ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 13/10/2022 ರಂದು ಪಿರ್ಯಾದಿದಾರರಾದ ರಾಜು (49), ತಂದೆ: ದಿ. ವೆಂಕಟ ಮರಕಾಲ, ವಾಸ: ರಜತಾದ್ರಿ, ಯಡ್ಯಾಡಿ – ಮತ್ಯಾಡಿ ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು ರಾಜು ಇವರು ಅವರ  ಬಾವ ಆರೋಪಿ ದಿನೇಶ್‌ ರವರು ಸವಾರಿ ಮಾಡುತ್ತಿದ್ದ  KA-20-X-4309 ನೇ ಹೀರೋ ಹೊಂಡ ಮೋಟಾರ್‌ ಸೈಕಲ್‌ ನಲ್ಲಿ ಸಹಸವಾರನಾಗಿ ಕುಳಿತು ಮೀನು ತರಲು ಮನೆಯಿಂದ ಮಲ್ಪೆಗೆ  ಶಿರಿಯಾರ- ಬ್ರಹ್ಮಾವರ ರಸ್ತೆಯಲ್ಲಿ ಹೊರಟು ಆರೋಪಿ ಮೋಟಾರ್‌ ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ  ಮಾಡಿಕೊಂಡು ಯಡ್ತಾಡಿ ಗ್ರಾಮದ ಗೋಳಿಮರ ಬಸ್ಸ್‌ ನಿಲ್ದಾಣ ಕ್ಕಿಂತ ಸ್ವಲ್ಪ ಹಿಂದುಗಡೆ ತಲುಪವಾಗ  ಬೆಳಗ್ಗಿನ ಜಾವ 04:45 ಗಂಟೆಗೆ ರಸ್ತೆಯ ಪೂರ್ವ ಭಾಗದಿಂದ ಕಾಡು ಹಂದಿಗಳು ರಸ್ತೆ ದಾಟುವುದನ್ನು ನೋಡಿ ಆರೋಪಿಯು ಒಮ್ಮೇಲೆ ಭ್ರೇಕ್‌ ಹಾಕಿದ ಪರಿಣಾಮ ಮೋಟಾರ್‌ ಸೈಕಲ್‌ ನಲ್ಲಿದ್ದ ಪಿರ್ಯಾದಿದಾರರು ಹತೋಟಿ  ತಪ್ಪಿ ಜಾರಿ ರಸ್ತೆಯ ಎಡಬದಿಗೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಎಡಮೊಣಗಂಟಿಗೆ ತೀವ್ರ ರಕ್ತಗಾಯ ಮೂಳೆ ಮುರಿತ ಗಾಯವಾಗಿರುತ್ತದೆ.  ಗಾಯಗೊಂಡ ಪಿರ್ಯಾದಿದಾರರಿಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೊಟೇಶ್ವರದ ಎನ್‌.ಆರ್‌ ಆಚಾರ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 167/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 14/10/2022 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ಬಳಿ ಹಾದು ಹೋಗುವ ದೂಪದಕಟ್ಟೆ -ಅತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ದ್ವಿಚಕ್ರ ವಾಹನ ನಂಬ್ರ KA-19-HG-6630 ನೇ ದರ ಸವಾರ ಎ.ಕೆ. ಸಮ್ಹಾಜ್  ದ್ವಿಚಕ್ರ ವಾಹನವನ್ನು ದೂಪದಕಟ್ಟೆ ಕಡೆಯಿಂದ ಅತ್ತೂರು ಚರ್ಚ್  ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಆತನು ತೀರಾ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಾದ ಭುಜಂಗ, (54),ತಂದೆ: ಬೂಬ ವಾಸ: ಕುರ್ಕುಡೆ ದರ್ಖಾಸು ಮನೆ, ಕುಕ್ಕುಂದೂರು ಅಂಚೆ, ಹಿರ್ಗಾನ ಗ್ರಾಮ,     ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಮಗ ಲವಕುಮಾರ್ ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ನಂಬ್ರ KA-20-MA-0635 ನೇ ದರ ಬಲಬಾಗಕ್ಕೆ   ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನ ಎರಡೂ ತೊಡೆಗಳಿಗೆ, ಮುಖಕ್ಕೆ ಮತ್ತು ಎರಡೂ ಕೈಗಳಿಗೆ ಗಾಯವಾಗಿದ್ದು, ಸಹಸವಾರನ ಎಡ ಕೈಗೆ ಮತ್ತು ಮುಖಕ್ಕೆ ಗಾಯವಾಗಿದ್ದು, ಗಾಯಾಳುಗಳಿಬ್ಬರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 130/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ನಾಗರಾಜ ಮೇಸ್ತ (40), ತಂದೆ: ರಾಮಕೃಷ್ಣ ಮೇಸ್ತ, ವಾಸ: ತೂದಳ್ಳಿ ರಸ್ತೆ ಮಾರ್ಕೇಟ್ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 14/10/2022 ರಂದು ಸಂಜೆ 7:00 ಗಂಟೆಗೆ  ಮಹೀಂದ್ರಾ ಜೀತು ಗೂಡ್ಸ್  ವಾಹನ ದಲ್ಲಿ ಶಿರೂರು ಕೆಳಪೇಟೆಯಲ್ಲಿರುವ ರಘುವೀರ ಶ್ಯಾನುಬಾಗ್ ರವರ ತರಕಾರಿ ಅಂಗಡಿಗೆ ತರಕಾರಿ ಕೊಳ್ಳಲು ಬಂದು ತರಕಾರಿ ಖರೀದಿಸಿ ತನ್ನ ಗೂಡ್ಸ್ ವಾಹನಕ್ಕೆ ಬಂದು ಕುಳಿತುಕೊಂಡಾಗ 7:15 ಗಂಟೆಗೆ KA-47-E7232 ನೇ  ಬೈಕ್ ನ್ನು ಅದರ ಸವಾರ ಶಿರೂರು ಮೇಲ್ಪೇಟೆ ಕಡೆಯಿಂದ ಹೈವೇಯ ಪೂರ್ವ ದಿಕ್ಕಿನಲ್ಲಿ ಸವಾರಿ ಮಾಡಿಕೊಂಡು ಬಂದು, ಶಿರೂರು ಕೆಳಪೇಟೆಯ ಯೂ-ಟರ್ನ್ ಬಳಿ ರಸ್ತೆಯನ್ನು ದಾಟಲು ಯೂ-ಟರ್ನ್ ಬಳಿ ತನ್ನ ಬೈಕ್ ನ್ನು ನಿಲ್ಲಿಸಿಕೊಂಡು ನಿಂತಿರುವಾಗ ಅದೇ ವೇಳೆಗೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೈವೇಯ ಪಶ್ಚಿಮ ಬದಿಯ ರಸ್ತೆಯಲ್ಲಿ KA-02-C-7538 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಮೈನುದ್ದೀನ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯೂ-ಟರ್ನ ಬಳಿ ಲಾರಿಯನ್ನು ತೀರಾ ಬಲಭಾಗಕ್ಕೆ ಚಲಾಯಿಸಿ ಯೂ-ಟರ್ನ ನಲ್ಲಿ ನಿಂತಿದ್ದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಾಗೂ ಅದರ ಸವಾರ ಲಾರಿಯ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು, ನಂತರ ಸವಾರ ರಸ್ತೆಯಲ್ಲಿ ಬಿದ್ದಿದ್ದು, ಬೈಕ್ ಲಾರಿಯ ಅಡಿಯಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದು ಪರಿಣಾಮ ಬೈಕ್ ಸವಾರ ರವಿ ಮೇಸ್ತ ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ, ಬಲಕೈ ಮೊಣಕೈ ಬಳಿ ತುಂಡಾಗಿ, ಎರಡೂ ಕಾಲುಗಳು ತೀವ್ರವಾಗಿ ಜಖಂಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 205/2022 ಕಲಂ: 279 , 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 14/10/2022 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಸುನೀಲ್ ಪೂಜಾರಿ (30), , ತಂದೆ: ಸಂಜೀವ ಆರ್ ಪೂಜಾರಿ, ವಾಸ: ಕಾಯ್ದರ್ ಮನೆ, ಕೋಡಿ, ಕಸಬ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ತನ್ನ KA-20-EV-1847 ನೇ ಮೋಟಾರ್ ಸೈಕಲಿನಲ್ಲಿ ಮನೆಯಿಂದ ಕೋಡಿ ಸೀವಾಕ್ ಕಡೆಗೆ ಹೋಗುತ್ತಿರುವಾಗ  ಕಸಬ ಗ್ರಾಮದ ಕೋಡಿ ವಾಟರ್ ಟ್ಯಾಂಕ್ ಬಳಿ ಶಿವ ಖಾರ್ವಿ ಎನ್ನುವವರ ಮೋಟಾರ್ ಸೈಕಲ್ ತಾಗಿ ಮಿರರ್ ಒಡೆದು ಹೋದ ವಿಚಾರದಲ್ಲಿ ಪಿರ್ಯಾದಿದಾರರು ಮತ್ತು ಶಿವ ಖಾರ್ವಿ ಎನ್ನುವವರಿಗೆ ಮಾತುಕತೆಯಾಗುತ್ತಿರುವಾಗ ಅಲ್ಲಿಗೆ ಬಂದ ಆಪಾದಿತ ಗುರುರಾಜ್ ಖಾರ್ವಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದದಿಂದ ಬೈಯ್ದು, ಕೈ ರಟ್ಟೆಯನ್ನು ಹಿಡಿದು ತಿರುಗಿಸಿದ್ದಲ್ಲದೇ ಮುಂದಕ್ಕೆ ನೋಡಿಕೊಳ್ಳುತ್ತೇನೆ ಹಾಗೂ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 341, 323, 504,  506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 14/10/2022 ರಂದು ಬೆಳಿಗ್ಗೆ 10:45  ಗಂಟೆಗೆ ಪಿರ್ಯಾದಿದಾರರಾದ ಗುರುರಾಜ ಖಾರ್ವಿ (38) , ತಂದೆ: ನಾರಾಯಣ ಖಾರ್ವಿ, ವಾಸ: ಗುರು ಜ್ಯೋತಿ ನಿಲಯ, ಕೋಡಿ, ಕಸಬ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ಕಸಬ ಗ್ರಾಮದ ಕೋಡಿ ಸೀವಾಕ್ ಹತ್ತಿರ ತನ್ನ ಮನೆಯ ಹಿಂಬದಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರಶಾಂತ, ಶಿವ@ ಆಕಾಶ, ಕಾರ್ತಿಕ್ ಎನ್ನುವವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈಯ್ದು, ಆಪಾದಿತರ ಪೈಕಿ ಪ್ರಶಾಂತ ತನ್ನ ಕೈಯಲ್ಲಿದ್ದ ಸೋಡಾ ಬಾಟಲಿಯಿಂದ ಪಿರ್ಯಾದಿದಾರರ ಎಡಕೈ ಯ ಕೋಲು ಕೈಗೆ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಆರೋಪಿತರೆಲ್ಲರೂ ಸೇರಿಕೊಂಡು ಮುಂದಕ್ಕೆ ಕೊಲ್ಲದೇ  ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿ ಅಲ್ಲಿಂದ ತೆರಳಿರುವುದಾಗಿ,  ಈ ಘಟನೆಗೆ ದಿನಾಂಕ 14/10/2022 ರಂದು ಬೆಳಿಗ್ಗೆ 10:00 ಗಂಟೆಗೆ ಕಸಬ ಗ್ರಾಮದ ಕೋಡಿ ಸೀ ವಾಕ್ ಬಳಿ ಪಿರ್ಯಾದಿದಾರರ ಚಿಕ್ಕಮ್ಮನ ಮಗ ಶಿವರಾಜ ಖಾರ್ವಿ ಯವರ ಬೈಕ್ ಗೆ ಕೋಡಿಯ ನಿವಾಸಿಯಾದ ಸುನೀಲ್ ಎನ್ನುವವರ ಬೈಕ್ ತಾಗಿ ಮಿರರ್ ಒಡೆದ ವಿಚಾರದಲ್ಲಿ ಪಿರ್ಯಾದಿದಾರರು ರಾಜಿ ಮಾಡಿದ್ದೇ  ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 341, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಎಂ . ಬಾಲಕೃಷ್ಣ ನಾಯಕ್ (79), ತಂದೆ: ಹರಿಯಪ್ಪ ನಾಯಕ್, ವಾಸ: ಹರಿದರ್ಶನ, ಬನ್ನಂಜೆ, ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಇವರು ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತ ಜೀವನ ನಡೆಸಿಕೊಂಡಿದ್ದು, ದಿನಾಂಕ 05/06/2022 ರಂದು ಅವರ ಪತ್ನಿಯ ಮರಣದ ಬಳಿಕ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಹರಿದರ್ಶನ ಎಂಬ ಮನೆಯಲ್ಲಿ ಒಬ್ಬರೇ ವಾಸವಿದ್ದು, ಈ ಕಾರಣದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿ ಕೆಲಸ ಮಾಡಿಕೊಂಡಿರುವ ಹಾವೇರಿ ಜಿಲ್ಲೆಯ ರಮೇಶ್‌ ಮತ್ತು ಆತನ ಪತ್ನಿಗೆ ಪಿರ್ಯಾದಿದಾರರ ಮನೆಯಲ್ಲಿ ಉಚಿತ ರೂಮ್‌ ನೀಡಿ ವಾಸಕ್ಕೆ ವ್ಯವಸ್ಥೆ ಮಾಡಿರುತ್ತಾರೆ. ದಿನಾಂಕ 04/07/2022 ರಿಂದ ದಿನಾಂಕ 10/08/2022 ರ ನಡುವಿನ ಸಮಯದಲ್ಲಿ ಆರೋಪಿತ ರಮೇಶ್‌ ನು ಪಿರ್ಯಾದಿದಾರರ ಎಟಿಎಂ ಕಾರ್ಡ್‌ ಹಾಗೂ ಮೊಬೈಲ್‌ ಒಟಿಪಿ ಬಳಸಿಕೊಂಡು ಬೇರೆ ಬೇರೆ ದಿನಗಳಲ್ಲಿ ವಿವಿಧ ಎಟಿಎಂಗಳಿಂದ ಒಟ್ಟು ರೂಪಾಯಿ 9,75,500/- ನ್ನು ಡ್ರಾ ಮಾಡಿ ವಂಚನೆ ಮಾಡಿರುತ್ತಾರೆ. ಈ ನಡುವೆ ಮನೆಯಲ್ಲಿ ಪಿರ್ಯಾದಿದಾರರ ಮನೆಯಲ್ಲಿ 2 ಚಿನ್ನದ ಉಂಗುರಗಳು ಕಾಣೆಯಾಗಿದ್ದು, ಇವುಗಳನ್ನೂ ಸಹ ಆರೋಪಿತನು ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 153/2022 ಕಲಂ: 406, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಆರೋಪಿ 1)ಶ್ರೀಧರ ಶೆಟ್ಟಿ (76), ತಾಯಿ: ದಿ. ಸೀತು  ಶೆಡ್ತಿ, ವಾಸ:   ಮಾಣೈ, ಮೇಲ್ಮನೆ,ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು, 2)ವತ್ಸಲಾ (58), ಗಂಡ: ಗೋವಿಂದ ಶೆಟ್ಟಿ ವಾಸ:ಉಗ್ಗೆಲ್ ಬೆಟ್ಟು, ಉಪ್ಪೂರು ಅಂಚೆ, ಬ್ರಹ್ಮಾವರ ತಾಲೂಕು, 3)ಅನಿಲ್ ಶೆಟ್ಟಿ (30). ತಂದೆ:  ಶ್ರೀಧರ ಶೆಟ್ಟಿ, ವಾಸ:  ಮಾಣೈ, ಮೇಲ್ಮನೆ,ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು, 4)ಪ್ರಸಾದ್ ಶೆಟ್ಟಿ , ತಂದೆ:ಸುಂದರ ಶೆಟ್ಟಿ ವಾಸ: ಶೀಂಬ್ರ ಮನೆ, ಹಿರಿಯಡ್ಕ ಅಂಚೆ, ಉಡುಪಿ ತಾಲೂಕು ಇವರು ಹಾಗೂ ಪಿರ್ಯಾದಿದಾರರು ಒಂದು ಕುಟುಂಬದವರಾಗಿದ್ದು ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಸರ್ವೇ ನಂಬ್ರ: 354/1ಸಿ ವಿಸ್ತೀರ್ಣ 0.41 ಎಕ್ರೆ ಸ್ಥಿರಾಸ್ಥಿಯನ್ನು ಹೊಂದಿರುತ್ತಾರೆ. ಪಿರ್ಯಾದಿದಾರರು ದಿನಾಂಕ 22/12/2021 ರಂದು ಸ್ಥಿರಾಸ್ತಿಯ ಪಹಣಿ ಪತ್ರವನ್ನು ನೋಡಲಾಗಿ 1 ನೇ ಆರೋಪಿತರು ಮೇಲ್ಕಾಣಿಸಿದ ಸ್ಥಿರಾಸ್ಥಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ಅದನ್ನು ಮಾರಾಟ ಮಾಡಿ ಅಕ್ರಮ ಲಾಭ ಪಡೆಯುವ ಸಮಾನ ಉದ್ದೇಶದಿಂದ ಆರೋಪಿ 2 ರವರೊಂದಿಗೆ ಸೇರಿ ದಿನಾಂಕ 25/05/2015 ರಂದು ಪಿರ್ಯಾದಿದಾರರ ಬದಲಿಗೆ 2ನೇ ಆರೋಪಿಯನ್ನು ಉಪನೋಂದಾಣಾಧಿಕಾರಿಯವರ ಬಳಿ ತೋರಿಸಿ ಪಿರ್ಯಾದಿದಾರರು ಎಂದು ನಂಬಿಸಿ ಪಿರ್ಯಾದಿದಾರರ  ಪೋರ್ಜರಿ ಸಹಿ ಮಾಡಿ ವಂಚಿಸುವ ಉದ್ದೇಶಕ್ಕಾಗಿ ಸರಕಾರಿ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ದಾಖಲೆಯನ್ನು ನೋಂದಣಿ ಮಾಡಿಸಿರುತ್ತಾರೆ.  ದಾಖಲೆಗೆ 3 ಮತ್ತು 4 ನೇ ಆರೋಪಿತರು ಸಾಕ್ಷಿಯಾಗಿ ಸಹಿ ಮಾಡಿರುತ್ತಾರೆ. ಪಿರ್ಯಾದಾರರ ನ್ಯಾಯಯುತ ಪಾಲನ್ನು ನೀಡದೇ ವಂಚಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 154/2022 ಕಲಂ: 406, 419, 420,465,468 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಇತ್ತೀಚಿನ ನವೀಕರಣ​ : 15-10-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080