ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶರತ್  ಕುಮಾರ್‌ ಶೆಟ್ಟಿ (36), ತಂದೆ:  ದಿ: ರಾಮಣ್ಣ ಶೆಟ್ಟಿ ವಾಸ: ಕೆದೂರು ಹಾಡಿ ಮನೆ ತೆಂಕ ಬೆಟ್ಟು   ಕೆದೂರು ಗ್ರಾಮ  ಕುಂದಾಪುರ  ತಾಲೂಕು ಇವರು ದಿನಾಕ 14/08/2021 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಗೆ  ಮಧ್ಯಾಹ್ನದ ಊಟದ ಬಗ್ಗೆ  ಮೀನು ತರಲು ಹೋಗಲು ಪಿರ್ಯಾದಿದಾರರ ಮೋಟಾರ್ ಸೈಕಲ್ ನಲ್ಲಿ ಕೆದೂರಿನಿಂದ ತೆಕ್ಕಟ್ಟೆ ಕಡೆ ಹೋಗುತ್ತಿರುವಾಗ ಒಂದು 407 ಟೆಂಪೋ  ಚಾಲಕನು ಅತೀ ವೇಗದಿಂದ ಪಿರ್ಯಾದಿದಾರರ ಮೋಟಾರು ಸೈಕಲನ್ನು ಓವರ್‌ಟೆಕ್‌ ಮಾಡಿಕೊಂಡು  ತೆಕ್ಕಟ್ಟೆ  ಕಡೆಗೆ ಚಲಾಯಿಸಿಕೊಂಡು ಹೋಗಿ  ಉಳ್ತೂರು  ಗ್ರಾಮದ ಹೆಚ್‌.ಡಿ  ಮಲ್ಲಿ ಎಂಬುವವರ ಮನೆಯ ಗೇಟಿನ ಎದುರಿನ ತಿರುವಿನ ರಸ್ತೆಯ ತೀರಾಬಲ ಬದಿಗೆ   ಚಲಾಯಿಸಿಕೊಂಡು ಹೋಗಿ ಎದುರು ಕಡೆಯಿಂದ ಬರುತ್ತಿದ್ದ KA-20-ES-3224  ನೇ ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ  ಮೋಟಾರು ಸೈಕಲಿನ ಸವಾರನು 407 ಟೆಂಪೋದ ಬಲಬದಿಯ ಹಿಂಬದಿಯ ಚಕ್ರದ ಬಳಿ ತಾಗಿ ಮೋಟಾರು ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ಆತನ ತಲೆಯ ಹಿಂಬದಿಗೆ ಗಂಭೀರ ಗಾಯವಾಗಿ ರಕ್ತ ಬರುತ್ತಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಅಲ್ಲಿಯ ಸ್ಥಳಿಯ ನಿವಾಸಿಗಳಾದ ಸೀತಾರಾಮ ದೇವಾಡಿಗ ಮತ್ತು ಗಣೇಶ ಶೆಟ್ಟಿ ಹಾಗೂ ಇನ್ನಿತರು ಸೇರಿಕೊಂಡು ಹೋಗಿ ನೋಡಲಾಗಿ ಗಾಯಾಳು ಮೋಟಾರು ಸೈಕಲ್‌ ಸವಾರನು ಪರಿಚಯದ  ಸೃಜನ್‌  ಶೆಟ್ಟಿ ಆಗಿದ್ದು ಆತನನ್ನು ಉಪಚರಿಸುವಾಗ ಟೆಂಪೋ ಚಾಲಕನು ಸಹ ಅಲ್ಲಿಗೆ ಬಂದಿದ್ದು ಆತನನ್ನು ವಿಚಾರಿಸಲಾಗಿ ಹೆಸರು ರಾಜೇಶ್ ನಾಯಕ್‌ ಎಂದು ತಿಳಿಸಿರುತ್ತಾನೆ.  ಬಳಿಕ ಗಾಯಾಳುವನ್ನು ಒಂದು ಅಂಬುಲೆನ್ಸ್‌ನಲ್ಲಿ  ಹಾಕಿಕೊಂಡು ಚಿಕಿತ್ಸೆಯ ಬಗ್ಗೆ  ಕೋಟೇಶ್ವರದ  ಎನ್‌.ಆರ್‌ ಆಚಾರ್ಯ  ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈಧ್ಯರು ಪರೀಕ್ಷಿಶಿಸಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸದಂತೆ ಮಣಿಪಾಲ ಕೆ.ಎಮ್‌.ಸಿ ಅಸ್ಪತ್ರೆಯಲ್ಲಿ  ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತ ಗಂಭೀರ ಗಾಯಗೊಂಡ  ಸೃಜನ್‌ ಶೆಟ್ಟಿಯು ಚಿಕಿತ್ಸೆಗೆ  ಸ್ಪಂದಿಸಿದೇ   ಮಧ್ಯಾಹ್ನ  2:16 ಗಂಟೆಗೆ ಮೃತ ಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 152/2021 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮಹಾಬಲ ಗೌಡ (37), ತಂದೆ; ಕೃಷ್ಣ ಗೌಡ, ವಾಸ: ಕುರುಡಬೇರುಮನೆ, ಕಾಲ್ತೋಡು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 13/08/2021 ರಂದು ಅವರ ಆಟೋ ರಿಕ್ಷಾ ನಂಬ್ರ KA-20-AA-3152 ನೇದರಲ್ಲಿ ಬಾಡಿಗಿಗೆ ಇಬ್ಬರು ಜನರನ್ನು ಹತ್ತಿಸಿಕೊಂಡು ಕಂಬದಕೋಣೆ ಜಂಕ್ಷನ್ ನಿಂದ ಕೊಡೇರಿ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಂದೂರು ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದು ಸಂಜೆ 05:40 ಗಂಟೆಗೆ ಕಂಬದಕೋಣೆ ಶಾಲೆ ಹತ್ತಿರ ಕೊಡೇರಿ ರಸ್ತೆಗೆ ಎಡಕ್ಕೆ ತಿರುಗಿದಾಗ ರಿಕ್ಷಾದ ಹಿಂದಿನಿಂದ KA-25-M-7830 ನೇ ಕಾರು ಚಾಲಕನು ಆತನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಬಲಬದಿಯ ಮಣ್ಣು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರಿಗೆ ಬಲಕೈಗೆ, ತಲೆಗೆ ರಕ್ತಗಾಯವಾಗಿದ್ದು ಹಾಗೂ ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ರಿಕ್ಷಾದಲ್ಲಿದ್ದ ಬಾಡಿಗೆದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಗೊಂಡ ಪಿರ್ಯಾದಿದಾರರನ್ನು ಅವರ ಪರಿಚಯದವರು ಉಪಚರಿಸಿ 108 ವಾಹನದಲ್ಲಿ  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 13/08/2021 ರಂದು ಪಿರ್ಯಾದಿದಾರರಾದ ಗಣೇಶ್ (48), ತಂದೆ: ದಿ. ಸೋಮಪ್ಪ ಪೂಜಾರಿ, ವಾಸ: ಕುಂಟಲ್ಪಾಡಿ, ಕಾರ್ಕಳ ಕಸಬ ಗ್ರಾಮ, ಕಾರ್ಕಳ ತಾಲೂಕು ಇವರು ಬಂಗ್ಲೆಗುಡ್ಡೆ ಕಡೆಯಿಂದ ಕಾರ್ಕಳ ಬೈಪಾಸ್ ಕಡೆಗೆ ಹಾದುಹೋಗಿರುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದು ಪಿರ್ಯಾದಿದಾರರು ಹೋಟೆಲ್ ಅಪ್ಪುರೂಪ ಸಮೀಪಿಸಿದಾಗ ಸಂಜೆ 06:30 ಗಂಟೆಗೆ ಪುಲ್ಕೇರಿ ಕಡೆಯಿಂದ ಕಾರ್ಕಳ ಬಂಗ್ಲೆಗುಡ್ಡೆ ಕಡೆಗೆ KA-20-EL-2227 ನೇ ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದ ಸವಾರನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ಎಡಕಾಲಿನ ಮೂಳೆ ಮುರಿದಿರುವುದಾಗಿದೆ. ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ದ್ವಿ ಚಕ್ರ ವಾಹನದ ಸವಾರ ರಾಜೇಶ್  ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಮಿಜ್ಭಾನ್ (32), ತಂದೆಳ ಝಾಕೀರ್ ಹುಸೇನ್, ವಾಸ: ರಾಜೀವ ನಗರ, ಕೊಳಂಬೆ, 52ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 14/08/2021 ರಂದು ಆ್ಯಕ್ಟಿವಾ ಸ್ಕೂಟರ್‌ ನಲ್ಲಿ ಬ್ರಹ್ಮಾವರ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 2:00 ಗಂಟೆಗೆ ಹಂದಾಡಿ ಗ್ರಾಮದ, ಬಾರ್ಕೂರು ಸೇತುವೆ  ಮೇಲೆ ಅವರ ಎದುರಿನಿಂದ ಸಾಯಿಬ್ರಕಟ್ಟೆ ಕಡೆಗೆ ರಾಜೇಶ್ ಎಂಬುವವರು ಸವಾರಿ ಮಾಡುತ್ತಿದ್ದ KA-20-EN-5016   ನೇ ನಂಬ್ರದ ಬುಲೆಟ್ ಮೋಟಾರ್‌ ಸೈಕಲ್‌ಗೆ ಎದುರಿನಿಂದ ಸಾಯಿಬ್ರಕಟ್ಟೆ ಕಡೆಯಿಂದ ಆರೋಪಿ ಕುಮರೇಶನ್‌ ಪಿ. ರವರು ಅವರ TN-31-CA-7794 ನೇ ಅಶೋಕ ಲೈಲ್ಯಾಂಡ್ ಗೂಡ್ಸ್ ಲಾರಿಯನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ರಾಜೇಶ್ ರವರು ಬುಲೆಟ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ & ಬಲಕಾಲಿನ ತೊಡೆಯ ಮೂಳೆ ಮುರಿತ ಹಾಗೂ ಎರಡು ಕೈ ಗಳಿಗೆ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯವಾಗಿರುತ್ತದೆ.  ಗಾಯಾಳು ರಾಜೇಶ್‌ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 23/07/2021 ರಂದು  9:00 ಗಂಟೆಗೆ  ಪಿರ್ಯಾದಿದಾರರು KA-19- EM- 9864 ನೇ ನೋಂದಣಿ ನಂಬರ್‌ನ ಸ್ಕೂಟರ್‌ ನಲ್ಲಿ ಆರ್.ಟಿ.ಒ ಕಛೇರಿ ಕಡೆಗೆ ಹೋಗುತ್ತಿದ್ದಾಗ ಡಿಸಿ ಕಛೇರಿ ರಸ್ತೆಯ ಕಾಯಿನ್ ಸರ್ಕಲ್‌ ಬಳಿ ಪೆರಂಪಳ್ಳಿ ಕಡೆಯಿಂದ KA-20-MC- 8116ನೇ ಕಾರನ್ನು ಅದರ ಚಾಲಕನಾದ ಅಜಿತ್ ನಾಯ್ಕ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ನ ಎಡ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌‌ ಸಮೇತ ನೆಲಕ್ಕೆ ಬಿದ್ದು ಎಡಕೈಗೆ ತೀವ್ರ ಜಖಂ, ಎಡ ಕೈ ಮಣಿಗಂಟಿಗೆ ಬಲಕಾಲಿನ ಉಗುರಿಗೆ ಗಾಯ, ಎದೆಗೆ ಗುದ್ದಿದ ಗಾಯ , ಹಲ್ಲು ಮುರಿತ ಮತ್ತು ದವಡೆ ಜಖಂ ಆಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಅಪಘಾತದಿಂದ KA-19-EM-9864 ನೇ ಸ್ಕೂಟರ್‌‌ ಸಹ ಜಖಂ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ:279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಉಮೇಶ ಕರ್ಕೇರಾ (51), ತಂದೆ : ಸಂಜೀವ ಕರ್ಕೇರಾ, ವಾಸ : ಗುಲಾಬಿ  ನಿವಾಸ ಕೊಂಬಗುಡ್ಡೆ  ಮಲ್ಲಾರು ಗ್ರಾಮ ಕಾಪು ತಾಲೂಕು ಇವರು ದಿನಾಂಕ 14/08/2021 ರಂದು ಸಂಜೆ 5:00 ಗಂಟೆಗೆ ಮಲ್ಲಾರು ಪಂಚಾಯತ್ ಬಳಿ ನಿಂತಿರುವಾಗ ಅರುಣ ಕರ್ಕೇರಾ ರವರು ತನ್ನ KA-20-U-2766 ನೇ ಮೋಟಾರು ಸೈಕಲನಲ್ಲಿ ಸಹ ಸವಾರನಾಗಿ ಅವಿನಾಶ ಹಾಗೂ ಮಗು ಸಮೃದ್ಧ ರವರನ್ನು ಕುಳ್ಳರಿಸಿಕೊಂಡು ಕಾಪು ಕಡೆಯಿಂದ ಮಜೂರು ಕಡೆಗೆ ಹೊಗುತ್ತಾ  ಮಜೂರು ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಎದುರು ತಲುಪುತ್ತಿದ್ದಂತೆ ಮಜೂರು ಕಡೆಯಿಂದ ಕಾಪು ಕಡೆಗೆ ಆರೀಫ್ ಎಂಬುವವರು ತನ್ನ KA-20-AA- 8001 ನೇ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು  ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ, ಸಹಸವಾರ ಮತ್ತು ಮಗು  ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಮೋಟಾರು ಸೈಕಲ್ ಸವಾರ ಅರುಣ ಕರ್ಕೇರಾ, ಸಹ ಸವಾರರಾಗಿರುವ ಮಗು ಸಮೃದ್ಧ ಮತ್ತು ಅವಿನಾಶ ರವರ ಬಲಕಾಲುಗಳಿಗೆ ಮೂಳೆ ಮುರಿತದ ಗಾಯವಾಗಿದ್ದು,  ಅಲ್ಲಿ ಸೇರಿದ ಸಾರ್ವಜನಿಕರು  ಹಾಗೂ ಆಟೋ ರಿಕ್ಷಾದ ಚಾಲಕನ ಸಹಾಯದಿಂದ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಅವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಹಿರಿಯಡ್ಕ:  ಪಿರ್ಯಾದಿದಾರರಾದ ಯುವರಾಜ, ತಂದೆ: ಮಂಜುನಾಥ ಅಚಾರ್ಯ, ವಾಸ: ಜಯಲಕ್ಷ್ಮಿ ನಿಲಯ ಪಕ್ಕಾಲು ಪೆರ್ಡೂರು ಇವರ ಅಣ್ಣ ನಾಗರಾಜ ಅಚಾರ್ಯ(32) ರವರು ತನ್ನ ವಾಸ್ತವ್ಯದ ಮನೆಯಾದ ಜಯಲಕ್ಷ್ಮಿ ನಿಲಯ ಪಕ್ಕಾಲು ಪೆರ್ಡೂರುನಿಂದ ದಿನಾಂಕ 11/08/2021 ರಂದು ಬೆಳಿಗ್ಗೆ 8:30 ಗಂಟೆಗೆ ಚಾ ತಿಂಡಿ ಮುಗಿಸಿ ಮನೆಯಿಂದ ಹೋಗಿದ್ದು ವಾಪಾಸು ಬಂದಿರುವುದಿಲ್ಲ. ಪಿರ್ಯಾದಿದಾರರು ಸಂಜೆ 4:00 ಗಂಟೆಗೆ ಫೋನ್ ಮಾಡಿದ್ದಲ್ಲಿ ಸ್ವಿಚ್‌ ಆಫ್ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ಪಿರ್ಯಾದಿದಾರರಾದ ಖಾಲಿದ್ (50), ತಂದೆ : ದಿ. ಪಳ್ಳಿಯಬ್ಬ,  ವಾಸ : ಗುರು ನಾರಾಯಣ ರಸ್ತೆ ಮೂಳೂರು ಗ್ರಾಮ ಇವರ ಮಗಳು ಶಮೀನಾ ತನ್ನ ಮಗ ಶಾನ್ ನೊಂದಿಗೆ ದಿನಾಂಕ 13/08/2021 ರಂದು ಸಂಜೆ 3:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದಿದ್ದು ಪಿರ್ಯಾದಿದಾರರ ಮನೆಯಲ್ಲಿ ಊಟ ಮಾಡಿ ಸಂಜೆ 5:00 ಗಂಟೆಗೆ ಶಮೀನಾ ರವರು ನಾನು ನನ್ನ ಗಂಡನ ಮನೆಗೆ ಹೋಗುವುದಾಗಿ ಹೇಳಿ ತನ್ನ ಮಗ ಶಾನ್ ನನ್ನು ಕರೆದುಕೊಂಡು ಹೋಗಿದ್ದು, ರಾತ್ರಿ 9:00 ಗಂಟೆಯ ಸಮಯಕ್ಕೆ ಶಮೀನಾ ರವರ ಗಂಡ ಅಬ್ಬಾಸ್ ರವರು ಫೋನ್ ಕರೆ ಮಾಡಿ ಹೆಂಡತಿ ಶಮೀನಾ ನಮ್ಮ ಮನೆಗೆ ಬರಲ್ಲಿಲ್ಲ ನಿಮ್ಮ ಮನೆಯಲ್ಲಿ ಇದ್ದಾಳೆಯೇ ಎಂದು ಕೇಳಿದ್ದು ಪಿರ್ಯಾದಿದಾರರು ನಮ್ಮ ಮನೆಯಿಂದ ಸಂಜೆ 5:00 ಗಂಟೆಗೆ ಹೋಗಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದಾರರ ಮಗಳ ಗಂಡ ಅಬ್ಬಾಸ್ ಮೂಳೂರಿಗೆ ಬಂದಿದ್ದು, ಎಲ್ಲರೂ ಸೇರಿ ನೆರೆಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಶಮೀನಾ ಮತ್ತು  ಶಾನ್ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021  ಕಲಂ: ಹೆಂಗಸು ಮತ್ತು ಮಗು  ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ರಾಮನಾಥ್ ಗಡಿಯಾರ್(26), ತಂದೆ:ಭಾಸ್ಕರ್ ಗಡಿಯಾರ್, ವಾಸ: ಶ್ರೀ ಭಾರ್ಗವಿ,ಮನೆ ನಂಬ್ರ 7-18ಡಿ , ಪಡುಬಿದ್ರಿ , ಮುಖ್ಯ ರಸ್ತೆ,ಅಂಚೆ ಕಛೇರಿ ಎದುರು,ನಡ್ಸಾಲು ಗ್ರಾಮ,ಕಾಪು ತಾಲೂಕು ಇವರು ವಾಸದ ಮನೆಯಿಂದ ತಮ್ಮನ ವಿದ್ಯಾಭ್ಯಾಸಕ್ಕಾಗಿ ಒಂದುವರೆ ತಿಂಗಳ ಹಿಂದೆ ತಂದೆ ತಾಯಿ,  ಹೆಂಡತಿ, ತಮ್ಮನೊಂದಿಗೆ ಮಂಗಳೂರಿನ ಕಾರ್ ಸ್ಟ್ರೀಟ್ ನ ಮನೆಗೆ ಶಿಪ್ಟ್‌ ಆಗಿ ವಾರಕ್ಕೊಮ್ಮೆ   ಹಾಗೂ ಉಡುಪಿಗೆ ಬಂದಾಗ ಮನೆಗೆ ಬಂದು ನೋಡಿ ಹೋಗುತ್ತಿರುವುದಾಗಿದೆ. ದಿನಾಂಕ 10/08/2021 ರಂದು ತನ್ನ ಪತ್ನಿಯೊಂದಿಗೆ ಸಂಜೆ   04:00 ಗಂಟೆಗೆ ಮನೆಗೆ ಬಂದು ಸ್ವಚ್ಚ ಮಾಡಿ ಸಂಜೆ 17:30 ಗಂಟೆಗೆ ಹೋಗಿರುವುದಾಗಿದೆ. ದಿನಾಂಕ 12/08/2021  ರಂದು ಪಿರ್ಯಾದಿದಾರರು  ತನ್ನ ಗೆಳೆಯ ಹರೀಶ್ ರವರೊಂದಿಗೆ ಕಾರ್ಕಳಕ್ಕೆ ಹೋಗಿ  ಸಂಜೆ 04:00 ಗಂಟೆಗೆ  ಪಡುಬಿದ್ರಿಯ ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ  ಮನೆಯ ಹಾಲ್ ಹಾಗೂ ದೇವರ ಕೋಣೆಯ ಬಾಗಿಲು ತೆರೆದಿದ್ದು, ಮಾಸ್ಟರ್ ಬೆಡ್ ರೂಂ ನ ಬಾಗಿಲನ್ನು ಯಾವುದೋ ಆಯುಧದಿಂದ  ಮುರಿದಿದ್ದು,  ಅದರಲ್ಲಿದ್ದ  ಲಾಕರ್ ಹೊರಗೆ ಮಗುಚಿ ಬಿದ್ದಿದ್ದು,  ನೋಡಿದಾಗ ಮನೆಯ ಮೇಲಿನ  ಟ್ಯಾರಿಸ್ ನ ಬಾಗಿಲನ್ನು ಯಾರೋ ಕಳ್ಳರು  ಯಾವುದೋ ಆಯುಧದಿಂದ ಮುರಿದು ತೆರೆದು  ಒಳಹೊಕ್ಕಿ ಮನೆಯಲ್ಲಿದ್ದ ವಾಡ್ ರೋಬ್ ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ  ಮಾಡಿದ್ದು ಕಂಡುಬಂದು ನಂತರ ಪರಿಶೀಲಿಸಿದಾಗ ಮನೆಯ ಕೆಳ ಮೇಲಂಸ್ಥಿನಲ್ಲಿದ್ದ ವಾಡ್ ರೋಬ್ ನಲ್ಲಿದ್ದ  8 ಗ್ರಾಂ  ತೂಕದ 1500/- ಮೌಲ್ಯದ ಸಿಲ್ವರ್  ನೆಕ್ಲೇಸ್-1, ರೂಪಾಯಿ 2,500/- ಮೌಲ್ಯದ ಟೈಟಾನ್ ವಾಚ್-1, 8,000/-   ಮೌಲ್ಯದ  ಸಿಕೋ ವಾಚ್-1,  6,000/- ಮೌಲ್ಯದ  ಫಾಸಿಲ್ ವಾಚ್-1, 2,500/- ಮೌಲ್ಯದ  ಓರಿಪ್ಲೇಮ್  ಲೆಡಿಸ್ ವಾಚ್ 1,  4,000/- ಮೌಲ್ಯದ ಗೋಲ್ಡ್ ಕಲ್ಲರ್  ಲೇಡಿಸ್ ವಾಚ್-1,  1,500/- ಮೌಲ್ಯದ  ಗೋಲ್ಡ್  ಕಲ್ಲರ್ ಟೈಟಾನ್ ಲೇಡಿಸ್ ವಾಚ್ -1,  5,000/- ಮೌಲ್ಯದ  ರೋಸ್ ಗೋಲ್ಡ್  ಕಲ್ಲರ್ ಲೇಡಿಸ್ ವಾಚ್ -1,  10,000/- ಮೌಲ್ಯದ ಚಾಲ್ಸ್ ಹ್ಯೂನ್ ಜೆಂಟ್ಸ್ ವಾಚ್-1,  50,000/- ಮೌಲ್ಯದ ಸುಮಾರು 16 ಗ್ರಾಂ ತೂಕದ ಪೆಂಡೆಂಟ್  ಇರುವ ಚಿನ್ನದ  ಸರ-1,  1,000/- ಮೌಲ್ಯದ 20 ಗ್ರಾಂ ತೂಕದ ಬೆಳ್ಳಿಯ ನಾಣ್ಯ -1,  ಕೆಳಗಿನ  ಅಂತಸ್ಥಿನ ವಾಡ್ ರೋಬ್ ನಲ್ಲಿದ್ದ  8,000/- ಮೌಲ್ಯದ  ಹಳೆಯ  ರೇಡೋ  ವಾಚ್-1, ಮತ್ತು ಸುಮಾರು 5,000/- ಮೌಲ್ಯದ  ಬೆಳ್ಳಿಯ ಲೇಡಿಸ್ ವಾಚ್-1, ಮತ್ತು ಮನೆಗೆ ಅಳವಡಿಸಿದ 25000/- ಮೌಲ್ಯದ ಹಿಕ್ ವಿಸನ್ ಸಿಸಿ ಕ್ಯಾಮೇರದ ಡಿ.ವಿ.ಆರ್ ಹಾರ್ಡ್ ಡಿಸ್ಕ್  ಪವರ್ ಸಪ್ಲೇಯ್ ಬಾಕ್ಸ್ -1 ಇಲ್ಲದೇ ಇದ್ದು, ಯಾರೋ ಕಳ್ಳರು ದಿನಾಂಕ 10/08/2021 ರಂದು 17:30 ಗಂಟೆಯಿಂದ ದಿನಾಂಕ 12/08/2021  ರಂದು ಸಂಜೆ 04:00 ಗಂಟೆಯ ಮಧ್ಯಾವಧಿಯಲ್ಲಿ  ಪಿರ್ಯಾದಿದಾರರ ಮನೆಯಲ್ಲಿ ಯಾರು ಇಲ್ಲದ ಸಮಯ  ಮನೆಯ ಟ್ಯಾರಿಸ್ ಗೆ ಹತ್ತಿ ಟ್ಯಾರಸ್ ನ ಬಾಗಿಲನ್ನುಮುರಿದು ಒಳ ಹೊಕ್ಕಿ ಮನೆಯ ಒಳಗಿದ್ದ ಮೇಲಿನ ಹಾಗೂ ಕೆಳ ಅಂತಸ್ಥಿನ ಕೋಣೆಯ ವಾಡ್ ರೋಬ್ ತೆರೆದು  ಚಿನ್ನದ, ಬೆಳ್ಳಿಯ ಒಡವೆ ಹಾಗೂ ವಾಚ್ ಮತ್ತು ಸಿಸಿ ಕ್ಯಾಮೇರದ  ಡಿ.ವಿ. ಆರ್, ಹಾರ್ಡ್ ಡಿಸ್ಕ್ , ಪವರ್ ಸಪ್ಲೈ ಬಾಕ್ಸ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಸೊತ್ತಿನ ಮೌಲ್ಯ ರೂಪಾಯಿ 1,30000/- ರೂಪಾಯಿ  ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಮನೀತ್ ಅಮೀನ್ (27), ತಂದೆ: ಕರಿಯ  ಪೂಜಾರಿ, ವಾಸ:  ಅನುಗ್ರಹ ನಿಲಯ ಚಂದ್ರಕಟ್ಟ  4 ನೇ ಅಡ್ಡ್ರಸ್ತೆ, ಪಲ್ಲಮಾರು ಮೂಡುಬೆಟ್ಟು ,ಕೊಡವೂರು ಗ್ರಾಮ ಉಡುಪಿ ಇವರ ಅಣ್ಣ ಮಿಥುನ್ (32) ಇವರು ಅವಿವಾಹಿತನಾಗಿದ್ದು , ಪೇಟಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 14/08/2021 ರಂದು ಬೆಳ್ಳಿಗ್ಗೆ ಕೆಲಸಕ್ಕಾಗಿ ಮನೆಯಿಂದ ಹೋಗಿರುತ್ತಾರೆ. ಪಿರ್ಯಾದಿದಾರರು ಉಡುಪಿಯ ಸ್ಟುಡಿಯೋದಲ್ಲಿರುವಾಗ ಬೆಳಿಗ್ಗೆ 11:30 ಗಂಟೆಗೆ ನೆರೆಮನೆಯ ಗಿರೀಶ ಎಂಬುವವರು ಪಿರ್ಯಾದಿದಾರಿಗೆ ಪೋನ್ ಕರೆ ಮಾಡಿ ಪಿರ್ಯಾದಿದಾರರ  ಅಣ್ಣ ಮಿಥುನ್ ಮೂಡುಬೆಟ್ಟುವಿನ ಪಿರ್ಯಾದಿದಾರರ ಮನೆಯ ಬೆಡ್ ರೂಮಿನ ಮಾಡಿನ ಪಕ್ಕಾಸಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಬೀಗಿದು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿಚಾರ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೆ ಮನೆಗೆ ಬಂದು ನೋಡಿದಾಗ ಮನೆಯ ದೇವರ ಕೋಣೆಯ ನೆಲದಲ್ಲಿ ಪಿರ್ಯಾದಿದಾರರ ಅಣ್ಣ ಮಿಥುನ್ ನನ್ನು ಮಲಗಿಸಿದ್ದು ,ಪಿರ್ಯಾದಿದಾರರು ತನ್ನ ಅಕ್ಕ ಮನಸ್ಮಿತಳಲ್ಲಿ  ವಿಚಾರಿಸಲಾಗಿ , ಮಿಥುನ್ ಬೆಳಿಗ್ಗೆ 10:30 ಗಂಟೆಯ ಸಮಯಕ್ಕೆ ಕೆಲಸದಿಂದ ವಾಪಸ್ಸು ಬಂದವನು ಮನೆಯ ಬೆಡ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಪಿರ್ಯಾದಿದಾರರ ಅಕ್ಕ ಸಂಶಯದಿಂದ ಬಾಗಿಲಿನ ಸಂದಿಯ ಮುಖಾಂತರ ನೋಡಿದಾಗ ಮಿಥುನ್ ರೂಮಿನ ಪಕ್ಕಾಸಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು  ನೇತಾಡುತ್ತಿದ್ದು ಕೂಡಲೇ ಬಾಗಿಲನ್ನು ಒಡೆದು ಒಳಗೆ ಹೋಗಿ ಮಿಥುನ್  ಬದುಕಿರಬಹುದೆಂದು ಆತನನ್ನು ನೇಣು ಕುಣಿಕೆಯಿಂದ ಬಿಡಿಸಿ  ನೆಲದ ಮೇಲೆ  ಮಲಗಿಸಿದ್ದು , ಆತನು ಈಗಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ.  ಪಿರ್ಯಾದಿದಾರರ ಅಣ್ಣ ಮಿಥುನ್   ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38 /2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಣಿಪಾಲ: ಉಡುಪಿ ತಾಲೂಕು ಹೆರ್ಗಾ ಗ್ರಾಮದ ಸರಳಬೆಟ್ಟು ಹೈ ಪಾಯಿಂಟ್ ಬಳಿಯ ಆದಿ ಮನೆಯ ನಿವಾಸಿಯಾದ  ಪ್ರಭಾಕರ ಕೋಟ್ಯಾನ್ (60) ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ಜ್ವರ ಬಂದಿದ್ದು ಕಳೆದ 5-6 ದಿನಗಳಿಂದ ತೀವ್ರ ಹೊಟ್ಟೆ ನೋವುನಿಂದ ಬಳಲುತ್ತೀದ್ದವರು, ಈ ಕಾರಣದಿಂದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13/08/2021 ರಿಂದ ಸಂಜೆ 18:.00 ಗಂಟೆಯಿಂದ ದಿನಾಂಕ 14/08/2021 ರ ಮದ್ಯಾಹ್ನ 14:30 ಗಂಟೆಯ ಮಧ್ಯಾವದಿಯಲ್ಲಿ ಹೆರ್ಗಾ ಗ್ರಾಮದ ಕೋಡಂಗೆ ಹೈ ಪಾಯಿಂಟ್ ಬಳಿಯ ಪಾಳು ಬಿದ್ದ ಮನೆಯ 1ನೇ ಮಹಡಿಯ ರಾಡ್ ಗೇ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-08-2021 09:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080