ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಸೈಯದ್ ಸುಹೇಲ್ ವೈ ( 24) , ತಂದೆ: ಸೈಯದ್ ಯೂನಸ್, ವಾಸ:ಆಶಿಯಾನ, ಪ್ರಶಾಂತ್ ನಗರ - 3, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 13/07/2022 ರಂದು ಸಂಜೆ ಕೆಲಸದ ನಿಮಿತ್ತ ತನ್ನ ಮೋಟಾರ್ ಸೈಕಲ್‌‌ನಲ್ಲಿ  ಬೆಳುವಾಯಿ ಹೋಗಿ ಕೆಲಸ ಮುಗಿಸಿ ವಾಪಾಸು ಕಾರ್ಕಳಕ್ಕೆ  ಹೊರಟು ಬರುತ್ತಾ ರಾತ್ರಿ 8:30 ಗಂಟೆಗೆ ರಾಷ್ತ್ರೀಯ ಹೆದ್ದಾರಿ 169  ರಲ್ಲಿ ಸಾಣೂರು ಗ್ರಾಮದ ಮುರತಂಗಡಿ ಪೈನಾಪಲ್ ತೋಟದ ಬಳಿ ತಲುಪುವಾಗ ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲ್ ನ  ಎದುರುಗಡೆ  ಬೆಳುವಾಯಿ ಕಡೆಯಿಂದ ಕಾರ್ಕಳ ಕಡೆಗೆ ಕಾರು ನಂಬ್ರ KA-20-MA-8334 ನೇಯದರ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ರಸ್ತೆಯ ಬಲಬದಿಗೆ ಹೋಗಿ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆಸ್ಮತ್ ರವರಿಗೆ ಬಲಕೈಗೆ. ಕುತ್ತಿಗೆಯ ಹಿಂಬದಿಗೆ ಗುದ್ದಿದ ಗಾಯ, ಆಶಾ ಬಾನು ರವರಿಗೆ  ತಲೆಗೆ ರಕ್ತ ಗಾಯ, ಕಣ್ಣಿನ ಬಳಿ ಮತ್ತು  ಬೆನ್ನಿನ ಹಿಂಬದಿಗೆ ಗುದ್ದಿದ ಗಾಯ, ನೌಶಿರ ರವರಿಗೆ ಕುತ್ತಿಗೆಯ ಬಳಿ ಮೂಳೆ ಮುರಿತದ ಗಾಯ, ಅದ್ನಾನ್ ರರಿಗೆ ಮೂಗಿಗೆ ರಕ್ತಗಾಯ ಮತ್ತು ಕಾಲಿಗೆ ಗುದ್ದಿದ ಗಾಯವಾಗಿದ್ದು ಕಾರಿನಲ್ಲಿದ್ದ ಸಣ್ಣ ಮಕ್ಕಳಾದ ಐಫಾ (8), ಅಲ್ತಾಸ್‌(12) ರವರಿಗೆ ಯಾವುದೇ ಗಾಯವಾಗಿರುವುದಿಲ್ಲ.  ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ರುಕ್ಮವ್ವ (30), ಗಂಡ: ಫಕೀರಪ್ಪ, ವಾಸ: ಲಕ್ಕನಾಯಕನ ಕೊಪ್ಪ, ಜಾಲಿಕಟ್ಟೆ, ರಾಮದುರ್ಗಾ ತಾಲೂಕು, ಬೆಳಗಾಂ ಜಿಲ್ಲೆ ಹಾಗೂ ಅವರ ಗಂಡ ಫಕೀರಪ್ಪ (36) ರವರು ಕೆಲಸದ ಬಗ್ಗೆ ತಮ್ಮ ಇಬ್ಬರೂ ಮಕ್ಕಳೊಂದಿಗೆ ಕಳೆದ 4 ವರ್ಷಗಳಿಂದ ಉಡುಪಿ ಆಶೀರ್ವಾದ ಬಳಿ ಪೊಟ್ಟುಕೆರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ ವಾಗಿದ್ದುಕೊಂಡು ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 14/07/2022 ರಂದು ಪಿರ್ಯಾದಿದಾರರ ಗಂಡ ಫಕೀರಪ್ಪ ರವರು  ಉಪ್ಪೂರು ಗ್ರಾಮದ, ಮೂಡು ಅಮ್ಮುಂಜೆ  ಎಂಬಲ್ಲಿ ದಿನೇಶ್‌ ಶೆಟ್ಟಿ ಎಂಬುವವರ ಗದ್ದೆಯಲ್ಲಿ ಕೃಷಿ ಕೆಲಸದ ಬಗ್ಗೆ ಹೋಗಿ, ಅವರ  ಗದ್ದೆಯಲ್ಲಿ ಗೊಬ್ಬರ ಹೋರುವ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ 3:30 ಗಂಟೆಗೆ ತಲೆ ಸುತ್ತು ಬಂದು ಗದ್ದೆಯಲ್ಲಿ ಬಿದ್ದು ಪ್ರಜ್ಞಾಹೀನರಾಗಿರುವವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಮಧ್ಯಾಹ್ನ 4:40 ಗಂಟೆಗೆ ಕರೆತಂದಾಗ ಪರೀಕ್ಷಿಸಿದ ವೈಧ್ಯರು ಫಕೀರಪ್ಪ ರವರು ಅದಾಗಲೇ ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ಫಕೀರಪ್ಪ ರವರಿಗೆ 1 ವರ್ಷದ ಹಿಂದೆ ತಲೆ ಸುತ್ತು ಬಂದು ಬಿದ್ದಿದ್ದು, ಈ ಬಗ್ಗೆ ವೈಧ್ಯರಲ್ಲಿ ಪರೀಕ್ಷಿಸಿದಾಗ ಅವರಿಗೆ ಫೀಡ್ಸ್‌ ಖಾಯಿಲೆ ಇರುವುದಾಗಿ ಹೇಳಿ ಔಷಧಿ ನೀಡಿರುತ್ತಾರೆ. ಅವರು ಔಷಧಿಯನ್ನು ಸರಿಯಾಗಿ ಸೇವಿಸದೇ ಇದ್ದು, ಫೀಡ್ಸ್‌ ಖಾಯಿಲೆ ಉಲ್ಬಣಗೊಂಡು ಅಥವಾ ಇನ್ನಾವುದೋ ದೈಹಿಕ ಖಾಯಿಲೆಯಿಂದ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2022 ಕಲಂ :174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಹೇಮಂತ ಶೆಟ್ಟಿ (25), ತಂದೆ: ಚಂದ್ರಶೇಖರ ಶೆಟ್ಟಿ, ವಾಸ: ಬೈಕಾಡ್ತಿ ನಿಲಯ, ಬೊಬ್ಬರ್ಯ ಸ್ಥಾನದ ಹತ್ತಿರ, ಪರೀಕ, ಆತ್ರಾಡಿ ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು ಇವರ ತಂದೆ ಚಂದ್ರ ಶೇಖರ ಶೆಟ್ಟಿ (56) ರವರು 5 ವರ್ಷಗಳಿಂದ ಪರ್ಕಳ ಮಾರುಕಟ್ಟೆ ಏಲಮ್‌ ಪಡೆದು ಸುಂಕ ವಸೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ  5 ವರ್ಷದ ಹಿಂದೆ ಹೃದಯ ಸಂಬಂಧಿ ಹಾಗೂ ಮಧುಮೇಹ ಖಾಯಿಲೆ ಇದ್ದು, ಈ ಬಗ್ಗೆ ಚಿಕಿತ್ಸೆ ಪಡೆದಿರುತ್ತಾರೆ. ಅವರು ದಿನಾಂಕ 14/07/2022  ರಂದು ಚೇರ್ಕಾಡಿ ಗ್ರಾಮದ ಪೇತ್ರಿಗೆ ಹೋದಾಗ ಸಂಜೆ 5:20 ಗಂಟೆಯಿಂದ 5:30 ಗಂಟೆಯ ಮಧ್ಯಾವಧಿಯಲ್ಲಿ ಪೇತ್ರಿ ಬಸ್ ನಿಲ್ದಾಣದ ಬಳಿ ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆ ತಂದಾಗ ಸಂಜೆ 5:40 ಗಂಟೆಗೆ ಪರೀಕ್ಷಿಸಿದ ವೈಧ್ಯರು ಚಂದ್ರಶೇಖರ ಶೆಟ್ಟಿ ರವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಚಂದ್ರಶೇಖರ ಶೆಟ್ಟಿ ರವರು ಅವರಿಗಿದ್ದ ಹೃದಯ ಸಂಬಂದಿ ಖಾಯಿಲೆಯಿಂದಲೊ ಅಥವಾ ಮಧು ಮೇಹ ಖಾಯಿಲೆಯಿಂದಲೊ ಮೃತಪಟ್ಟಿರುವುದಾಗಿದೆ. ‌ ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 33/2022 ಕಲಂ :174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಸಂಗವ್ವ ನಾಗರಾಳ  (58), ಗಂಡ: ದಿ, ಬಸಪ್ಪ ನಾಗರಾಳ, ವಾಸ: ಹಂಡರಗಲ್‌ಗ್ರಾಮ. ಗ್ರಾಮ, ಚಿಕ್ಕಮೆಗೇರಿ ಅಂಚೆ, ಬಾಗಲಕೋಟೆ ತಾಲೂಕು ಮತ್ತು ಜಿಲ್ಲೆ ಇವರ ಮಗ ಸಂಗಪ್ಪ(38) ರವರು  ಸುಮಾರು 1 ತಿಂಗಳಿನಿಂದ ಕುಂದಾಪುರ ತಾಲೂಕು ಅಲೂರು ಗ್ರಾಮದ ಸುಭಾಸ ಶೆಟ್ಟಿ ರವರ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡು ಸುಭಾಸ್ ಶೆಟ್ಟಿ ಯವರ ಮನೆಯ ಬಳಿ ಶೆಡ್‌ನಲ್ಲಿ ವಾಸವಾಗಿರುತ್ತಾರೆ. ಸಂಗಪ್ಪ ರವರು  ದಿನಾಂಕ 14/07/2022ರಂದು ಕೃಷಿ ಕೆಲಸ ಮಾಡಿ 14:30 ಗಂಟೆಯಿಂದ 15:30 ಗಂಟೆಯ ನಡುವೆ ಕುಂದಾಪುರ ತಾಲೂಕು ಆಲೂರು ಗ್ರಾಮದ ಕಾಳಿಕಾಂಬ ನಗರದ ಉದಯ ಶೆಟ್ಟಿ ರವರ ಜಾಗದಲ್ಲಿ ಇರುವ ನೀರಿನ ಹೊಂಡಕ್ಕೆ  ಕೈ ಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಶರಾವತಿ,  ಗಂಡ: ರಾಮು , ವಾಸ: ಅಮ್ಮ ನಿಲಯ ಸಳ್ವಾಡಿ ಕಾಳಾವರ  ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು ತನ್ನ ಮಾಂಗಲ್ಯ ಸರವನ್ನು  ಮನೆಯ ಕಪಾಟಿನ ಲಾಕರ್‌ಕೀ ಸರಿ ಇಲ್ಲದಿರುವುದರಿಂದ ಮಲಗುವ ಮಂಚದ ಬೆಡ್‌ನ ಕೆಳಗಡೆ ಒಂದು ಪರ್ಸ್‌ನಲ್ಲಿ ಹಾಕಿ ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಸುತ್ತಿ ಇಟ್ಟಿದ್ದು ದಿನಾಂಕ  15/05/2022 ರಂದು ಪಿರ್ಯಾದಿದಾರರು ಗಂಡನೊಂದಿಗೆ ಕುಂದಾಪುರಕ್ಕೆ ಹೋಗುವ ಬಗ್ಗೆ ಚಿನ್ನವನ್ನು ಹಾಕಿಕೊಳ್ಳಲು ಮಂಚದ ಬೆಡ್‌ನ ಕೆಳಗಡೆ ಇರುವ ಪರ್ಸ್‌ನ್ನು ನೋಡಿದಾಗ  ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಪರ್ಸ್‌ ಇಲ್ಲದೇ ಇರುವುದು ಕಂಡು ಬಂದಿರುತ್ತದೆ. ದಿನಾಂಕ 04/05/2022 ರಂದು  ಪಿರ್ಯಾದಿದಾರರ ಮಾವನ ಮಗಳಾದ ಅನಿತಾಳು ಪಿರ್ಯಾದಿದಾರರ ಮನೆಗೆ ಬಂದು ಸಂಬಂಧಿಕರ ಮದುವೆಕ್ಕೆ  ಹೋಗಲು ಪಿರ್ಯಾದಿದಾರರ ಬಳಿ ಚಿನ್ನವನ್ನು ಕೇಳಿದ್ದು ಆಗ ಪಿರ್ಯಾದಿದಾರರು ಮಲಗುವ ಮಂಚದ ಬೆಡ್‌ನ ಕೆಳಗಡೆ ಒಂದು ಪರ್ಸ್‌ನಲ್ಲಿ ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ಸುತ್ತಿ ಇಟ್ಟಿದ್ದು ಚಿನ್ನದ ಕಿವಿಯ ಜುಮುಕಿ ಮತ್ತು ಕಿವಿಯ ಜುಮುಕಿ ಚೈನ್‌ ಕೊಟ್ಟಿದ್ದನ್ನು ಅನಿತಾಳು ತೆಗೆದುಕೊಂಡು ಹೋಗಿರುತ್ತಾಳೆ.  ನಂತರ ಅನಿತಾಳು ದಿನಾಂಕ:06/05/2022 ರಂದು ವಾಪಾಸು ತಂದು ಕೊಟ್ಟಿರುತ್ತಾಳೆ. ಪಿರ್ಯಾದಿದಾರರು ಚಿನ್ನವನ್ನು ಇಟ್ಟ ಸ್ಥಳವನ್ನು ಅನಿತಾ ರವರು ನೋಡಿದ್ದು ಆಕೆಯೆ ಪಿರ್ಯಾದಿದಾರರು ಮನೆಯಲ್ಲಿ ಇಲ್ಲದ ಸಮಯ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಮಾಂಗಲ್ಯ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾಳೆ. ಮಾಂಗಲ್ಯ ಸರದ ತೂಕ  20 ಗ್ರಾಂ ಆಗಿದ್ದು ಅದರ ಮೌಲ್ಯ 80,000/- ರೂಪಾಯಿ ಆಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 15-07-2022 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080