ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಉಡುಪಿ: ದಿನಾಂಕ 14/10/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಉಷಾ (43) ಗಂಡ: ಅಶೋಕ ಶೆಟ್ಟಿ, ವಾಸ: ಸಾಯಿಧಾಮ ನಿವಾಸ, ಕಂಬಳಬೆಟ್ಟು, ಕೊಡವೂರು ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು ಇವರು ತನ್ನ ಸ್ಕೂಟರ್ ನಂಬ್ರ KA-20 ER-0166ನೇದರಲ್ಲಿ ಮಲ್ಲಿಕಾ ಶೆಟ್ಟಿಯವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಕರಾವಳಿ ಕಡೆಯಿಂದ ಕಡಿಯಾಳಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 13:15 ಗಂಟೆಗೆ ಸಿ.ಟಿ ಬಸ್ ನಿಲ್ದಾಣದ ರಾಧ ಮೆಡಿಕಲ್ ಮುಂಭಾಗ ತಲುಪುವಾಗ KA-20 AB-1734 ನೇದರ ರಿಕ್ಷಾ ಚಾಲಕ ತನ್ನ ರಿಕ್ಷಾವನ್ನು ಕಲ್ಸಂಕ ಕಡೆಯಿಂದ ಚಲಾಯಿಸಿಕೊಂಡು ಬಂದು ರಾಧ ಮೆಡಿಕಲ್ ಬಳಿಯ ಯು ಟರ್ನ ನಲ್ಲಿ ಯಾವುದೇ ಸೂಚನೆ ನೀಡದೇ, ಬಲಬದಿಯ ಇಂಡಿಕೇಟರ್ ಹಾಕದೇ ಒಮ್ಮೆಲೇ ಬಲಬದಿಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್ ನ ಮುಂಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಸಹ ಸವಾರರಾಗಿದ್ದ ಮಲ್ಲಿಕಾ ಶೆಟ್ಟಿಯವರಿಗೆ ಬಲ ಕೈಯ ಮೂಳೆಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 69/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 14/10/21 ರಂದು 15:45 ಗಂಟೆಗೆ ಪಿರ್ಯಾದಿದಾರರಾಧ ಯಶ್ವಿನ್ ನಾಯಕ್ ಕೆ (36)ತಂದೆ: ಗಣೇಶ್ ನಾಯಕ್ ವಾಸ: ಕೈಟ್ ಕಾರ್ನರ್ ಅಪಾರ್ಮೆಂಟ್ ಮಿಷನ್ ಕಂಪೌಂಡ್ ಬಲ್ಮಠ ಮಂಗಳೂರು ಇವರು ತನ್ನ ಕೆಎ-02 ಎಮ್.ಆರ್-7810 ನೇ ಕಾರಿನಲ್ಲಿ ಶೃಂಗೇರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾಗ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟಿಯಲ್ಲಿ ಎಸ್ ಕೆ ಬಾರ್ಡ ರ್ ರಿಂದ ಸುಮಾರು 1 ಕಿ. ಮೀ ಕೆಳಗೆ ಇಳಿಜಾರು ತಿರುವಿನಲ್ಲಿ ಬಜಗೋಳಿ ಕಡೆಯಿಂದ ಎಸ್ ಕೆ ಬಾರ್ಡರ್ ಕಡೆಗೆ ಕೆಎ-03 ಎನ್ಎ-7901 ನೇ ಕಾರಿನ ಚಾಲಕ ಕಾರ್ತಿಕ್ ಎಂಬಾತನು ತನ್ನ ಕಾರನ್ನು ರಸ್ತೆಯ ತೀರಾ ಬಲಭಾಗಕ್ಕೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನದ ಎದುರು ಭಾಗ ಜಖಂ ಆಗಿದ್ದು, ಯಾರಿಗೂ ಗಾಯವಾಗಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 118/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಜಾಫರ್ ಖಾನ್ ಜಿ.ಎಸ್. (26) ತಂದೆ: ದಿ: ನಜೀರ್ ಅಹಮ್ಮದ್ ಖಾನ್, ವಾಸ: ವಾರ್ಡ್ ನಂ-2 ಜೋಗಿಹಳ್ಳಿ ಚಿಕ್ಕನಾಯಕನಹಳ್ಳಿ ತಾಲೂಕು ತುಮಕೂರು ಇವರು ವಿವೇಕ್ ಎಂಬವರ KA-44 M-1913 ನೇ ಬೊಲೆರೋ ಜೀಪ್ ನ ಖಾಯಂ ಚಾಲಕನಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ವಿವೇಕ್ ರವರ ತಂದೆ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದು ದಿನಾಂಕ 12/10/2021 ರಂದು ಬೆಳಿಗ್ಗೆ 6:00 ಗಂಟೆಗೆ ವಿವೇಕ್ ಹಾಗೂ ಅವರ ತಾಯಿ ಭಾಗ್ಯ ರವರೊಂದಿಗೆ ವಿವೇಕ್ ರವರ ಬೊಲೆರೋ ಜೀಪ್ ನಲ್ಲಿ ವಿವೇಕ್ ರವರ ಮನೆಯಿಂದ ಹೊರಟು ಆದಿಚುಂಚನಗಿರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೋಗುತ್ತಾ ವಿವೇಕ್ ರವರು ಮೂವರ ಮೊಬೈಲ್ ನ್ನು ಸ್ವಿಚ್ ಆಫ್ ಮಾಡಿದ್ದು ನಂತರ ಹೊಸಪೇಟೆ ಹಾಗೂ ಆಲಮಟ್ಟಿ ಡ್ಯಾಂ ಗೆ ಹೋಗಿದ್ದು ಡ್ಯಾಮ್ ಗೆ ಗೇಟ್ ಹಾಕಿದ ಕಾರಣ ಅಲ್ಲಿಂದ ವಾಪಾಸು ಹೊಸಪೇಟೆ, ಹುಬ್ಬಳ್ಳಿ, ಕಾರವಾರಕ್ಕೆ ಹೋಗಿದ್ದು ನಂತರ ಮಂಗಳೂರಿಗೆ ಹೋಗುವರೇ ಜಾಫರ್ ಖಾನ್ ಜಿ.ಎಸ್ ರವರಿಗೆ ತಿಳಿಸಿದಂತೆ ಕಾರವಾರದಿಂದ ಬರುತ್ತಾ ದಿನಾಂಕ 13/10/2021 ರಂದು ಬೆಳಗಿನ ಜಾವ ತ್ರಾಸಿಯಿಂದ ಸುಮಾರು 15 ಕಿ.ಮೀ ಹಿಂದೆ ಜಾಫರ್ ಖಾನ್ ಜಿ.ಎಸ್ ರವರಿಗೆ ನಿದ್ರೆ ಬರುತ್ತಿದ್ದ ಕಾರಣ ವಿವೇಕ್ ರವರು ಕಾರನ್ನು ಚಲಾಯಿಸಿಕೊಂಡಿದ್ದು ಜಾಫರ್ ಖಾನ್ ಜಿ.ಎಸ್ ರವರು ಕಾರಿನಲ್ಲಿ ಮಲಗಿರುತ್ತಾರೆ. ವಿವೇಕ್ ರವರು ಬೆಳಗಿನ ಜಾವ 6:00 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಪೆಟ್ರೋಲ್ ಬಂಕ್   ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಜಾಫರ್ ಖಾನ್ ಜಿ.ಎಸ್ ರವರನ್ನು ಎಬ್ಬಿಸಿ ತಂದೆಯ ಸೂತಕ ಪೂಜೆ ಮುಗಿಸಿಕೊಂಡು ಬರುವುದಾಗಿ ಮದ್ಯಾಹ್ನ 1:00 ಗಂಟೆಗೆ ಮೊಬೈಲ್ ಸ್ವಿಚ್ ಆನ್ ಮಾಡುವಂತೆ ತಿಳಿಸಿ ತಾಯಿ ಭಾಗ್ಯರವರೊಂದಿಗೆ ಹೋಗಿರುತ್ತಾರೆ. ನಂತರ ಜಾಫರ್ ಖಾನ್ ಜಿ.ಎಸ್ ರವರು  ಜೀಪ್ ನ್ನು ಪೆಟ್ರೋಲ್ ಬಂಕ್  ಬಳಿ ನಿಲ್ಲಿಸಿದ್ದು ಮದ್ಯಾಹ್ನ  1:00 ಗಂಟೆಗೆ ಮೊಬೈಲ್ ಸ್ವಿಚ್ ಆನ್  ಮಾಡಿದ್ದು  ವಿವೇಕ್ ರವರ ಫೋನ್ ಕಾಲ್ ಬಂದಿರುವುದಿಲ್ಲ.  ಸಂಜೆ 5:30 ಗಂಟೆವರೆಗೆ ವಿವೇಕ್ ಹಾಗೂ ಭಾಗ್ಯರವರು ವಾಪಾಸು ಬಾರದೇ ಇರುವುದನ್ನು ನೋಡಿ ವಿವೇಕ್ ರವರ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿ ಜಾಫರ್ ಖಾನ್ ಜಿ.ಎಸ್ ರವರು ರಾತ್ರಿಯೆಲ್ಲಾ ಹುಡುಕಾಡಿದರೂ ಈ ವೆರೆಗೂ ಪತ್ತೆಯಾಗಿರುವುದಿಲ್ಲ. ವಿವೇಕ್ ರವರು ಅಡಿಕೆ ವ್ಯಾಪಾರಸ್ಥರಾಗಿದ್ದು  ವ್ಯವಹಾರದಲ್ಲಿ ನಷ್ಟ ಉಂಟಾಗಿ  ಹಣದ ಅಡಚಣೆಯಿಂದ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುವುದಾಗಿ ಅಭಿಪ್ರಾಯವಾಗಿರವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾಧ ಮೋಹನ್‌ದಾಸ್‌ ಕೋಟ್ಯಾನ್‌(38) ತಂದೆ: ದಿ: ಕುಶ ಸಾಲ್ಯಾನ್‌, ವಾಸ: ದುರ್ಗಾ ನಗರ,  ಕುಂಜೂರು , ಪಣಿಯೂರು ಅಂಚೆ, ಎಲ್ಲೂರು ಗ್ರಾಮ, ಕಾಪು ಇವರು ರಾಜೇಶ್‌ ಶೆಟ್ಟಿ ಇವರೊಂದಿಗೆ ತನ್ನ ಕೆಎಲ್‌-13 S-5292 ನೇ ಟಿಪ್ಪರ್‌ನಲ್ಲಿ ಕುಂದಾಪುರದಿಂದ ಮರಳನ್ನು ತುಂಬಿಸಿ ಕುತ್ಯಾರು ಗ್ರಾಮದ ಕೇಂಜ ಜೋಗಿಬೆಟ್ಟು ಕುಟ್ಟಿ ಪೂಜಾರಿಯವರ ಸೈಟ್‌ಗೆ ತರುವಾಗ ಸಮಯ ಸುಮಾರು 10:45 ಗಂಟೆಗೆ ಮೋಹನ್‌ದಾಸ್‌ ಕೋಟ್ಯಾನ್‌ ರವರು ಮರಳು ತುಂಬಿದ ಲಾರಿಯನ್ನು ಹಿಂದುಗಡೆ ಚಲಾಯಿಸುವಾಗ ಕೆಸರಿನಲ್ಲಿ ಹೂತಿದ್ದು, ಆ ಸಮಯ ಅಲ್ಲಿಯೇ ಸೈಟ್‌ನಲ್ಲಿ ಕಟ್ಟಡ  ಕೆಲಸ ಮಾಡುತ್ತಿದ್ದ ಅಜೀಜ್‌,  ಅಶ್ರಫ್‌ ಮತ್ತು ರಜಾಕ್‌ ರವರು ವಾಹನ ಸ್ವಲ್ಪ ಹಿಂದಕ್ಕೆ ಬರಲಿ ಆ ಸಮಯ  ಮೋಹನ್‌ದಾಸ್‌ ಕೋಟ್ಯಾನ್‌ ರವರು ವಾಹನ ಹಿಂದಕ್ಕೆ ಬರಲು ಸಾಧ್ಯವಿಲ್ಲ ನಾನು ಮರಳನ್ನು ಇಲ್ಲಿಯೇ ಹಾಕುತ್ತೇನೆ ಎಂದಾಗ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಒಂದು ಕಲ್ಲಿನಿಂದ ಆಪಾದಿತರು ಮೋಹನ್‌ದಾಸ್‌ ಕೋಟ್ಯಾನ್‌ ಇವರ ಹಿಂಬದಿ ತಲೆಗೆ ಹೊಡೆದು ಮಣ್ಣನ್ನು ಎಸೆದಿರುತ್ತಾರೆ. ಅಲ್ಲದೆ ಆಪಾದಿತರು ಕೈಯಿಂದ ಇವರ ಬೆನ್ನಿಗೆ, ಕೆನ್ನೆಗೆ ಹೊಡೆದು  ಕಾಲಿನಿಂದ ತುಳಿದಿರುವುದಾಗಿದೆ. ಈ ಘಟನೆಗೆ ಮೋಹನ್‌ದಾಸ್‌ ಕೋಟ್ಯಾನ್‌ ರವರ ವಾಹನವು ಕೆಸರಿನಲ್ಲಿ ಹೂತಿದ್ದು, ಹಾಗೂ ವೈಮನಸ್ಸೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 53/2021 ಕಲಂ: 504, 324, 295, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-10-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080