ಅಭಿಪ್ರಾಯ / ಸಲಹೆಗಳು

 

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ಸದಾನಂದ ಇವರ ಪತ್ನಿ ಮಹಾಲಕ್ಷ್ಮಿ (30 ವರ್ಷ) ಎಂಬುವವರು ಮಕ್ಕಳಕಟ್ಟೆ, ಬಗ್ವಾಡಿ, ನೂಜಾಡಿ ಗ್ರಾಮದ ನಿವಾಸಿಯಾಗಿದ್ದು, ಇವರ ಹೆಂಡತಿಯವರು ದಿನಾಂಕ 13/07/2021 ರಂದು ಸಂಜೆ 5:00 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು, ದಿನಾಂಕ 15/07/2021 ರಂದು ಬೆಳಿಗ್ಗೆ 8:00 ಗಂಟೆಗೆ ಗಂಗೊಳ್ಳಿ ಬಂದರಿನ ಸಮುದ್ರ ಕಿನಾರೆಯಲ್ಲಿ ಮಹಾಲಕ್ಷ್ಮಿ ಯವರ ಮೃತ ದೇಹವು ದೊರಕಿರುತ್ತದೆ. ಮಹಾಲಕ್ಷ್ಮಿ ಯವರು ಬಗ್ವಾಡಿ ಸೌಪರ್ಣಿಕ ಹೊಳೆಯ ಬದಿಯಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಮೊಹಮ್ಮದ್ ಫೈರೋಜ್ ಹಸನ್ (45), ತಂದೆ: ಶೇಖ್ ಹಸನ್,ವಾಸ: ಝಾಹೀದಾ ಮಂಜಿಲ್, ಅಬ್ದುಲ್ ಕಲಾಂ ರಸ್ತೆ, ಬೆಳಪು ಪೋಸ್ಟ್ ಮತ್ತು ಗ್ರಾಮ , ಕಾಪು ತಾಲೂಕು,  ಉಡುಪಿ ಜಿಲ್ಲೆ ಇವರು ಬೆಳಪುವಿನಲ್ಲಿ ಎಸ್.ಎಮ್ ಮಟನ್ ಮತ್ತು ಚಿಕನ್ ಸ್ಟಾಲ್ ವ್ಯವಹಾರವನ್ನು ಮಾಡಿಕೊಂಡಿದ್ದು, ಬೇರೆ ಬೇರೆ ಕಡೆಗಳಿಂದ  ಆಡುಗಳನ್ನು ತರಿಸಿಕೊಂಡು ಮಟನ್ ಅಂಗಡಿ ಹತ್ತಿರ ಶೆಡ್ ನಲ್ಲಿ ತಂದಿರಿಸಿ ವ್ಯಾಪಾರ ಮಾಡುತ್ತಿರುವುದಾಗಿದೆ.  ದಿನಾಂಕ 13/07/2021 ರಂದು ರಾತ್ರಿ ಸಮಯ 11:15 ಗಂಟೆಯಿಂದ ದಿನಾಂಕ 14/07/2021 ರ ಬೆಳಿಗ್ಗೆ 08:30 ಗಂಟೆಯ ನಡುವಿನ  ಮಧ್ಯಾವದಿಯಲ್ಲಿ ಯಾರೋ ಕಳ್ಳರು ಆಡುಗಳಿರುವ ಪಿರ್ಯಾದಿದಾರರ ಶೆಡ್ ನ ಷಟರ್ ನ ಎರಡು ಬದಿಯ ಬೀಗ ಮುರಿದು ಒಳಪ್ರವೇಶಿಸಿ  7 ಆಡುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   7 ಆಡುಗಳ  ಮೌಲ್ಯ 1,20,000/- ಆಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸೌಮ್ಯ (30), ತಂದೆ: ವಾಸು ಸೇರಿಗಾರ್, ವಾಸ: ಮುಖ್ಯಪ್ರಾಣ ರಸ್ತೆ, 3 ನೇ ಕ್ರಾಸ್‌, ಆದಿ ಉದುಪಿ , ಕೊಡವೂರು ಗ್ರಾಮ ಇವರ ವಿವಾಹವು ಆಪಾದಿತ 1 ಉದಯ ಶಂಕರ ಇವರೊಂದಿಗೆ  ದಿನಾಂಕ 06/10/2017 ರಂದು ಉಡುಪಿ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರ ಸಮಕ್ಷಮದಲ್ಲಿ ಶಾಸ್ರೋಕ್ತವಾಗಿ  ನಡೆದಿದ್ದು, ಮದುವೆಯ ನಂತರ ಪಿರ್ಯಾದಿದಾರರು ತನ್ನ ಗಂಡ ಹಾಗೂ ಗಂಡನ ಮನೆಯವರೊಂದಿಗೆ ಧರ್ಮಸ್ಥಳದ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ಮದುವೆಯ ನಂತರ 1 ನೇ ಆರೋಪಿ  ಪಿರ್ಯದಿದಾರರಿಗೆ ಮಾನಸಿಕ  ಮತ್ತು ದೈಹಿಕ ಹಿಂಸೆ ನೀಡಿದ್ದು, ಆರೋಪಿತರಾದ 2. ದುಗ್ಗಪ್ಪ ದೇವಾಡಿಗ, 3. ಚಂದ್ರಾವತಿ ಇವರೂ ಕೂಡ ಪಿರ್ಯಾದಿದಾರರಿಗೆ ಚಿತ್ರ ಹಿಂಸೆ ಕೊಡುತ್ತಿದ್ದರು. 4 ನೇ ಆರೋಪಿ ಅನುರಾಧ ಪಿರ್ಯಾದಿದಾರರ ಬಗ್ಗೆ ಇಲ್ಲ ಸಲ್ಲದ ಚಾಡಿ ಮಾತನ್ನು 1 ನೇ ಆರೋಪಿಯಲ್ಲಿ  ಹೇಳಿ ಪಿರ್ಯಾದಿದಾರರನ್ನು ಹಿಂಸಿಸುವಂತೆ ಪ್ರಚೋದಿಸುತ್ತಿದ್ದರು. ಎಲ್ಲಾ ಆರೋಪಿತರು ಸೇರಿ ಪಿರ್ಯಾದಿದಾರರಲ್ಲಿ ನಿನ್ನ ತವರು ಮನೆಯಿಂದ ಹೊಟೇಲ್‌ ವ್ಯವಹಾರ ಮಾಡಲು 2 ಲಕ್ಷ ಸಾಲ ತೆಗೆಸಿ ತಂದು ಕೊಡು ಎಂದು ಪೀಡಿಸುತ್ತಿದ್ದು, 2018 ಅಕ್ಟೋಬರ್ ತಿಂಗಳಿನಲ್ಲಿ ಪಿರ್ಯಾದಿದಾರರನ್ನು ತಾಯಿ ಮನೆಗೆ ತಂದು ಬಿಟ್ಟು ಹಣ ತಯಾರಿ ಮಾಡಿ ಬಾ ಇಲ್ಲವಾದಲ್ಲಿ ಇಲ್ಲೇ ಇರು ಎಂದುಬಿಟ್ಟು ಹೋಗಿರುತ್ತಾರೆ. ಪಿರ್ಯಾದಿದಾರರು ಜೀವನಾಂಶಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ದಿನಾಂಕ 20/12/2020ರ ಬೆಳಿಗ್ಗೆ 11:00 ಗಂಟೆಗೆ 1 ನೇ ಆರೋಪಿಯು ಪಿರ್ಯಾದಿದಾರರ ಆದಿ ಉಡುಪಿ ಮನೆಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ,ನೀನು ನೋಟಿಸ್ ಕಳುಹಿಸಿದರೆ ನಾನು ಹೆದರುವುದಿಲ್ಲ ಮರ್ಯಾದೆಯಾಗಿ ಕೇಸ್ ವಾಪಾಸು ಪಡೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 498(A), 323,506, ಜೊತೆಗೆ 34  ಐಪಿಸಿ ಮತ್ತು ಕಲಂ 3,4 DP Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ವಿಜಯ (51), ತಂದೆ: ದಿ. ಸಂಜೀವ ಕುಂದರ್, ವಾಸ: ಮನೆ ನಂಬ್ರ 2-109, ಅಕ್ಕಿಮನೆ, ಅಬ್ಬೇಡಿ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರು ಪಡುಬಿದ್ರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಎಟಿಎಮ್‌ ಕಾರ್ಡ್‌ ಹೊಂದಿರುತ್ತಾರೆ. ದಿನಾಂಕ 13/07/2021 ರಂದು 12:15 ಗಂಟೆಗೆ ಹಣ ಡ್ರಾ ಮಾಡುವ ಸಲುವಾಗಿ ನಡ್ಸಾಲು ಗ್ರಾಮದ ಪಡುಬಿದ್ರಿಯ ಕಾರ್ಕಳ ಜಂಕ್ಷನ್‌ನ ಸಮೀಪ ಇರುವ ಎಸ್‌.ಬಿ.ಐ ಬ್ಯಾಂಕಿನ ಕೆಳಗಡೆ ಇರುವ ಎಟಿಎಮ್ ಕೇಂದ್ರಕ್ಕೆ ಹೋದಾಗ ಸೆಕ್ಯುರಿಟಿ ಗಾರ್ಡ ಇಲ್ಲದೆ ಇದ್ದು,  ಪಿರ್ಯಾದಿದಾರರಿಗೆ ಹಣ ಡ್ರಾ ಮಾಡಲು ತಿಳಿಯದೇ ಇದ್ದುದರಿಂದ  ಎಟಿಎಮ್‌ ಒಳಗಡೆ ಇದ್ದ  40-45 ವರ್ಷ ಪ್ರಾಯದ ಟೋಪಿ ಹಾಕಿದ ಅಪರಿಚಿತ ಗಂಡಸಿನ ವ್ಯಕ್ತಿಯಲ್ಲಿ ತನಗೆ ಹಣ ತೆಗೆಯಲು ಗೊತ್ತಿಲ್ಲ ಸಹಾಯ ಮಾಡಿ ಎಂದು ಕೇಳಿದ್ದು, ಆ ವ್ಯಕ್ತಿ ಪಿರ್ಯಾದಿದಾರರಿಂದ ಎಟಿಎಮ್‌ಕಾರ್ಡ್ ಪಡೆದು, ಕಾರ್ಡ್‌ನ್ನು  ಎಟಿಎಮ್‌ ಮೆಶೀನ್‌ಗೆ ಹಾಕಿ ಪಿನ್‌ ನಂಬ್ರ ಹಾಕಲು ಹೇಳಿ,  ಬ್ಯಾಲೆನ್ಸ್‌ ಚೆಕ್‌ ಮಾಡಿದ್ದು  ಮತ್ತೆ ಪುನಃ ಎಟಿಎಮ್ ಕಾರ್ಡ್‌ ಹಾಕಿ ಪಿನ್‌ ನಂಬ್ರ ಹಾಕಲು ಹೇಳಿ ಏನೇನೋ ಬಟನ್‌ ಒತ್ತಿ ಈ ಎಟಿಎಮ್‌ನಲ್ಲಿ ಹಣ ಇಲ್ಲ ಎಂದು ಹೇಳಿ  ಪಿರ್ಯಾದಿದಾರರಿಗೆ ಕಾರ್ಡನ್ನು ನೀಡಿದಾಗ ಪಿರ್ಯಾದಿದಾರರು ಕಾರ್ಡನ್ನು ಗಮನಿಸದೇ ತಮ್ಮ ಜೇಬಿಗೆ ಹಾಕಿಕೊಂಡು, ಸ್ವಲ್ಪ ಸಮಯದ ನಂತರ ಎಸ್‌ಬಿಐ ಎಟಿಎಮ್‌ ಬಳಿಗೆ ಬಂದು ಸೆಕ್ಯೂರಿಟಿ ಗಾರ್ಡ್‌ಬಳಿ ರೂಪಾಯಿ 10,000/- ಹಣ ತೆಗೆದು ಕೊಡುವಂತೆ ಜೇಬಿನಲ್ಲಿದ್ದ ಎಟಿಎಮ್ ಕಾರ್ಡನ್ನು ಕೊಡುವಾಗ, ಆರೋಪಿತನು ಪಿರ್ಯಾದಿದಾರರಿಗೆ ಬೇರೆ ಕಾರ್ಡ್‌ ನೀಡಿರುವುದು ಗೊತ್ತಾಗಿರುತ್ತದೆ. ನಂತರ ಪಿರ್ಯಾದಿದಾರರು ಹಣ ಡ್ರಾ ಮಾಡಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಬಂದಾಗ ಅವರ ಮೊಬೈಲ್‌ ಪೋನ್‌ಗೆ ಪಿರ್ಯಾದಿದಾರರ ಅಕೌಂಟ್‌ನಿಂದ 25,000/- ಮತ್ತು 20,000/- ರೂ ಹಣ ಡ್ರಾ ಮಾಡಿದ ಬಗ್ಗೆ ಮೆಸೇಜ್‌ ಬಂದಿರುತ್ತದೆ. ಆರೋಪಿಯು ದುರ್ಗಾ ಜ್ಯುವೆಲ್ಲರಿ  ಪಡುಬಿದ್ರಿ ಇಲ್ಲಿಂದ 25,000/- ರೂ ಮೌಲ್ಯದ  ಚಿನ್ನದ ನಾಣ್ಯವನ್ನು ಖರೀದಿಸಿ, ಹಾಗೂ 20,000/- ರೂ ಹಣವನ್ನು ಎಟಿಎಮ್‌ನಿಂದ ವಿದ್‌ಡ್ರಾ ಮಾಡಿರುತ್ತಾನೆ. ಆರೋಪಿಯು  ಪಿರ್ಯಾದಿದಾರರ ಎಎಟಿಮ್‌ ಪಡೆದು  ಬೇರೊಂದು ಕಾರ್ಡ್‌ ನೀಡಿ, ಪಿರ್ಯಾದಿದಾರರ ಎಟಿಎಂ ಕಾರ್ಡಿನಿಂದ ಹಣ ಡ್ರಾ ಮಾಡಿ ವಂಚಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ: 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಚಿಕ್ಕಯ್ಯ  ಶೆಟ್ಟಿ (62), ತಂದೆ: ನಾಗಯ್ಯ ಶೆಟ್ಟಿ, ವಾಸ: ತೆಕ್ಕಟ್ಟೆ ಪಟೇಲರ ಮನೆ  ತೆಕ್ಕಟ್ಟೆ  ಗ್ರಾಮ ಕುಂದಾಪುರ ತಾಲೂಕು ಇವರ ಹೆಂಡತಿಯ ಚಿಕ್ಕಮ್ಮ  ಸುಮತಿ (ಗೌರಿ) ಇವರಿಗೆ ಸೇರಿದ ಸ್ಥಿರಾಸ್ತಿಯು ಉಳ್ತೂರು ಗ್ರಾಮದ ಮಲ್ಯಾಡಿ ಎಂಬಲ್ಲಿರುತ್ತದೆ.  ಸ್ಥಿರಾಸ್ತಿಯನ್ನು ಸರ್ವೆ ಮಾಡಲು ದಿನಾಂಕ 12/02/2021ರಂದು ಮಧ್ಯಾಹ್ನ 12:00 ಗಂಟೆಗೆ ಸ್ಥಳಕ್ಕೆ ಸರ್ವೆಯರ್ ಬಂದಿರುತ್ತಾರೆ.  ಸ್ಥಿರಾಸ್ತಿಯ ಅಕ್ಕ ಪಕ್ಕದಲ್ಲಿ ಆರೋಪಿತರಾದ 1.ರಂಗನಾಥ ಶೆಟ್ಟಿ (35), ತಂದೆ: ದಿ ಮಹಾಬಲ ಶೆಟ್ಟಿ, 2. ರಾಧಾಕೃಷ್ಣ ಶೆಟ್ಟಿ (35), ತಂದೆ: ಸುಂದರ ಶೆಟ್ಟಿ , 3. ಸುಧಾಕರ ಶೆಟ್ಟಿ (55), ತಂದೆ: ನಾಗಯ್ಯ ಶೆಟ್ಟಿ, 4. ಮಂಜಯ್ಯ ಶೆಟ್ಟಿ (58), ತಂದೆ: ದಿ.ನಾಗಯ್ಯ ಶೆಟ್ಟಿ, ಮಲ್ಯಾಡಿ ಹೆಗ್ಡೆ ಮನೆ ತೆಕ್ಕಟ್ಟೆ ಅಂಚೆ ಕುಂದಾಪುರ ತಾಲೂಕು ಇವರಿಗೆ ಸೇರಿದ  ಸ್ಥಿರಾಸ್ತಿ ಹಾಗೂ ಮನೆಗಳೂ ಇರುತ್ತದೆ. ಸರ್ವೆ ಮಾಡುವ ಸಮಯದಲ್ಲಿ 1 ರಿಂದ 4 ರ ವರೆಗಿನ ಆರೋಪಿತರುಗಳು  ಸೇರಿ ಆಕ್ಷೇಪ ಮಾಡಿರುತ್ತಾರೆ. ಸರ್ವೆಯರ್ ಸರ್ವೆಯನ್ನು ನಿಲ್ಲಿಸಿದ್ದು, ಮಾತುಕತೆಯ ಮೂಲಕ  ಬಗೆಹರಿಸಿಕೊಳ್ಳಿ ಎಂದು ಹೇಳಿದರು. ಆ ಸಂದರ್ಭದಲ್ಲಿ 3 ನೇ ಆರೋಪಿತರು,  ಅವರು ಊರಿನಲ್ಲಿಯೇ ಇದ್ದರೂ  ಸಹಾ ಯಾರೂ ಮಾತುಕತೆಗೆ ಬರಲಿಲ್ಲ  ಎಂದು ಹೇಳಿದಾಗ  ,ಅದಕ್ಕೆ ಪಿರ್ಯಾದಿದಾರರು ಯಾರೂ ಹೊರಗಡೆಯಿಂದ ಬಂದವರಿಲ್ಲ. ಎಲ್ಲರೂ  ಊರಿನವರೇ ಎಂದು ಹೇಳಿದ್ದಕ್ಕೆ ಆರೋಪಿ 1 ರಿಂದ 4 ನೇಯವರು  ಸಮಾನ ಉದ್ದೇಶದಿಂದ ಏಕಾಏಕಿ ನೀನು ಯಾರು ಇದನ್ನೆಲ್ಲಾ  ಮಾತನಾಡುವುದಕ್ಕೆ  ಎಂದು  1 ಹಾಗೂ 2 ನೇ ಆರೋಪಿತರು ಹೊಡೆಯಲು ಬಂದಿದ್ದು,  3 ಮತ್ತು 4 ನೇ ಆರೋಪಿತರು ಪಿರ್ಯಾದಿದಾರರ ಕೈಯನ್ನು ಹಿಡಿದು ಕೊಂಡರು. ನಂತರ 1 ಮತ್ತು 2 ನೇ ಆರೋಪಿತರು ಪಿರ್ಯಾದಿದಾರರ ಶರ್ಟ್ ಕಾಲರಿಗೆ ಕೈ ಹಾಕಿ ಎಳೆದು ದೂಡಿದ್ದು, ಶರ್ಟನ್ನು ಹರಿದು ಹಾಕಿರುತ್ತಾರೆ. ಮಾತ್ರವಲ್ಲದೇ ಆರೋಪಿತರೆಲ್ಲರೂ  ಸೇರಿ ಪಿರ್ಯಾದಿದಾರರ ಭುಜಕ್ಕೆ ಮತ್ತು ಮುಖಕ್ಕೆ  ಮಾರಣಾಂತಿಕ ಹಲ್ಲೆ ಮಾಡುವ  ಉದ್ದೇಶದಿಂದ ಹೊಡೆದಿರುತ್ತಾರೆ. ನಂತರ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2021 ಕಲಂ: 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಎಂ ಕೆ ವಿಪುಲ್ ತೇಜ್ (28), ತಂದೆ: ಎಂ ಕೆ ವಿಜಯ ಕುಮಾರ್, ವಾಸ: ಸದಸ್ಯರು ಮತ್ತು ವಕೀಲರು, ಸ್ವಚ್ಚ ಕಾರ್ಕಳ ಬ್ರಿಗೇಡ್, ಶ್ರೀ ದೇವಿ ಕಾಂಪ್ಲೆಕ್ಸ್, ಎ ಎಸ್ ರೋಡ್, ಕಾರ್ಕಳ ಇವರ ಮೋಬೈಲ್ ಗೆ ದಿನಾಂಕ 10/07/2021 ರಂದು ವಾಟ್ಸ್ ಅಪ್ ಮುಖೇನ ಬಂದ ಸಂದೇಶದಲ್ಲಿ  ರಾತ್ರಿ 09:30 ಗಂಟೆಯ ವೇಳೆಗೆ KA-19-A-6975 ನೇ ಮಹಿಂದ್ರ ಪಿಕಫ್ ವಾಹನದ ಚಾಲಕನು ವಾಹನದಲ್ಲಿದ್ದ 4 ರಿಂದ 5 ಚೀಲದಲ್ಲಿ ತುಂಬಿಸಿದ್ದ ತ್ಯಾಜ್ಯ ವಸ್ತುಗಳನ್ನು ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿರುವ ಸೇತುವೆಯ ಕೆಳಗೆ ಹರಿದು ಹೋಗುವ ನೀರಿಗೆ ಎಸೆದು ನೀರನ್ನು ಮಲಿನಗೊಳಿಸಿದ್ದಲ್ಲದೇ ಇದರಿಂದ ಸಾಂಕ್ರಮಿಕ ರೋಗಗಳಾದ ಮಲೇರಿಯ, ಡೆಂಗ್ಯೂ ಹರಡಲು ಕಾರಣಕರ್ತನಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ:  269, 277 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 16-07-2021 09:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080