ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಸತೀಶ ವೆಂಕಟೇಶ ಪೂಜಾರಿ (42) ತಂದೆ: ವೆಂಕಟೇಶ ಅಮ್ಮಯ್ಯ ಪೂಜಾರಿ  ವಾಸ: ಬಬ್ಬು ತೋಟ ಕುಂದಬಾರಂದಾಡಿ ಹಕ್ಲಾಡಿ ಗ್ರಾಮ ಕುಂದಾಪುರ ಇವರು ದಿನಾಂಕ 14/09/2021 ರಂದು ತನ್ನ KA-20-AA-2095 ನೇ ಆಟೋರಿಕ್ಷಾ ದಲ್ಲಿ ತನ್ನ ಮಗಳಾದ ಸಾನಿಕಾಳನ್ನು ಹಕ್ಲಾಡಿ ಹೈಸ್ಕೂಲ್‌ನಿಂದ ಕರೆದುಕೊಂಡು ಬರುವರೇ ಮಧ್ಯಾಹ್ನ 3:30 ಗಂಟೆಗೆ ಹೋಗಿ ಮಗಳು ಸಾನಿಕಾ ಮತ್ತು ಸತೀಶ ವೆಂಕಟೇಶ ಪೂಜಾರಿ ರವರ ಅಣ್ಣ ಶೈಲೇಶ್‌ ಪೂಜಾರಿ ಮಗಳಾದ ಶಾಯಿನಾಳನ್ನು ಶಾಲೆಯಿಂದ ಕರೆದುಕೊಂಡು ಹಕ್ಲಾಡಿಯಿಂದ ನೂಜಾಡಿ ಕಡೆಗೆ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 3:45 ಗಂಟೆಗೆ ಹಕ್ಲಾಡಿ ಗ್ರಾಮದ ಸ್ಟೋರಿನ ಬಾಗಿಲು ಸೇತುವೆ ಬಳಿ ತಲುಪುವಾಗ ನೂಜಾಡಿ ಕಡೆಯಿಂದ ಹಕ್ಲಾಡಿ ಕುಂದಾಪುರ ಕಡೆಗೆ KA-18-C-1845 ನೇ ಮೂಕಾಂಬಿಕಾ ಬಸ್ಸಿನ ಚಾಲಕನು ತನ್ನ ಬಸ್‌ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಿಕ್ಷಾಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಜಖಂ ಆಗಿದ್ದು ರಿಕ್ಷಾದಲ್ಲಿದ್ದ ಸಾನಿಕಾಳಿಗೆ ಬಲಕಾಲಿನ ಬೆರಳಿಗೆ, ಎರಡೂ ಕಾಲಿಗೆ ರಕ್ತಗಾಯವಾಗಿದ್ದು, ಶಾಯಿನಾಳಿಗೆ ಬಲಕಾಲಿನ ಪಾದದ ಮೇಲ್ಭಾಗದ ಗಂಟಿನ ಮೂಳೆ ಮುರಿತ ಆಗಿರುತ್ತದೆ. ಗಾಯಗೊಂಡ ಸಾನಿಕಾ ಮತ್ತು ಶಾಯಿನಾಳನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2021 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಮಾಲತಿ (41) ಗಂಡ: ಪ್ರವೀನ ಕುಮಾರ್ ವಾಸ: ಮಂಜು ನಾಥ ನಿಲಯ ಹೆಬ್ಬಾರ್ ಕಾಲೊನಿ ಮನೂರು ಇವರ ಗಂಡ ಮೃತ ಪ್ರವೀಣ ಕುಮಾರ್.ಟಿ. (50) ರವರು  ಕುಂದಾಪುರ ಮೆಸ್ಕಾಂ ಕಚೇರಿಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು ಶರಾಬು ಕುಡಿಯುವ ಚಟವನ್ನು ಹೊಂದಿದ್ದು, ಕಳೆದ ಒಂದು ವರ್ಷದ ಹಿಂದೆ ಕರ್ತವ್ಯದ ಸಮಯ ಬಿದ್ದು ದೇಹದ ಬಲಬದಿ ಅಲ್ವ ಸ್ವಾಧೀನ ಹೋಗಿದ್ದು ಸರಿಯಾಗಿ ಕೆಲಸ ಮಾಡಲು ಆಗದಿದ್ದು ಕೆಲಸಕ್ಕೆ ಹೋಗದೆ ಹೆಚ್ಚಾಗಿ ಮನೆಯಲ್ಲಿ ಇರುತ್ತಿದ್ದು ಈ ಬಗ್ಗೆ ಸ್ಥಳೀಯ  ಆಸ್ಪತ್ರೆಯಿಂದ  ಚಿಕಿತ್ಸೆಯನ್ನು ಕೊಡಿಸಿದ್ದು ಅನಂತರದಲ್ಲಿ ಪುನ: ಕೆಲಸಕ್ಕೆ  ಹೋಗುತ್ತಿದ್ದು ಇತ್ತೀಚೆಗೆ ಕಳೆದ 20 ದಿನಗಳಿಂದ ದೈಹಿಕ ಸಮಸ್ಯೆಯಿಂದ ಕೆಲಸಕ್ಕೆ ಹೋಗಲಾಗದೆ  ಮನನೊಂದು ಮನೆಯಲ್ಲಿ ಇರುತ್ತಿದ್ದು ಇದೇ ಕಾರಣದಿಂದ ಅಥವಾ ಬೇರಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 14/09/2021 ರಂದು ಮಧ್ಯಾಹ್ನ 1:00 ಘಂಟೆಯಿಂದ ಸಂಜೆ 6:30 ಘಂಟೆಯ  ಮಧ್ಯಾವಧಿಯಲ್ಲಿ ಮನೆಯ ಹಿಂಬದಿಯ ಪಿರ್ಯಾದಿದಾರರ ಅತ್ತೆಗೆ ಸಂಬಂಧಿಸಿದ ಬಾಡಿಗೆ ಮನೆಯ ಹಾಲ್‌ನಲ್ಲಿ ಮನೆಯ ಜಂತಿಗೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 3೦/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಅಖಿಲಾ (33) ಗಂಡ:ಪ್ರವೀಣ್ ಕುಮಾರ್ ವಾಸ: ಮಜಾಲು ದರ್ಖಾಸ್ ಹೌಸ್ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ಶ್ಯಾಮ ಕೋಟ್ಯಾನ್ (65) ರವರು ದಿನಾಂಕ 13/09/2021 ರಂದು ಬೆಳಗ್ಗೆ 06:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಮಜಾಲು ದರ್ಖಾಸ್ ಹೌಸ್  ಎಂಬಲ್ಲಿಯ ಅವರ ಮನೆಯಿಂದ ಹೋದವರು ಈ ವರೆಗೂ ಮನೆಗೆ  ವಾಪಾಸ್ಸು ಬಾರದೇ ಇದ್ದು, ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಅವರು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಪಡುಬಿದ್ರಿ ಕಟೀಲು ಕಡೆಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗದೇ ಇದ್ದು ಈ ಹಿಂದೆ ಕೂಡ ಒಂದೆರಡು ಬಾರಿ ಮನೆಬಿಟ್ಟು ಹೋದವರು ವಾಪಾಸ್ಸು ಬಂದಿದ್ದರಿಂದ ಬರಬಹುದು ಎಂದುಕೊಂಡು ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021  ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-09-2021 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080