ರಂದು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯ ಮಧ್ಯಾವಧಿಯಲ್ಲಿ ನೇಣು ಹಾಕಿಕೊಂಡು  ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಕಾರಣ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 32/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಸ್ಟೆಲ್ಲಾ ಸಲ್ದಾನ, (50) ಗಂಡ: ಬ್ರೂನ ಸಲ್ದಾನ, ವಾಸ: 17/3, ತೆರೇಜಾ ಕಾಟೇಜ್,  ಇಂದುಗುರಿ, ಜೋಗುಲಬೆಟ್ಟು, ಕಸಬಾ ಗ್ರಾಮ, ಕಾರ್ಕಳ ಇವರ ಗಂಡ ಬ್ರೂನ ಸಲ್ದಾನ (57) ರವರು ಆಟೋರಿಕ್ಷಾ ಇಟ್ಟುಕೊಂಡು ಬಾಡಿಗೆ ಮಾಡಿಕೊಂಡಿರುತ್ತಾರೆ. ದಿನಾಂಕ 07/10/2022 ರಂದು ಬ್ರೂನ ಸಲ್ದಾನ ರವರ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಎಂದು ಚಿಕಿತ್ಸೆಯ ಬಗ್ಗೆ ನಿಟ್ಟೆ ಗಾಜರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಕಣ್ಣು ಅಪರೇಷನ್ ಮಾಡಬೇಕು ಎಂದು ತಿಳಿಸಿರುತ್ತಾರೆ. ಬ್ರೂನ ಸಲ್ದಾನ ರವರು ಆರೋಗ್ಯದ ಸಮಸ್ಯೆಯಿಂದ ನೊಂದು ಚಿಂತೆಯಿಂದ ದಿನಾಂಕ 07/10/2022 ರಂದು ಮದ್ಯಾಹ್ನ 2:30 ಗಂಟೆಗೆ ಮದ್ಯದೊಂದಿಗೆ ಯಾವುದೋ ವಿಷ ಸೇವನೆ ಮಾಡಿದ್ದು, ಮರುದಿನ ದಿನಾಂಕ 08/10/2022 ರಂದು ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ಚಿಕಿತ್ಸೆಯ ಬಗ್ಗೆ  ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ದಿನಾಂಕ 09/10/2022 ರಂದು ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಬ್ರೂನ ಸಲ್ದಾನರವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 15/10/2022 ರಂದು ಬೆಳಗಿನ ಜಾವ 04:42 ಗಂಟೆಗೆ ಮೃತಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 46/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-10-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080