ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 

ಉಡುಪಿ: ಪಿರ್ಯಾದಿ ಮಹೇಶ್ ಜೆ ಹರಿಕಂತ್ರ ಇವರು ದಿನಾಂಕ: 13/05/2023 ರಂದು ಬೆಳಿಗ್ಗೆ 06:50 ಗಂಟೆಗೆ KA01AJ5785 ನೇ ರೆಡಿಮಿಕ್ಸ್ ಕಾಂಕ್ರೀಟ್ ಮಿಕ್ಸರ್ ವಾಹನದಲ್ಲಿ ಕಾಂಕ್ರೀಟನ್ನು ತುಂಬಿಸಿಕೊಂಡು ಮಣಿಪಾಲ ಕಡೆಯಿಂದ ಕೆಎಮ್‌ಜಿಎಮ್‌ ಕಡೆಗೆ ಬರುತ್ತಿರುವಾ ಶಿವಳ್ಳಿ ಗ್ರಾಮದ ಎಸ್.ಕೆಎಮ್ ಬಳಿ ಇರುವ ಗೋಕುಲ್ ವೆಜ್‌ ಯು ಟರ್ನ್‌ ನಲ್ಲಿ ವಾಹನವನ್ನು ಸೂಚನೆಯನ್ನು ನೀಡಿ ತಿರುಗಿಸುತ್ತಿರುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA51C9618 ಬಸ್ಸಿನ ಚಾಲಕ ಭರತ್ ಎಂಬಾತನು ತನ್ನ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರಾ ಬಲಬದಿಗೆ ಬಂದು KA01AJ5785 ನೇ ರೆಡಿಮಿಕ್ಸ್ ಕಾಂಕ್ರೀಟ್ ಮಿಕ್ಸರ್ ವಾಹನವನ್ನು ಕಲ್ಸಂಕ ಕಡೆಯಿಂದ ಮಣಿಪಾಲ ಕಡೆಗೆ ಹೋಗು ರಸ್ತೆಗೆ ಸೂಚನೆಯನ್ನು ನೀಡಿ ತಿರುಗಿಸುತ್ತಿರುವಾಗ ಹಿಂದಿನಿಂದ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ರೆಡಿಮಿಕ್ಸ್ ವಾಹನದ ಡ್ರಮ್ ಕಟ್ ಆಗಿ ರಸ್ತೆಗೆ ಬಿದ್ದು ಸುಮಾರು 35000/- ಮೌಲ್ಯದ ಕಾಂಕ್ರೀಟ್ ಹಾಳಾಗಿರುತ್ತದೆ. ಅಲ್ಲದೆ KA01AJ5785 ನೇ ರೆಡಿಮಿಕ್ಸ್ ಕಾಂಕ್ರೀಟ್ ಮಿಕ್ಸರ್ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ.  ಈ ಅಫಘಾತದಲ್ಲಿ KA51C9618 ಬಸ್ಸು ಕೂಡ ಜಖಂಗೊಂಢಿದ್ದು, ಬಸ್ಸಿನಲ್ಲಿರು 5-6 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ತಿಳಿದುಬಂದಿದ್ದು, ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ 279  337   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕುಂದಾಪುರ: ದಿನಾಂಕ 14/05/2023 ರಂದು ರಾತ್ರಿ ಸುಮಾರು 8:30 ಗಂಟೆಗೆ ಕುಂದಾಪುರ  ತಾಲೂಕಿನ ಕಾಳಾವರ ಗ್ರಾಮದ ಕಾಳಾವರ ಶಾಲೆಯ ಬಳಿ ರಸ್ತೆಯಲ್ಲಿ,  ಆಪಾದಿತ ನೊಂದಣಿ ನಂಬ್ರ ತಿಳಿದು ಬಾರದ ಯಾವುದೋ ವಾಹನದ ಚಾಲಕ, ವಾಹನವನ್ನು ಹುಣ್ಸೆಮಕ್ಕಿ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫೆಡ್ರಿಕ್‌‌ ಡಿಮೆಲ್ಲೊ ರವರಿಗೆ  ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತಾನೆ.  ಈ ಅಪಘಾತದಿಂದ ಫೆಡ್ರಿಕ್‌‌ ಡಿಮೆಲ್ಲೊ ರವರ ತಲೆಗೆ  ಗಂಭೀರ  ರಕ್ತಗಾಯ ಹಾಗೂ ಒಳಜಖಂ ಗಾಯವಾಗಿ ಕೊಟೇಶ್ವರ  ಎನ್‌. ಆರ್‌ ಆಚಾರ್ಯ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು,  ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋಗಿ,  ಬಳಿಕ ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್‌  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023   ಕಲಂ 279,338    IPC & 134 (A) & (B) IMV ACT ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಪ್ರಕರಣ

ಗಂಗೊಳ್ಳಿ: ಪಿರ್ಯಾದಿ ನಾಗರಾಜ ಆಚಾರಿ ಇವರು ಗಾರೆ ಕೆಲಸದ ಮೇಸ್ತ್ರಿಯಾಗಿರುತ್ತಾರೆ. ತನ್ನ ಕೆಲಸಕ್ಕೆ ಜನರು ಅಗತ್ಯವಿರುವುದರಿಂದ  ಸುಮಾರು 3 ವಾರಗಳಿಂದ ಸಂಗೊಂದೇಪ್ಪ@ಸಂಗಮೇಶ ಎಂಬ ಮೇಸ್ತ್ರಿಯ ಮೂಲಕ ಸಂಗನಗೌಡ್, ರಾಜು, ಮಹಾಬಲೇಶ ಮತ್ತು ಯಲ್ಲಪ್ಪ ಎಂಬುವರು  ಪಿರ್ಯಾದಿದಾರರ ಕೆಲಸಕ್ಕೆ ಬರುತ್ತಿರುವುದಾಗಿದೆ.  ಅವರಿಗೆ  ಕುಂದಾಪುರ ತಾಲೂಕು ಹರ್ಕೂರು ಗ್ರಾಮದ  ಕಟ್ಟಿನಮಕ್ಕಿ ರೈಲ್ವೆ ಬ್ರಿಡ್ಜ್‌ ಹತ್ತಿರ ಇರುವ ಪಿರ್ಯಾದಿದಾರರ ಮನೆಯ ಬಳಿ ಶೇಡ್‌ ನಲ್ಲಿ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದು ದಿನಾಂಕ: 14/05/2023 ರಂದು ಕೆಲಸಕ್ಕೆ ರಜೆ ಇರುವುದರಿಂದ  ಸಂಗೊಂದೇಪ್ಪ@ಸಂಗಮೇಶ , ಸಂಗನಗೌಡ್, ರಾಜು,  ಮಹಾಬಲೇಶ ಮತ್ತು ಯಲ್ಲಪ್ಪ ಎಂಬುವರು  ಹೊರಗಡೆ ಹೋಗಿ ರಾತ್ರಿ ಸಮಯ ಸದ್ರಿ ಶೇಡ್‌ ಬಳಿ ಬಂದಿದ್ದು,  ಸುಮಾರು 20:00 ಗಂಟೆಗೆ ಸಂಗೊಂದೇಪ್ಪ ಹಾಗೂ  ರಾಜು  ರವರು ಸಂಬಳದ ದುಡ್ಡಿನ  ವಿಚಾರವಾಗಿ ಗಲಾಟೆ ಮಾಡಿ ದೂಡಾಡಿಕೊಂಡು ರಾಜು ಎಂಬಾತನು ಸಂಗೊಂದೇಪ್ಪನಿಗೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ, ಎಂದು ಹೆದರಿಸಿದ್ದು  ಆ ಸಮಯ ಪಿರ್ಯಾದಿದಾರರು ಗಲಾಟೆಯನ್ನು ಬಿಡಿಸಿ ಕಳುಹಿಸಿರುತ್ತಾರೆ. ನಂತರ ಸುಮಾರು 21:00 ಗಂಟೆಗೆ ಸದ್ರಿ ಶೇಡ್‌ ನ  ಬಳಿ ಇರುವ ದಿನೇಶ ರವರ ಹೊಸ  ಮನೆ ಪಂಚಾಂಗದ ಬಳಿ ಗಲಾಟೆ ಮಾಡಿಕೊಂಡು ರಾಜು ಎಂಬಾತನು ಸಂಗೊಂದೇಪ್ಪನಿಗೆ ನೀನು ಯಾವ ಸೀಮೆ ಮೇಸ್ತ್ರಿ ಎಂದು ಹೇಳಿ ದೂಡಾಡಿಕೊಂಡಿದ್ದು ಪಿರ್ಯಾದಿದಾರರು ಗಲಾಟೆ ಬಿಡಿಸಿ ಮಲಗುವಂತೆ ಹೇಳಿದ್ದು ಬಳಿಕ ಸಂಗೊಂದೇಪ್ಪನು ರಾಜುವಿಗೆ ಬೈದಾಡುತ್ತಾ ಯಲ್ಲಪ್ಪನ ಪಕ್ಕದಲ್ಲಿ ದಿನೇಶರವರ ಹೊಸ  ಮನೆ ಪಂಚಾಂಗದ ಮೇಲೆ ಮಲಗಿಕೊಂಡಿದ್ದನು. ಸುಮಾರು 21:15 ಗಂಟೆಗೆ ರಾಜು ಎಂಬಾತನು ಏಕಾಎಕಿ ಸದ್ರಿ ಪಂಚಾಂಗದ ಬಳಿಯಲ್ಲೇ ಇದ್ದ ಒಂದು ಕೆಂಪು ಕಲ್ಲನ್ನು ಹಿಡಿದುಕೊಂಡು ಬಂದು ಸಂಗೊಂದೇಪ್ಪನ  ತಲೆಯ ಮೇಲೆ ಎತ್ತಿ ಹಾಕಿದನು. ಪರಿಣಾಮ ಸಂಗೊಂದೇಪ್ಪನ ತಲೆಯ ಮೇಲೆ ಬಿದ್ದ ಕಲ್ಲು ಉರುಳಿ ಪಕ್ಕದಲ್ಲಿರುವ ಯಲ್ಲಪ್ಪನ ಕಾಲಿನ ಮೇಲೆ ಬಿದ್ದು ಗಾಯವಾಗಿರುತ್ತದೆ. ಸಂಗೊಂದೇಪ್ಪನ ಮುಖದ ಎಡಕೆನ್ನೆಯ ಬಳಿ ಜಜ್ಜಿದ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023 ಕಲಂ: 504, 506, 324, 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರ ಪ್ರಕರಣ

ಉಡುಪಿ: ದಿನಾಂಕ 12.05.2023 ರಂದು ಪಿರ್ಯಾದಿ ಕಳತ್ತೂರು ಮುರುಳಿಧರ್ ರಾವ್ ಇವರು ಟೆಲಿಗ್ರಾಮ್ ಆಪ್ ನಲ್ಲಿ ಟಾಸ್ಕ್ ನಡೆಸಿ ಹೆಚ್ಚಿನ ಲಾಭ ಪಡೆಯುವ ಬಗ್ಗೆ ಬಂದಿರುವ ಸಂದೇಶವನ್ನು ಗಮನಿಸಿ, ಟೆಲಿಗ್ರಾಮ್ ಮುಖೇನ ವ್ಯಕ್ತಿಯನ್ನು ಸಂಪರ್ಕಿಸಿದಲ್ಲಿ ಟಾಸ್ಕ್ ನಡೆಸಲು ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ದಿನಾಂಕ 12.05.2023 ರಿಂದ 14.05.2023 ರ ಮಧ್ಯೆ ಒಟ್ಟು ರೂ. 2,78,000/- ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ NEFT ಮತ್ತು UPI ಟ್ರಾನ್ಸೆಕ್ಷನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಆದರೆ, ಬಳಿಕ ಆರೋಪಿಗಳು ಟಾಸ್ಕ್ ನೀಡದೇ ಪಿರ್ಯಾದಿದಾರರು ನೀಡಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 89/2023 ಕಲಂ: 66(C), 66(D) ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 15-05-2023 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080