ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಧರ ದೇವಾಡಿಗ (38), ತಂದೆ;ಮಾಲಿಂಗ ದೇವಾಡಿಗ, ವಾಸ; ಅಜ್ಜಿಮನೆ, ಕರೆಜಡ್ಡು, ಹೇನಬೇರು, ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 14/08/2022 ರಂದು ಕೆಲಸದ ನಿಮಿತ್ತ ಬೈಂದೂರಿಗೆ ರಾಷ್ಟ್ರೀಯ  ಹೆದ್ದಾರಿ  66 ರ ಚಥುಸ್ಪಥ ರಸ್ತೆಯ ಭಟ್ಕಳ-ಕುಂದಾಪುರ ರಸ್ತೆಯಲ್ಲಿ ಒತ್ತಿನೆಣ್ಣೆ ತಿರುವಿನಲ್ಲಿ ಬರುತ್ತಿರುವಾಗ ಬೆಳಿಗ್ಗೆ  06:45 ಗಂಟೆಗೆ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಒಂದು ಲಾರಿ ಚಾಲಕನು ಆತನ ಲಾರಿಯನ್ನು ರಾಷ್ಟ್ರೀಯ  ಹೆದ್ದಾರಿ 66 ರ ಚಥುಸ್ಪಥ ರಸ್ತೆಯ ಪಶ್ಚಿಮ ಬದಿಯ ರಸ್ತೆಯ ತಿರುವಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಬ್ರೇಕ್ ಹಾಕಿದಾಗ ಲಾರಿಯ ಹಿಂದಿನಿಂದ ಬರುತ್ತಿದ್ದ KA-20-EZ-2780 ನೇ ಮೋಟಾರು ಸೈಕಲ್ ಸವಾರ ಕರುಣಾಕರ ನಾಯ್ಕ್ ರವರು ಲಾರಿಯ ಹಿಂಬದಿಗೆ ಡಿಕ್ಕಿಯಾಗಿ ಮೋಟಾರು ಸೈಕಲ್ ಸಮೇತ ರಸ್ತೆಯ ಬದಿಯಲ್ಲಿರುವ ಚರಂಡಿ ಬಳಿ ಹೋಗಿ  ಬಿದ್ದ ಪರಿಣಾಮ ಮೋಟಾರು ಸೈಕಲ್ ಸವಾರ ಕರುಣಾಕರ ನಾಯ್ಕ್ ರವರ ತಲೆಗೆ ಪೆಟ್ಟಾಗಿದ್ದು, ಮೂಗಿನಿಂದ ರಕ್ತ ಬರುತ್ತಿದ್ದು, ಆತನು  ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದುದ್ದರಿಂದ ಗಾಯಗೊಂಡ ಮೋಟಾರು ಸೈಕಲ್ ಸವಾರನನ್ನು ಪಿರ್ಯಾದಿದಾರರು 108 ಅಂಬುಲೆನ್ಸನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಲಾರಿ ಚಾಲಕನು ಆತನ  ಲಾರಿಯನ್ನು ನಿಲ್ಲಿಸದೇ ಹೋಗಿದ್ದು, ಪಿರ್ಯಾದಿದಾರರು ಘಟನೆಯ ಸಮಯ ಗಡಿಬಿಡಿಯಲ್ಲಿ ಲಾರಿಯ ನಂಬರ್ ನ್ನು ನೋಡಿರುವುದಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 159/2022 ಕಲಂ: 279 , 338 ಐಪಿಸಿ ಮತ್ತು 134(ಎ) ಮತ್ತು 134(ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಕ 13/08/2022 ರಂದು ಮಧ್ಯಾಹ್ನ 02:15 ಗಂಟೆಗೆ ಉಡುಪಿ ತಾಲೂಕು ಮಣಿಪಾಲದ ಇಂಡಸ್ಟ್ರೀಯಲ್ ಎರಿಯಾದಲ್ಲಿರುವ WINDOORS SOLUTIONS ಕಂಪನಿಯಲ್ಲಿ ಅಶೋಕ ಯಾಧವ ಎಂಬುವವರು ಅ್ಯಂಗಲ್ ಗ್ರೈಂಡರ್ ನಲ್ಲಿ ಕೆಲಸ ಮಾಡುತ್ತಿರುವುವಾಗ ಅದರ ಮಾಲೀಕರಾದ ಗಿರೀಶ ಎಸ್ ಶೇಟ್ ಮತ್ತು ಹರೀಶ್ ಸುವರ್ಣ ಎಂಬುವರು ಅಶೋಕ ಯಾದವ ರವರಿಗೆ ಕೆಲಸದ ಬಗ್ಗೆ ಸುರಕ್ಷೆತೆ ಹಾಗೂ ಕರ್ತವ್ಯದ ಬಗ್ಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡದೇ ಅಶೋಕ ಯಾಧವ ಅವರನ್ನು ಕೆಲಸ ಮಾಡಿಸುತ್ತಿರುವ ಸಮಯದಲ್ಲಿ  ಅ್ಯಂಗಲ್ ಗ್ರೈಂಡರ್ ಅವರ ಹೊಟ್ಟೆಗೆ ತಾಗಿ ಗಾಯವಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೊಗಿಯಾಗಿ ದಾಖಲಾಗಿದ್ದು ಈ ಘಟನೆಗೆ ಮಾಲಿಕರಾದ ಗಿರೀಶ ಎಸ್ ಶೇಟ್ ಮತ್ತು ಹರೀಶ್ ಸುವರ್ಣ ಎಂಬುವರ ನಿರ್ಲಕ್ಷತನವೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ: 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಹೆಂಗಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸಂತೋಷ್‌ ಕುಮಾರ್‌ ಎ (31 ), ತಂದೆ: ಗಣಪ ಮರಕಾಲ, ವಾಸ: ಅಲ್ತಾರು ಹಂಚಿನಕೆರೆ, ಯಡ್ತಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿ ಸೀತು ಮರಕಾಲ್ತಿ (65) ರವರು ದಿನಾಂಕ 13/08/2022 ರಂದು ರಾತ್ರಿ 10:00 ಗಂಟೆಗೆ ಊಟ ಮಾಡಿ ಮಲಗಿದ್ದವರು ದಿನಾಂಕ 14/08/2022 ರಂದು ಬೆಳಿಗ್ಗೆ 6:40 ಗಂಟೆಗೆ ನೋಡುವಾಗ ಮನೆಯಲ್ಲಿ ಇಲ್ಲದೆ ಇದ್ದು, ಈ ಬಗ್ಗೆ ಅವರನ್ನು ಅಕ್ಕಪಕ್ಕದಲ್ಲಿ ಹುಡುಕಾಡಿ, ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗಲೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 136/2022 ಕಲಂ : ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-08-2022 08:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080