ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 03/10/2021 ರಂದು ರಾತ್ರಿ 11:00 ಗಂಟೆ ಸಮಯಕ್ಕೆ TN 66T 2211ನೇ ನೋಂದಣಿ ನಂಬರ್‌‌ನ ಕಾರನ್ನು ಅದರ ಚಾಲಕನು  ಈಶ್ವರ ನಗರದ  ಕೃಷ್ಣ ಲೀಲಾ ಲಾಡ್ಜ್‌‌‌ನ ಮುಂಭಾಗದಲ್ಲಿನ ರಾ.ಹೆ 169(ಎ) ರಲ್ಲಿ ಮಣಿಪಾಲದಿಂದ ಪರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರಿನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮಧ್ಯದಲ್ಲಿ ಅಳವಡಿಸಿರುವ ಕಬ್ಬಿಣದ  ಹ್ಯಾಂಡ್‌ರೈಲ್ಸ್ ಗೆ ಡಿಕ್ಕಿ ಹೊಡೆದು ಹ್ಯಾಂಡ್‌ರೈಲ್ಸ್ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಸುಮಾರು 28 ಸಾವಿರ ರೂಪಾಯಿ ನಷ್ಟು ಹಾನಿ ಉಂಟಾಗಿರುತ್ತದೆ. ಅಪಘಾತ ಎಸಗಿದ  ಕಾರಿನ ಚಾಲಕನು ಸದರಿ ನಷ್ಟವನ್ನು ಭರಿಸುವುದಾಗಿ ತಿಳಿಸಿ ಈಗ ನಷ್ವವನ್ನು ಭರಿಸಲು ನಿರಾಕರಿಸಿರುತ್ತಾನೆ.  ಆದುದರಿಂದ ಈ ದೂರನ್ನು ನೀಡಲು ವಿಳಂಬವಾಗಿರುತ್ತದೆ, ಎಂಬುದಾಗಿ ಸ್ವಸ್ತಿಕ್ ಶೆಟ್ಟಿ (23) ತಂದೆ: ಸುರೇಂದ್ರ ಶೆಟ್ಟಿ ವಾಸ:ದೇವಿನಗರ, ಪರ್ಕಳ, ಹೆರ್ಗಾ ಗ್ರಾಮ , ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 130/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 13/10/21 ರಂದು ಪಿರ್ಯಾದಿದಾರರಾಧ ಸಯ್ಯದ್ ಹುಸೇನ್ ತಂದೆ: ಸಯ್ಯದ್  ಅಕ್ಬರ್  ಸಾಹೇಬ್ ವಾಸ: ಪ್ರವೀಣ್ ರೈಸ್ ಮಿಲ್ ಬಳಿ, ತೆಳ್ಳಾರ್ ಅಂಚೆ , ದುರ್ಗಾ ಗ್ರಾಮ, ಇವರು ತನ್ನ ಕೆಎ-19 ಎಮ್ಇ-1398 ನೇ ಕಾರಿನಲ್ಲಿ ಕಾರ್ಕಳ ಪೇಟೆಗೆ ಬಂದಿದ್ದು ಕಾರನ್ನು ಮಗನಾದ ಅಶಿಕ್ ಚಲಾಯಿಸುತ್ತಿದ್ದು, ಬಟ್ಟೆ ಖರೀದಿಸಿ ವಾಪಾಸ್ಸು ಹೋಗುವಾಗ 18:30 ಗಂಟೆಗೆ ತೆಳ್ಳಾರಿನ ಪಲಾಯಿ ಬಾಕ್ಯಾರು ಎಂಬಲ್ಲಿ ತಲುಪುತಿದ್ದಂತೆ ತೆಳ್ಳಾರ್ ಕಡೆಯಿಂದ ಕಾರ್ಕಳ ಕಡೆಗೆ ಒರ್ವ ರಿಕ್ಷಾ ಚಾಲಕನು ಆತನ ಕೆಎ-20-ಎಎ-9023 ನೇ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತೆಳ್ಳಾರ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-20 ಇಎಪ್-5626 ಕ್ಕೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾವನ್ನು ತೀರಾ ಬಲ ಭಾಗಕ್ಕೆ ಚಲಾಯಿಸಿ ಸಯ್ಯದ್ ಹುಸೇನ್ ರವರು ಸಂಚರಿಸುತ್ತಿದ್ದ ಕಾರಿನ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ನಲ್ಲಿದ್ದ ಸವಾರ ಮತ್ತು ಸಹ ಸವಾರೆ ರಸ್ತೆಗೆ ಬಿದ್ದಿದ್ದು , ಮೋಟಾರ್ ಸೈಕಲ್ ಸವಾರ ಆದರ್ಶ್ ಹೆಗ್ಡೆಯವರಿಗೆ ರಕ್ತ ಗಾಯವಾಗಿದ್ದಲ್ಲದೇ ರಿಕ್ಷಾ ಚಾಲಕನ ತಲೆಗೆ ಕೂಡಾ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ  ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಒಂದು ಕಾರಿನಲ್ಲಿ ಕಳುಹಿಸಿಕೊಟ್ಟಿದ್ದು, ಗಾಯಗೊಂಡ ಗಾಯಾಳು ಅಟೋರಿಕ್ಷಾ ಚಾಲಕ ಸಂತೋಷ ಶೆಟ್ಟಿ, (31) ತಂದೆ: ಆನಂದ ಶೆಟ್ಟಿ, ವಾಸ: ಸಾಯಿಶಕ್ತಿ ಹೌಸ್, ಪರಪು ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ಸಾರ್ವಜನಿಕ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 15/10/2021 ರಂದು ಬೆಳಗ್ಗಿನ ಜಾವ 5:20 ಗಂಟೆಗೆ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 117/2021 ಕಲಂ: 279, 337 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ನಿರಂಜನ್ ಗೌಡ ಬಿಎಸ್ ಪಿ.ಎಸ್‌.‌ಐ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ 15/10/2021 ರಂದು ಮಾನ್ಯ ನ್ಯಾಯಾಲಯದಿಂದ  ದಾಳಿ ನಡೆಸುವರೇ ಅನುಮತಿ ಪಡೆದು  ಠಾಣಾ ಸಿಬ್ಬಂದಿಯವರ  ಹಾಗೂ ಪಂಚಯತ್ ದಾರರೊಂದಿಗೆ ಇಲಾಖಾ ಜೀಪಿನಲ್ಲಿ ಕಂದಾವರ ಗ್ರಾಮದ ಪ್ರಥಮ ರೆಸಾರ್ಟ ಬಳಿಯ ಸಾರ್ವಜನಿಕ  ಸ್ಥಳದಲ್ಲಿ 8:40 ಗಂಟೆ ಸಮಯಕ್ಕೆ ಪಂಚರ ಸಮಕ್ಷಮ ದಾಳಿ  ನಡೆಸಿ ಓರ್ವಾತನನ್ನು ಸಿಬ್ಬಂಧಿಗಳ ಸಹಾಯದಿಂದ  ಸುತ್ತುವರೆದು ಹೆಸರು ವಿಳಾಸದ ಬಗ್ಗೆ ಹಾಗೂ ಕೃತ್ಯದ ಬಗ್ಗೆ ವಿಚಾರಿಸಿದಲ್ಲಿ ಆತನು ಗೋಪಾಲ (35) ತಂದೆ: ಶೀನ ವಾಸ: ಹೆರಿಕೆರೆ ಕಂದಾವರ  ಗ್ರಾಮ ಕುಂದಾಪುರ ತಾಲೂಕು ಎಂಬುದಾಗಿಯೂ ತಿಳಿಸಿದ್ದಲ್ಲದೇ ತಾನು  ಮಟ್ಕಾ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಇದುವೇ ಎಂಬುದಾಗಿ ನಗಧು  ಹಣ  2,595/- ರೂಪಾಯಿ ಹಾಗೂ ಆತನಲ್ಲಿ ದೊರೆತ ಮಟ್ಕಾ ನಂಬ್ರ  ಬರೆದ ಚೀಟಿ-1  ಮತ್ತು  ಬಾಲ್ ಪೆನ್-1  ನ್ನು  ಪಂಚರ ಸಮಕ್ಷಮ  09:00 ರಿಂದ 10:00 ಗಂಟೆ ತನಕ ಸ್ಥಳದಲ್ಲಿಯೇ ಬರೆಯಲಾದ ಮಹಜರಿನ ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2021 ಕಲಂ: 78(1)(3)  KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 15/10/2021 ರಂದು ಕೇಶವ ಗೌಡಎ.ಎಸ್.ಐ. ಸೆನ್ ಅಪರಾಧ ಪೊಲೀಸ್‌ ಠಾಣೆ, ಉಡುಪಿ. ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಪೊಲೀಸ್‌ ನಿರೀಕ್ಷಕರಿಗೆ ದೊರೆತ ಖಚಿತವರ್ತಮಾನದ ಮೇರೆಗೆ, ಅವರ ಆದೇಶದಂತೆ ಸಿಬ್ಬಂದಿಯವರೊಂದಿಗೆ, ಶಿರ್ವ ಗ್ರಾಮದ ಬಂಟಕಲ್ ಪೇಟೆಯಲ್ಲಿರುವ ಮೈತ್ರಿ ಕಾಂಪ್ಲೆಕ್ಸ್ ನ ಎದುರಿನ ಸಾರ್ವಜನಿಕಸ್ಧಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಸ್ಥಳಕ್ಕೆ 12.15 ಗಂಟೆಗೆ ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂ.1,450/- ಮಟ್ಕಾಚೀಟಿ,ಬಾಲ್ಪೆನ್ನ್ನು ಸ್ವಾಧೀನಪಡಿಸಿ ಕೊಂಡಿರುವುದಾಗಿದೆ, ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 49/2021 ಕಲಂ: 78(1)(3) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಎಸ್‌. ಜನಾರ್ಧನ, (57) ತಂದೆ: ಶಿವ ಪುತ್ರನ್‌ವಾಸ: ಮಾನ್ಸಿ, ಗರಡಿ ರಸ್ತೆ, ಲಕ್ಷ್ಮಿ ನಗರ, ಕಾಪು ತಾಲೂಕು, ಉಡುಪಿ ಇವರ ಹೆಂಡತಿ ಅಣ್ಣ ಪ್ರಶಾಂತ್‌ ಸಿ. ಕರ್ಕೇರ ರವರ ಮೊದಲ ಹೆಂಡತಿ ಮಲ್ಲಿಕಾ ರವರು 2016 ರಲ್ಲಿ ಮೃತರಾಗಿದ್ದು, ಪ್ರಶಾಂತ್‌ ಸಿ. ಕರ್ಕೇರ ರವರು ದಿನಾಂಕ 14/12/2017 ರಂದು ಉಡುಪಿ ಉಪ ನೊಂದಣಾಧಿಕಾರಿಯವರ ಕಛೇರಿಯಲ್ಲಿ ಕಸ್ತೂರಿ ಎಂಬವರೊಂದಿಗೆ 2ನೇ ಮದುವೆಯಾದ ಬಗ್ಗೆ ನೊಂದಣಿ ಮಾಡಿಸುವ ದಾಖಲೆಪತ್ರಗಳಿಗೆ ಎಸ್‌. ಜನಾರ್ಧನ ರವರ ಹಾಗೂ ಅವರ ಅತ್ತೆಯ ಹೆಸರು ವಿಳಾಸವನ್ನು ನೀಡಿ, ಅವರ ನಕಲಿ ಸಹಿಯನ್ನು ಮಾಡಿ ವಿವಾಹವನ್ನು ನೊಂದಣಿ ಮಾಡಿಸಿ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 149/2021 ಕಲಂ:465, 420 Rw 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶಬರೀಶ  (23), ತಂದೆ:ಜಗದೀಶ್ , ವಾಸ: ಕೈರಬೆಟ್ಟು  ಪರನೀರು ಪಾದೆ ಕಲ್ಯಾ ಗ್ರಾಮ  ಮತ್ತು ಅಂಚೆ , ಕಾರ್ಕಳ  ಇವರ ಅಕ್ಕ ಕುಮಾರಿ ದೀಕ್ಷಿತಾ (24) ಲೋ ಬಿ ಪಿ ಹಾಗೂ ವಾಂತಿಯಿಂದ ಅಸೌಖ್ಯದಲ್ಲಿದ್ದು ಈ ಬಗ್ಗೆ ನಿಟ್ಟೆ ಹಾಗೂ ಬೆಳ್ಮಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 14/10/2021 ರಂದು ರಾತ್ರಿ 11:00 ಗಂಟೆಗೆ ಅಸೌಖ್ಯದಲ್ಲಿರುವವರನ್ನು ಮನೆಯಲ್ಲಿ ಆರೈಕೆ ಮಾಡಿ ನಂತರ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಢು ಬಂದಿದ್ದು, ದಿನಾಂಕ 5/10/2021 ರಂದು 01:40 ಗಂಟೆಗೆ  ದಾರಿಯಲ್ಲಿ ಮೃತಪಟ್ಟಿದ್ದು, ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 35/2021 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-10-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080