ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಅಕ್ಷಯ್ (18), ತಂದೆ:  ಸಂತೋಷ್, ವಾಸ:  ಬ್ರಹ್ಮಯಕ್ಷೀ ಕೃಪ  ಅಬ್ಬಿ ವಂಡ್ಸೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ  13/09/2022  ರಂದು ಕೆಲಸದ ನಿಮಿತ್ತ  ತನ್ನ KA-20-EX-6528 ನೇ ಮೋಟಾರು ಸೈಕಲ್‌ನ್ನು  ಅಬ್ಬಿಯಿಂದ ವಂಡ್ಸೆ ಪೇಟೆ  ಹೋಗಲು  ನೂಜಾಡಿ ಕ್ರಾಸ್ ನಿಂದ  ವಂಡ್ಸೆ  ಕಡೆಗೆ  ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ರಾತ್ರಿ 7-30 ಗಂಟೆಗೆ ವಂಡ್ಸೆ ಗ್ರಾಮದ  ನೂಜಾಡಿ ಕ್ರಾಸ್ ಬಸ್ ನಿಲ್ದಾಣ ಬಳಿ ಪಿರ್ಯಾದಿದಾರರ  ಎದುರಿನಿಂದ  ವಂಡ್ಸೆ ಕಡೆಯಿಂದ ಚಿತ್ತೂರು ಕಡೆಗೆ  ಆರೋಪಿ ಅಣ್ಣಪ್ಪ ಆಚಾರಿ ಯವರು ತನ್ನ ನೊಂದಣಿಯಾಗದ ಬಿಳಿ ಬಣ್ಣದ  ಟಾಟಾ ಕಂಪನಿ ನೆಕ್ಸಾನ್  ಕಾರನ್ನು  ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ  ಕಾರಿನ ವೇಗವನ್ನು ನಿಯಂತ್ರಿಸಲಾಗದೇ ತೀರ  ಬಲ ಬದಿಗೆ ಹೋಗಿ  ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರ ಎರಡು ಕಾಲುಗಳಿಗೆ ರಕ್ತ ಗಾಯವಾಗಿ ಒಳನೋವು ಉಂಟಾಗಿದ್ದು ಕುತ್ತಿಗೆಗೆ ಒಳನೋವು ಉಂಟಾಗಿದ್ದು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು  ಬಳಿಕ ಹೆಚ್ಚಿನ ಚಿಕಿತ್ಸೆಗೆ  ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ.  ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕುಂದಾಪುರ: ದಿನಾಂಕ 14/09/2022  ರಂದು  ಮಧ್ಯಾಹ್ನ  03:00  ಗಂಟೆಗೆ,  ಕುಂದಾಪುರ  ತಾಲೂಕಿನ, ಕರ್ಕುಂಜಿ   ಗ್ರಾಮದ ಕೆನರಾ ಬ್ಯಾಂಕ್‌‌  ಬಳಿ ರಸ್ತೆಯಲ್ಲಿ, ಆಪಾದಿತ ದೇವೇಂದ್ರಪ್ಪ ಮಳ್ಳಳ್ಳಿ KA-20-P-3812 JCB ವಾಹನವನ್ನು ಕೆನರಾ ಬ್ಯಾಂಕ್‌‌ನಿಂದ  ವೇಗ  ಹಾಗೂ ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ಮುಖ್ಯ ರಸ್ತೆಗೆ ತಿರುಗಿಸಿ, ಪಿರ್ಯಾದಿದಾರರಾದ ಮಂಜುನಾಥ ಪೂಜಾರಿ (39), ತಂದೆ ದಿ. ದಾಮೋಧರ ‌ಪೂಜಾರಿ,  ವಾಸ: ಮದಗ, ಮಾರಿನಕಡು, ನೇರಳಕಟ್ಟೆ,  ಕರ್ಕುಂಜಿ  ಗ್ರಾಮ, ಕುಂದಾಪುರ  ತಾಲೂಕು ಇವರು KA-20-ES-8766 ನೇ ಪಲ್ಸರ್‌‌ ಬೈಕ್‌ನಲ್ಲಿ ಸಂಬಂಧಿಯಾದ ಜಾನಕಿ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ನೇರಳಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ  ಬೈಕಿಗೆ  ಅಪಘಾತಪಡಿಸಿದ ಪರಿಣಾಮ, ಮಂಜುನಾಥ ಪೂಜಾರಿರವರ ಎಡ ಕಾಲಿಗೆ ಮೂಳೆ ಮುರಿತವಾದ ಗಾಯ,  ಜಾನಕಿ ರವರಿಗೆ ಮುಖಕ್ಕೆ, ಎರಡೂ ಕಾಲುಗಳಿಗೆ ತರಚಿದ ಗಾಯ ಹಾಗೂ ಸೊಂಟಕ್ಕೆ  ಒಳನೋವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಶರಾವತಿ (42), ಗಂಡ: ಅಣ್ಣಪ್ಪ ಮೊಗವೀರ, ವಾಸ: ಅಲ್ತಾರು, ಹಂಚಿನಕೆರೆ, ಯಡ್ತಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡ ಅಣ್ಣಪ್ಪ ಮೊಗವೀರ (46) ರವರು ಜೀವನದಲ್ಲಿ ಜೀಗುಪ್ಸೆಗೊಂಡು  ದಿನಾಂಕ 13/09/2022 ರಂದು ರಾತ್ರಿ   10:30 ಗಂಟೆಯಿಂದ ದಿನಾಂಕ 14/09/2022 ರಂದು ಬೆಳಿಗ್ಗೆ 11:30  ಗಂಟೆಯ ಮಧ್ಯಾವದಿಯಲ್ಲಿ ವಾಸದ ಮನೆಯ ತೆಂಗಿನ ಪಕ್ಕಾಸಿಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 45/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ 14/09/2022 ರಂದು ಪಿರ್ಯಾದಿದಾರರಾದ ಮನೋಜ್ (24), ತಂದೆ: ವಾದಿರಾಜ್ ಆಚಾರ್ಯ, ವಾಸ: ಗಣೇಶ ಪ್ರಸಾದ ಹೌಸ್ ಕಾಲೇಜ್ ರಸ್ತೆ ಮುನಿಯಾಲು ವರಂಗ ಗ್ರಾಮ ಹೆಬ್ರಿ ತಾಲೂಕು ಇವರ  ಅಣ್ಣ ಪವನ್ ರಾಜ್(28) ಇವರು ತನ್ನ ಸಂಬಂದಿಕರೊಂದಿಗೆ ವರಂಗ ಗ್ರಾಮದ ತಲಮನೆಯ ಹೊಳೆಯ ಬದಿಯಲ್ಲಿರುವ ಕಲ್ಲಿನ ಬಂಡೆಯ ಮೇಲೆ ಪಾರ್ಟಿ ಮಾಡುತ್ತಿರುವಾಗ ಪವನ್ ರಾಜ್  ಸಂಜೆ 4:00 ಗಂಟೆಯಿಂದ 06:00 ಗಂಟೆಯ ಮಧ್ಯಾವಧಿಯಲ್ಲಿ ಹೊಳೆಯಲ್ಲಿ ಸ್ನಾನ ಮಾಡಲು ಹೋದವರು ಅಕಸ್ಮಿಕವಾಗಿ ಅವರ ಕಾಲು ಜಾರಿದ ಕಾರಣ ಅವರು ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 29/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಬ್ರಹ್ಮಾವರ: ದಿನಾಂಕ 14/09/2022 ರಂದು ಮುಕ್ತಾಬಾಯಿ, ಪೊಲೀಸ್ ಉಪನಿರೀಕ್ಷಕರು( ತನಿಖೆ), ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಅಲ್ತಾರು ಎಂಬಲ್ಲಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿತಂತೆ ದಾಳಿ ಮಾಡಿ ಆರೋಪಿಗಳಾದ 1) ರಮೇಶ ಕುಲಾಲ, 2) ಪ್ರಶಾಂತ ಹೆಚ್‌ ಪೂಜಾರಿ, 3) ಮಂಜುನಾಥ ಪೂಜಾರಿ, 4) ಉಮೇಶ, 5) ಪ್ರವೀಣ್‌‌ ಶೆಟ್ಟಿ, 6) ಅಣ್ಣು ಪೂಜಾರಿ ಇವನ್ನು ವಶಕ್ಕೆ ತೆಗೆದುಕೊಂಡಿದ್ದು ಹಾಗೂ ಆರೋಪಿ 7] ನೀಲೇಶ್‌, 8]ವೆಲೇರಿಯನ್‌ ಇವರು ಓಡಿ ಹೋಗಿರುತ್ತಾರೆ. ಆರೋಪಿತರು ಇಸ್ಪಿಟ್‌ ಜುಗಾರಿ ಆಟವಾಡಿರುವ ಹಳೆಯ ಪೇಪರ್‌ ‌ಮೇಲೆ ಹಾಕಿರುವ ಇಸ್ಪೀಟ್‌ ಆಟಕ್ಕೆ ಬಳಸಿದ ನಗದು ರೂಪಾಯಿ 3,730/- ಮತ್ತು ಇಸ್ಪೀಟ್ ಎಲೆಗಳು 52, ಹಾಗೂ ಅವುಗಳನ್ನು ಹಾಕಿದ್ದ ಹಳೇಯ ಪೇಪರ್‌‌ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 155/2022 ಕಲಂ : 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಹಿರಿಯಡ್ಕ:  ದಿನಾಂಕ 14/09/2022 ರಂದು ಅನಿಲ್ ಬಿ ಎಂ, ಪೊಲೀಸ್‌ ಉಪನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ ಇವರು ರೌಂಡ್ಸನಲ್ಲಿರುವಾಗ  ಬೆಳಿಗ್ಗೆ 10:15 ಗಂಟೆಗೆ ಗುಡ್ಡೆಯಂಗಡಿ ಪೂಪಾಡಿಕಲ್ಲು ಬಸ್ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಮನೋಜ್ (22)  ಎಂಬಾತನು ತೂರಾಡಿಕೊಂಡಿದ್ದು ಆತನು ಯಾವುದೋ  ಮಾದಕ  ವಸ್ತು ಸೇವಿಸಿರುವ ಸಂಶಯದ ಮೇಲೆ  ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ ಆಪಾದಿತನು ನಿಷೇಧಿತ ಗಾಂಜಾ  ಸೇವಿಸಿರುವುದಾಗಿ ದೃಢಪತ್ರ ನೀಡಿರುವುದಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2022    ಕಲಂ: 27(ಬಿ) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು:  ದಿನಾಂಕ 13/09/2022 ರಂದು ಶ್ರೀಶೈಲ ಮುರಗೋಡ, ಪೊಲೀಸ್‌ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ  ಮಣಿಪುರ ಗ್ರಾಮದ ಮಣಿಪುರ ಬ್ರಿಡ್ಜ್ ಬಳಿ ಓರ್ವ ವ್ಯಕ್ತಿ ಅನುಮಾನಾಸ್ಪವಾಗಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ ಇವರ  ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 14/09/2022 ರಂದು ಪ್ರೀತೇಶ್ ಪಿಂಟೋ (26)  ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 103/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 15-09-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080