ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 14/06/2022 ರಂದು ಸಂಜೆ 4:30 ಗಂಟೆಗೆ ಕುಂದಾಪುರ ತಾಲೂಕು, ಕಾಳಾವರ ಗ್ರಾಮದ  ದಬ್ಬೆಕಟ್ಟೆ ಬಳಿಯ ಶ್ರೀನಿವಾಸ ಶೆಟ್ಟಿಯವರ ಸೈಟ್‌ ಹತ್ತಿರ ತಿರುವಿನ ರಸ್ತೆಯಲ್ಲಿ  ಆಪಾದಿತ ಪ್ರಸನ್ನ KA-20-7578 ಲಾರಿಯನ್ನು ದಬ್ಬೆಕಟ್ಟೆ ಕಡೆಯಿಂದ ಬೇಳೂರು ಕಡೆಗೆ   ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು, ಬೇಳೂರು ಕಡೆಯಿಂದ ಕೊಟೇಶ್ವರ ಕಡೆಗೆ  ಪಿರ್ಯಾದಿದಾರರಾದ ಗಣೇಶ (31), ತಂದೆ: ಸಂಜೀವ ಮೋಗವೀರ, ವಾಸ: ಬೇಳೂರು ಬಡಾಬೆಟ್ಟು, ಬೇಳೂರು  ಗ್ರಾಮ, ಕುಂದಾಪುರ ಇವರು KA-20-EJ-2132ನೇ ಬೈಕಿನಲ್ಲಿ  ಪ್ರವೀಣ್‌ ಎಂಬುವವರನ್ನು  ಸಹ ಸವಾರರಾಗಿ  ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು  ಬರುತ್ತಿದ್ದ  ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರ  ಬಲಕಾಲಿಗೆ  ಚರ್ಮ  ಹರಿದ  ಗಾಯ ಹಾಗೂ ಪ್ರವೀಣ್‌ ರವರಿಗೆ   ಬಲ ಕೈಗೆ  ಒಳಜಖಂ ಗಾಯ, ಎಡಕಾಲು, ಮುಖ ಹಾಗೂ ತಲೆಗೆ ತರಚಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಶೋಭಾ ಖಾರ್ವಿ (34), ಗಂಡ: ದೇವದಾಸ್ ಖಾರ್ವಿ, ವಾಸ: ಮಂಜುನಾಥ ಕೃಪಾ, ದೊಡ್ಡಹಿತ್ಲು, ಬಂದರ್ ರಸ್ತೆ, ಗಂಗೊಳ್ಳಿ  ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ಹಾಗೂ  ರೇಖಾ ಖಾರ್ವಿಯವರು ಎಸ್.ಕೆ  ಸಂಘದ ಸದಸ್ಯರಾಗಿದ್ದು  ರೇಖಾ ಖಾರ್ವಿಯವರು ಸಂಘದಲ್ಲಿ ಪಿರ್ಯಾದಿದಾರರ ಹೆಸರಿನಲ್ಲಿ 1 ಲಕ್ಷ ರೂಪಾಯಿ ಸಾಲ ಪಡೆದಿದ್ದು ಸರಿಯಾಗಿ ಕಂತನ್ನು ಕಟ್ಟದೇ ಇದ್ದ ಬಗ್ಗೆ ರೇಖಾ ಖಾರ್ವಿಯವರಲ್ಲಿ ಸಂಘಕ್ಕೆ ಹಣ ಕಟ್ಟಲು ಬಾಕಿ ಇದೆ ಎಂದು ಕೇಳಿರುತ್ತಾರೆ.  ದಿನಾಂಕ 13/06/2022 ರಂದು ರಾತ್ರಿ 9:00 ಗಂಟೆಗೆ ರೇಖಾ ಖಾರ್ವಿ, ಅವರ ಗಂಡ ಲಕ್ಷ್ಮಣ ಪೂಜಾರಿ, ಮಗ ನಿಖಿಲ್ ಖಾರ್ವಿ, ಮಗಳು ಮೀನಾಕ್ಷಿ ಹಾಗೂ ರೇಖಾ ಖಾರ್ವಿಯವರ ತಮ್ಮ ಅಜಿತ್ ಖಾರ್ವಿಯವರು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾದಿದಾರರನ್ನು ಹೊರಗೆ ಕರೆದು ಸಾಲದ ಹಣವನ್ನು ಕಟ್ಟುವುದಿಲ್ಲವಾಗಿ ಹೇಳಿ ರೇಖಾ ಖಾರ್ವಿಯವರು ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದು, ಅಜಿತ್ ಖಾರ್ವಿಯವರು ಪಿರ್ಯಾದಿದಾರರ ಕೈಯನ್ನು ಹಿಡಿದು ಎಳೆದು ದೂಡಿರುತ್ತಾರೆ. ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಗಂಡ ತಪ್ಪಿಸಲು ಬಂದಿದ್ದು ಲಕ್ಷ್ಮಣ ಪೂಜಾರಿಯವರು  ಅಲ್ಲೇ ಇದ್ದ ಇಟ್ಟಿಗೆ ತೆಗೆದುಕೊಂಡು ಪಿರ್ಯಾದಿದಾರರ ಗಂಡನ ಮುಖಕ್ಕೆ ಬಲವಾಗಿ ಹೊಡೆದಿರುತ್ತಾರೆ. ನಂತರ ಆರೋಪಿತರು ಎಲ್ಲರೂ ಸೇರಿ ಪಿರ್ಯಾದಿದಾರರಿಗೆ ಹಾಗೂ ಅವರ ಗಂಡನಿಗೆ ಕಾಲಿನಿಂದ ತುಳಿದು ಸಂಘದ ವಿಚಾರದಲ್ಲಿ ಹಾಗೂ ಹಣ ಕೇಳಿದಲ್ಲಿ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿದ್ದು, ಈ ಗಲಾಟೆ ಕೇಳಿ ನೆರೆಕೆರೆಯ ಮಣಿಕಂಠ ಹಾಗೂ ಇತರರು ಬಂದು ಗಲಾಟೆ ಬಿಡಿಸಿದ್ದು ಆರೋಪಿತರು  ಬೆದರಿಕೆ ಹಾಕಿ ಇಟ್ಟಿಗೆಯನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾರೆ. ಆರೋಪಿತನು ಇಟ್ಟಿಗೆಯಿಂದ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡನ ಹಲ್ಲುಗಳು ಮುರಿದು ಬಿದ್ದು ಹೋಗಿದ್ದು ತಲೆಗೆ, ಬೆನ್ನಿಗೆ, ಕೈಕಾಲುಗಳಿಗೆ ಪೆಟ್ಟಾಗಿರುತ್ತದೆ. ಹಾಗೂ ಪಿರ್ಯಾದಿದಾರರಿಗೆ ತಲೆಗೆ, ಬೆನ್ನಿಗೆ, ಕೈಕಾಲುಗಳಿಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿದ್ದು ಹಣಕಾಸಿನ ಅಭಾವದಿಂದ ದಿನಾಂಕ 14/06/2022 ರಂದು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 143, 147, 148, 447, 323, 326,  354, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 15-06-2022 09:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080