ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 13/05/2023 ರಂದು 20:15 ಗಂಟೆಗೆ NL-01-AD-5135 ನೇ ಕಂಟೇನರ್ ಲಾರಿ ಚಾಲಕ ಸಂಜಯ ಬಾಲಕೃಷ್ಣ ಮಿಸಲ್ ಎಂಬಾತ ಉಡುಪಿ ಕಡೆಯಿಂದ ಪರ್ಕಳ ಆತ್ರಾಡಿ ಕಡೆಗೆ ರಾಷ್ಟ್ರೀಯ  ಹೆದ್ದಾರಿ 169(A)  ರಲ್ಲಿ ಲಾರಿ ಚಲಾಯಿಸಿ ಕೊಂಡು ಬಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳದ ದೇವಿನಗರದ ಬಳಿ ಮಂದಾರ ಹೋಟೆಲ್ ಎದುರು ಆಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ  ಲಾರಿಯನ್ನು ತೀರಾ ಬಲ ಬದಿಗೆ ಬಂದು ಡಿವೈಡರ್ ಮೇಲೆ ಚಲಾಯಿಸಿದ ಪರಿಣಾಮ ದಿವೈಡರ್ ಗೆ ಹಾನಿ  ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2023 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 14/05/2023 ರಂದು ಪಿರ್ಯಾದಿದಾರರಾದ ವಿಠಲ ನಾಯ್ಕ  (58), ತಂದೆ:ಹೆರಿಯ ನಾಯ್ಕ, ವಾಸ: ಬಂಡಿಮಠ ಹನೆಹಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಇವರು KA-19-EW-6917 ಹೊಂಡಾ ಆಕ್ಟೀವಾ ಸ್ಕೂಟರ್‌ ಸವಾರಿ ಮಾಡಿಕೊಂಡು ಕರ್ಜೆ ತಡಾಲ್‌ ಎಂಬಲ್ಲಿ ಅಶೋಕ ನಾಯ್ಕ ಎಂಬುವವರ ಗೇರು ಪ್ಲಾಂಟೇಶನ್ ಗೆ  ಗೇರು ಬೀಜ ಸಂಗ್ರಹಿಸಲು ಹೋಗಿದ್ದು, ಕೆಲಸ ಮುಗಿಸಿ ತಮ್ಮ ಸ್ಕೂಟರ್‌ ನಲ್ಲಿ ಮನೆಗೆ ವಾಪಸ್ಸು ಹೊರಟು  ಚೇರ್ಕಾಡಿ ಗ್ರಾಮದ ಎಳ್ಳಂಪಳ್ಳಿ ಫಿಶ್‌ ಫ್ಯಾಕ್ಟರ್‌ ಬಳಿ ಸಂಜೆ 04:30 ಕ್ಕೆ  ತಿರುವು ರಸ್ತೆಯಲ್ಲಿ ಪಿರ್ಯಾದಿದಾರರ ಎದುರಿನಿಂದ ನೀಲಾವರ ಕಡೆಯಿಂದ ಚೇರ್ಕಾಡಿ  ಕಡೆಗೆ KA-20-A-4554 ಪಿಕಪ್‌ ಚಾಲಕ ಜಗ್ಗೇಶ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಬಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಪಿರ್ಯಾದಿದಾರರ ಸ್ಕೂಟರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದರು ಬಿದ್ದ  ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿಗೆ,ಬಲಕೈಗೆ ಹಾಗೂ ಎಡದವಡೆಗೆ ರಕ್ತಗಾಯ ಉಂಟಾಗಿರುತ್ತದೆ. ನಂತರ ಸಾರ್ವಜನಿಕರು  ಪಿರ್ಯಾದಿದಾರರನ್ನು  ಉಪಚರಿಸಿದ್ದು,. ಈ ಅಪಘಾತದಿಂದ ಪಿರ್ಯಾದಿದಾರರ ಸ್ಕೂಟರ್‌ ಜಖಂಗೊಂಡಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2023 : ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಪಂಚವರ್ಣಂ (48), ತಂದೆ: ಅರುಮುಗಂ, ವಾಸ: 3-1931 ಸೆತುಪಟಿನಗರ ರಾಮನಾಥಪುರಂ ಜಿಲ್ಲೆ, ತಮಿಳುನಾಡು ಇವರು ನಾಗೇಶ ಶ್ರೀಯಾನ್‌ ಎಂಬುವವರ ಮಾಲೀಕತ್ವದ   IND-KA-01-MM-3299 ದಯಾಲಕ್ಷ್ಮೀ ಮೀನುಗಾರಿಕೆ  ಬೋಟಿನಲ್ಲಿ  ಮೀನುಗಾರಿಕೆ ಬಗ್ಗೆ  ರವಿಚಂದ್ರನ್‌, ರಾಜ್‌, ಸೆಮಾಯೋಲ್‌,ಶೇಖರ, ರವಿ, ಮಜಾಯ ಮಜಿ ಸೇರಿದಂತೆ ಒಟ್ಟು 11 ಜನರು  ದಿನಾಂಕ 08/05/2023 ರಂದು  ಹೊರಟು ಅರಬ್ಬಿಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ದಿನಾಂಕ 11/05/2023 ರಂದು ರಾತ್ರಿ 8:00 ಗಂಟೆ ಸಮಯದಲ್ಲಿ  60 ನಾಟಿಕಲ್‌ ಮೈಲಿ  ದೂರ  ಅರಬ್ಬೀ ಸಮುದ್ರದಲ್ಲಿ  ಒಡಿಸ್ಸಾ ಮೂಲದ ಮಜಾಯ ಮಜಿ (31) ರವರು ಬೋಟಿನ ಬದಿಯಲ್ಲಿ ಪಾಯಿಕಾನಿ ಮಾಡಲು ಕುಳಿತಿದ್ದಾಗ ಆಯಾ ತಪ್ಪಿ ಸಮುದ್ರಕ್ಕೆ ಬಿದ್ದು  ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 15-05-2023 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080