ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿ ಶ್ರೀಕಾಂತ್ ಆಚಾರ್ಯ ಇವರ ದೊಡ್ಡಪ್ಪನ ಮಗ ಜಯರಾಮ ಆಚಾರ್ಯ (51) ಎಂಬುವರು ಮರದ ಕೆಲಸ ಮಾಡಿಕೊಂಡಿದ್ದು, ದಿನಾಂಕ: 15.06.2022 ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಗೆ ಬಂದಿದ್ದು, ಸಮಯ ಸುಮಾರು 11:30 ಗಂಟೆಗೆ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯ ಪಶ್ಚಿಮ ಅಂಚಿನಲ್ಲಿ ರಸ್ತೆ ದಾಟಲು ಕಾಯುತ್ತಾ ನಿಂತಿರುವಾಗ KA-41-A-9079 ನೇ ನಂಬ್ರದ ಲಾರಿ ಚಾಲಕನು ತನ್ನ ಬಾಬ್ತು ಲಾರಿಯನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಗೆ ಚಲಾಯಿಸಿ ಜಯರಾಮ ಆಚಾರ್ಯ ರವರಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಅವರ ಸೊಂಟದ ಮೇಲೆ ಲಾರಿಯ ಚಕ್ರ ಚಲಿಸದ್ದು, ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸಿ ಲಾರಿಯಿಂದ ಇಳಿದು ಅಲ್ಲಿಂದ ಓಡಿ ಹೋಗಿರುತ್ತಾನೆ. ಸದ್ರಿ ಅಪಘಾತದಿಂದ ಗಂಭೀರ ಗಾಯಗೊಂಡ ಜಯರಾಮ ಆಚಾರ್ಯರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಗಾಯಾಳು ಜಯರಾಮ ಆಚಾರ್ಯರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 279, 304(A) ಐಪಿಸಿ. ಮತ್ತು 134(ಎ)(ಬಿ) ಐಎಂವಿ ಕಾಯ್ದೆ ರಂತೆ ಪ್ರಕರಣ ದಾಖಲಾಗಿರುತ್ತದೆ.

 ಮಟ್ಕಾ ಜುಗಾರಿ ಪ್ರಕರಣ

 • ಪಡುಬಿದ್ರಿ: ದಿನಾಂಕ 15/06/2022 ರಂದು  ಪುರುಷೋತ್ತಮ ಎ, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ ಇವರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ತರಕಾರಿ ಮಾರುಕಟ್ಟೆಯ ಬಳಿ ಸಾರ್ವಜನಿಕ  ಸ್ಥಳದಲ್ಲಿ  ಓರ್ವ  ವ್ಯಕ್ತಿಯು ಮಟ್ಕಾ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ಆರೋಪಿ 1) ಚಂದ್ರ (48), ತಂದೆ: ದಿ. ನಾಥು ಮುಖಾರಿ, ವಾಸ: ಅವರಾಲುಮಟ್ಟು, ಹೆಜಮಾಡಿ ರಸ್ತೆ, ಪಲಿಮಾರು ಗ್ರಾಮ, ಕಾಪು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಪಾದಿತ 2) ಮನೋಜ್‌‌ ಉಚ್ಚಿಲ ಎಂಬಾತನನ ಸೂಚನೆಯಂತೆ  ಸಾರ್ವಜನಿಕರಿಂದ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಹೇಳುತ್ತಾ ಜನರನ್ನು ಸೇರಿಸಿ ಚೀಟಿ ಬರೆದು ಕೊಡುತ್ತಿದ್ದು, ಆರೋಪಿತನು ಸಂಗ್ರಹಿಸಿದ ಹಣವನ್ನು 2 ನೇ ಆರೋಪಿತನಿಗೆ ನೀಡುತ್ತಿದ್ದು, 2 ನೇ ಆರೋಪಿತನು ಡ್ರಾ ನಡೆಸಿ ಬಹುಮಾನ ವಿಜೇತರಿಗೆ  ಆರೋಪಿತ 1. ಚಂದ್ರ ನ ಮುಖಾಂತರ ಹಣವನ್ನು  ನೀಡುವುದಾಗಿದೆ, ನಂತರ ಆರೋಪಿತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,810/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2022, ಕಲಂ :78 (I) (III) ಕೆಪಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಪ್ರಫುಲ್ ವೇಣುಗೋಪಾಲ್ (45), ತಂದೆ:  ವೇಣುಗೋಪಾಲ, ವಾಸ: ಎ-15 ಎಸ್.ಟಿ.ಸಿ ಸೊಸೈಟಿ ವೆಸ್ಟರ್ನ ಎಕ್ಸಪ್ರೆಸ್ ಹೈವೇ ಅಂಧೇರಿ ( ಪೂರ್ವ) ಮುಂಬೈ ಇವರ ತಂದೆ ವೇಣುಗೋಪಾಲ (75 ) ಹಾಗೂ ಹೆಂಡತಿ ಇಬ್ಬರು ಮಕ್ಕಳು ಮತ್ತು ಅತ್ತೆ ಮಾವ ನೊಂದಿಗೆ ಉಡುಪಿ ಹಾಗೂ ಮಂಗಳೂರಿಗೆ ತೀರ್ಥಯಾತ್ರೆಗೆಂದು ಬಂದು ದಿನಾಂಕ 13/06/2022 ರಂದು ಬೈಂದೂರು ಪಡುವರಿ ಗ್ರಾಮದ ಸಾಯಿ ವಿಶ್ರಾಮ್ ರೆಸಾರ್ಟ್ ನಲ್ಲಿ ತಂಗಿದ್ದು, ದಿನಾಂಕ 14/06/2022 ರಂದು ಬೆಳಿಗ್ಗೆ 7:00 ಗಂಟೆಗೆ ಮನೆಯವರು ಹಾಗೂ ರೆಸಾರ್ಟ್ ನ ಸಿಬ್ಬಂದಿಯೊಂದಿಗೆ ಒತ್ತಿನೆಣೆಯ ಸನ್ ರೈಸ್ ಪಾಯಿಂಟ್ ಗೆ ನೋಡಲು ಹೋಗಿದ್ದು, ನಂತರ ಅಲ್ಲಿಂದ ವಾಪಸಾಗಿ ಬೆಳಿಗ್ಗೆ 7:45 ಗಂಟೆಗೆ ರೆಸಾರ್ಟ್ ನಲ್ಲಿ ಬೆಳಗಿನ ಉಪಹಾರ ಸೇವಿಸಲು ಬಂದಾಗ ಪಿರ್ಯಾದಿದಾರರ ತಂದೆ ವೇಣುಗೋಪಾಲ ರವರು ತಮ್ಮ ರೂಂ ಗೆ ಟಾಯ್ಲೆಟ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು 15 ನಿಮಿಷ ಕಳೆದರೂ ವಾಪಾಸು ಬಾರದೇ ಇರುವುದನ್ನು ನೋಡಿ ಪಿರ್ಯಾದಿದಾರರು ತಂದೆಯ ರೂಂ ಬಳಿ ಹೋಗಿ ನೋಡಿದಾಗ ರೂಂ ಹೊರಗಿನಿಂದ ಬೀಗ ಹಾಕಿದ್ದು , ರೆಸಾರ್ಟ್ ನಲ್ಲಿ, ರೆಸಾರ್ಟ್ ನ ಅಕ್ಕಪಕ್ಕದ ಊರುಗಳಲ್ಲಿ  ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಇ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ:  ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಬಿ ಎನ್ ಇರ್ಫಾನ್ (35), ತಂದೆ:ಬಿ ಎನ್ ಮೊಹಿದ್ದೀನ್, ವಾಸ: ಹೂಡೆ ಪಡುತೋನ್ಸೆ ಗ್ರಾಮ ಇವರ ಅಣ್ಣ ಇಮ್ರಾನ್ (40) ಇವರು ಕೆಮ್ಮಣ್ಣುವಿನಲ್ಲಿ  ಅಲ್ಯುಮಿನಿಯಂ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 05/06/2022 ರಂದು ಸಂಜೆ 7:00 ಗಂಟೆಯ ಸಮಯಕ್ಕೆ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ಈವರೆಗೂ ಮನೆ  ಬಂದಿರುವುದಿಲ್ಲ.  ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದ್ದಲ್ಲಿ  ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ. ಅಲ್ಲದೆ ಪಿರ್ಯಾದಿದಾರರ ಅಣ್ಣನ ಮೊಬೈಲ್ ಪೋನ್ ಸ್ವೀಚ್ ಆಪ್ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2022 , ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ: 13/06/2022 ರಂದು ಮಂಜುನಾಥ ಎಂ, ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ವಿದ್ಯಾರತ್ನ ನಗರ ರಾಯಲ್‌ ಎಂಬೆಸಿ ರೂಮ್‌ ನಂ: 2902 ರಲ್ಲಿ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುವ ಬಗ್ಗೆ  ಮಾಹಿತಿ ಬಂದ ಮೇರೆಗೆ ಪ್ಲಾಟ್‌ಗೆ ಹೋಗಿ ಪ್ಲಾಟ್‌ನಲ್ಲಿದ್ದ ನಿಆಲ್ ಯುವನ್ ಚಾರ್ಲ್ಸ್ ಗೊವಿಯಸ್ (20), ತಂದೆ: ಕೊನಪ್ರೆಡ್ ಗೊವಿಯಸ್,14-3-256/6  ಕ್ರೆಸೆಂಟ್ ಮನೊರ್,  ಬಲಮಟಾ ಮಲಬಾರ್ ಗೋಲ್ಡ್ ಹತ್ತಿರ ಮಂಗಳೂರು ಎಂಬಾತನನ್ನು ದಿನಾಂಕ 14/06/2022 ರಂದು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು,  ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರು ದಿನಾಂಕ 15/06/2022 ರಂದು ದೃಢಪತ್ರವನ್ನು ನೀಡಿರುತ್ತಾರೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ: 13/06/2022 ರಂದು ಮಂಜುನಾಥ ಎಂ, ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ವಿದ್ಯಾರತ್ನ ನಗರ ರಾಯಲ್‌ ಎಂಬೆಸಿ ರೂಮ್‌ ನಂ: 2902 ರಲ್ಲಿ ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುವ ಬಗ್ಗೆ  ಮಾಹಿತಿ ಬಂದ ಮೇರೆಗೆ ಪ್ಲಾಟ್‌ಗೆ ಹೋಗಿ ಪ್ಲಾಟ್‌ನಲ್ಲಿದ್ದ  ಕರಣ ಆರ್ ಕೆ (21), ತಂದೆ: ರವಿಶಂಕರ ಕಿಣಿ, #15-4-199/2(52), ವೆಸ್ಟ್ ವೈಂಡ್ ಅಪಾರ್ಟಮೆಂಟ್ , ಬಲಮಟಾ ಮಂಗಳೂರು ದಿನಾಂಕ 14/06/2022 ರಂದು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು,  ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರು ದಿನಾಂಕ 15/06/2022 ರಂದು ದೃಢಪತ್ರವನ್ನು ನೀಡಿರುತ್ತಾರೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ: 27 (B) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು  ಉಪ್ಪೂರು ಗ್ರಾಮದ, ನರ್ನಾಡು, ಮದಗ  ಎಂಬಲ್ಲಿ ಪಿರ್ಯಾದಿ ಕೆ. ವಿಲಾಸಿನಿ ಇವರು ತನ್ನ ಗಂಡ ಶಂಕರ ಹಾಗೂ ಮಗ ಪ್ರೀತಮ್‌ ನೊಂದಿಗೆ ಸಮೃದ್ದಿ ಎಂಬ ಮನೆಯಲ್ಲಿ ವಾಸವಾಗಿರುವುದಾಗಿದೆ.  ದಿನಾಂಕ 12.06..2022 ರಂದು ರಾತ್ರಿ 10:45 ಗಂಟೆಗೆ ಆರೋಪಿ ಶಕಿಲೇಶ್ ಎಂಬಾತನು ತನ್ನ ಸ್ನೇಹಿತರಾದ ಆರೋಪಿ ಕೃಷ್ಣ, ಕಿಶೋರ ಮತ್ತು ಪ್ರೇಮನಾಥ ರೆಡ್ಡಿ ರವರೊಂದಿಗೆ KA.20.C.3042 ನೇ ಆಟೋರಿಕ್ಷಾದಲ್ಲಿ  ಬಂದು, ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವರ ಮನೆಯ ನಳ್ಳಿಯನ್ನು ತುಂಡು ಮಾಡಿ, ಪಿರ್ಯಾದಿದಾರರ ಗಂಡನ ಹೆಲ್ಮೆಟ್ ಅನ್ನು ನೆಲಕ್ಕೆ ಹೊಡೆದು ಹಾನಿ ಮಾಡಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರ ಗಂಡ ಹಾಗೂ ಮಗ ಆರೋಪಿಗಳನ್ನು ವಿಚಾರಿಸಲು ಹೋದಾಗ ಆರೋಪಿ ಶಕಿಲೇಶ್ ಆಟೋ ರಿಕ್ಷಾದಲ್ಲಿ ಇದ್ದು ಅಲ್ಲದೇ  ಪಿರ್ಯಾದಿದಾರರ ಮನೆಯಲ್ಲಿದ್ದ ಚಪ್ಪಲು ಇಡುವ ಪ್ಲಾಸ್ಟಿಕ್ ಬಾಕ್ಸ್, ಕೊಡಪಾನ, ತುಳಸಿ ದೇವರಿಗೆ ಇಡುವ ದೀಪ  ರಿಕ್ಷಾದ ಒಳಗೆ ಇರುತ್ತದೆ. ಉಳಿದ ಮೂವರು ಆರೋಪಿಗಳು ಓಡಿ ಹೋಗಿರುತ್ತಾರೆ.  ಓಡಿ ಹೋದ ಆರೋಪಿಗಳ ಹೆಸರನ್ನು ಶಕಿಲೇಶನು ತಿಳಿಸಿರುವುದಾಗಿದೆ.  ನಂತರ  ಆರೋಪಿ ಶಕಿಲೇಶನನ್ನು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಕರೆದುಕೊಂಡು ಬಂದಾಗ ಆತನು ಪಿರ್ಯಾದಿದಾರರನ್ನು ಉದ್ಧೇಶಿಸಿ ನಿಮ್ಮ ಮನೆಯ ಪೈಪ್ ಕಟ್ಟು ಮಾಡಿದ್ದು ನಾವೆ, ನಿಮ್ಮ ಮಗ ಪ್ರೀತಮ್ ನಾವು ಈ ಹಿಂದೆ ಒಟ್ಟಿಗೆ ಇರುವಾಗ ಮಾಡಿದ ಘಟನೆಗಳ ಬಗ್ಗೆ ಅವನು  ಪೊಲೀಸರಿಗೆ ಮಾಹಿತಿ ಕೊಡುತ್ತೇನೆಂದು ಹೇಳಿದ್ದು, ನಿನ್ನ ಮಗನನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಗಂಡ ಹಾಗೂ ಮಗನನ್ನು ದೂಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಆರೋಪಿಗಳು ಈ ಹಿಂದೆ ಪಿರ್ಯಾದಿದಾರರ ಮಗ ಪ್ರೀತಮನ  ಸ್ನೇಹಿತರಾಗಿದ್ದು ಅವರು ಸರಿ ಹೋಗಬಹುದೆಂದು ಘಟನೆಯ ಬಗ್ಗೆ ದೂರು ನೀಡದೇ ಇದ್ದು , ಆದರೇ  ಪುನಃ ದಿನಾಂಕ  14.06.2022 ರಂದು ರಾತ್ರಿ 9:45 ಗಂಟೆಗೆ ಆರೋಪಿ ಕೃಷ್ಣ ಮತ್ತು ಶಕಿಲೇಶ್ ಪಿರ್ಯಾದಿದಾರರ ಮನೆಯ ಬಳಿ ಬಂದು ನಿಮ್ಮನ್ನ ನೋಡಿ ಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ 447, 427, 504, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿ ನರಸಿಂಹ ಗಾಣಿಗ ಇವರ ಮನೆಯಲ್ಲಿ  ಉಡುಪಿ ಕೊರಂಗ್ರಪಾಡಿ ನಿವಾಸಿ ಕು. ಮಂಜುಳಾ ಪ್ರಾಯ: 21ವರ್ಷ ಎಂಬಾಕೆಯನ್ನು ಮನೆಕೆಲಸಕ್ಕೆಂದು ನೇಮಿಸಿಕೊಂಡಿದ್ದು ಆಕೆಯು ಫಿರ್ಯಾದಿದಾರರ ಮನೆಯಲ್ಲಿಯೇ ವಾಸವಾಗಿರುವುದಾಗಿದೆ. ದಿನಾಂಕ: 25/05/2022 ರಂದು ಮನೆಕೆಲಸದಾಕೆ ಕು ಮಂಜುಳಾ ಅವಳ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ವಾಪಾಸ್ಸು ಬಂದಿರುವುದಿಲ್ಲ.  ದಿನಾಂಕ: 27/05/2022 ರಂದು ಫಿರ್ಯಾಧಿದಾರರು ಹಾಗೂ ಅವರ ಹೆಂಡತಿ ಅಲ್‌ಮೆರಾವನ್ನು ತೆರೆದು  ನೋಡಿದಾಗ ಒಳಗಡೆ ಇಟ್ಟಿದ್ದ 28 ಗ್ರಾಂ ತೂಕದ 2 ಚಿನ್ನದ ಬಳೆ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ.  ನಂತರ ಮನೆ ಕೆಲಸದಾಕೆ ಮಂಜುಳಾ ಇವಳನ್ನು ವಿಚಾರಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ.  ಮಂಜುಳಾರವರು ದಿನಾಂಕ 25-05-2022 ರಂದು ಅವಳ ಮನೆಗೆ  ಹೋಗುತ್ತೆನೆಂದು ಹೋದವಳು  ವಾಪಾಸು ಮನೆಗೆ ಬಾರದೇ ಇದ್ದು  ಸದ್ರಿ ಚಿನ್ನದ ಬಳೆಗಳನ್ನು  ಮಂಜುಳಾರವರೆ  ಕಳ್ಳತನ ಮಾಡಿದ್ದು ಕಳವಾದ ಚಿನ್ನದ ಬಳೆಗಳ ಒಟ್ಟು ಮೌಲ್ಯ ಸುಮಾರು 1,10,000 ರೂಗಳಾಗಿದ್ದು ಮಂಜುಳಾರವರ  ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂದು ನರಸಿಂಹ ಗಾಣಿಗ  ಇವರು ನೀಡಿದ ದೂರಿನಂತೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022  ಕಲಂ: 381 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿ ಶಿವಪ್ಪ ಇವರ  ಅಣ್ಣನ   ಮಗ   ಯಲ್ಲಪ್ಪ   ಪ್ರಾಯ  32 ವರ್ಷ  ಈತನು   ಸುಮಾರು 4 ತಿಂಗಳ   ಹಿಂದೆ   ಕೂಲಿ  ಕೆಲಸಕ್ಕೆಂದು   ಊರಿನಿಂದ  ಹೊರಟು  ಬಂದಿದ್ದು,   ಆತನು  ದಿನಾಂಕ  15/06/2022  ಬೆಳಿಗ್ಗೆ   08;00   ಗಂಟೆ ಮೊದಲು   ಕುಂದಾಪುರ  ತಾಲೂಕಿನ ಸಿದ್ದಾಪುರ ಗ್ರಾಮದ   ಸಿದ್ದಾಪುರ    ಹೈಸ್ಕೂಲ್ ಆಟದ  ಮೈದಾನದ  ಬಳಿ   ಅವನಿಗೆಇರುವ ಶರಾಬು  ಕುಡಿಯುವ  ಚಟದಿಂದಲೊ ಅಥವಾ ಬೇರೆ ಯಾವುದೋ ಕಾರಣದಿಂದ  ಮಲಗಿದಲ್ಲಿಯೇ   ಮೃತಪಟ್ಟಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 15-06-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080