ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ: ಅಬ್ದುಲ್ ಖಾದಿರ್‌ ಜಿ.ಎಂ 34 ವರ್ಷ,ತಂದೆ: ಜಿ.ಎಂ ಇರ್ಷಾದ್,ವಾಸ: ರಾಮ ದಿರದ ಬಳಿ, ಗಂಗೊಳ್ಳಿ ಇವರ ತಂಗಿ ಅಲ್ಫಿನಾ ಇರ್ಷಾದ್ ಶೇಖ್ (( 27  ರವರನ್ನು ಸುಮಾರು 5 ವರ್ಷಗಳ ಹಿಂದೆ ಗಂಗೊಳ್ಳಿಯ ಗೋಲೋ ಮೊಹಮ್ಮದ್ ಖಾಲಿದ್ ರವರ ಮಗನಾದ ಮೊಹಮ್ಮದ್ ಜಾಹೀದ್ ನೊಂದಿಗೆ ವಿವಾಹ ಮಾಡಿಸಿದ್ದು, ಗಂಡನ ಮನೆಯಾದ ಗಂಗೊಳ್ಳಿ ಗ್ರಾಮದ ಗುಡ್ಡೆಹೌಸ್‌ ಎಂಬಲ್ಲಿ ವಾಸವಾಗಿರುತ್ತಾರೆ.  ಅವರ ಗಂಡ  ಮೊಹಮ್ಮದ್ ಜಾಹೀದ್ ನು ಬಹ್ರೇನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.  ದಿನಾಂಕ 14/09/2022 ರಂದು ರಾತ್ರಿ 7:00 ಗಂಟೆಗೆ ಅಲ್ಫಿನಾ ಇರ್ಷಾದ್‌ ಶೇಖ್‌ ರವರು ಗಂಡನ ಮನೆಯಲ್ಲಿರುವಾಗ ವಿಪರೀತ ಹೊಟ್ಟೆ ನೋವು, ವಾಂತಿ ಹಾಗೂ ಬೇದಿ ಕಾಣಿಸಿಕೊಂಡಿದ್ದು, ಚಿಕಿತ್ಸೆ ಬಗ್ಗೆ ಅವರನ್ನು ಆಕೆಯ ಅತ್ತೆಯಾದ ಫೌಜಿಯಾ ಬಾನು ರವರು ಕುಂದಾಪುರದ ನ್ಯೂ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಒಳರೋಗಿಯಾಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ದಿನಾಂಕ 15/09/2022 ರಂದು ಸಮಯ ಸುಮಾರು ಬೆಳಿಗ್ಗೆ 8:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ: ಯು.ಡಿ.ಆರ್ ನಂ 21/2022 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ಪ್ರಕಾಶ ಕುಲಕರ್ಣಿ ಪ್ರಾಯ: 62 ವರ್ಷ ತಂದೆ: ಅಪ್ಪಾರಾವ್ ವಾಸ: ಕಬ್ಯಾಡಿ, 80 ಬಡಗಬೆಟ್ಟು  ಗ್ರಾಮ, ಇವರ ಮಗ ಪೃಥ್ವಿ ಕುಲಕರ್ಣಿ (24) ಈತನು ಬಿ.ಎ.ಎಂ.ಎಸ್ ಪದವಿಯಲ್ಲಿ ಅನುತ್ತಿರ್ಣ ಆಗಿರುವುದರಿಂದ ಸುಮಾರು ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಓಳಗಾಗಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ ಇದೇ ಕಾರಣದಿಂದೋ ಅಥವಾ ಇನ್ಯಾವೂದೋ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 14.09.2022 ಮಧ್ಯಾನ 12:00 ಗಂಟೆಯಿಂದ ಈ ದಿನ ಸಂಜೆ 15:00 ಗಂಟೆಯ ಮಧ್ಯಾವಧಿಯಲ್ಲಿ ಪೃಥ್ವಿ  ರವರು 80 ಬಡಗಬೆಟ್ಟು ಗ್ರಾಮ ಕಬ್ಯಾಡಿಯ ವಾಸವಿರುವ ಮನೆಯ ಹಾಲ್ ನಲ್ಲಿ ಮಾಡಿಗೆ ಅಡ್ಡ ಹಾಕಿರುವ ಮರದ ಜಂತಿಗೆ ತಾಯಿಯ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ  33/2022 ಕಲಂ: 174 ಸಿ ಆರ್ ಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ನಿತಿನ್ ಪ್ರಾಯ: 22 ವರ್ಷ ತಂದೆ:ನಾಗೇಶ್  ಪೈ ವಾಸ: ಮಾಹಾಮಾಯಿ ಕೃಪಾ LIG-60 ಹುಡ್ಕೋ ಕಾಲೋನಿ ಅನಂತನಗರ ಇವರು  ದಿನಾಂಕ: 15.09.2022 ರಂದು ಮಣಿಪಾಲ ಮಣ್ಣಪಳ್ಳ ಕೆರೆಯ ದಡದಲ್ಲಿ ವಾಕಿಂಗ್ ಟ್ರಾಕ್ ನಲ್ಲಿ ವಾಕಿಂಗ್ ಮಾಡುತ್ತಿರುವ ಸಮಯ ಮಣ್ಣಪಳ್ಳದ ಕೆರೆಯ ಪೂರ್ವ ಭಾಗದಲ್ಲಿರುವ ಬಿದಿರಿನ  ಗುಡ್ಡಿಯ ಸಮೀಪ ಒಂದು ಗಂಡಸಿನ ದೇಹ ನೀರಿನಲ್ಲಿ ಮುಗಿಚಿ ಬಿದ್ದಿರುವಂತೆಕಂಡಿದ್ದನ್ನು ಆತನು ಬದುಕಿರಬಹುದು ಎಂದು ಅಲ್ಲಿದ್ದ ಜನರ ಸಹಾಯದಿಂದ ಗಂಡಸಿನ ದೇಹವನ್ನು ಕೆರೆಯ ದಡದ ಬಳಿ ಎಳೆದು  ದೇಹವನ್ನು ತಿರುಗಿಸಿ ನೋಡಿದಾಗ ಆತನ  ಹೆಸರು ಪ್ರಕಾಶ್ ಎಂದು ತಿಳಿದಿದ್ದು ಆತನು ಆಗಲೇ ಮೃತಪಟ್ಟಿರುತ್ತಾನೆ, ಪ್ರಕಾಶ್ ನು ನಿನ್ನೆ ದಿನಾಂಕ: 14.09.2022 ರಂದು ಸಂಜೆ 05: 00 ಗಂಟೆಯ ಸಮಯಕ್ಕೆ ಮಣ್ಣಪಳ್ಳ ಕೆರೆಯಲ್ಲಿ ಮೀನು ಹಿಡಿಯಲು ಕೆರೆಯ ನೀರಿಗೆಇಳಿದುಮೀನು ಹಿಡಿಯುತ್ತಿದ್ದ ಎಂದು ಸ್ಥಳಿಯರು ತಿಳಿಸಿದ್ದು,ಮೃತ ಪ್ರಕಾಶ್ ದಿನಾಂಕ: 14.09.2022 ರ ಸಂಜೆ05:00 ಗಂಟೆಯಿಂದ ದಿನಾಂಕ:15.09.2022 ರ ಬೆಳಿಗ್ಗೆ 08:00 ಗಂಟೆಯ ಮಧ್ಯಾವದಿಯಲ್ಲಿ ಮಣ್ಣಪಳ್ಳ ಕೆರೆಯಲ್ಲಿ ಮೀನು ಹಿಡಿಯಲು ಹೋದವನು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 34/2022 ಕಲಂ: 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣಗಳು

  • ಹಿರಿಯಡ್ಕ :ಪಿರ್ಯಾದಿ ಶ್ರೀಮತಿ ಸುಜಾತ ಎಸ್ ಗಂಡ: ಸತೀಶ್ ನಾಯ್ಕ್ ವಾಸ: ‘’ಸತಿ ಸ್ವಾತಿ’’ , ನೀರಿನ ಟ್ಯಾಂಕ್ ಬಳಿ, ಕುಕ್ಕಿಕಟ್ಟೆ ಇವರು  ರೈತ ಸಹಾಕಾರಿ ಸಂಘ ನಿಯಮಿತ ಕೊಡಿಬೆಟ್ಟು ಶಾಖೆಯಲ್ಲಿ ಕಿರಿಯ ಸಹಾಯಕಳಾಗಿ ಕೆಲಸ ಮಾಡಿಕೊಂಡಿದ್ದು, ಸದ್ರಿಯವರಿಗೆ ಕಳೆದ 1 ವರ್ಷದಿಂದ ಬೇರೆ ಬೇರೆ ಕಾರಣ ನೀಡಿ ವರ್ಗಾವಣೆ ಮಾಡಿದ್ದು ಅಲ್ಲದೆ ದ್ವೇಷ ಹಗೆತನ ಸಾಧಿಸುವ ಸಲುವಾಗಿ ಆಂತರಿಕ ವಿಚಾರಣಗೆ ಒಳಪಡಿಸಿ ಪಿರ್ಯಾದಿದಾರರಿಗೆ ಅಪಾದಿತರುಗಳಾದ, ರೋಹಿತ್ ಶೆಟ್ಟಿ , ಆಶೋಕ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತು  ಮಹಮ್ಮದ್ ಸುಹಾನ್‌ರವರು ಸಮಾನ ಉದ್ದೇಶದಿಂದ ತಾನು ಪರಿಶಿಷ್ಟ ಪಂಗಡಕ್ಕೆ ಸೇರಿವದವಳು ಎಂಬ ಕಾರಣದಿಂದ ಒತ್ತಾಯ ಪೂರ್ವಕವಾಗಿ ಕೆಲಸದಿಂದ ವಜಾ ಮಾಡಬೇಕೆಂಬ ಉದ್ದೇಶದಿಂದ ದ್ವೇಷಪೂರಕ ಕಿರುಕುಳಕಾರಿ, ಅಂತರೀಕ ತನಿಖೆ ನಡೆಸಿ ಸೇವಾ ಹಿರಿತನ ತಡೆಹಿಡಿದು ಅಲ್ಲದೆ ಮಾನ್ಯ  ನ್ಯಾಯಾಲಯದಲ್ಲಿ ದಾಖಲಿಸಿದ ವಿಶೇಷ ಪ್ರಕರಣ ಸಂಖ್ಯೆ 94/2019 ನೇದನ್ನು ಹಿಂಪಡೆಯುವಂತೆ ಒತ್ತಡ ಹೇರಿ ಮಾನಸಿಕ ಕಿರುಕುಳವನ್ನು ನೀಡಿ ದೌರ್ಜನ್ಯ ಎಸಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ನಂ. 52/2022    ಕಲಂ: 195(A)  R/W 34 IPC & U/S 3(1)(P), 3(1)(U) SC/ST ACT 1989 ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ: ಶ್ರೀ ಪ್ರಮೋದ್‌ಕುಮಾರ್‌.ಪಿ, ಪೊಲೀಸ್‌ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ಠಾಣೆ ರವರಿಗೆ ದಿನಾಂಕ:15/09/2022 ರಂದು ಬೆಳಿಗ್ಗೆ 07:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಶನ್‌ ರಸ್ತೆಯಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ  08:30  ಗಂಟೆಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು ಬೆಳಿಗ್ಗೆ 08:45 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಕಲೀಮ್‌ಖಾನ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ಸಂಗ್ರಹಿಸಿದ ಹಣವನ್ನು 2ನೇ ಆಪಾದಿತ ಲಿಯೋ ಕರ್ನಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ  ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂ 510/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 6, ಬಾಲ್‌ಪೆನ್‌, ವಿವೋ ಮೊಬೈಲ್‌ಫೋನ್‌, ಮತ್ತು KA 20 MC 9041 XUV300 ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ: 78 (i) (iii) Karnataka Police  ACT ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 15-09-2022 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080